Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಬೊಜ್ಜು ಕರಗಿಸುವುದರ ಬಗ್ಗೆ ನಮ್ಮಲ್ಲಿರುವ ಕಲ್ಪನೆಗಳಿವು!
ನಮ್ಮ ದೇಹದ ಗಾತ್ರವೂ ಆರೋಗ್ಯದ ಬಗ್ಗೆ ನಮಗಿರುವ ಅಭಿರುಚಿಯನ್ನು ಹೇಳುತ್ತದೆ ಎಂಬ ಮಾತಿದೆ. ನಮ್ಮ ದೇಹದ ಗಾತ್ರ ಮತ್ತು ಹೊಟ್ಟೆ ಗಾತ್ರ ದೊಡ್ಡದಾಗುತ್ತಿದ್ದಂತೆ ನಾವು ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ ಎಂಬ ಅರ್ಥ ಸೂಚಿಸುತ್ತದೆ. ಸೊಂಟದ ಸುತ್ತಳೆತೆಯನ್ನು ಇಂಚಿನಲ್ಲಿ ಹೇಳುತ್ತೇವೆ. ಒಬ್ಬ ವ್ಯಕ್ತಿ ಆರೋಗ್ಯದಿಂದ ಇರಬೇಕೆಂದರೆ, ಅವನು 6 ಅಡಿ ಎತ್ತರವಾಗಿದ್ದಾನೆ ಎಂದಿಟ್ಟುಕೊಳ್ಳಿ, ಆಗ ಅವನ ಸೊಂಟದ ಸುತ್ತಳತೆ 36ಕ್ಕಿಂತ ಹೆಚ್ಚಿರಬಾರದು, ಇನ್ನೂ ಮಹಿಳೆಯರಲ್ಲಿ 32ಕ್ಕಿಂತ ಅಧಿಕವಿರಬಹುದು. ಈ ರೀತಿ body structure ಇದ್ದರೆ ಆಕರ್ಷಕವಾದ, ಆರೋಗ್ಯಕರವಾದ ಮೈ ಮಾಟ ನಿಮ್ಮದು ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೊಟ್ಟೆ ಮತ್ತು ಸೊಂಟದ ಗಾತ್ರವನ್ನು ಸರಿಯಾದ ರೀತಿಯಲ್ಲಿ ಇಡುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಉತ್ತಮವಾದ ಆಹಾರಕ್ರಮ ಪಾಲಿಸಬೇಕು, ದೈಹಿಕ ಶ್ರಮ ಪಡಬೇಕು. ಇದರತ್ತ ಏಕಾಗ್ರತೆ ಇರಬೇಕಾಗುತ್ತದೆ.
ಹೊಟ್ಟೆ ಬೊಜ್ಜು ಕರಗಿಸುವುದರ ಬಗ್ಗೆ ಅನೇಕ ಕಲ್ಪನೆಗಳು ನಮ್ಮಲ್ಲಿ ಇವೆ. ಈ ಕಲ್ಪನೆಗಳಲ್ಲಿ ಕೆಲವೊಂದು ನಿಜವಾಗಿರುತ್ತದೆ, ಮತ್ತೆ ಕೆಲವು ಕೇವಲ ಕಲ್ಪನೆಯಾಗಿರುತ್ತದೆ ಅಷ್ಟೇ. ಹೊಟ್ಟೆ ಬೊಜ್ಜಿನ ಬಗ್ಗೆ ನಮ್ಮಲ್ಲಿರುವ ಆ ಕಲ್ಪನೆಗಳೇನು ಎಂದು ತಿಳಿಯಲು ಮುಂದೆ ಓದಿ:

ಹೊಟ್ಟೆ ಬೊಜ್ಜನ್ನು ಕರಗಿಸಲು ಕಾಸ್ಮೆಟಿಕ್ ಸರ್ಜರಿ ಒಂದೇ ದಾರಿ
ಹೊಟ್ಟೆ ಕಮ್ಮಿಯಾಗಬೇಕೆಂದು ಪ್ರಯತ್ನಿಸಿ ಬೇಗನೆ ಫಲಿತಾಂಶ ದೊರೆಯದಿದ್ದಾಗ ಕಾಸ್ಮೆಟಿಕ್ ಸರ್ಜರಿ ಮಾಡಿಸಿ ಮಾತ್ರ ಹೊಟ್ಟೆ ಬೊಜ್ಜು ಕರಗಿಸಲು ಸಾಧ್ಯ ಎಂದು ನಂಬುತ್ತಾರೆ. ಕಾಸ್ಮೆಟಿಕ್ ಸರ್ಜರಿ ಹೊಟ್ಟೆ ಬೊಜ್ಜು ಕರಗಿಸಲು ನೀವು ಅನುಸರಿಸುವ ದುಬಾರಿಯಾದ ವಿಧಾನವಾಗಿದೆ. ಆದರೆ ಸರಿಯಾದ ವರ್ಕ್ ಔಟ್ ಮತ್ತು ಡಯಟ್ ನ ಮುಖಾಂತರ ಹೊಟ್ಟೆ ಬೊಜ್ಜನ್ನು ಕರಗಿಸಬಹುದು. ಆದರೆ ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ.

ಕಡಿಮೆ ತಿನ್ನುವುದು
ತೂಕ ಕಮ್ಮಿಯಾಗಲು ಕಮ್ಮಿ ತಿನ್ನಬೇಕು, ಒಂದು ಹೊತ್ತು ಅಥವಾ ಎರಡು ಹೊತ್ತು ಊಟ ಬಿಡಬೇಕೆಂಬ ಎಂಬ ತಪ್ಪು ಕಲ್ಪನೆ ಇರುತ್ತದೆ. ಊಟ ಬಿಟ್ಟರೆ ಕಾಯಿಲೆ ಬರುತ್ತದೆ ವಿನಃ ಆರೋಗ್ಯಕರವಾಗಿ ತೂಕ ಕಮ್ಮಿಯಾಗಲು ಸಾಧ್ಯವಿಲ್ಲ. ಪ್ರೊಟೀನ್ ಭರಿತ ಆಹಾರವನ್ನು ಮಿತಿಯಲ್ಲಿ ತಿನ್ನಿ, ವ್ಯಾಯಾಮ ಮಾಡಿ, ತೂಕ ಕಮ್ಮಿಯಾಗುವಿರಿ.

ಹೊಟ್ಟೆ ಕರಗಿಸುವ ವ್ಯಾಯಾಮ
ಹೊಟ್ಟೆ ಸುಮ್ಮನೆ ಕರಗುವುದಿಲ್ಲ, ಅದಕ್ಕಾಗಿ ಕ್ರಂಚಸ್ ಮಾಡಬೇಕು. ಆದ್ದರಿಂದ ಹೊಟ್ಟೆ ಕರಗಲು ಈ ರೀತಿಯ ವ್ಯಾಯಾಮ ಮಾಡಲೇಬೇಕೆನ್ನುವುದು ಮಿಥ್ಯವಲ್ಲ.

ಹಾಲಿನ ಉತ್ಮನ್ನಗಳು
ಕೆಲವರು ದಪ್ಪಗಾಗುತ್ತೇವೆ ಎಂದು ಹಾಲಿನ ಉತ್ಪನ್ನಗಳನ್ನು ತಿನ್ನುವುದಿಲ್ಲ, ಆದರೆ ಹಾಲಿನ ಉತ್ಪನ್ನಗಳನ್ನು ಆರೋಗ್ಯದ ದೃಷ್ಟಿಯಿಂದ ತಿನ್ನಬೇಕು, ಆದರೆ ಮಿತಿಯಲ್ಲಿ ತಿನ್ನಿ, ಯಾವುದು ಅತಿಯಾದರೆ ಮಾತ್ರ ಕಷ್ಟ.

ವಂಶಪಾರಂಪರ್ಯ
ತೂಕ ವಂಶಪಾರಂಪರ್ಯವಾಗಿ ಬರುವುದು ಅನ್ನುವ ಅಂಶ ನಿಜ. ಆದರೆ ಹೀಗೆ ಬಂದ ತೂಕವನ್ನು ಕರಗಿಸಲು ಸಾಧ್ಯವೇ ಇಲ್ಲ ಅನ್ನುವ ಮಾತು ಮಾತ್ರ ಸುಳ್ಳು. ಪ್ರಯತ್ನಿಸಿದರೆ ತೂಕವನ್ನು ಕರಗಿಸಬಹುದು.

ನಾರಿನಂಶ ಇರುವ ಆಹಾರಗಳು
ಹೊಟ್ಟೆಯ ಬೊಜ್ಜು ಕರಗಲು ನಾರಿನಂಶವಿರುವ ಆಹಾರವನ್ನು ತಿನ್ನಬೇಕೆಂದು ನೀವು ಕೇಳಿರಬಹುದು, ಆದರೆ ಇದು ನಿಜ, ನಾರಿನಂಶದ ಆಹಾರಗಳನ್ನು ತಿಂದರೆ ಇವು ನಿಮ್ಮ ಹಸಿವನ್ನು ನಿಯಂತ್ರಿಸುವುದು ಹಾಗೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವುದು.

ಮೆಷಿನ್ ಗಳು
ಹೊಟ್ಟೆಯನ್ನು, ಮೈ ತೂಕವನ್ನು ಕರಗಿಸಲೆಂದೇ ಅತ್ಯುತ್ತಮವಾದ ವೈಜ್ಞಾನಿಕ ವಿಧಾನದ ಮೆಷಿನ್ ಗಳಿವೆ. ಜಿಮ್ ಗೆ ಹೋಗಿ ಇವುಗಳ ಸದುಪಯೋಗ ಪಡೆದುಕೊಂಡರೆ ಮೈ ತೂಕವನ್ನು ಸುಲಭದಲ್ಲಿ ಕರಗಿಸಬಹುದು.

ಮಾತ್ರೆ ತೆಗದುಕೊಳ್ಳುವುದು
ಕೆಲವರು ತೂಕ ಕಮ್ಮಿಯಾಗಲು ಮಾತ್ರೆ ತೆಗದುಕೊಳ್ಳುತ್ತಾರೆ. ಆದರೆ ಈ ವಿಧಾನ ಒಳ್ಳೆಯದಲ್ಲ, ಇದರಿಂದ ಅಪಾಯವೇ ಹೆಚ್ಚು. ತೂಕವನ್ನು ಆರೋಗ್ಯಕರವಾಗಿ ಕಮ್ಮಿ ಮಾಡಿ.



Click it and Unblock the Notifications