ಏಳು ದಿನಗಳಲ್ಲಿ 7 ಕೆಜಿ ತೂಕ ಕಡಿಮೆಗೊಳಿಸಿ !

By: Manohar.V
Subscribe to Boldsky

ನೀವು ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ಬಯಸುವಿರಾ ? ಮೊದಲಿಗೆ ಇದು ಅಸಾಧ್ಯವಾದ ಮಾತು ಎಂದು ನಿಮಗೆ ಅನಿಸಬಹುದು , ಆದರೆ ಕೆಲವೊಂದು ಸರಳವಾದ ಡಯೆಟ್‌ ಆಹಾರಗಳನ್ನು ನೀವು ಕ್ರಮಾನುಗತವಾಗಿ ಸೇವಿಸಿದರೆ ಖಂಡಿತವಾಗಿಯೂ ನೀವು ತೂಕವನ್ನು ಕಳೆದುಕೊಳ್ಳುವಿರಿ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.

ತೂಕವನ್ನು ಕಡಿಮೆಗೊಳಿಸುವ ಸಲುವಾಗಿ ಹಲವಾರು ಜನರು ಕಳೆದ ಎರಡು ಮೂರು ತಿಂಗಳಿಂದ ಹೊಸ ವರುಷದ ಆಗಮನದ ನಿರೀಕ್ಷೆಯಲ್ಲಿದ್ದರು, ಹೊಸ ವರುಷದ ಆರಂಭದಿಂದಲೇ ತೂಕವನ್ನು ಕಳೆದುಕೊಳ್ಳುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ, ಹಾಗಾಗಿ ತೂಕವನ್ನು ಕಡಿಮೆಗೊಳಿಸುವುದಕ್ಕೆ ನಿಮಗೆ ಸಹಾಯವಾಗಲು, ಇಲ್ಲಿ ನೀಡಲಾಗಿರುವ ಕೆಲವೊಂದು ಮಾಹಿತಿಯನ್ನು ನೀವು ಪಾಲಿಸಲೇಬೇಕು.

ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳುವುದರಲ್ಲಿ ನಿಮ್ಮ ತಾಳ್ಮೆ ಹಾಗೂ ನೀವು ಸೇವಿಸುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಖಂಡಿತವಾಗಿಯೂ ನೀವು ಇದನ್ನು ಸಾಧಿಸಬಹುದು. ತೂಕವನ್ನು ಕಡಿಮೆಗೊಳಿಸುವುದು ಎಂದರೆ ನೀವು ಮೈದಾನದಲ್ಲಿ 100 ಮೀಟರ್ ಓಟದಲ್ಲಿ ಭಾಗವಹಿಸಿದಂತೆ !

ಹಾಗಾದರೆ ಇನ್ನೇಕೆ ತಡ ? ಕೆಲವೊಂದು ಸರಳವಾದ ಡಯಟ್ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ. ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಡಿಮೆಗೊಳಿಸಲು ಬಯಸುವವರು ಖಂಡಿತವಾಗಿಯೂ ಇಂತಹ ಸಲಹೆಗಳನ್ನು ತಪ್ಪದೇ ಪಾಲಿಸಲೇಬೇಕು.

ಮೊದಲ ದಿನ:

ಮೊದಲ ದಿನ:

ತೂಕವನ್ನು ಕಳೆದುಕೊಳ್ಳಲು ಬಯಸುವವರಿಗೆ ಇದು ಪ್ರಮುಖ ಅಂಶವಾಗಿದೆ. ನಿಮ್ಮ ಮೊದಲ ದಿನವನ್ನು ಹಣ್ಣುಗಳನ್ನು ತಿನ್ನುವುದರ ಮೂಲಕ ಪ್ರಾರಂಭಿಸಿ ! ಉಳಿದ ಆಹಾರಗಳನ್ನು ಬದಿಗೆ ಸರಿಸಿ ಆರೋಗ್ಯಕರವಾಗಿರುವ ಇಂತಹ ಹಣ್ಣುಗಳನ್ನು ನೀವು ಸೇವಿಸಿದರೆ ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳುವಲ್ಲಿ ನಿಮಗೆ ಸಹಕಾರಿಯಾಗಲಿದೆ. ಸಾಮಾನ್ಯವಾಗಿ ಬಾಳೆಹಣ್ಣು ಒಂದನ್ನು ಹೊರತು ಪಡಿಸಿ, ಉಳಿದ ಹಣ್ಣುಗಳನ್ನು ನಿಮ್ಮ ಡಯೆಟ್‌ನ ಪಟ್ಟಿಯಲ್ಲಿ ಸೇರಿಸಿ. ಜೊತೆಗೆ ಸಾಧ್ಯವಾದಷ್ಟು ನೀರನ್ನು ಸೇವಿಸಿ.

ಎರಡನೇಯ ದಿನ:

ಎರಡನೇಯ ದಿನ:

ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ, ನೀವು ಕಟ್ಟುನಿಟ್ಟಾಗಿ ತರಕಾರಿಗಳನ್ನು ಮಾತ್ರ ಬಳಸಬೇಕು. ನಿಮ್ಮ ಊಟವನ್ನು ಇನ್ನಷ್ಟು ಸ್ವಾದಿಷ್ಟಕರವನ್ನಾಗಿಸಲು, ನೀವು ತರಕಾರಿಯಿಂದ ಮಾಡಲಾಗಿರುವ ಆರೋಗ್ಯಯುಕ್ತವಾಗಿರುವ ಸಲಾಡ್ ಅನ್ನು ಸೇವಿಸಿ. ಬೇಯಿಸಲಾಗಿರುವ ಅಥವಾ ಹಸಿ ತರಕಾರಿಯು ತೂಕವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪೊಟೇಟೊ (ಆಲೂಗಡ್ಡೆ) ಸೇರಿದಂತೆ ನೀವು ಎಲ್ಲಾ ರೀತಿಯ ತರಕಾರಗಳನ್ನು ಸೇವಿಸಬಹುದು, ಆದರೆ ಪೊಟೇಟೊ ಅನ್ನು ಬೇಯಿಸಿ ತಿನ್ನುವುದು ಅತ್ಯಗತ್ಯ. ಇದರ ಜೊತೆಗೆ 8 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ.

ಮೂರನೇಯ ದಿನ:

ಮೂರನೇಯ ದಿನ:

ಮೂರನೇಯ ದಿನ ಸ್ವಲ್ಪ ರಂಗು ರಂಗಿನಿಂದ ಕೂಡಿರುತ್ತದೆ ! ಈ ದಿನ ನೀವು ಹಣ್ಣುಗಳು ಹಾಗೂ ತರಕಾರಿಗಳು ಎರಡನ್ನು ಮಿಕ್ಸ್ ಮಾಡಬೇಕಾಗುತ್ತದೆ. ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ, ಈ ಸಲಹೆಗಳನ್ನು ನೀವು ಪಾಲಿಸಲೇ ಬೇಕು. ನಿಮ್ಮ ದಿನವನ್ನು ಒಂದು ಬೌಲ್‌ ಹಣ್ಣಿನೊಂದಿಗೆ ಪ್ರಾರಂಭಿಸಿ, ಜೊತೆಗೆ ನಿಮ್ಮ ಮಧ್ಯಾಹ್ನದ ಊಟದ ಜೊತೆ ತರಕಾರಿ ಸಲಾಡ್ ಅನ್ನು ಸೇವಿಸಿ, ಹಾಗೂ ರಾತ್ರಿ ಊಟದ ನಂತರ ಹಣ್ಣುಗಳನ್ನು ತಿನ್ನಲು ಮರೆಯದಿರಿ. ಪೊಟೇಟೊ ಹಾಗೂ ಬಾಳೆಹಣ್ಣುಗಳನ್ನು ಮೂರನೇಯ ದಿನದಲ್ಲಿ ಬಳಸಬೇಡಿ.

ನಾಲ್ಕನೆಯ ದಿನ:

ನಾಲ್ಕನೆಯ ದಿನ:

ನಾಲ್ಕನೆಯ ದಿನದಲ್ಲಿ ನೀವು ಕೇವಲ ಬಾಳೆಹಣ್ಣು ಹಾಗೂ ಹಾಲು ಮಾತ್ರ ಸೇವಿಸಬೇಕು. ಅಂದರೆ ನೀವು ಬಾಳೆ ಹಣ್ಣಿನಿಂದ ಮಿಲ್ಕ್‌ಶೇಕ್ ಮಾಡಿ ಸೇವಿಸಬೇಕು. ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ ನಾಲ್ಕನೆಯ ದಿನ ನೀವು ಇದನ್ನು ತಪ್ಪದೇ ಅನುಸರಿಸಬೇಕು. ಕೆನೆ ತೆಗೆದ ಹಾಲನ್ನು ಮಾತ್ರ ಉಪಯೋಗಿಸಿ.

ಐದನೆಯ ದಿನ

ಐದನೆಯ ದಿನ

ಇಂದು, ನಿಮ್ಮ ಡಯೆಟ್‌ನಲ್ಲಿ ಕೊಚ್ಚಿಲು ಅಕ್ಕಿ (boiled rice) ಅನ್ನು ಸೇರಿಸಿಕೊಳ್ಳಿ. ಆದರೆ ಈ ಡಯಟ್ ಜೊತೆ ನೀವು ಟೊಮೇಟೊ ಅನ್ನು ಕೂಡ ಸೇರಿಸಬೇಕಾಗುತ್ತದೆ. ಸುಮಾರು 7 - 8 ಹಸಿ ಅಥವಾ ಬೇಯಿಸಿದ ಟೊಮೇಟೊ ಅನ್ನು ನಿಮ್ಮ ಡಯೆಟ್ ಪಟ್ಟಿಗೆ ಸೇರಿಸಿ. ಮಧ್ಯಾಹ್ನ ಟೊಮೇಟೊ ಅನ್ನು ಮಾತ್ರ ಸೇವಿಸಿ ಹಾಗೂ ರಾತ್ರಿಯ ಊಟಕ್ಕೆ ಕೊಚ್ಚಿಲು ಅಕ್ಕಿ ಸೇವಿಸಿ. ಜೊತೆಗೆ 12 ರಿಂದ 15 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ.

 ಆರನೇಯ ದಿನ:

ಆರನೇಯ ದಿನ:

ಆರನೇಯ ದಿನ ಮಧ್ಯಾಹ್ನದ ಊಟದ ಜೊತೆ ತರಕಾರಿಗಳನ್ನು ತಿನ್ನುವುದನ್ನು ಮರೆಯಬೇಡಿ. ಆರನೇಯ ದಿನ ನಿಮ್ಮ ಊಟದ ಮೆನುವಿನಲ್ಲಿ ತರಕಾರಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ.

ಏಳನೆಯ ದಿನ:

ಏಳನೆಯ ದಿನ:

ಏಳನೆಯ ದಿನ ನಿಮ್ಮ ಇಷ್ಟದ ತರಕಾರಿಗಳಿಂದ ಮಾಡಲಾಗಿರುವ ರೈಸ್ ಅನ್ನು ಸೇವಿಸಿ. ಈ ಎಲ್ಲಾ ಡಯೆಟ್‌ ಹಣ್ಣಿನ ರಸಗಳ ಸಹಾಯದಿಂದ ನಿಮ್ಮ ದೇಹದಲ್ಲಿರುವ ನಂಜನ್ನು ಹೊರಹಾಕಿ, ನಿಮ್ಮ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಲಿದೆ.

English summary

Lose 7kgs In 7 Days: Diet Tips

Do you want to lose 7kgs in 7 days? This might seem impossible at first, but we can assure you that if you follow this simple diet tips, you will surely lose tons of weight.
Please Wait while comments are loading...
Subscribe Newsletter