For Quick Alerts
ALLOW NOTIFICATIONS  
For Daily Alerts

ಗಿಡಮೂಲಿಕೆಗಳ ಔಷಧಿ ಮಧುಮೇಹಿಗಳ ಪಾಲಿಗೆ ಸಂಜೀವಿನಿ

By Viswanath S
|

"ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ" ಈ ಗಾದೆ ಮಾತನ್ನು ನಾವು ಪದೇ ಪದೇ ಕೇಳುತ್ತಿರುತ್ತೀವಿ. ನಿಜ ಹಲವಾರು ಕಾಯಿಲೆಗಳನ್ನು ನಾವು ಊಟ ಮಾಡುವುದರಿಂದಲೇ ತಡೆಯಬಹುದು ಮತ್ತು ನಿವಾರಿಸಿಕೊಳ್ಳಬಹುದು. ಅದಕ್ಕಾಗಿ ನಾವು ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಜ್ಞಾನ ಮತ್ತು ತಿಳುವಳಿಕೆಯಿದ್ದರೆ ಸಾಕು. ಆಹಾರವು ಸದೃಢ ಆರೋಗ್ಯದ ಸೋಪಾನವಾಗಿ ಪರಿಣಮಿಸುತ್ತದೆ. ಹೀಗೆ ನಾವು ಆಹಾರದಿಂದ ಹದ್ದು ಬಸ್ತಿನಲ್ಲಿಟ್ಟುಕೊಳ್ಳಬಹುದಾದ ಕೆಲವು ಕಾಯಿಲೆಗಳಲ್ಲಿ ಮಧುಮೇಹ ಸಹ ಒಂದಾಗಿದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಮಧುಮೇಹ ಕಾಯಿಲೆಯು ರಕ್ತದಲ್ಲಿ ಸಕ್ಕರೆಯ ಕೊರತೆ ಅಥವ ಅಧಿಕ ಪ್ರಮಾಣದ ಸಕ್ಕರೆಯಿಂದ ಇತರ ಆರೋಗ್ಯ ತೊಂದರೆಗಳು ಉಂಟಾಗುತ್ತವೆ ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ಕೊರತೆಯಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಮಧುಮೇಹ ಕಾಯಿಲೆಯ ಲಕ್ಷಣಗಳೆಂದರೆ - ಅಧಿಕ ಬಾಯಾರಿಕೆ, ಇದ್ದಕ್ಕಿದ್ದಂತೆ ಆಗುವ ತೂಕದ ನಷ್ಟ, ಸುಸ್ತು ಮತ್ತು ಆಯಾಸ ಮತ್ತು ಗಾಯಗಳು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು. ಸಾಮಾನ್ಯವಾಗಿ ಮಧುಮೇಹವನ್ನು ನಿಯಂತ್ರಿಸಲು ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಆದರೆ ಇದನ್ನು ನಿಭಾಯಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಇಲ್ಲಿ ಕೊಟ್ಟಿದ್ದೇವೆ:

ಹಾಗಲಕಾಯಿ ಒಂದು ಪರಿಣಾಮಕಾರಿ ಪರಿಹಾರ

ಹಾಗಲಕಾಯಿ ಒಂದು ಪರಿಣಾಮಕಾರಿ ಪರಿಹಾರ

ಹಾಗಲಕಾಯಿ ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಮಧುಮೇಹದ ವಿರುದ್ಧ ಪರಿಣಾಮಕಾರಿ. ಅದು ಇನ್ಸುಲಿನ್ ಹೆಚ್ಚಿಸಲು ನೈಸರ್ಗಿಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಹಾಗಲಕಾಯಿಯನ್ನು ಅತ್ಯುತ್ತಮ ರೀತಿಯಲ್ಲಿ ಮಧುಮೇಹದ ವಿರುದ್ಧ ಬಳಸಬೇಕಾದರೆ ಪ್ರತಿದಿನವೂ ಬೆಳಗ್ಗೆ ಎದ್ದನಂತರ ಅದರ ರಸ ಮಾಡಿಕೊಂಡು ಕುಡಿಯಬೇಕು.

ಮೆಂತೆ

ಮೆಂತೆ

ಇದು ಪರಿಣಾಮಕಾರಿಯಾಗಿ ಮಧುಮೇಹ ಕಾಯಿಲೆಯನ್ನು ಎದುರಿಸುತ್ತದೆ ಮತ್ತು ಗ್ಲೂಕೋಸ್ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಮೆಂತೆ ಬೀಜವನ್ನು ಹಿಂದಿನ ರಾತ್ರಿ ಮಾಮೂಲು ನೀರಿನಲ್ಲಿ ನೆನೆಸಿ ಮಾರನೆಯ ದಿನ ನೆಂದಿರುವ ನೀರನ್ನು ಕುಡಿದು ನೆಂದ ಬೀಜವನ್ನು ಸೇವಿಸಬಹುದು.

ಮಾವಿನ ಮರದ ಎಲೆಗಳು

ಮಾವಿನ ಮರದ ಎಲೆಗಳು

ಚಿಗುರು ಮಾವಿನಎಲೆಯು ಮಧುಮೇಹ ಕಾಯಿಲೆಯನ್ನು ಹೋರಾಡಲು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದನ್ನು ಹೇಗೆ ಸೇವಿಸಬೇಕೆಂದರೆ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ನಂತರ ಮಾರನೆ ಬೆಳಗ್ಗೆ ನೀರನ್ನು ಸೋಸಿ ಕುಡಿಯಬೇಕು. ಎಲೆಗಳನ್ನು ಸಹ ರುಬ್ಬಿ ಸೇವಿಸಬಹುದು.

ನೀರು

ನೀರು

ಮನುಷ್ಯನ ದೇಹದಲ್ಲಿ ಸುಮಾರು ಶೇಖಡ ೭೫ ಭಾಗ ನೀರಿನಿಂದಿರುತ್ತದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಲು ಸಾಕಷ್ಟು ನೀರು ಕುಡಿಯಬೇಕು. ಇದಲ್ಲದೆ, ಬಿಸಿಲಿಗೆ ಒಡ್ಡಿದ ಮಾಮೂಲು ನೀರನ್ನು ಸೇವಿಸಿದರೆ ಸಕಾರಾತ್ಮಕ ರೀತಿಯಲ್ಲಿ ಸಹಾಯವಾಗುತ್ತದೆ.

ಅಲೋ ವೇರಾ

ಅಲೋ ವೇರಾ

ಅಲೋ ವೇರಾ ಜೊತೆಗೆ ಬೇಎಲೆ (ಸಿನ್ನಮನ್) ಮತ್ತು ಅರಶಿನ ಸೇರಿಸಿದರೆ ರಕ್ತದಲ್ಲಿನ ಸಕ್ಕರೆಯನ್ನು ಹೋಗಲಾಡಿಸಲು ಒಂದು ನೈಸರ್ಗಿಕ ಮಾರ್ಗ. ಇದನ್ನು ನೀರಿನಲ್ಲಿ ಬೆರಸಿ ಅಥವ ಅಲೋ ವೇರ ಜೆಲ್ ಬಳಸಿ ಉಪಯೋಗಿಸಬಹುದು. ಯಾವುದಾದ ರೀತಿಯಲ್ಲಾದರೂ ಇದು ಬಹಳ ಪರಿಣಾಮಕಾರಿ ಮತ್ತು ಅರೋಗ್ಯಕರ.

English summary

Herbal and Natural Remedies for Diabetes

Diabetes is considered as a disease in which the deficiency or excess of blood sugar causes other health problems. This is caused by the lack of a hormone named insulin in the body. Generally, the symptoms of diabetes include increased thirst, weight loss which occurs suddenly, tiredness and fatigue and longer duration to heal.
X
Desktop Bottom Promotion