For Quick Alerts
ALLOW NOTIFICATIONS  
For Daily Alerts

ಶಾಖಾಹಾರಿ ಮಧುಮೇಹಿಗಳಿಗಾಗಿ ಪಥ್ಯ

By Deepak M
|

ಈ ಆಧುನಿಕ ಜಗತ್ತು ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂರದೆ ಓಡುತ್ತಿರುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮಗೆ ಹಲವಾರು ಕಾಯಿಲೆಗಳು ಕೊಡುಗೆಯಾಗಿ ಬಂದಿವೆ. ಮಧುಮೇಹ, ಹೃದ್ರೋಗ, ಮುಂತಾದ ಕಾಯಿಲೆಗಳು ಜನಸಾಮಾನ್ಯರಲ್ಲಿ ಸಾಮಾನ್ಯವಾಗಿದೆ. ಅಂತಹ ಕಾಯಿಲೆ ಬಂದರು ಪಥ್ಯವನ್ನು ಮಾಡಲು ಅವರಿಗೆ ಪುರುಸೊತ್ತು ಇರುವುದಿಲ್ಲ. ಅದರಲ್ಲು ಮಧುಮೇಹಿಗಳು ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕು ಏಕೆಂದರೆ ಇದು ಅವರ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುವುದರ ಜೊತೆಗೆ ದೇಹದಲ್ಲಿರುವ ಹಾರ್ಮೋನುಗಳು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ ಮಧುಮೇಹಿಗಳು ಪಥ್ಯವನ್ನು ಮಾಡುವುದರಿಂದ ಅವರ ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಸಹ ಕಾಯ್ದುಕೊಳ್ಳಬಹುದು. ಅಲ್ಲದೆ ಈ ಮಧುಮೇಹಿಗಳು ತಾವು ಏನನ್ನು ತಿನ್ನುತ್ತೇವೆ ಎಂಬುದರ ಕುರಿತು ತುಂಬಾ ಎಚ್ಚರಿಕೆಯನ್ನು ಹೊಂದಿರಬೇಕಾದುದು ಅತ್ಯಾವಶ್ಯಕ.

ಮಧುಮೇಹಿಗಳು ಪಥ್ಯವನ್ನು ಮಾಡಲು ಬಯಸಿದಲ್ಲಿ ಶಾಖಾಹಾರಿ ಆಹಾರವನ್ನು ಸೇವಿಸುವುದು ಸೂಕ್ತವಾದ ಆಯ್ಕೆಯಾಗಿರುತ್ತದೆ. ಏಕೆಂದರೆ ಶಾಖಾಹಾರದ ಪದ್ಧತಿಯಲ್ಲಿ ಹಲವಾರು ಆಹಾರ ಪದಾರ್ಥಗಳು ಮಧುಮೇಹಿಗಳಿಗೆ ಉತ್ತಮವಾಗಿರುತ್ತವೆ. ಇವುಗಳನ್ನು ವೈಙ್ಞಾನಿಕವಾಗಿ ಸಹ ದೃಢೀಕರಿಸಲಾಗಿರುವುದು ವಿಶೇಷ. ಒಂದು ವೇಳೆ ನೀವು ಶಾಖಾಹಾರಿ ಪಥ್ಯವನ್ನು ಆಯ್ಕೆಮಾಡಿಕೊಂಡರು ಹಲವಾರು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ಉತ್ತಮ. ಇವು ಮಧುಮೇಹಿಗಳಿಗೆ ಅಗತ್ಯವಾದ ಆರೋಗ್ಯವನ್ನು ನೀಡುತ್ತವೆ.

ಅಮೆರಿಕನ್ ಹೆಲ್ತೀ ಫುಡ್ನವವರು ಮಧುಮೇಹಿಗಳಿಗಾಗಿ ಕೆಲವು ಪಥ್ಯಗಳನ್ನು ಒದಗಿಸಿದ್ದಾರೆ. ಅಂತಹ ಕೆಲವು ಪಥ್ಯದ ವಿಚಾರಗಳನ್ನು ನಾವು ಇಲ್ಲಿ ನಿಮಗಾಗಿ ಒದಗಿಸಿದ್ದೇವೆ ಓದಿಕೊಳ್ಳಿ. ಈ ವಿಧಾನವು ಮಧುಮೇಹಿಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿ ಸಂಪೂರ್ಣವಾಗಿ ತರಕಾರಿ ಮತ್ತು ಹಣ್ಣುಗಳು ಇರುತ್ತವೆ. ಇದು ಏಳು ದಿನಗಳ ಒಂದು ಯೋಜನೆಯಾಗಿದ್ದು, ಪ್ರತಿದಿನವು ಅತ್ಯಾವಶ್ಯಕವಾಗಿರುವ ಪ್ರೋಟಿನ್ ಮತ್ತು ವಿಟಮಿನ್ಗಹಳನ್ನು ಇದರಲ್ಲಿ ಸೇರಿಸಲಾಗಿರುತ್ತದೆ. ಇದರ ಜೊತೆಗೆ ಮಧುಮೇಹಿಗಳು ಪ್ರತಿ ಎರಡು ಗಂಟೆಗಳಿಗೊಮ್ಮೆ ಯಾವುದಾದರು ತರಕಾರಿ ಅಥವಾ ಆರೋಗ್ಯಕಾರಿ ಆಹಾರಗಳನ್ನು ಸೇವಿಸಬಹುದು. ಏಕೆಂದರೆ ಇವುಗಳು ಅವರ ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಪಯೋಗಕಾರಿಯಾಗಿರುತ್ತದೆ. ಮತ್ತೆ ಆ ಆಹಾರದ ಯೋಜನೆ ಹೇಗಿದೆ ಎಂಬುದನ್ನು ಇಲ್ಲಿ ನೀಡಿದ್ದೇವೆ ಓದಿ ನೋಡಿ:

ದಿನ 1

ದಿನ 1

ಉಪಾಹಾರ ; ಸೋಯಾ ಹಾಲಿನ ಜೊತೆಗೆ ಓಟ್ ಮೀಲ್, ಚಕ್ಕೆ ಮತ್ತು ರೈಸಿನ್ಸ್.

ಮಧ್ಯಾಹ್ನದ ಊಟ ; ಹುಮ್ಮಸ್ ಮತ್ತು ತಾಜಾ ಹಣ್ಣಿನ ಸಲಾಡ್ ಜೊತೆಗೆ ತರಕಾರಿಗಳು

ರಾತ್ರಿಯ ಊಟ ; ಕಂದು ಪಾಸ್ತಾ ಜೊತೆಗೆ ಸಾಕಷ್ಟು ತರಕಾರಿಗಳು

ದಿನ 2

ದಿನ 2

ಉಪಾಹಾರ ; ಟೊಫು ಸ್ಕ್ರಾಂಬಲ್ ಜೊತೆಗೆ ವೋಲ್ ವ್ಹೀಟ್ ಪಿಟ

ಮಧ್ಯಾಹ್ನದ ಊಟ ; ನಿಮಗಿಷ್ಟವಾದ ತರಕಾರಿ ಸೂಪ್ ಜೊತೆಗೆ ವೋಲ್ ಗ್ರೇನ್ ಕ್ರ್ಯಾಕರ್ಸ್

ರಾತ್ರಿಯ ಊಟ ; ತರಕಾರಿ ಚಿಲಿ ಜೊತೆಗೆ ಬ್ರೌನ್ ರಸಿ ಮತು ಹುರಿದ ಸಲಾಡ್.

ದಿನ 3

ದಿನ 3

ಉಪಾಹಾರ ; ಕಲ್ಲಂಗಡಿ ಅಥವಾ ಖರ್ಬೂಜದ ಹಣ್ಣಿನ ಜೊತೆಗೆ ವೋಲ್ ಗ್ರೇನ್ ಟೋಸ್ಟ್

ಮಧ್ಯಾಹ್ನದ ಊಟ; ಬೀನ್ ಪಾಸ್ತಾ ಜೊತೆಗೆ ಸಾಲ್ಸಾ ಸಾಸ್, ತರಕಾರಿ ಮತ್ತು ವೆಗಸ್ ಸೌರ್ ಕ್ರೀಮ್

ರಾತ್ರಿಯ ಊಟ ; ವೋಲ್ ವೀಟ್ ಬ್ರೆಡ್ ಜೊತೆಗೆ ಸಲಾಡ್

ದಿನ 4

ದಿನ 4

ಉಪಾಹಾರ ; ವೋಲ್- ಗ್ರೇನ್ ಪ್ಯಾನ್ ಕೇಕ್ ಅಥವಾ ವ್ಯಾಫಲ್ಸ್ ಜೊತೆಗೆ ತಾಜಾ ಹಣ್ಣು

ಮಧ್ಯಾಹ್ನದ ಊಟ ; ಗ್ರಿಲ್ ಮಾಡಲ್ಪಟ್ಟ ವೆಜ್ ಸ್ಯಾಂಡ್ ವಿಚ್

ರಾತ್ರಿಯ ಊಟ ; ತರಕಾರಿ ಸೂಪ್, ಟೊಸ್ಸೆಡ್ ಸಲಾಡ್ ಮತ್ತು ಪಿಟ ಕ್ರಿಸ್ಪ್

ದಿನ 5

ದಿನ 5

ಉಪಾಹಾರ ; ಸೊಯ್ ಹಾಲು ಮತ್ತು ಸೇಬಿನ ಸರಿ ಜೊತೆಗೆ ಕೆಲವು ಧಾನ್ಯಗಳು

ಮಧ್ಯಾಹ್ನದ ಊಟ ; ಕ್ಯಾರಟ್ ಅಥವಾ ಟೊಮಾಟೊ ಸೂಪ್ ಜೊತೆಗೆ ರೈ ಟೋಸ್ಟ್ ( ಬೆಣ್ಣೆ ರಹಿತವಾದುದು)

ರಾತ್ರಿಯ ಊಟ ; ಸ್ಪಾಜೆಟ್ಟಿ ಜೊತೆಗೆ ಪಾಲಕ್ ಸೊಪ್ಪು ಮತ್ತು ಅಣಬೆ

ದಿನ 6

ದಿನ 6

ಉಪಾಹಾರ ; ಮ್ಯೂಸ್ಲಿ ಜೊತೆಗೆ ಸೊಯ್ ಹಾಲಿನಂತಹ ವೋಲ್ ಗ್ರೇನ್ ಸಿರಿಯಲ್.

ಮಧ್ಯಾಹ್ನದ ಊಟ ; ಕೌಸ್ಕೌಸ್ ಜೊತೆಗೆ ಅಸ್ಪರಗುಸ್, ಸ್ನೋ ಪೀಸ್ ಮತ್ತು ಮೂಲಂಗಿ

ರಾತ್ರಿಯ ಊಟ ; ಸಲಾಡ್ ಜೊತೆಗೆ ಸೋಯಾ ಕ್ರಂಬಲ್ಸ್

ದಿನ 7

ದಿನ 7

ಉಪಾಹಾರ ; ಹಣ್ಣುಗಳು

ಮಧ್ಯಾಹ್ನದ ಊಟ ; ವೀಟ್ ಸಲಾಡ್ ಜೊತೆಗೆ ಚಿಕ್ ಪೀಸ್ ಮತ್ತು ತರಕಾರಿಗಳು

ರಾತ್ರಿಯ ಊಟ ; ಅಸ್ಪರಗುಸ್ ಮತ್ತು ಅಣಬೆಯ ರಿಸೊಟ್ಟೊ ಮತ್ತು ಟೊಸ್ಸೆಡ್ ಸಲಾಡ್

English summary

Diabetic Diet For Vegeterians

Diet is not only essential for maintaining weight but it is also important to control the body hormones and metabolism. For example, Diabetic patients need to maintain a regular diet and food intake to maintain their sugar level.
Story first published: Saturday, November 30, 2013, 11:38 [IST]
X
Desktop Bottom Promotion