For Quick Alerts
ALLOW NOTIFICATIONS  
For Daily Alerts

ಪ್ಲಮ್ಸ್ ಪುರುಷರಿಗೆ ಒಳ್ಳೆಯದು

By Hemanth P
|

ಕಡುಬಣ್ಣ ಹೊಂದಿರುವ ಪ್ಲಮ್ಸ್ ಅತ್ಯಂತ ರುಚಿಕರ ಹಣ್ಣು. ಪ್ಲಮ್ಸ್ ತುಂಬಾ ತಾಜಾವಾಗಿರುವಾಗಲೇ ಕಚ್ಚಾ ಅಥವಾ ಒಣಗಿಸಿ ತಿನ್ನಬೇಕು. ಹೇಗೆ ತಿಂದರೂ ಪ್ಲಮ್ಸ್ ನ ಆರೋಗ್ಯಕಾರಿ ಲಾಭಗಳು ಹಲವಾರು. ಒಣಗಿದ ಪ್ಲಮ್ಸ್ ಗಳನ್ನು ಪ್ರುನ್ಸ್ ಎನ್ನುತ್ತಾರೆ. ಇದರಲ್ಲಿ ವಿಟಮಿನ್ ಸಿ, ಕೆ, ಎ ಮತ್ತು ಸಾಕಷ್ಟು ನಾರಿನಾಂಶವಿದೆ. ಪ್ಲಮ್ಸ್ ನಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಸಮೃದ್ಧವಾಗಿದೆ. ಹಾನಿಕಾರಕ ಆಕ್ಸಿಜನ್ ರಾಡಿಕಲ್ ಎಂಬ ಸೂಪರ್ ಆಕ್ಸೈಡ್ ಅಯಾನು ತಟಸ್ಥವಾಗುವಂತೆ ಮಾಡುವಲ್ಲಿ ಇದು ತುಂಬಾ ಪರಿಣಾಮಕಾರಿ ಮತ್ತು ದೇಹದ ಕೊಬ್ಬಿಗೆ ಆಮ್ಲಜನಕದಿಂದ ಆಗುವಂತಹ ಹಾನಿ ತಡೆಗಟ್ಟುತ್ತದೆ.
ವಿಶ್ವದಲ್ಲಿ ಸುಮಾರು 2000 ವಿಧದ ಪ್ಲಮ್ಸ್ ಗಳಿವೆ. ಪ್ಲಮ್ಸ್ ನಲ್ಲಿ ಆರೋಗ್ಯಕಾರಿ ಅಂಶಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿದೆ ಮತ್ತು ಇದರಲ್ಲಿ ಆರೋಗ್ಯ ಲಾಭಗಳು ಬಹಳಷ್ಟಿದೆ ಎಂದು ಫಲಿತಾಂಶಗಳು ಹೇಳಿವೆ. ಒಣಗಿಸಿದ ಪ್ಲಮ್ಸ್ ನಲ್ಲಿರುವಂತ ತಾಮ್ರ ಮತ್ತು ಬೊರಾನ್ ಅಂಶವು ಅಸ್ಥಿರಂಧ್ರತೆ ತಡೆಯುವಲ್ಲಿ ಪ್ರಮುಖಪಾತ್ರ ನಿರ್ವಹಿಸುತ್ತದೆ. ಇದರಲ್ಲಿರುವ ಇನುಲಿನ್ ಎನ್ನುವ ನಾರಿನಾಂಶವನ್ನು ಕುರಳಿನ ಬ್ಯಾಕ್ಟೀರಿಯಾ ಮುರಿದಾಗ ಜೀರ್ಣಾಂಗವ್ಯೂಹದ ಇನ್ನಷ್ಟು ಆಮ್ಲೀಯ ವಾತಾವರಣ ಉಂಟುಮಾಡುತ್ತದೆ.

ಪ್ಲಮ್ಸ್ ನಲ್ಲಿರುವ ಖನಿಜಾಂಶಗಳು ನಿಮ್ಮ ದೇಹದಲ್ಲಿ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನ ಅಪಾಯ ತಗ್ಗಿಸುತ್ತದೆ. ಕೆಲವು ಪ್ಲಮ್ಸ್ ಗಳಲ್ಲಿ ಇರುವ ಕೆಂಪುನೀಲಿ ಬಣ್ಣವನ್ನು ಆಂತೋಸಿಯಾನ್ಸಿಸ್ ಎಂದು ಕರೆಯಲಾಗುತ್ತದೆ. ಇದು ಮುಕ್ತ ರಾಡಿಕಲ್ ನ್ನು ಸಂಪೂರ್ಣವಾಗಿ ಆವರಿಸಿಕೊಂಡು ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ. ಪ್ಲಮ್ಸ್ ಮತ್ತು ಪ್ರುನ್ಸ್ ದೇಹವು ಕಬ್ಬಿನಾಂಶ ಹೀರಿಕೊಳ್ಳುವಂತೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಗಳು ಹೇಳೀವೆ. ಪ್ಲಮ್ಸ್ ನಲ್ಲಿ ವಿಟಮಿನ್ ಬಿಯ ಅಂಶಗಳಾದ ನಿಯಾಸಿನ್, ವಿಟಮಿನ ಬಿ6 ಮತ್ತು ಫೆನಾಲಿಕ್ ಆಮ್ಲವಿದ್ದು, ಇದು ಕಾರ್ಬ್ರೋಹೈಡ್ರೇಟ್ಸ್, ಪ್ರೋಟೀನ್ ಮತ್ತು ಕೊಬ್ಬಿನ ಅಣುಗಳನ್ನು ಮುರಿಯುತ್ತದೆ ಮತ್ತು ಚಯಾಪಚಯಾ ಕ್ರಿಯೆಯನ್ನು ನಿರ್ವಹಿಸುತ್ತದೆ.

1. ಹೃದಯದ ರಕ್ಷಣೆಗೆ ನೆರವಾಗುತ್ತದೆ

1. ಹೃದಯದ ರಕ್ಷಣೆಗೆ ನೆರವಾಗುತ್ತದೆ

ಪ್ಲಮ್ಸ್ ನಲ್ಲಿರುವ ವಿಟಮಿನ್ ಕೆ ದೇಹದಲ್ಲಿ ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ. ಇದು ರಕ್ತದ ಒತ್ತಡವನ್ನು ಸರಿಯಾಗಿ ನಿರ್ವಹಿಸುವ ಕಾರಣ ಹೃದಯ ಪ್ರಮಾಣ ಸ್ಥಿರವಾಗಿರುತ್ತದೆ. ಇದರಲ್ಲಿ ಪೊಟಾಶಿಯಂ, ಖನಿಜಾಂಶಗಳಿರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ ಮತ್ತು ಪಾರ್ಶ್ವವಾಯುವಿನ ಅಪಾಯ ಕಡಿಮೆ ಮಾಡುತ್ತದೆ.

2. ಕ್ಯಾನ್ಸರ್ ಬಾರದಂತೆ ತಡೆಯುತ್ತದೆ

2. ಕ್ಯಾನ್ಸರ್ ಬಾರದಂತೆ ತಡೆಯುತ್ತದೆ

ಕೆಲವು ಪ್ಲಮ್ಸ್ ಗಳಲ್ಲಿ ಇರುವ ಕೆಂಪುನೀಲಿ ಬಣ್ಣವನ್ನು ಆಂತೋಸಿಯಾನ್ಸಿಸ್ ಎಂದು ಕರೆಯಲಾಗುತ್ತದೆ. ಇದು ಮುಕ್ತ ರಾಡಿಕಲ್ ನ್ನು ಸಂಪೂರ್ಣವಾಗಿ ಆವರಿಸಿಕೊಂಡು ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ. ಪ್ಲಮ್ಸ್ ನಲ್ಲಿರುವ ಬೀಟಾ ಕೆರೊಟೀನ್ ಅಂಶಗಳು ಶ್ವಾಸಕೋಶ ಮತ್ತು ಬಾಯಿ ಕುಳಿಯ ಕ್ಯಾನ್ಸರ್ ಇತ್ಯಾದಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

3. ಕಣ್ಣು ಮತ್ತು ದೃಷ್ಟಿ

3. ಕಣ್ಣು ಮತ್ತು ದೃಷ್ಟಿ

ಆರೋಗ್ಯಕರ ಕಣ್ಣು ಮತ್ತು ಒಳ್ಳೆಯ ದೃಷ್ಟಿಗೆ ವಿಟಮಿನ್ ಎ ಅತೀ ಅಗತ್ಯವಾಗಿ ಬೇಕು. ಇದು ಲೋಳೆಯ ಪೊರೆಯನ್ನು ಆರೋಗ್ಯವಾಗಿಡುತ್ತದೆ. ಇದರಲ್ಲಿ ಪ್ರಮುಖವಾಗಿ ಇರುವ ಆಹಾರದ ನಾರಿನಾಂಶವನ್ನು ಜಿಯಾಕ್ಸಾಂಥಿನ್ ಎಂದು ಕರೆಯಲಾಗುತ್ತದೆ. ಇದು ರೆಟಿನಾಗೆ ಒಳ್ಳೆಯದು. ಇದು ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣನ್ನು ರಕ್ಷಿಸುತ್ತದೆ.

4. ಕರುಳು ಕ್ರಮಬದ್ಧವಾಗಿರಲು ನೆರವು

4. ಕರುಳು ಕ್ರಮಬದ್ಧವಾಗಿರಲು ನೆರವು

ಒಣಗಿದ ಪ್ಲಮ್(ಪ್ರುನ್ಸ್)ಗಳು ನಾರಿನಾಂಶದಿಂದ ಸಮೃದ್ಧವಾಗಿದೆ. ಇದರಲ್ಲಿರುವ ಪೋಷಕಾಂಶಗಳ ಲಾಭವೆಂದರೆ ಇದರಲ್ಲಿನ ನಾರಿನಾಂಶವು ಆಹಾರದ ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ. ಸೋರ್ಬಿಟೋಲ್ ಮತ್ತು ಐಸಟಿನ್ ಜತೆಯಾಗಿ ಚಯಾಪಚಯಾ ಕ್ರಿಯೆ ನಿಯಂತ್ರಿಸುತ್ತದೆ ಮತ್ತು ನಿಮ್ಮ ದೇಹವು ಭಿನ್ನ ಆಹಾರ ತಿನ್ನುವ ಸಾಮರ್ಥ್ಯ ಪಡೆಯುತ್ತದೆ ಮತ್ತು ಮಲಬದ್ಧತೆ ತಡೆಯುತ್ತದೆ.

5. ಉತ್ಕರ್ಷಣ ನಿರೋಧಕ

5. ಉತ್ಕರ್ಷಣ ನಿರೋಧಕ

ಪ್ಲಮ್ಸ್ ನಲ್ಲಿರುವ ಉತ್ಕರ್ಷಣ ನಿರೋಧಕವು ದೇಹಕ್ಕೆ ತುಂಬಾ ಲಾಭಕಾರಿ. ಪಾಲಿ ಫೆನಾಲಿಕ್ ಉತ್ಕರ್ಷಣ ನಿರೋಧಕ ಸಂಯುಕ್ತಗಳಾದ ಲ್ಯೂಟೀನ್, ಕ್ರಿಪ್ಟೊಕ್ಸಾಂತಿನ್ ಮತ್ತು ಜಿಯಾಕ್ಸಾಂಥಿನ್ ಮುಕ್ತ ರಾಡಿಕಾಲ್ ನಿಂದ ಬಿಡುಗಡೆಯಾಗುವ ಹಾನಿಕಾರ ಆಮ್ಲಜನಕದ ಪ್ರಮಾಣ ಕಡಿಮೆ ಮಾಡುತ್ತದೆ. ರೋಗಗಳನ್ನು ಉಂಟು ಮಾಡುವ ಮತ್ತು ವಯಸ್ಸಾದ ಪರಿಣಾಮ ಉಂಟುಮಾಡುವ ಆರ್ ಒಎಸ್ ಅಂಶಗಳಿಂದ ದೇಹಕ್ಕೆ ರಕ್ಷಣೆ ನೀಡುತ್ತದೆ.

6. ಪ್ರತಿರೋಧಕ ಶಕ್ತಿ ಸುಧಾರಿಸುತ್ತದೆ

6. ಪ್ರತಿರೋಧಕ ಶಕ್ತಿ ಸುಧಾರಿಸುತ್ತದೆ

ದೇಹದಲ್ಲಿ ಆರೋಗ್ಯಕರ ಅಂಗಾಂಶಗಳು ಮತ್ತು ಬಲವಾದ ಪ್ರತಿರೋಧಕ ವ್ಯವಸ್ಥೆಗೆ ಅಗತ್ಯವಾಗಿರುವ ವಿಟಮಿನ್ ಸಿ ಅಂಶ ಪ್ಲಮ್ಸ್ ನಲ್ಲಿ ಅಧಿಕವಾಗಿದೆ. ಶೀತ ಮತ್ತು ಜ್ವರದ ಸಮಯದಲ್ಲಿ ದೇಹದಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶ ಇದ್ದರೆ ತುಂಬಾ ಒಳ್ಳೆಯದು. ಕಿವಿಯ ಸೋಂಕಿಗೆ ಒಳಗಾಗುವವರಿಗೆ ಇದು ತುಂಬಾ ಉಪಕಾರಿ.

7. ಕೊಲೆಸ್ಟ್ರಾಲ್ ನಿಯಂತ್ರಣ

7. ಕೊಲೆಸ್ಟ್ರಾಲ್ ನಿಯಂತ್ರಣ

ಪ್ಲಮ್ಸ್ ನಲ್ಲಿರುವ ನಾರಿನಾಂಶವು ಕರುಳಿನಲ್ಲಿ ಅಧಿಕ ಪಿತ್ತರಸವನ್ನು ನೆನೆಸಿ ನಂತರ ಅದನ್ನು ವಿಸರ್ಜಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ಪಿತ್ತರಸ ಯಕೃತ್ತಿನಲ್ಲಿ ಕೊಬ್ಬನ್ನು ಜೀರ್ಣಿಸುತ್ತದೆ. ದೇಹವು ನಾರಿನಾಂಶದೊಂದಿಗೆ ಪಿತ್ತರಸವನ್ನು ವಿಸರ್ಜಿಸಿದಾಗ ಯಕೃತ್ ದೇಹದಲ್ಲಿನ ಕೊಲೆಸ್ಟ್ರಾಲ್ ನ್ನು ಉಪಯೋಗಿಸಿ ಹೆಚ್ಚಿನ ಪಿತ್ತರಸ ಬಿಡುಗಡೆ ಮಾಡಿ ರಕ್ತಪರಿಚಲನೆಯ ಮಟ್ಟ ಕಡಿಮೆ ತಗ್ಗಿಸುತ್ತದೆ.

English summary

Plums health benefits for Men

Plums are one of the most colourful and tasty fruits. They are eaten in its fresh and raw form or dried. Either way the health benefits of plums are many. Dried plums are referred to as prunes.
Story first published: Saturday, December 14, 2013, 10:11 [IST]
X
Desktop Bottom Promotion