For Quick Alerts
ALLOW NOTIFICATIONS  
For Daily Alerts

ಒಂಟಿತನ ಒತ್ತಡದೊಂದಿಗೆ ತೂಕವನ್ನೂ ಹೆಚ್ಚಿಸುತ್ತದಂತೆ...

|
Loneliness may Bring Obesity
ಒಂಟಿತನ ಕೇವಲ ಮಾನಸಿಕ ಯಾತನೆಯಾಗಿ ಮಾತ್ರ ಉಳಿಯುವುದಿಲ್ಲ, ದೈಹಿಕವಾಗಿಯೂ ಮನುಷ್ಯನನ್ನು ತೊಂದರೆಗೀಡುಮಾಡುತ್ತದೆ. ಒಂಟಿತನ ಮತ್ತು ಒತ್ತಡ ಬೊಜ್ಜಿನ ಸಮಸ್ಯೆ ಬಂದು ಸೇರಿಕೊಳ್ಳಲು ಪ್ರಚೋದಕವಾಗುತ್ತದೆ.

ವ್ಯಕ್ತಿ ಒತ್ತಡಕ್ಕೀಡಾದಾಗ ಊಟ ತಿಂಡಿ ಬಿಡುವುದು ಒಂದು ವರ್ಗವಾದರೆ, ಒತ್ತಡಕ್ಕೆ ಒಳಗಾಗಿಯೇ ಅತಿಯಾಗಿ ತಿಂಡಿ, ತಿನಿಸು ಊಟವನ್ನು ಮಿತಿ ಮೀರಿ ತಿನ್ನುವವರೂ ಇದ್ದಾರೆ. ಈ ರೀತಿ ಒತ್ತಡಕ್ಕೊಳಗಾಗಿ ಹೆಚ್ಚು ತಿನ್ನಲು ಪ್ರಾರಂಭಿಸಿದಾಗ ತೂಕ ತಂತಾನೆ ಹೆಚ್ಚಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಒತ್ತಡಕ್ಕೆ ಒಳಗಾದ ವ್ಯಕ್ತಿ ಎಲ್ಲದರೆಡೆಗೂ ನಿರ್ಲಕ್ಷ್ಯ ತೋರುವುದರಿಂದ ವ್ಯಾಯಾಮವನ್ನೂ ಅಲಕ್ಷಿಸಿ ದೇಹದ ತೂಕ ಅಳತೆ ಮೀರಿ ಹೆಚ್ಚುತ್ತದೆ. ತೂಕ ಹೆಚ್ಚುತ್ತಿದ್ದಂತೆ ತಮ್ಮ ಬಾಹ್ಯರೂಪದ ಬಗ್ಗೆ ಇನ್ನಷ್ಟು ಚಿಂತೆ ಮಾಡುತ್ತ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಆದರೆ ಒತ್ತಡದಿಂದ ಹೊರಬಂದು ಜೀವನವನ್ನು ಸುಲಭವಾಗಿ ನಡೆಸಿಕೊಂಡು ಹೋದರೆ ಮನಸ್ಸು ಮತ್ತು ದೇಹವನ್ನು ಹಗುರವಾಗಿಸಲು ಸಾಧ್ಯವಿದೆ.

ಒತ್ತಡದಿಂದ ಹೊರಬರುವ ಸಲಹೆ:
1. ಬೆಳಗ್ಗೆ ಮತ್ತು ಸಂಜೆ ಸಣ್ಣ ವಾಕ್ ಗೆ ಹೋಗಿ.
2. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ನಮ್ಮ ಮೇಲೆ ನಮಗೆ ಪ್ರೀತಿ ಇದ್ದರೆ ಯಾವ ಒತ್ತಡವೂ ಕಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಿ.
3. ಉತ್ತಮ ಆಹಾರಕ್ರಮ ರೂಢಿಸಿಕೊಂಡು ಮನಸ್ಸಿನ ಒತ್ತಡ ದೇಹದ ಮೇಲೆ ಬೀರದಿರುವಂತೆ ತಡೆಯಬಹುದು.
4. ಎಲ್ಲರೊಂದಿಗೂ ಬೆರೆತು ಆದಷ್ಟು ಒಂಟಿಯಾಗಿರುವುದನ್ನು ಕಡಿಮೆ ಮಾಡಿ. ಕಾಲ ಎಲ್ಲ ಸಮಸ್ಯೆಗಳನ್ನೂ ಮರೆಸುತ್ತದೆ ಎಂಬ ಭರವಸೆ ಇರಲಿ.
5. ಒಳ್ಳೆಯ ಪುಸ್ತಕ ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ.

English summary

Loneliness may Bring Obesity | Depression and Obesity | ಒಂಟಿತನ ಬೊಜ್ಜಿನ ಸಮಸ್ಯೆ ತರಬಹುದು | ಒತ್ತಡ ಮತ್ತು ಬೊಜ್ಜಿನ ಸಮಸ್ಯೆ

Depression or Loneliness can also be a cause for serious health problem. The person who is suffering from depression may develop the habit of overeating and this may lead to obesity and many health problems.
Story first published: Tuesday, September 27, 2011, 12:25 [IST]
X
Desktop Bottom Promotion