For Quick Alerts
ALLOW NOTIFICATIONS  
For Daily Alerts

ಏನಿದು ಆಶ್ಚರ್ಯ, ಕೇವಲ ಹಣ್ಣಿನ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದೇ?

|

ಯಾವುದೇ ಅಧಿಕ ಶ್ರಮವಿಲ್ಲದೆ ತೂಕವನ್ನು ಇಳಿಸಿಕೊಳ್ಳಲು ಬಯಸುವಿರಾ? ಹಾಗಾದರೆ ಅಧಿಕ ನೀರಿನಂಶವಿರುವ ಹಣ್ಣುಗಳನ್ನು ಸೇವಿಸಲು ಆರಂಭಿಸಿ. ತೂಕವನ್ನು ಶೀಘ್ರವಾಗಿ ಇಳಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಹಣ್ಣುಗಳನ್ನು ಸೇವಿಸುವುದು ಒಂದಾಗಿದೆ. ಇವುಗಳು ನೀವು ಸೇವಿಸುವ ಆಹಾರಕ್ಕಿಂತ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.

ನಿಮಗೆ ಒಂದು ವಿಚಾರ ತಿಳಿದಿರಬೇಕು, ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಮತ್ತು ಕಡಿಮೆ ಕ್ಯಾಲೋರಿಗಳು ಇರುವ ಕಾರಣದಿಂದಾಗಿ ಇವು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ತೂಕ ಇಳಿಸಿಕೊಳ್ಳಲು ನಾವು ಪಾಲಿಸುವ ಇತರ ಡಯಟ್‌ಗಳಿಗಿಂತ ಹಣ್ಣುಗಳನ್ನು ಸೇವಿಸುವ ಡಯಟ್ ನಿಜಕ್ಕೂ ನೀವು ಬಯಸುವ ಫಲಿತಾಂಶವನ್ನು ಅತಿ ಶೀಘ್ರದಲ್ಲಿಯೇ ನೀಡುತ್ತದೆ.

ಹಣ್ಣುಗಳು ಹೇಗೆ ನಿಮ್ಮ ತೂಕವನ್ನು ಇಳಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುತ್ತೀರಾ, ಬನ್ನಿ ಅದರ ಕುರಿತು ಒಂದು ನೋಟ ಹರಿಸೋಣ. ಅನಾನಸ್, ಕಲ್ಲಂಗಡಿ, ಸೇಬು, ಪೇರಳೆ ಹಣ್ಣು, ಸ್ಟಾಬೆರ್ರಿಗಳು ಮತ್ತು ಇತ್ಯಾದಿ ಹಣ್ಣುಗಳಲ್ಲಿ ನಿಜಕ್ಕು ಒಂದು ಚಿಕಿತ್ಸಾತ್ಮಕ ಗುಣಗಳು ಇರುತ್ತವೆ. ಬನ್ನಿ ಈ ಹಣ್ಣುಗಳು ನಿಮ್ಮ ದೇಹದ ಮೇಲೆ ಬೀರುವ ಚಮತ್ಕಾರಗಳನ್ನು ತಿಳಿದರೆ ಅಚ್ಚರಿಗೊಳಗಾಗುವ ಸರದಿ ನಿಮ್ಮದಾಗುತ್ತದೆ! ಹಣ್ಣು v/s ಹಣ್ಣಿನ ಜ್ಯೂಸ್ ಇದರಲ್ಲಿ ಯಾವುದು ಆರೋಗ್ಯಕರ?

ರುಚಿಕರ ಮತ್ತು ಹೊಟ್ಟೆ ತುಂಬುತ್ತದೆ

ರುಚಿಕರ ಮತ್ತು ಹೊಟ್ಟೆ ತುಂಬುತ್ತದೆ

ಹಣ್ಣುಗಳನ್ನು ಸೇವಿಸುವುದರ ಕುರಿತು ಎಲ್ಲರಿಗು ತಿಳಿದಿರುವ ವಿಷಯವೆಂದರೆ, ಇವುಗಳು ತಿನ್ನಲು ರುಚಿಕರ. ಜೊತೆಗೆ ಇವು ನಿಮ್ಮ ಹೊಟ್ಟೆಯನ್ನು ಸಹ ತುಂಬುತ್ತದೆ. ಹಾಗಾಗಿ ನಿಮ್ಮ ಹೊಟ್ಟೆ ತುಂಬುವಂತಹ ಇತರ ಆಹಾರಗಳಿಗೆ ಬದಲಾಗಿ, ಬಣ್ಣ ಬಣ್ಣದ ಹಣ್ಣುಗಳನ್ನು ಸೇವಿಸಲು ಆರಂಭಿಸಿ.

ಬಾಯಿಚಪಲವನ್ನು ಹಿಡಿತದಲ್ಲಿಡುತ್ತದೆ

ಬಾಯಿಚಪಲವನ್ನು ಹಿಡಿತದಲ್ಲಿಡುತ್ತದೆ

ಅಧಿಕ ಹಣ್ಣುಗಳನ್ನು ನೀವು ಸೇವಿಸಿದಷ್ಟು ಆಹಾರ ಸೇವಿಸುವ ಚಪಲವು ನಿಮ್ಮನ್ನು ಕಾಡುವುದಿಲ್ಲ. ಹೀಗೆ ನೀವು ಆಹಾರವನ್ನು ಕಡಿಮೆ ಸೇವಿಸುವುದರಿಂದ ತೂಕವು ನಿಮ್ಮ ಹಿಡಿತಕ್ಕೆ ಬರುತ್ತದೆ. ಹೀಗೆ ಇದು ತೂಕ ಇಳಿಸಿಕೊಳ್ಳಲು ಒಂದು ಒಳ್ಳೆಯ ಮಾರ್ಗವಾಗುತ್ತದೆ.

ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ

ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ

ಹಣ್ಣಿನಲ್ಲಿರುವ ಪೆಕ್ಟಿನ್‌ಗಳು ನಿಮ್ಮ ದೇಹದಲ್ಲಿ ಬೈಲ್ ಎಂಬ ರಾಸಾಯನಿಕವನ್ನು ಹೊರದಬ್ಬುತ್ತವೆ. ಇದರಿಂದಾಗಿ ನಿಮಗೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹೀಗಾಗಿ ನೀವು ವಾಕಿಂಗ್ ಅಥವಾ ಜಿಮ್‌ಗೆ ಹೋಗಿ ಬೆವರು ಸುರಿಸುವ ಅಗತ್ಯವಿಲ್ಲ. ಪೇರಳೆ ಹಣ್ಣುಗಳು ಈ ಬೈಲ್ ರಾಸಾಯನಿಕವನ್ನು ಹೊರಹಾಕಲು ಹೇಳಿ ಮಾಡಿಸಿದ ಹಣ್ಣಾಗಿದೆ.

ಕಡಿಮೆ ಗ್ಲಿಸೆಮಿಕ್ ಹಣ್ಣುಗಳನ್ನು ಸೇವಿಸಿ

ಕಡಿಮೆ ಗ್ಲಿಸೆಮಿಕ್ ಹಣ್ಣುಗಳನ್ನು ಸೇವಿಸಿ

ನಿಮಗೆ ಗೊತ್ತೆ ಅಧಿಕ ಗ್ಲಿಸೆಮಿಕ್ ಹಣ್ಣುಗಳಿಗಿಂತ, ಕಡಿಮೆ ಗ್ಲಿಸೆಮಿಕ್ ಹಣ್ಣುಗಳು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ತೂಕವನ್ನು ಬೇಗ ಇಳಿಸಿಕೊಳ್ಳಬೇಕೆಂದರೆ, ಬಾಳೆಹಣ್ಣು ಮತ್ತು ಸೇಬಿನಂತಹ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಿ.

ಕೆಂಪು ಸೇಬು!

ಕೆಂಪು ಸೇಬು!

ಕೆಂಪು ಸೇಬುಗಳಲ್ಲಿ ಪ್ರೋಟೀನ್ ಮತ್ತು ಆಮ್ಲಗಳು ಅಧಿಕ ಪ್ರಮಾಣದಲ್ಲಿರುವುದರಿಂದಾಗಿ ಇದು ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ. ನಿಮ್ಮ ಸೊಂಟದ ಸುತ್ತ ಬೆಳೆದಿರುವ ಬೊಜ್ಜನ್ನು ಕರಗಿಸಿಕೊಳ್ಳಬೇಕೆಂದರೆ, ಹೊಟ್ಟೆ ಹಸಿವಾದಾಗ ಸೇಬನ್ನು ಸೇವಿಸಿ.

ಒಣ ಹಣ್ಣುಗಳನ್ನು ಉದಾಸೀನ ಮಾಡಬೇಡಿ

ಒಣ ಹಣ್ಣುಗಳನ್ನು ಉದಾಸೀನ ಮಾಡಬೇಡಿ

ತಾಜಾ ಹಣ್ಣುಗಳು ಯಾವಾಗಲು ಒಳ್ಳೆಯ ಕೆಲಸವನ್ನು ಮಾಡುತ್ತವೆ. ಆದರೂ ತೂಕ ಇಳಿಸಿಕೊಳ್ಳುವ ವಿಚಾರದಲ್ಲಿ ಒಣ ಹಣ್ಣುಗಳನ್ನು ಉದಾಸೀನ ಮಾಡಬೇಡಿ. ಇವು ಸಹ ತೂಕವನ್ನು ಇಳಿಸಿಕೊಳ್ಳಲು ನಿಮಗೆ ಅತಿ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತವೆ. ಅದರಲ್ಲೂ ಒಣದ್ರಾಕ್ಷಿಗಳಂತಹ ಒಣ ಹಣ್ಣುಗಳು, ನಿಮ್ಮ ಬಾಯಿ ಚಪಲವನ್ನು ತೀರಿಸುವುದರ ಜೊತೆಗೆ ಪೋಷಕಾಂಶಗಳನ್ನು ಒದಗಿಸಿ ತೂಕವನ್ನು ಇಳಿಸುತ್ತವೆ.

ಅಧಿಕ ನಾರಿನಂಶ

ಅಧಿಕ ನಾರಿನಂಶ

ನಿಮ್ಮ ತೂಕವನ್ನು ಇಳಿಸಿಕೊಳ್ಳಬೇಕೆಂದರೆ, ಅಧಿಕ ನಾರಿನಂಶವನ್ನು ಹೊಂದಿರುವ ಆಹಾರಗಳನ್ನು ಸೇವಿಸಿ. ಇವುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಗು ಸಹ ಸಹಾಯ ಮಾಡುತ್ತವೆ. ಬಾಳೆ ಹಣ್ಣು , ರಾಸ್ಪ್‌ಬೆರ್ರಿ ಮತ್ತು ಪೇರಳೆ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ನಾರಿನಂಶವು ಇರುತ್ತದೆ.

ಸಕ್ಕರೆಗೆ ನೋ ಎನ್ನಿ

ಸಕ್ಕರೆಗೆ ನೋ ಎನ್ನಿ

ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೆಂದರೆ, ಅದು ಸ್ವಾಭಾವಿಕ ಸಕ್ಕರೆ ಅಂಶವನ್ನು ಸೇವಿಸುವುದಾಗಿರುತ್ತದೆ. ಸ್ಟಾಬೆರ್ರಿ ಮತ್ತು ಬ್ಲೂಬೆರ್ರಿಗಳನ್ನು ಕತ್ತರಿಸಿ, ನಿಮ್ಮ ಓಟ್ಸ್ ಮೇಲೆ ಹಾಕಿಕೊಂಡು, ಉಪಾಹಾರದಲ್ಲಿ ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಸ್ವಾಭಾವಿಕ ಸಕ್ಕರೆ ಅಂಶ ಲಭ್ಯವಾಗುತ್ತದೆ.

ನೀರಿನ ಅಂಶದಿಂದ ಕೂಡಿದ ಹಣ್ಣುಗಳು

ನೀರಿನ ಅಂಶದಿಂದ ಕೂಡಿದ ಹಣ್ಣುಗಳು

ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗ ಮಾಡಬೇಕೆಂದರೆ, ನೀರಿನ ಅಂಶದಿಂದ ಕೂಡಿದ ಆಹಾರಗಳನ್ನು ಸೇವಿಸಬೇಕು. ಅದರಲ್ಲಿಯೂ ಸಿಟ್ರಸ್ ಹಣ್ಣುಗಳಲ್ಲಿ ನೀರಿನಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಈ ಹಣ್ಣುಗಳಲ್ಲಿ ಕ್ಯಾಲೋರಿಗಳು ಸಹ ಕಡಿಮೆ ಪ್ರಮಾಣದಲ್ಲಿರುತ್ತವೆ. ಇದಕ್ಕೂ ಮೇಲಾಗಿ ಸಿಟ್ರಸ್ ಹಣ್ಣುಗಳಲ್ಲಿ, ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಅದು ಕಣ್ಣು ಮತ್ತು ತ್ವಚೆಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ.

ಇವುಗಳು ಶಕ್ತಿಯನ್ನು ನೀಡುತ್ತವೆ

ಇವುಗಳು ಶಕ್ತಿಯನ್ನು ನೀಡುತ್ತವೆ

ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಅಥವಾ ನಿಮಗೆ ಸುಸ್ತಾದಾಗ ಒಂದು ಲೋಟ ತಾಜಾ ಹಣ್ಣಿನರಸವನ್ನು ಸೇವಿಸಿ. ಇದರಿಂದ ನಿಮಗೆ ತಕ್ಷಣ ಶಕ್ತಿಯು ಲಭಿಸುತ್ತದೆ.

ಇವುಗಳು ಟಾಕ್ಸಿನ್‌ಗಳನ್ನು ಹೊರಹಾಕುತ್ತವೆ

ಇವುಗಳು ಟಾಕ್ಸಿನ್‌ಗಳನ್ನು ಹೊರಹಾಕುತ್ತವೆ

ತಙ್ಞರ ಪ್ರಕಾರ ಹಣ್ಣುಗಳು ಮಾತ್ರ ನಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕುವಂತಹ ಏಕೈಕ ಆಹಾರ ಪದಾರ್ಥಗಳಾಗಿವೆಯಂತೆ. ನಿಮ್ಮ ದೇಹದಿಂದ ಟಾಕ್ಸಿನ್‌ಗಳನ್ನು ಹೊರಹಾಕಿದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭವಾಗುತ್ತದೆ.

English summary

12 Ways Fruits Help You Lose Weight

Want to lose weight in a hurry and not able to do so? Then turn to fruits which are solely water based. Fruits is the best way to lose weight as it helps to fill your tummy quickly when compared to a heavy coarse meal that is light on the carbs....
X
Desktop Bottom Promotion