Just In
Don't Miss
- Finance
Gold Rate Today: ಚಿನ್ನ 400 ರೂ ಏರಿಕೆ : ಪ್ರಮುಖ ನಗರಗಳ ಮೇ 20ರ ದರ ಎಷ್ಟಿದೆ?
- Sports
CSK vs RR: ಎರಡನೇ ಸ್ಥಾನದ ಮೇಲೆ ರಾಜಸ್ಥಾನ್ ಕಣ್ಣು; ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ
- Movies
ಗಟ್ಟಿಮೇಳ ಧಾರಾವಾಹಿಯ ನಟಿ ಮಹತಿ ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು?
- News
ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಡ್ನಿ ಬೀನ್ಸ್ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಏಕೆ ಗೊತ್ತಾ?
ಮಧುಮೇಹ ಬಂದರೆ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂಬ ಗೊಂದಲ ಅನೇಕರಲ್ಲಿದೆ. ಮಧುಮೇಹ ಬಂದ ಮೇಲೆ ರುಚಿ ರುಚಿಯಾದ ಆಹಾರಗಳನ್ನು ತಿನ್ನಲು ಸಾಧ್ಯವಿಲ್ಲ, ಬರೀ ಪಥ್ಯದಂಥ ಆಹಾರಗಳನ್ನು ಸೇವಿಸಬೇಕು ಎಂದು ಯೋಚಿಸುತ್ತಾರೆ, ಹಾಗೇನೂ ಇಲ್ಲ ಮಧುಮೇಹ ಬಂದ ಮೇಲೂ ನೀವೂ ರುಚಿಯಾದ ಆಹಾರಗಳನ್ನು ಸವಿಯಬಹುದು, ಆದರೆ ನಿಮ್ಮ ಆಹಾರಕ್ರಮದಲ್ಲಿ ಸಕ್ಕರೆಯಂಶ ಹೆಚ್ಚು ಮಾಡದಂಥ ಆಹಾರಗಳನ್ನು ಸೇವಿಸಬೇಕು. ಅಂಥದ್ದೊಂದು ಆಹಾರದ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ, ಅದೇ ರಾಜ್ಮಾ...
ರಾಜ್ಮಾದಿಂದ ತಯಾರಿಸಿದ ಗ್ರೇವಿಯನ್ನು ಚಪಾತಿ ಅಥವಾ ರಾಗಿ ರೊಟ್ಟಿ, ಜೋಳದ ರೊಟ್ಟಿ ಇವುಗಳ ಜೊತೆ ತಿನ್ನಲು ಎಷ್ಟು ರುಚಿಯಾಗಿರುತ್ತೆ ಅಲ್ವಾ? ಕಿಡ್ನಿ ಬೀನ್ಸ್ ಅಥವಾ ರಾಜ್ಮಾವನ್ನು ನಿಮ್ಮ ಆಹಾರಕ್ರಮದಲ್ಲಿ ಧೈರ್ಯವಾಗಿ ಸೇರಿಸಬಹುದು, ಏಕೆಂದರೆ ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ತುಂಬಾನೇ ಸಹಕಾರಿ.
ಹೌದು ಮಧುಮೇಹಿಗಳು ತಮ್ಮಆಹಾರಕ್ರಮದಲ್ಲಿ ಸೇರಿಸಬಹುದಾದ ಅತ್ಯುತ್ತಮವಾದ ಆಹಾರಗಳಲ್ಲಿ ಕಿಡ್ನಿ ಬೀನ್ಸ್ ಕೂಡ ಒಂದಾಗಿದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿಸುವುದಿಲ್ಲ.
ಕಿಡ್ನಿ ಬೀನ್ಸ್ ಈ ಕಾರಣಕ್ಕೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು:

1. ಅಧಿಕ ನಾರಿನಂಶ
ಕಿಡ್ನಿ ಬೀನ್ಸ್‌ನಲ್ಲಿ ನಾರಿನಂಶ ಅಧಿಕವಿದೆ, ಇದರಲ್ಲಿ ಕೊಬ್ಬಿನಂಶ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಇದೆ. 100 ಗ್ರಾಂ ಕಿಡ್ನಿ ಬೀನ್ಸ್‌ನಲ್ಲಿ 6.4 ಗ್ರಾಂ ನಾರಿನಂಶವಿದೆ. ಇದು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ. ನಾರಿನಂಶ ಜೀರ್ಣಕ್ರಿಯೆಗೂ ಒಳ್ಳೆಯದು.

2. ಅಧಿಕ ಪ್ರೊಟೀನ್ ಇದೆ
ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಮಧುಮೇಹಿಗಳು ಪ್ರೊಟೀನ್ ಅಧಿಕವಿರುವ ಆಹಾರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತದೆ. ಒಂದು ಕಪ್ ಕಿಡ್ನಿ ಬೀನ್ಸ್ ತಿಂದರೆ 14 ಗ್ರಾಣನಷ್ಟು ಪ್ರೊಟೀನ್ ದೊರೆಯುವುದು. ಅಲ್ಲದೆ ರಾಜ್ಮಾ ಅಥವಾ ಕಿಡ್ನಿ ಬೀನ್ಸ್ ತಿಂದರೆ ಬೇಗನೆ ಹಸಿವು ಉಂಟಾಗಲ್ಲ.

3. ಪೊಟಾಷ್ಯಿಯಂ ಅಧಿಕವಿದೆ
ಮಧುಮೇಹಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಆದರೆ ರಾಜ್ಮಾದಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತೆ, ಹೃದಯ ಆರೋಗ್ಯವನ್ನು ವೃದ್ಧಿಸುತ್ತೆ, ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುತ್ತೆ. ಅಲ್ಲದೆ ಸೋಡಿಯಂನಿಂದ ಉಂಟಾಗುವ ಪರಿಣಾಮವನ್ನು ತಗ್ಗಿಸಲು ಇದು ಸಹಕಾರಿ.

4. ಕಾರ್ಬೋಹೈಡ್ರೇಟ್ಸ್
ಕಿಡ್ನಿ ಬೀನ್ಸ್‌ನಲ್ಲಿ ಕಾರ್ಬೋಹೈಡ್ರೇಟ್ಸ್ ಇದ್ದರೂ ಅದು ನಿಧಾನಕ್ಕೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದಿಲ್ಲ. ಕಾರ್ಬ್ಸ್, ಪ್ರೊಟೀನ್, ನಾರಿನಂಶ ಇವೆಲ್ಲಾ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಅಲ್ಲದೆ ಬೇಗನೆ ಹಸಿವು ಉಂಟಾಗುವುದಿಲ್ಲ.

5. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ
ಮಧುಮೇಹಿಗಳು ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರಗಳನ್ನು ಸೇವಿಸಬೇಕು. ಕಿಡ್ನಿ ಬೀನ್ಸ್‌ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು, ನಾರಿನಂಶ ಅಧಿಕವಿರುವುದರಿಂದ ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಸೇರಿಸಬಹುದಾದ ರುಚಿಕರವಾದ ಆಹಾರ ಇದಾಗಿದೆ.