For Quick Alerts
ALLOW NOTIFICATIONS  
For Daily Alerts

ಅಗಸೆ ಬೀಜದ ಆರೋಗ್ಯಕರ ಲಾಭಗಳು

By Hemanth P
|

ಇದು ಭೂಮಿ ಮೇಲೆ ಇರುವ ಅತ್ಯಂತ ಬಲಶಾಲಿ ಆಹಾರವೆಂದು ಹಲವರು ಹೇಳುತ್ತಾರೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗಿರುವ ಹಲವಾರು ಸಾಕ್ಷ್ಯಗಳಿವೆ. ಶತಮಾನಗಳಿಂದಲೂ ಈ ಸಣ್ಣ ಬೀಜವು ದೊಡ್ಡ ಮಟ್ಟದ ಲಾಭಗಳನ್ನು ಒದಗಿಸುತ್ತಿದೆ.

ಅಗಸೆ ಬೀಜವನ್ನು ಕ್ರಿ.ಪೂ. 3000ದಲ್ಲಿ ಬ್ಯಾಬಿಲೋನ್ ನಲ್ಲಿ ಬೆಳೆಸುತ್ತಿದ್ದರು. 8ನೇ ಶತಮಾನದಲ್ಲಿ ಅಗಸೆ ಬೀಜದ ಆರೋಗ್ಯ ಲಾಭಗಳ ಬಗ್ಗೆ ದೃಢವಾಗಿ ನಂಬಿದ್ದ ರಾಜ ಚಾರ್ಲ್ ಇದನ್ನು ಕಡ್ಡಾಯವಾಗಿ ಸೇವಿಸಬೇಕೆಂದು ಕಾನೂನನ್ನು ಜಾರಿಗೊಳಿಸಿದ್ದ. ಈಗ 13 ಶತಮಾನಗಳ ಬಳಿಕ ಕೆಲವೊಂದು ತಜ್ಞರು ರಾಜ್ ಚಾರ್ಲ್ ನ ಊಹೆ ಸರಿಯಾಗಿತ್ತು ಎಂದು ಹೇಳುತ್ತಿದ್ದಾರೆ.

ಅಗಸೆ ಬೀಜಗಳಲ್ಲಿ ಎಲ್ಲಾ ರೀತಿಯ ಆರೋಗ್ಯ ಗುಣಗಳಿವೆ. ಆದರೆ ಇದರಲ್ಲಿ ಪ್ರಮುಖ ಮೂರು ಆರೋಗ್ಯ ಗುಣಗಳಿವೆ. ಒಮೆಗಾ-3 ಕೊಬ್ಬಿನಾಮ್ಲವು ಒಳ್ಳೆಯ ಕೊಬ್ಬನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂನಷ್ಟು ಒಮೆಗಾ-3 ಕೊಬ್ಬಿನಾಮ್ಲವಿದೆ.

Health Benefits of Flaxseed

ಲಿಗ್ನನಸ್ ನಲ್ಲಿ ಸಸ್ಯ ಎಸ್ಟೋಜನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇತರ ಆಹಾರಕ್ಕಿಂತ ಅಗಸೆ ಬೀಜಗಳಲ್ಲಿ 75ರಿಂದ 800 ಪಟ್ಟು ಹೆಚ್ಚಿನ ಲಿಗ್ನನಸ್ ಇರುತ್ತದೆ.

ನಾರಿನಾಂಶ
ಅಗಸೆ ಬೀಜದಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿರುತ್ತದೆ.

ಅಗಸೆ ಬೀಜದ ಆರೋಗ್ಯಕಾರಿ ಲಾಭಗಳು

ಕ್ಯಾನ್ಸರ್
ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜವು ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಗಸೆ ಬೀಜದಲ್ಲಿರುವ ಲಿಗ್ನನಸ್ ಸ್ತನ ಕ್ಯಾನ್ಸರ್ ನ ಟ್ಯಾಮ್ಕ್ಷಿಫೆನ್ ನೊಂದಿಗೆ ಯಾವುದೇ ಹಸ್ತಕ್ಷೇಪ ಮಾಡದೆ ಹಾರ್ಮೋನುಗಳಿಗೆ ಸೂಕ್ಷ್ಮವಾಗಿರುವ ಕ್ಯಾನ್ಸರ್ ನಿಂದ ರಕ್ಷಣೆ ನೀಡಬಹುದು.

ಹೃದಯರೋಗ
ಅಧ್ಯಯನಗಳ ಪ್ರಕಾರ ಒಮೆಗಾ-3 ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ ಮತ್ತು ಬಿಳಿ ರಕ್ತಕಣಗಳು ರಕ್ತನಾಳಗಳ ಒಳಗೋಡೆಗೆ ಅಂಟಿಕೊಳ್ಳದಂತೆ ಇಟ್ಟುಕೊಂಡು ಲೋಳೆಯು ಅಪಧಮನಿಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.

ಮಧುಮೇಹ
ದಿನಾಲೂ ಅಗಸೆ ಬೀಜ ಸೇವನೆಯಿಂದ ಅದರಲ್ಲಿನ ಲಿಗ್ನನಸ್ ಅಂಶಗಳು ರಕ್ತದ ಸಕ್ಕರೆ(ಮಧುಮೇಹ-2 ಇರುವ ವಯಸ್ಕರಲ್ಲಿ ಮಾಡಿದಂತಹ ಹಿಮೋಗ್ಲೋಬಿನ್ ಎ1ಸಿ ರಕ್ತಪರೀಕ್ಷೆ ಮಾಪನ)ಯನ್ನು ಸುಧಾರಿಸುತ್ತದೆ ಎಂದು ಆರಂಭಿಕ ಅಧ್ಯಯನಗಳು ಹೇಳಿವೆ.

ಉರಿಯೂತ
ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನೆನಸ್ ಕೆಲವೊಂದು ಉರಿಯೂತಕಾರಿ ಅಂಶಗಳು ಬಿಡುಗಡೆಯಾಗದಂತೆ ತಡೆಯಲು ನೆರವಾಗಿ ಕೆಲವೊಂದು ರೋಗ(ಪರ್ಕಿಸನ್ ಮತ್ತು ಅಸ್ತಮಾ)ಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಫಿಟ್ಜ್ ಪ್ಯಾಟ್ರಿಕ್ ಹೇಳಿದೆ.

ಅಲಾವು ಮನುಷ್ಯರಲ್ಲಿ ಉರಿಯೂತ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಲಿಗ್ನೆನಸ್ ಉರಿಯೂತಕಾರಿ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಅಪಧಮನಿಗಳಲ್ಲಿ ಲೋಳೆಯು ಹೆಚ್ಚಾಗುವ ಮೂಲಕ ಉಂಟಾಗುವ ಉರಿಯೂತ ಕಡಿಮೆ ಮಾಡುವ ಮೂಲಕ ಅಗಸೆ ಬೀಜಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಹಾಟ್ ಫ್ಲಾಷಸ್
2007ರಲ್ಲಿ ಪ್ರಕಟಗೊಂಡ ಮಹಿಳೆಯ ಮುಟ್ಟಿನ ಬಗ್ಗೆ ನಡೆಸಿದ ಅಧ್ಯಯನದಲ್ಲಿ ದಿನಕ್ಕೆ ಎರಡು ಚಮಚ ಅಗಸೆಬೀಜವನ್ನು ಏಕದಳ ಧಾನ್ಯ, ಜ್ಯೂಸ್ ಅಥವಾ ಮೊಸರಿನೊಂದಿಗೆ ಸೇವನೆ ಮಾಡುವುದರಿಂದ ಹಾಟ್ ಫ್ಲಾಷಸ್ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಟ್ ಫ್ಲಾಷಸ್ ನ ತೀವ್ರತೆ ಶೇ. 57ರಷ್ಟು ಕಡಿಮೆಯಾಗಿದೆ. ಒಂದು ವಾರ ತನಕ ಅಗಸೆ ಬೀಜ ಸೇವನೆ ಮಾಡಿದ ಮಹಿಳೆಯರು ಇದರ ಅನುಕೂಲವನ್ನು ಮನಗಂಡಿದ್ದಾರೆ ಮತ್ತು ಎರಡು ವಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ.

English summary

Health Benefits of Flaxseed

Some call it one of the most powerful plant foods on the planet. There’s some evidence it may help reduce your risk of heart disease, cancer, stroke, and diabetes. That’s quite a tall order for a tiny seed that’s been around for centuries.
Story first published: Monday, December 30, 2013, 10:02 [IST]
X
Desktop Bottom Promotion