For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರವನ್ನು ತಪ್ಪಿಸಬಾರದು ಏಕೆ?

|

ಬೆಳಗಿನ ಉಪಹಾರ ಮುಖ್ಯವಾದದ್ದು ಎಂದು ಹೇಳುವುದನ್ನು ಕೇಳಿರುತ್ತೇವೆ ಆದರೂ ನಾವು ಹಲವು ಬಾರಿ ಇದನ್ನು ತಪ್ಪಿಸುತ್ತೇವೆ. ಬೆಳಗಿನ ಉಪಹಾರವನ್ನು ಖುಷಿಯಾಗಿ ತಿನ್ನಬೇಕಂತೆ ಆದರೆ ನಮ್ಮಲ್ಲಿ ಎಷ್ಟು ಜನ ಇದನ್ನು ಮಾಡುತ್ತೇವೆ? ನಾವು ಬೆಳಗಿನ ಉಪಹಾರ ತಪ್ಪಿಸುವುದಕ್ಕೆ ಕಂಡುಕೊಳ್ಳುವ ಕಾರಣಗಳು ಮೂರ್ಖತನದ್ದಾಗಿರುತ್ತದೆ. ನಮ್ಮ ದೇಹದ ಪರಿಸ್ಥಿತಿಯನ್ನು ನಾವು ಮತ್ತಷ್ಟು ಹದಗೆಡಿಸುತ್ತಿದ್ದೇವೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ.

ಇಂದು ಬೋಲ್ಡ್ ಸ್ದೈ ನಿಮ್ಮೊಂದಿಗೆ ಬೆಳಗಿನ ಉಪಹಾರವನ್ನು ನಾವೇಕೆ ತಪ್ಪಿಸಬಾರದು ಎನ್ನುವುದನ್ನು ಹಂಚಿಕೊಳ್ಳುತ್ತದೆ. ನಾವು ಅರ್ಥಮಾಡಿಕೊಳ್ಳಬೇಕಿರುವ ವಿಷಯವೆಂದರೆ ನಾವು ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದರಿಂದ ನಾವು ದೇಹವನ್ನು ಹಸಿವಿನಿಂದ ಇನ್ನಷ್ಟು ನರಳುವಂತೆ ಮಾಡುತ್ತೇವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ನೀವು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸವಿಟ್ಟುಕೊಂಡಿದ್ದು ಆ ಕಾರಣದಿಂದಲೇ ಬೆಳಗಿನ ತಿಂಡಿಯನ್ನು ತಪ್ಪಿಸುತ್ತಿದ್ದೀರಾ? ಹಾಗಿದ್ದರೆ ಮೊದಲು ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಿ. ನೀವು ಡಯೆಟ್ ಮಾಡುತ್ತಿದ್ದರೂ ಕೂಡ ಆರೋಗ್ಯಕರವಾದ ಬೆಳಗಿನ ತಿಂಡಿ ತಿನ್ನುವುದನ್ನು ತಪ್ಪಿಸಿಕೊಳ್ಳಬೇಡಿ. 7 ಅಥವ 8 ಗಂಟೆಗಳ ಹಿಂದೆ ಮಾಡಿದ್ದ ರಾತ್ರಿಯೂಟ ಜೀರ್ಣವಾಗಿರುತ್ತದೆ. ನಿಮ್ಮ ದೇಹಕ್ಕೆ ಚೈತನ್ಯ ಒದಗಿಸಲು ಈ ಬೆಳಗಿನ ತಿಂಡಿ ಅತ್ಯಂತ ಅವಶ್ಯಕ. ಬನ್ನಿ ನಾವೇಕೆ ಬೆಳಗಿನ ತಿಂಡಿ ತಪ್ಪಿಸಬಾರದು ಎಂದು ನೋಡೋಣ.

ನಾವೇಕೆ ಬೆಳಗಿನ ಉಪಹಾರವನ್ನು ತಪ್ಪಿಸಬಾರದು?

ಶಕ್ತಿಯನ್ನು ಒದಗಿಸುತ್ತದೆ

ಶಕ್ತಿಯನ್ನು ಒದಗಿಸುತ್ತದೆ

ನಿಮಗೆ ಹೆಚ್ಚಿನ ಶಕ್ತಿ ಬೇಕಿದ್ದಲ್ಲಿ ಬೇಯಿಸಿದ ಮೊಟ್ಟೆಗಳನ್ನು ಬೆಳಗಿನ ತಿಂಡಿಯಲ್ಲಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇಯಿಸಿದ ಮೊಟ್ಟೆಗಳಲ್ಲಿ ಹೆಚ್ಚಿನ ಪ್ರೊಟಿನ್ ಇರುತ್ತದೆ. ಇದು ನಿಮ್ಮ ಚೈತನ್ಯವನ್ನು ಉದ್ದೀಪಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹಸಿವನ್ನು ನೀಗಿಸಿ ನಿಮ್ಮ ದಿನವನ್ನು ಸೂಕ್ತ ರೀತಿಯಲ್ಲಿ ಮುಂದಕ್ಕೊಯ್ಯುತ್ತದೆ.

ನಿಮ್ಮ ಮನಸ್ಸಿನ ಜಾಗೃತ ಸ್ಥಿತಿಯನ್ನು ಕಾಪಾಡುತ್ತದೆ

ನಿಮ್ಮ ಮನಸ್ಸಿನ ಜಾಗೃತ ಸ್ಥಿತಿಯನ್ನು ಕಾಪಾಡುತ್ತದೆ

ನೀವು ಬೆಳಗಿನ ತಿಂಡಿಯನ್ನು ತಿಂದಿಲ್ಲವಾದರೆ ನಿಮಗೆ ತೂಕಡಿಕೆ ಮತ್ತು ಸೋಮಾರಿತನ ಕಾಡುತ್ತದೆ ಅಲ್ಲವೆ? ಆದರೆ ನೀವು ಒಳ್ಳೆಯ ಬೆಳಗಿನ ತಿಂಡಿಯನ್ನು ತಿಂದಿದ್ದರೆ ನಿಮ್ಮ ದಿನ ಬೇರೆಯ ರೀತಿಯದಾಗಿರುತ್ತದೆ. ಇದು ನೀವು ಬೆಳಗಿನ ತಿಂಡಿ ಏಕೆ ತಪ್ಪಿಸಬಾರದು ಎಂದು ನಿಮಗೆ ತಿಳಿಸುತ್ತದೆ.

ತೂಕ ಕಳೆದುಕೊಳ್ಳಲು ದಾರಿ

ತೂಕ ಕಳೆದುಕೊಳ್ಳಲು ದಾರಿ

ನೀವು ತೂಕ ಕಳೆದುಕೊಳ್ಳಲು ಯತ್ನಸಿತ್ತಿರುವಿರಾದರೆ ಬೆಳಗಿನ ತಿಂಡಿಯನ್ನು ತಪ್ಪಿಸುವುದರಿಂದ ನಿಮಗೆ ತೊಂದರೆಯಾಗುತ್ತದೆ. ಓಟ್ಸ್ ಬೆಳಗಿನ ತಿಂಡಿಗೆ ಮತ್ತು ತೂಕ ಕಳೆದುಕೊಳ್ಳುವ ಡಯೆಟ್ ಗೆ ಉತ್ತಮ ಆಯ್ಕೆ.

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ನೀವು ಮಧುಮೇಹಿಗಳೇ? ಹಾಗಿದ್ದಲ್ಲಿ ನಿಮ್ಮ ಆಹಾರ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದರಿಲಿ. ಆದ್ದರಿಂದ ಆರೋಗ್ಯಕರ ಉಪಹಾರದೊಂದಿಗೆ ನೀವು ಇದನ್ನು ನಿಯಂತ್ರಣದಲ್ಲಿಡಬಹುದು.

ರಕ್ತದೊತ್ತಡವನ್ನು ಸೂಕ್ತವಾಗಿರಿಸುತ್ತದೆ

ರಕ್ತದೊತ್ತಡವನ್ನು ಸೂಕ್ತವಾಗಿರಿಸುತ್ತದೆ

ನೀವು ಮೊಟ್ಟೆಗಳನ್ನು ಇಷ್ಟಪಡುವಿರಾದರೆ ರಕ್ತದೊತ್ತಡಕ್ಕೆ ಇದು ಒಳ್ಳೆಯ ಪರಿಹಾರ.

ಹೃದಯಾಘಾತವನ್ನು ತಪ್ಪಿಸುತ್ತದೆ

ಹೃದಯಾಘಾತವನ್ನು ತಪ್ಪಿಸುತ್ತದೆ

ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಒದಗಿಸಿದರೆ ನಿಮ್ಮ ದೇಹದ ಅಂಗಗಳು ಸುಸ್ಥಿಯಲ್ಲಿ ಆರೋಗ್ಯಕರವಾಗಿರುತ್ತದೆ. ಅದರಲ್ಲೂ ಹೃದಯ ದೇಹದ ಪ್ರಮುಖ ಅಂಗ. ಬೆಳಗಿನ ಉಪಹಾರ ಹೃದಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಪೌಷ್ಟಿಕಾಂಶ ಮತ್ತು ಶಕ್ತಿ ನಿಮ್ಮ ಹೃದಯವನ್ನು ಕಾಪಾಡುತ್ತದೆ.

ಮೂಡಿನ ಏರಿಳಿತ

ಮೂಡಿನ ಏರಿಳಿತ

ಅಧ್ಯಯನಗಳ ಪ್ರಕಾರ ಆರೋಗ್ಯಕರ ಬೆಳಗಿನ ಉಪಹಾರವು ನಿಮ್ಮ ಮೂಡಿನಲ್ಲಾಗುವ ಏರಿಳಿತವನ್ನು ತಪ್ಪಿಸುತ್ತದೆ. ಆದ್ದರಿಂದ ನಿಮ್ಮ ದಿನವನ್ನು ನೀವು ಒಳ್ಳೆಯ ರೀತಿಯಿಂದ ಆರಂಭಿಸಿದರೆ ನಿಮ್ಮ ಮೂಡು ಸಹ ಚೆನ್ನಾಗಿರುತ್ತದೆ.

English summary

Why You Should Never Skip Breakfast

Although, people tell you that breakfast is the most important meal of the day, you tend to skip it someway or the other. They say that one should eat breakfast like a king, but how many of you really do?
Story first published: Friday, December 20, 2013, 12:54 [IST]
X
Desktop Bottom Promotion