Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅತಿ ಬೇಗನೆ ಬೊಜ್ಜು ಕರಗಿಸಲು ಐದೇ ಐದು ಮಾರ್ಗ
ತೂಕವನ್ನು ಶೀಘ್ರವಾಗಿ ಇಳಿಸಬೇಕೆಂದು ನಿಮಗೆ ಇಚ್ಛೆಯಿದ್ದು ಈ ಬಗ್ಗೆ ಪರಿಣಿತರಲ್ಲಿ ಕೇಳಿದರೆ ಇವರು ನೀಡುವ ಸಾಮಾನ್ಯ ಉತ್ತರವೆಂದರೆ ಆಹಾರ ಕಡಿಮೆ ಮಾಡಿ, ವ್ಯಾಯಾಮ ಹೆಚ್ಚಿಸಿ ಎಂದೇ ಸಲಹೆ ನೀಡುತ್ತಾರೆ.
ಅಷ್ಟೇ ಅಲ್ಲ, ಅಗತ್ಯವಾದ ಪರಿಣಾಮ ಪಡೆಯಬೇಕೆಂದರೆ ನಿಮ್ಮ ಪ್ರಯತ್ನಗಳು ಸತತವಾಗಿರಬೇಕು ಹಾಗೂ ದೀರ್ಘಾವಧಿಯದ್ದಾಗಿರಬೇಕು ಎಂದೂ ಸೇರಿಸುತ್ತಾರೆ. ಆದರೆ ಸಾಮಾನ್ಯವಾಗಿ ಇವರು ಹೇಳಿದಷ್ಟು ಸುಲಭವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ತೂಕ ಇಳಿದರೂ ಅಗತ್ಯವಿದ್ದಷ್ಟು ಇಳಿಯುವುದಿಲ್ಲ. ತೂಕ ಶೀಘ್ರವಾಗಿ ಇಳಿಯಬೇಕೆಂದರೆ ಕೆಲವು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ... ಹಾಗಾದರೆ ಇನ್ನೇಕೆ ತಡ ಮುಂದೆ ಓದಿ...

ನೀರಿನ ಡಯಟ್
ನೀರು ಕುಡಿಯುವುದನ್ನು ಹೆಚ್ಚು ರೂಢಿಸಿಕೊಳ್ಳಿ. ಇದು ದೇಹವನ್ನು ಶುದ್ಧಗೊಳಿಸುವುದರೊಂದಿಗೆ ದೇಹದಲ್ಲಿ ಅಲ್ಲಲ್ಲಿ ಸೇರಿಕೊಂಡ ಬೊಜ್ಜನ್ನೂ ಕಿತ್ತೊಗೆಯುತ್ತದೆ. ಹೊಟ್ಟೆ ಸುತ್ತ ತುಂಬಿಕೊಂಡ ಬೊಜ್ಜನ್ನೂ ನಿವಾರಿಸುತ್ತದೆ.

ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ
ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೂರಬೇಕೆಂದೇನಿಲ್ಲ. ದೇಹಕ್ಕೆ ಅವಶ್ಯಕವಾದ ಪೋಷಕಾಂಶವನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.

ಹಸಿವಾದಾಗಲೆಲ್ಲಾ ಗ್ರೀನ್ ಟೀ ಅಥವಾ ತರಕಾರಿ ತಿನ್ನಿ
ನೀವು ಊಟದ ಪ್ರಮಾಣದಲ್ಲಿ ಕಡಿಮೆ ಮಾಡುವುದರಿಂದ ಹಸಿವಾಗುವುದು ಸಹಜ. ಆ ಸಮಯದಲ್ಲಿ ತರಕಾರಿ ಸಲಾಡ್ ಅಥವಾ ಗ್ರೀನ್ ಟೀ ಕುಡಿಯಬೇಕು. ಇದು ಬೊಜ್ಜನ್ನು ಕರಗಿಸುವುದರೊಂದಿಗೆ ಚರ್ಮವನ್ನೂ ಸುಂದರವಾಗಿಸುತ್ತದೆ.

ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ
ಆಲೂಗಡ್ಡೆ, ಹೂಕೋಸು, ಎಲೆಕೋಸು, ಮದ್ಯ, ಜೋಳ, ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವ ಇಂತಹ ತರಕಾರಿ ಸೇವನೆಯನ್ನು ತ್ಯಜಿಸಬೇಕು. ಇದರ ಸೇವನೆಯಿಂದ ಹೊಟ್ಟೆ ಊದಿಕೊಂಡಂತಾಗುತ್ತದೆ.

ನಿರ್ದಿಷ್ಟ ಸಮಯ ಪಾಲಿಸಿ
ಊಟವನ್ನು ನಿಗದಿತ ಸಮಯಕ್ಕೇ ಮಾಡಿಮುಗಿಸಲು ಪ್ರಯತ್ನಿಸಿ. ಹೊತ್ತಿಲ್ಲದ ಹೊತ್ತಿನಲ್ಲಿ ತಿಂಡಿ, ಊಟ ಬೇಡ. ಇಲ್ಲದಿದ್ದರೆ ಜೀರ್ಣಕ್ರಿಯೆ ವ್ಯತ್ಯಾಸಗೊಂಡು ದೇಹದಲ್ಲಿ ಅನಗತ್ಯ ಬೊಜ್ಜು ತುಂಬಿಕೊಳ್ಳುವಂತೆ ಮಾಡುತ್ತದೆ.

ನಡಿಗೆ, ಜಾಗಿಂಗ್, ವ್ಯಾಯಾಮ....
ಈ ಎಲ್ಲ ಟಿಪ್ಸ್ ಗಳನ್ನು ಅನುಸರಿಸುವುದರಿಂದ ಮತ್ತು ಇದರೊಂದಿಗೆ ನಡಿಗೆ, ಜಾಗಿಂಗ್, ಮನೆಕೆಲಸಗಳು, ವ್ಯಾಯಾಮ , ಟ್ಟಿಲೇರುವುದು ಇಂತಹ ಸುಲಭ ವ್ಯಾಯಾಮಗಳೂ ನಿಮ್ಮ ತೂಕ ಕಡಿಮೆಯಾಗಲು ಸಹಕಾರಿ.



Click it and Unblock the Notifications
