For Quick Alerts
ALLOW NOTIFICATIONS  
For Daily Alerts

ಡಯಟ್‌ನಲ್ಲಿರುವಾಗ ಅಪ್ಪಿತಪ್ಪಿಯೂ ಸ್ನ್ಯಾಕ್ಸ್ ತಿನ್ನಬಾರದು!

|

ನೀವು ತೂಕವನ್ನು ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ, ಅದನ್ನು ಸರಿಯಾಗಿ ಮಾಡುತ್ತಿದ್ದಿರಾ? ಎಂದು ಖಾತ್ರಿ ಪಡಿಸಿಕೊಳ್ಳಿ. ಏಕೆಂದರೆ ಈ ಅವಧಿಯಲ್ಲಿ ನೀವು ಆಹಾರದ ಜೊತೆಗೆ ಕೆಲವೊಂದು ಸ್ನ್ಯಾಕ್ಸ್‌ಗಳನ್ನು ಸಹ ಸೇವಿಸಬಾರದು. ಸ್ನ್ಯಾಕ್ಸ್‌ಗಳನ್ನು ಸೇವಿಸಬಾರದು ಎಂದು ಹೇಳಲು ಪ್ರಮುಖ ಕಾರಣ, ಇದನ್ನು ಸೇವಿಸಿದಾಗ ನಿಮಗೆ ಗೊತ್ತಿಲ್ಲದೆ, ದೊಡ್ಡ ಪ್ರಮಾಣದ ಕ್ಯಾಲೋರಿಯು ನಿಮ್ಮ ದೇಹವನ್ನು ಸೇರುತ್ತದೆ.

ಒಂದು ವೇಳೆ ನೀವು ಕಾರ್ಯಗಳನ್ನು ಸರಿಯಾಗಿ ಮಾಡಿದರೆ ಸ್ನ್ಯಾಕ್ಸ್ ಸೇವಿಸುವುದರಿಂದ ನಿಮಗೆ ಯಾವುದೇ ಹಾನಿಯಾಗುವುದಿಲ್ಲ. ಇನ್ನೂ ಕುತೂಹಲಕಾರಿ ವಿಚಾರವೆಂದರೆ, ನಿಮ್ಮ ಜೀರ್ಣಾಂಗವ್ಯೂಹವು ಯಾವುದನ್ನು ಯಾವಾಗ ತಿನ್ನುತ್ತೀರಿ ಎಂಬುದರ ಮೇಲೆ ತನ್ನದೆ ಆದ ಒಂದು ವೇಗವನ್ನು ಕಾಯ್ದುಕೊಂಡು ಬರುತ್ತಿರುತ್ತದೆ. ಆದರೆ ನೀವು ಸ್ನ್ಯಾಕ್ಸ್ ತಿನ್ನುವ ಚಟವನ್ನು ಇಟ್ಟುಕೊಂಡು ತಪ್ಪಾದ ಆಹಾರವನ್ನು ಸೇವಿಸಿದರೆ, ನಿಮ್ಮ ತೂಕ ಕಳೆದುಕೊಳ್ಳುವ ಗುರಿಯು ನಿಜವಾಗಿಯೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಅದಕ್ಕಾಗಿ ನೀವು ನಿಮ್ಮ ಸ್ನ್ಯಾಕ್ಸ್ ತಿನ್ನುವ ಅಭ್ಯಾಸವನ್ನು ನಿಯಂತ್ರಿಸಿಕೊಳ್ಳಬೇಕು. ಬನ್ನಿ ಯಾವುದನ್ನು ತಿನ್ನಬಾರದು ಎಂದು ನಿಮಗೆ ತಿಳಿಸಲು ನಾವು ಒಂದು ಪಟ್ಟಿಯನ್ನು ತಯಾರಿಸಿದ್ದೀವಿ. ಇದರ ಸಹಾಯದಿಂದ ನೀವು ನಿಮ್ಮ ಸ್ನ್ಯಾಕ್ಸ್‌ಗಳನ್ನು ವರ್ಗೀಕರಿಸಿ ಅದರ ಕುರಿತು ಹುಷಾರಾಗಿರಬಹುದು.

ಕರಿದ ಪಾಪಡ್

ಕರಿದ ಪಾಪಡ್

ಒಂದು ವೇಳೆ ನಿಮಗೆ ಫ್ರೈಡ್ ಪಾಪಡ್ ತಿನ್ನುವ ಅಭ್ಯಾಸವಿದ್ದಲ್ಲಿ, ಡಯಟ್ ಮಾಡುವ ಅವಧಿಯಲ್ಲಿ ಇದನ್ನು ಸೇವಿಸುವ ಮೊದಲು ಎರಡು ಬಾರಿ ಆಲೋಚಿಸಿ. ಇದರಲ್ಲಿರುವ ಎಣ್ಣೆಯಂಶವು ನಿಮ್ಮ ದೇಹಕ್ಕೆ ಕ್ಯಾಲೋರಿಗಳನ್ನು ಸೇರಿಸುತ್ತದೆ.

ಮೊಸರು

ಮೊಸರು

ನಮ್ಮಲ್ಲಿ ಕೆಲವರಿಗೆ ಯೋಗರ್ಟ್ ಅನ್ನು ಸ್ನ್ಯಾಕ್ಸ್ ಆಗಿ ಸೇವಿಸುವ ಅಭ್ಯಾಸವಿರುತ್ತದೆ. ಹೌದು ಬಹುತೇಕ ಭಾರತೀಯರು ಸಕ್ಕರೆಯೊಂದಿಗೆ ಮೊಸರನ್ನು ಸೇವಿಸುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ಇದು ನಮ್ಮಲ್ಲಿ ಬಹುತೇಕರಿಗೆ ಸಂಜೆಯ ಸ್ನ್ಯಾಕ್ಸ್ ಆಗಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳಬೇಕು ಎಂದಲ್ಲಿ, ಇದನ್ನು ಸಹ ನಿಯಂತ್ರಿಸಬೇಕು.

ಸೋಡಾಗಳು

ಸೋಡಾಗಳು

ಸೋಡಾದ ಜೊತೆಗೆ ಇರುವ ಅತಿದೊಡ್ಡ ಸಮಸ್ಯೆ ಎಂದರೆ ಇದರಲ್ಲಿರುವ ಸಿಹಿಕಾರಕಗಳು ಅನಾರೋಗ್ಯಕಾರಿಯಾಗಿರುತ್ತವೆ. ನಿಮ್ಮ ಆಹಾರ ಪಟ್ಟಿಯಿಂದ ಸೋಡಾಗಳನ್ನು ತೆಗೆದುಹಾಕುವುದರಿಂಡ್ದ, ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಮತ್ತು ಡಯಟನ್ನು ಯಶಸ್ವಿಗೊಳಿಸಿಕೊಳ್ಳಬಹುದು.

ಬಾಳೆಹಣ್ಣು ಚಿಪ್ಸ್

ಬಾಳೆಹಣ್ಣು ಚಿಪ್ಸ್

ಚಿಪ್ಸ್ ಎಂದರೆ ಚಿಪ್ಸೆ! ಒಂದು ವೇಳೆ ನಿಮಗೆ ಯಾರಾದರು ಆಲೂಗಡ್ಡೆ ಮುಂತಾದ ಚಿಪ್ಸ್‌ಗಳಿಗಿಂತ ಬಾಳೆಹಣ್ಣು ಚಿಪ್ಸ್ ಒಳ್ಳೆಯದು ಎಂದು ಹೇಳಿದರೆ, ಅದನ್ನು ನಂಬಬೇಡಿ. ಇವುಗಳನ್ನು ಸಹ ಎಣ್ಣೆಯಲ್ಲಿಯೇ ಕರಿದಿರುತ್ತಾರೆ. ಇದನ್ನು ಸೇವಿಸುವುದರಿಂದ ಸ್ಯಾಚುರೇಟೇಡ್ ಕೊಬ್ಬುಗಳು ದೇಹವನ್ನು ಸೇರುತ್ತವೆ.

ಟ್ರೇಲ್ ಮಿಕ್ಸ್

ಟ್ರೇಲ್ ಮಿಕ್ಸ್

ಒಣ ಹಣ್ಣು ಮತ್ತು ಸ್ವಲ್ಪ ಸಿಹಿ ಜೀರಿಗೆ ಮಿಠಾಯಿಗಳನ್ನು ಹಾಕಿ ಮಾಡಿರುವ ಈ ಮಿಶ್ರಣವನ್ನು ನೀವು ಖಡಾಖಂಡಿತವಾಗಿ ಸೇವಿಸಬಾರದು. ಇದನ್ನು ಸೇವಿಸುವ ಬದಲಿಗೆ ಒಂದು ಆರೋಗ್ಯಕರವಾದ ನಟ್ ಬಾರ್ ಸೇವಿಸುವುದು ಉತ್ತಮ.

ಲಘು ಪಾನೀಯಗಳು

ಲಘು ಪಾನೀಯಗಳು

ಹಿತಮಿತವಾಗಿ ಸೇವಿಸಿದರೆ ಇವು ಸಹ ಆರೋಗ್ಯಕಾರಿಯೇ, ಆದರೆ ಅತಿಯಾಗಿ ಸೇವಿಸಿದರೆ ಇವುಗಳು ಸಹ ಮಾರಕವಾಗುತ್ತವೆ. ಇಂತಹ ಆಹಾರ ಪದಾರ್ಥಗಳನ್ನು ನಾವು ಪದೇ ಪದೇ ಸೇವಿಸುತ್ತಿದ್ದರೆ, ಅದೇ ನಮಗೆ ಚಟವಾಗಿ ಬಿಡುತ್ತದೆ. ನಾವು ನಿಯಂತ್ರಿಸಬೇಕಾದ ಸ್ನ್ಯಾಕ್ಸ್‌ಗಳಲ್ಲಿ ಇವುಗಳು ಸಹ ಒಂದಾಗಿರುತ್ತವೆ, ವಿಶೇಷವಾಗಿ ರಾತ್ರಿಯಲ್ಲಿ ಇದನ್ನು ಸೇವಿಸಬಾರದು.

ಕುರುಕಲು ತಿಂಡಿ

ಕುರುಕಲು ತಿಂಡಿ

ಕೆಲವರ ಪ್ರಕಾರ ಈ ಕುರುಕಲು ತಿಂಡಿ ಹೊಟ್ಟೆ ಹಸಿವನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತವೆಯಂತೆ. ಆದ್ದರಿಂದ ಇದನ್ನು ಸೇವಿಸುವುದನ್ನು ಕಡಿಮೆ ಮಾಡಿ.

ಕುಕೀಗಳು

ಕುಕೀಗಳು

ಇದನ್ನು ಯಾವುದೇ ಕಾರಣಕ್ಕು ಹವ್ಯಾಸ ಮಾಡಿಕೊಳ್ಳಬೇಡಿ. ಒಂದು ವೇಳೆ ಇದನ್ನು ಹವ್ಯಾಸ ಮಾಡಿಕೊಂಡರೆ, ತೂಕ ಇಳಿಸಿಕೊಳ್ಳುವ ಗುರಿಯನ್ನು ನೀವು ತಲುಪುವುದು ಸಾಧ್ಯವಾಗುವುದಿಲ್ಲ. ಇದು ಖಂಡಿತ ನಿಮ್ಮನ್ನು ನಿರಾಶೆಗೊಳಿಸುತ್ತದೆ.

ಗ್ರನೊಲಾ

ಗ್ರನೊಲಾ

ಗ್ರನೊಲಾವನ್ನು ಕೆನೆ ಹಾಲಿನೊಂದಿಗೆ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ನಮ್ಮ ದೇಹವನ್ನು ಸೇರುತ್ತವೆ. ಒಂದು ವೇಳೆ ನೀವು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತ ಬಹುತೇಕ ಸಮಯವನ್ನು ಕಳೆಯುವಂತಿದ್ದರೆ ಮಾತ್ರ ಇದನ್ನು ಸೇವಿಸಿ. ಇದು ಆರೋಗ್ಯಕರವಾದರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ನಾವು ತಡೆಯಬೇಕಾಗುತ್ತದೆ.

ಪುಡ್ಡಿಂಗ್

ಪುಡ್ಡಿಂಗ್

ಪುಡ್ಡಿಂಗ್‌ ಮಾಡಲು ಅಧಿಕ ಪ್ರಮಾಣದಲ್ಲಿ ಚಾಕೋಲೆಟ್ ಬಳಸುತ್ತಾರೆ. ಇದು ನಿಮಗೆ ಚಟವಾಗಿ ಅಂಟಿಕೊಳ್ಳುತ್ತದೆ. ಒಮ್ಮೆ ಇದಕ್ಕೆ ದಾಸರಾದರೆ ಮುಗಿಯಿತು. ಇದನ್ನು ಸೇವಿಸದೆ ನೀವು ಇರಲಾಗುವುದಿಲ್ಲ. ಆದ್ದರಿಂದ ಇಂತಹ ಆಹಾರ ಪದಾರ್ಥಗಳಿಂದ ದೂರವಿರಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

English summary

10 snacks to avoid while dieting

When you are trying to lose weight, it is important to ensure that you eat right. So, it means that you must know about certain snacks to avoid. The main reason why you must be careful with your snacking habit is because you will be unaware of the amount of calories you will be adding to your system while snacking.
X
Desktop Bottom Promotion