For Quick Alerts
ALLOW NOTIFICATIONS  
For Daily Alerts

ಈಜುಗಾರ ತಾಳ್ಮೆ ಬೆಳೆಸಿಕೊಳ್ಳುವುದು ಹೇಗೆ?

|

ಈಜುವ ತಾಳ್ಮೆಯನ್ನು ಕಲಿಯುವುದು ಸುಲಭವಲ್ಲ. ತುಂಬಾ ಹೊತ್ತಿನವರೆಗೆ ಈಜಾಡಲು ಶ್ವಾಸ ಮತ್ತು ಮಾಂಸಖಂಡಗಳ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಯನ್ನು ಅಭ್ಯಸಿಸಬೇಕು. ಇದಕ್ಕಾಗಿ ಸೂಕ್ತವಾದ ಶಿಕ್ಷಣ, ಅವಿರತ ಪ್ರಯತ್ನಗಳು ಬೇಕು.

ವೇಗದ ಬಗ್ಗೆ ಗಮನ ಕೇಂದ್ರೀಕರಣ, ತಾಳ್ಮೆ, ನಿಮ್ಮ ಈಜುವ ಶೈಲಿಯನ್ನು ಉತ್ತಮವಾಗಿಸಿಕೊಳ್ಳುವುದಕ್ಕೆ ವಿವಿಧ ಡ್ರಿಲ್‌ಗಳನ್ನು ಮಾಡಿ. ಇದರಿಂದಾಗಿ ನೀವು ಹೆಚ್ಚು ದೂರದವರೆಗೆ ಒಂದೇ ವೇಗದಲ್ಲಿ ಈಜಬಹುದು. ಈಜು ಕಲಿಯುವ ಆರಂಭದಲ್ಲಿ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಕಡಿಮೆ ದೂರವನ್ನು ಈಜುವುದರಿಂದಾಗಿ ನಿಮ್ಮಲ್ಲಿ ದೂರದವರೆಗೆ ಈಜುವ ಸಾಮರ್ಥ್ಯ ಅಭಿವೃದ್ಧಿಯಾಗುತ್ತದೆ. ನೀವು ನಿರಂತರವಾಗಿ ಈಜುವ ಅಭ್ಯಾಸವನ್ನು ರೂಢಿಸಿಕೊಂಡರೆ, ಆಗ ವಾರಕ್ಕೆ ಎರಡರಿಂದ ಮೂರು ಭಾರಿ ಈಜುವಿಕೆಯು ಸಾಕು.

How Does a Swimmer Build Endurance?

ಉಸಿರಿನ ಲಯ

ಈಜುವಾಗ ನೀರಿನ ಒಳಗೆ ಉಸಿರನ್ನು ಹೊರಬಿಡಿ. ಆಗಾಗ್ಗೆ ನೀರಿನಿಂದ ಮೇಲೆ ಮುಖವನ್ನು ತಂದು ಉಸಿರೆಳೆದುಕೊಳ್ಳುವ ಮತ್ತು ಉಸಿರು ಬಿಡುವ ಪ್ರಕ್ರಿಯೆಯನ್ನು ಮಾಡುತ್ತಾರೆ. ಆದರೆ ನೀವು ನೀರನಲ್ಲಿರುವಾಗ ಉಸಿರನ್ನು ಹೊರಬಿಟ್ಟರೆ, ನೀರಿನ ಮೇಲೆ ಬಂದು ಉಸಿರನ್ನು ಎಳೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ನಿಮ್ಮ ಸ್ಟ್ರೋಕನ್ನು ಲೆಕ್ಕಹಾಕಿಕೊಳ್ಳಿ, ಇದು ಕ್ರಮಬದ್ಧ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ಟ್ರೋಕ್‌ ಉದ್ದವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ನಿಮ್ಮ ತಲೆ ಬೆನ್ನುಹುರಿಗೆ ಸಮನಾಗಿದ್ದು, ಕೆಳಮುಖವಾಗಿರಲಿ.

ಕೈ ಮತ್ತು ಕಾಲುಗಳು

ನಿಮ್ಮ ಎರಡೂ ಕಾಲುಗಳನ್ನು ಸಾಧ್ಯವಾದಷ್ಟೂ ಹೊಂದಿಸಿಕೊಳ್ಳಿ. ಉಸಿರೆಳೆದುಕೊಳ್ಳಲು ನೀವು ಮುಖವನ್ನು ಮೇಲೆತ್ತಿದಾಗ ನಿಮ್ಮ ಕಾಲಿನ ಹೆಬ್ಬೆರಳನ್ನು ಸೇರಿಸಿ. ನಿಮ್ಮ ಮಂಡಿಯನ್ನು ಸಾಧ್ಯವಾದಷ್ಟೂ ಎತ್ತರಿಸಿ ಸ್ಟ್ರೋಕ್‌ ಮಾಡಿ. ಸಾಧ್ಯವಾದಷ್ಟೂ ಗಟ್ಟಿಯಾಗಿ ಸ್ಟ್ರೋಕ್‌ ಮಾಡಿ. ಮೊದಲ ಐದು ಸ್ಟ್ರೋಕನ್ನು ಗಟ್ಟಿಯಾಗಿ ಮಾಡಿ, ನಂತರದ ಐದು ಸ್ಟ್ರೋಕ್‌ಗಳನ್ನು ಕಡಿಮೆಗೊಳಿಸಿ ಒಂದೇ ಲಯದಲ್ಲಿ ಮುಂದುವರಿಸಿ. ಪ್ರತಿ ಅಭ್ಯಾಸದ ಅವಧಿಯಲ್ಲೂ ಸಾವಧಾನವಾಗಿ ಗಟ್ಟಿ ಸ್ಟ್ರೋಕ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಿ.

ಅಭ್ಯಾಸದ ಅವಧಿಯಲ್ಲಿ

25 ಮೀಟರು ಲ್ಯಾಪ್‌ನಲ್ಲಿ ಈಜು ಆರಂಭಿಸಿ ನಂತರದ 50 ಮೀಟರ‍್ ಲ್ಯಾಪ್‌ನಲ್ಲಿ ಮುಂದುವರಿಸಿ. ಮೂರು 25 ಮೀಟರು ಲ್ಯಾಪ್‌ನಲ್ಲಿ ಕೇಂದ್ರೀಕರಿಸಿ, ಸ್ಟ್ರೋಕ್‌ನಲ್ಲಿ ನಿಮ್ಮ ಬಲಗೈಯನ್ನು ಹೆಚ್ಚು ಬಲಗೊಳಿಸಿ. ನಂತರದಲ್ಲಿ 25 ಮೀಟರು ಲ್ಯಾಪ್‌ನಲ್ಲಿ ನಿಮ್ಮ ಕಿಕ್‌ ಮತ್ತು ಪರಿಣಾಮಕಾರಿತ್ವವನ್ನು ಕೇಂದ್ರೀಕರಿಸಿ ಈಜಿ. ನಿಮ್ಮ ಕಿಕ್‌ನ್ನು ಗಮನದಲ್ಲಿಡುವಾಗ, ಸಂಪೂರ್ಣವಾಗಿ ಸ್ಟ್ರೋಕ್‌ನ್ನು ಎಳೆಯುವದನ್ನು ಕಲಿಯಿರಿ. ಆದರೆ ಈ ಮಧ್ಯೆ ನಿಮ್ಮ ಸ್ಟ್ರೋಕ್‌ನ ದೃಢತೆಯನ್ನು ಕಾಯ್ದುಕೊಳ್ಳಬೇಕು. ನಂತರ ನಿಧಾನವಾಗಿ ಆದರೆ ದೃಢ ಶೈಲಿಯಲ್ಲಿ ಈಜುವುದನ್ನು ಕಲಿಯಿರಿ. ಮೂರರಿಂದ ನಾಲ್ಕು ವಾರಗಳಲ್ಲಿ ನೀವು, ಈ ಶೈಲಿಯಲ್ಲಿ ಈಜುವುದನ್ನು ಕಲಿಯುತ್ತೀರಿ. ಈ ಸಮಯದಲ್ಲಿ 25 ಮೀಟರ್‌ನಂತೆ 150 ಮೀಟರುಗಳ ತನಕ ಹೆಚ್ಚಿಸಿ.

ತಾಳ್ಮೆಯ ಅಭ್ಯಾಸ

ಮೊದಲು 25 ಮೀಟರ್‌ ಲ್ಯಾಪ್‌, ನಂತರ 50 ಮೀಟರ್‌ ಲ್ಯಾಪ್‌ನ್ನು ಈಜಿ. ಎರಡು ಲ್ಯಾಪ್‌ಗಳನ್ನು ಈಜುವಾಗ ನಿಮ್ಮ ಸ್ಟ್ರೋಕ್‌ ಮತ್ತು ಎಳೆಯುವ ಸಾಮರ್ಥ್ಯದ ಮೇಲೆ ಗಮನವಿರಲಿ. ಇನ್ನೆರಡು ಲ್ಯಾಪ್‌ಗಳನ್ನು ಈಜುವಾಗ ನಿಮ್ಮ ಕಿಕ್‌ ಮೇಲೆ ಕೇಂದ್ರೀಕರಿಸಿ. ಆರಂಭದಲ್ಲಿ ಲ್ಯಾಡರ್‌ನ ಮೂಲಕ 25 ಮೀಟರುಗಳನ್ನ ಈಜಿ, ನಂತರ 50, 75 ಹಾಗೂ 100 ಮೀಟರುಗಳ ತನಕ ಈಜಿ. ನಿಮ್ಮ ಈಜುವಿಕೆಯನ್ನು 75ರಿಂದ 50, 25ಕ್ಕೆ ಇಳಿಸಿ. ಈಜು ಪ್ರಮಾಣ ಇಳಿಸುವ ಮಧ್ಯೆ ವಿಶ್ರಾಂತಿ ಮಾಡಿ. ಒಮ್ಮೆ ಈ ಲ್ಯಾಡರ್‌ ಈಜುವಿಕೆ ಪ್ರಯೋಗವನ್ನು ಸುಲಭವಾಗಿ ಮಾಡಿದ ಮೇಲೆ 25 ಮೀಟರಿನಂತೆ ಏರಿಸುತ್ತಾ ಹೋಗಿ, ಹಾಗೂ ವಿಶ್ರಾಂತಿ ಅವಧಿಯನ್ನು ಇಳಿಸಿ.

English summary

How Does a Swimmer Build Endurance? | ಈಜುಗಾರ ತಾಳ್ಮೆ ಬೆಳೆಸಿಕೊಳ್ಳುವುದು ಹೇಗೆ ?

Building endurance for swimming cannot be rushed. It takes dedication and perseverance for a swimmer to develop proper breath support and muscle memory to draw upon when swimming for long periods.
X
Desktop Bottom Promotion