For Quick Alerts
ALLOW NOTIFICATIONS  
For Daily Alerts

ಚೈನೀಸ್ ಆಹಾರಗಳಲ್ಲಿ ಅಡಗಿದೆ 7 ಸೂಪರ್ ಅಂಶಗಳು!

By Super
|

ಯಾರಾದರು ಚೈನೀಸ್ ಖಾದ್ಯಗಳನ್ನು ತಯಾರಿಸುವವರ ಬಳಿಗೆ ಹೋಗಿ ಇದು ಯಾವ ಬಗೆಯ ಚೈನೀಸ್ ತಿಂಡಿ ಎಂದು ಕೇಳಿ, ಆಗ ಅವರು ಇದು "ಚೌಮೇನ್" ಎನ್ನುತ್ತಾರೆ. ಇನ್ನುಳಿದಂತೆ ನಾವು ಸಾಮಾನ್ಯವಾಗಿ ಚೈನೀಸ್ ಪ್ಲಾಟ್ಟರ್‌ಗಳ ಬಗ್ಗೆ ಸ್ವಲ್ಪ ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿರುತ್ತೇವೆ. ಏಕೆಂದರೆ ನಮ್ಮ ಪ್ರಕಾರ ಚೈನೀಸ್ ತಿಂಡಿಗಳು ಎಂದರೆ ಆ ಪ್ಲಾಟ್ಟರ್ ಮತ್ತು ನೂಡಲ್ಸ್ ಎಂಬ ಭಾವನೆ. ಆದರೆ ನಾವು ನಮ್ಮ ಙ್ಞಾನವನ್ನು ಅಧಿಕಗೊಳಿಸಿಕೊಳ್ಳುವಂತಹ ಸಮಯ ಬಂದಿದೆ.

ಚೈನೀಸ್ ತಿಂಡಿಗಳು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯಕಾರಿ ಪ್ರಯೋಜನಗಳ ಕುರಿತು ತಿಳಿದುಕೊಳ್ಳಬೇಕಾದ ಅಗತ್ಯ ಬಂದಿದೆ. ಅದಕ್ಕಾಗಿ ಚೈನೀಸ್ ರೆಸ್ಟೋರೆಂಟ್‍ಗಳಲ್ಲಿ ಚಾಪ್ ಸ್ಟಿಕ್ ಹಿಡಿದುಕೊಳ್ಳುವ ಮೊದಲು ಅದರ ಕುರಿತಾದ ಸವಿವರವಾದ ಮಾಹಿತಿಯನ್ನು ಮೊದಲು ಇಲ್ಲಿ ಓದಿಕೊಳ್ಳಿ. ಈ 10 ಚೈನೀಸ್ ಫುಡ್ಸ್ ನಿಜವಾದ ಚೈನೀಸ್ ಫುಡ್ಸ್ ಅಲ್ಲ!

ಕಡಿಮೆ ಕ್ಯಾಲೊರಿ ಲೊಬ್‍ಸ್ಟರ್ ಸಾಸ್

ಒಂದು ವೇಳೆ ನಿಮಗೆ ಒಂದು ಪಕ್ಕಾ ಚೈನೀಸ್ ರೆಸ್ಟೋರೆಂಟ್‍ನಲ್ಲಿ ಲೊಬ್‍ಸ್ಟರ್ ಸಾಸ್ ಸವಿಯುವ ಅವಕಾಶ ಸಿಕ್ಕರೆ, ನೀವು ಅದರ ರುಚಿಯನ್ನು ಖಂಡಿತ ಮರೆಯಲಾರಿರಿ. ಇದು ಕಡಿಮೆ ಕ್ಯಾಲೊರಿಗಳಿರುವ ಒಂದು ಖಾದ್ಯವಾಗಿದ್ದು, ಇತರ ಕಡಿಮೆ ಕ್ಯಾಲೊರಿ ಇರುವ ಖಾದ್ಯದ ಜೊತೆಗೆ ಬಡಿಸಲಾಗುತ್ತದೆ. ಅಂದರೆ ಕಾಲು ಕಪ್‍ಗೆ ಕೇವಲ 50 ಕ್ಯಾಲೊರಿ ಮಾತ್ರ ಇದರಲ್ಲಿ ಇರುತ್ತದೆ.

ಎಡೆಮೆಮ್ ಕಡಿಮೆ ಕ್ಯಾಲೊರಿ ಇರುವ ಆಹಾರವಲ್ಲ

ನಿಮ್ಮ ಭೂರಿ ಭೋಜನವನ್ನು ನಾರಿನಿಂದ ಕೂಡಿರುವ, ಹೊಟ್ಟೆ ಹಸಿವನ್ನು ಹೆಚ್ಚಿಸುವ ಸೋಯಾಬಿನ್ ಜೊತೆಗೆ ಆರಂಭಿಸಲು ಮನಸ್ಸು ಮಾಡಿದಲ್ಲಿ, ಬಡಿಸುವವರನ್ನು ಒಮ್ಮೆ ಕೇಳಿ. ಇದನ್ನು ಹೇಗೆ ತಯಾರಿಸಲಾಯಿತು ಎಂದು? ಅದಕ್ಕೆ ಅವರು ಬಿಸಿ ನೀರಿನ ಉಗಿಯಲ್ಲಿ ಎಂದು ಹೇಳಿದರೆ ಅದಕ್ಕೆ ಅಡ್ಡಿಯಿಲ್ಲ, ಆದರೆ ಅದನ್ನು ಉಗಿಯಿಂದ ತೆಗೆದ ಮೇಲೆ ಅದರ ಮೇಲೆ ಎಣ್ಣೆಯನ್ನು ಚಿಮಿಕಿಸಿದ್ದರೆ ಮಾತ್ರ, ಅದನ್ನು ತಿನ್ನುವ ಮೊದಲು ಒಮ್ಮೆ ಯೋಚಿಸಿ. ಅಪಾಯ ಬೇಡ ಎಂದಾದಲ್ಲಿ ಮುಂದಿನ ತಿಂಡಿಯನ್ನು ಸವಿಯಲು ಹೋಗಿ. ಏಕೆಂದರೆ ಇದನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಜೊತೆಗೆ ಆರೋಗ್ಯದ ಸಮಸ್ಯೆಗಳು ಸಹ ಕಂಡು ಬರುತ್ತವೆ. ಚೈನೀಸ್ ಪನ್ನೀರ್ ನೂಡಲ್ಸ್ ರೆಸಿಪಿ

ಶ್ರಿಂಪ್ ಚಿಪ್ಸ್‌ಗಳು ನೀವು ಅಂದುಕೊಂಡಷ್ಟು ಮೃದುವಲ್ಲ

ಗರಿ ಗರಿಯಾದ ನೂಡಲ್‍ಗಳಿಗಿಂತ ಶ್ರಿಂಪ್ ಚಿಪ್ಸ್‌ಗಳು ಆರೋಗ್ಯಕರ ಮತ್ತು ತಿನ್ನಲು ಮೃದು ಎಂದು ಭಾವಿಸುವಿರಾ? ನೆನಪಿರಲಿ, ಈ ಶ್ರಿಂಪ್ ಚಿಪ್ಸ್‌ಗಳು ಎಣ್ಣೆಯಲ್ಲಿ ಡೀಪ್ ಫ್ರೈ ಆಗಿರುತ್ತವೆ ಮತ್ತು ಸ್ಟಾರ್ಚ್ ಹೊಂದಿರುತ್ತವೆ. ಒಂದು ಹಿಡಿ ಶ್ರಿಂಪ್ ಚಿಪ್ಸ್‌ಗಳಲ್ಲಿ 200ಕ್ಕೂ ಅಧಿಕ ಕ್ಯಾಲೋರಿಗಳು ಮತ್ತು 14 ಗ್ರಾಂ ಕೊಬ್ಬು ಇರುತ್ತದೆ. ಒಂದು ವೇಳೆ ನೀವು ಸ್ನ್ಯಾಕ್ಸ್ ಸಮಯದಲ್ಲಿ ಶ್ರಿಂಪ್ ಚಿಪ್ಸ್ ತಿನ್ನಬೇಕಾದಲ್ಲಿ ಇದರ ಜೊತೆಗೆ ಒಂದೆರಡು ಕಪ್ ಗ್ರೀನ್ ಟೀ ಸೇವಿಸಿ.

ತರಕಾರಿಗಳು ಮೋಸ ಮಾಡುತ್ತವೆ

ತರಕಾರಿಗಳಿಗಿಂತ ಆರೋಗ್ಯಕರವಾಗಿರುವಂತಹವು ಯಾವುದು ಇಲ್ಲ ಎಂಬುದು ನಿಮ್ಮ ನಂಬಿಕೆಯೇ? ಆದರೆ ಮೋಸ ಹೋಗಬೇಡಿ. ಈ ತರಕಾರಿಗಳನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರುತ್ತಾರೆ. ದುಃಖದ ಸಂಗತಿಯೆಂದರೆ ಈ ತರಕಾರಿಗಳಲ್ಲಿ ಕೆಲವೊಂದು ಸ್ಪಾಂಜುಗಳು ನೀರನ್ನು ಹೀರಿಕೊಂಡಂತೆ ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಇಂತಹ ತರಕಾರಿಗಳಿಂದ ನೀವು ಆದಷ್ಟು ದೂರವಿರಿ. ಬದನೆಕಾಯಿಯಂತಹ ತರಕಾರಿಗಳು ಎಣ್ಣೆಯನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ. ಇನ್ನು ಎಣ್ಣೆಗಾಯಿಯಂತಹುದನ್ನು ಮಾಡಿದಾಗ ಸ್ವಲ್ಪ ಯೋಚಿಸಿ.

ಉಗಿಯಲ್ಲಿ ಬೇಯಿಸಿದ ಡಂಪ್ಲಿಂಗ್‌ಗಳು ಕ್ಯಾಲೋರಿಯ ಮಿತಿಯನ್ನು ಹೊಂದಿರುವುದಿಲ್ಲ

ಡಂಪ್ಲಿಂಗ್‍ಗಳು ಎಂದರೆ ಪಕೋಡಾದಂತಹ ಆಹಾರಗಳು. ಇವುಗಳಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಹೋಲಿಸಿದಲ್ಲಿ ಉಗಿಯಲ್ಲಿ ಬೇಯಿಸಿದ ಆಹಾರಗಳಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುವುದಿಲ್ಲ. ಆದರೆ ಇದು ಡಂಪ್ಲಿಂಗ್ ಒಳಗೆ ಯಾವ ಪದಾರ್ಥಗಳನ್ನು ಬೇಯಿಸಲಾಗಿದೆ ಎಂಬುದನ್ನು ಅವಲಂಬಿಸಿವೆ. ಕೆಲವೊಂದು ಆಹಾರಗಳಲ್ಲಿ ಹಂದಿ ಮಾಂಸವನ್ನು ಇಡಲಾಗುತ್ತದೆ, ಇವು ಒಂದು ತುಂಡಿಗೆ 80 ಕ್ಯಾಲೋರಿ ಇರುತ್ತದೆ ಮತ್ತು ತರಕಾರಿಗಳು ಒಂದು ತುಂಡಿಗೆ 35 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಟೊಫು ತಿಂದರೆ ನಿಮ್ಮ ಡಯಟ್ ಹಾಳಾಗುತ್ತದೆ

ಎಲ್ಲಾ ಬಗೆಯ ಟೊಫುಗಳು ನಿಮ್ಮ ತೂಕವನ್ನು ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುವುದಿಲ್ಲ. ಕೆಲವೊಂದು ಟೊಫುಗಳಲ್ಲಿ ಕ್ಯಾಲೋರಿಗಳು ಅಧಿಕವಾಗಿರುತ್ತವೆ. ಏಕೆಂದರೆ ಇವುಗಳನ್ನು ಸ್ಟಿರ್ ಫ್ರೈಡ್ ಮಾಡುವ ಮೊದಲು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರುತ್ತಾರೆ. ಆದ್ದರಿಂದ ಇದನ್ನು ಸೇವಿಸುವ ಮೊದಲು ಹೇಗೆ ತಯಾರಿಸಿದಿರಿ ಎಂದು ಕೇಳಿ, ಜೊತೆಗೆ ಅದು ಸಾಫ್ಟ್ ಅಥವಾ ಪ್ಲೇನ್ ಟೊಫುನೆ ಎಂದು ಸಹ ಕೇಳಿ. ಆಮೇಲೆ ತಿನ್ನಬೇಕೆ, ಬೇಡವೇ ಎಂದು ಯೋಚಿಸಿ.

ಒಂದು ತಿಂಡಿ ಇಬ್ಬರು ತಿನ್ನಬಹುದು

ಚೈನೀಸ್ ಅಥವಾ ಥಾಯ್ ಖಾದ್ಯಗಳು ಸಾಮಾನ್ಯವಾಗಿ ಒಂದು ಪ್ಲೇಟ್ ತಿಂಡಿಯನ್ನು ಇಬ್ಬರು ತಿನ್ನಬಹುದು. ಇದನ್ನು ಆರ್ಡರ್ ಮಾಡುವಾಗ ಅದರ ಪ್ರಮಾಣದ ಕುರಿತು ತಿಳಿದುಕೊಳ್ಳಿ. ಆದಷ್ಟು ತಿಂಡಿಗಳನ್ನು ನಿಮ್ಮ ಕುಟುಂಬ ಅಥವಾ ಜೊತೆಗಾರರ ಜೊತೆಗೆ ಹಂಚಿಕೊಂಡು ತಿನ್ನುವಷ್ಟು ಬಡಿಸುತ್ತಾರೆ. ಮಿತವ್ಯಯದ ಜೊತೆಗೆ ಕ್ಯಾಲೋರಿಗಳು ಸಹ ಇಲ್ಲಿ ಇತರರಿಗೆ ಹಂಚಿಕೆಯಾಗುತ್ತದೆ.

English summary

7 Things To Know About Chinese Food

Ask anyone what Chinese food is and they would say “chowmein”. The rest of us generally talk about the components of a Chinese platter with an overstating tone. Clearly, each of us needs an upgrade in our knowledge of Chinese food and its score on the health-o-metre.
Story first published: Saturday, November 15, 2014, 18:16 [IST]
X