For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣಕ್ಕೆ ಅಮೃತಬಳ್ಳಿ: ಇದನ್ನು ಹೇಗೆ ಬಳಸಬೇಕು?

|

ಮಧುಮೇಹ ಎನ್ನುವುದ ಅತೀ ಹೆಚ್ಚು ಜನರನ್ನು ಹಿಂಡಿ-ಹಿಪ್ಪೆ ಮಾಡುತ್ತಿರುವ ಸಮಸ್ಯೆಯಾಗಿದೆ. ಹಿಂದೆಯೆಲ್ಲಾ ವಯಸ್ಸು 40 ದಾಟಿದವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿತ್ತು, ಆದರೆ ಇದೀಗ 25-30ರ ಪ್ರಾಯದಲ್ಲಿಯೇ ಮಧುಮೇಹ ಎಂಬ ಭೂತ ಬಂದು ವಕ್ಕರಿಸುತ್ತದೆ.

ಇದು ಒಮ್ಮೆ ಬಂತೆಂದರೆ ಇದನ್ನುನಿಯಂತ್ರಣದಲ್ಲಿ ಇಡಬಹುದೇ ಹೊರತು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.
ಅಂತರರಾಷ್ಟ್ರೀಯ ಮಧುಮೇಹ ಸಂಸ್ಥೆಯ ಪ್ರಕಾರ 463 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿ 77 ಮಿಲಿಯನ್ ಜನರು ಭಾರತದಲ್ಲಿದ್ದಾರೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತದೆ.

ಇದು ವಂಶಪಾರಂಪರ್ಯವಾಗಿ ಹಾಗೂ ಜೀವನಶೈಲಿಯಿಂದ ಬರುವ ರೋಗವಾದರೂ ಅದೇ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ತಂದರೆ ಇದನ್ನು ಬಾರದಂತೆ ತಡೆಯುವುದು ನಮ್ಮ ಕೈಯಲ್ಲಿದೆ.

ಮಧುಮೇಹದಲ್ಲಿ ಟೈಪ್ 2 ಮತ್ತು ಟೈಪ್ 1 ಎಂಬ ಎರಡು ಬಗೆಗಳಿವೆ. ಟೈಪ್ 1 ಮಧುಮೇಹ ಯಾವುದೇ ಪ್ರಾಯದವರಿಗೂ ಬೇಕಾದರೂ ಬರಬಹುದು.

 ಒತ್ತಡದ ಬದುಕೇ ಮಧುಮೇಹಕ್ಕೆ ಕಾರಣ

ಒತ್ತಡದ ಬದುಕೇ ಮಧುಮೇಹಕ್ಕೆ ಕಾರಣ

ಅತ್ಯಂತ ಒತ್ತಡದ ಬದುಕೇ ಮಧುಮೇಹಕ್ಕೆ ಕಾರಣವಾಗಿದೆ. ಸರಿಯಾಗಿ ನಿದ್ದೆ ಇರಲ್ಲ, ಸರಿಯಾದ ಸಮಯಕ್ಕೆ ಊಟ ಇರಲ್ಲ, ದೈಹಿಕ ವ್ಯಾಯಾಮ ಮಾಡುವುದಿಲ್ಲ ಈ ಎಲ್ಲಾ ಕಾಣಗಳು ರಕ್ತದಲ್ಲಿ ಸಕ್ಕರೆಯಂಶ ಪ್ರಮಾಣದಲ್ಲಿ ವ್ಯತ್ಯಾಸವನ್ನು ಉಮಟು ಮಾಡುತ್ತದೆ, ದೇಹಕ್ಕೆ ರಕ್ತದಲ್ಲಿರುವ ಸಕ್ಕರೆಯಂಶವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಮಧುಮೇಹ ಉಂಟಾಗುವುದು.

ಮಧುಮೇಹವನ್ನು ನಿಯಂತ್ರಿಸುವಲ್ಲಿ ಅಮೃತಬಳ್ಳಿ ತುಂಬಾ ಸಹಕಾರಿಯಾಗಿದೆ. ಇದನ್ನು ಆಯುರ್ವೇದದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ.

 ಮಧುಮೇಹ ನಿಯಂತ್ರಣಕ್ಕೆ ಅಮೃತ ಬಳ್ಳಿ

ಮಧುಮೇಹ ನಿಯಂತ್ರಣಕ್ಕೆ ಅಮೃತ ಬಳ್ಳಿ

ಕೊರೊನಾ ಸಾಂಕ್ರಾಮಿಕ ರೋಗ ಬಂದ ಬಳಿಕ ಜನರು ಹೆಚ್ಚಾಗಿ ಆಯುರ್ವೇದ ಔಷಧಗಳನ್ನು ಬಳಸಲಾರಂಭಿಸಿದ್ದಾರೆ. ಅದರಲ್ಲೂ ಟೈಪ್‌ 2 ಮಧುಮೇಹಿಗಳು ಮಧುಮೇಹ ನಿಯಂತ್ರಣಕ್ಕೆ ಅಮೃತಬಳ್ಳಿ ಬಳಸಲಾರಂಭಿಸಿದ್ದಾರೆ.

ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುತ್ತದೆ. ಅಮೃತ ಬಳ್ಳಿಯಲ್ಲಿ ಮಧುಮೇಹ ನಿಯಂತ್ರಣ ಗುಣವಿದೆ ಎಂದು PubMed Central ಕಂಡು ಹಿಡಿದಿದೆ.

ಅಮೃತ ಬಳ್ಳಿ ಹೇಗೆ ಸಹಕಾರಿ?

ಅಮೃತ ಬಳ್ಳಿ ಹೇಗೆ ಸಹಕಾರಿ?

ಅಮೃತ ಬಳ್ಳಿ ಜೀರ್ಣಕ್ರಿಯೆಗೆ ತುಂಬಾನೇ ಸಹಾಯ ಮಾಡುತ್ತದೆ, ಅಲ್ಲದೆ ಇದು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮಾರ್ಥ್ಯ ಹೆಚ್ಚಿಸುತ್ತದೆ. ಇದರಿಂದಾಗಿ ನಮ್ಮ ದೇಹದ ಕಾರ್ಯ ವೈಖರಿಯು ಸುಲಲಿತವಾಗಿ ನಡೆಯುತ್ತದೆ, ಅಲ್ಲದೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ಆ್ಯಂಟಿಇನ್‌ಫ್ಲೇಮಟರಿ (ಉರಿಯೂತ ಕಡಿಮೆ ಮಾಡುವ ಗುಣ) ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ. ಅಲ್ಲದೆ ಇದು ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು.

 ಯಾವಾಗ ತಿನ್ನುವುದು ಒಳ್ಳೆಯದು?

ಯಾವಾಗ ತಿನ್ನುವುದು ಒಳ್ಳೆಯದು?

ಅಮೃತಬಳ್ಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದು. ಇದನ್ನು ಜ್ಯೂಸ್ ರೀತಿ ಸೇವಿಸಬಹುದು, ಇಲ್ಲದಿದ್ದರೆ ಚಿಕ್ಕ ಮಾತ್ರೆ ರೀತಿ ಮಾಡಿ ಸೇವಿಸಬಹುದು. ಇದನ್ನು ಮಾಡಿದ್ದೇ ಆದರೆ ಮಧುಮೇಹ ನಿಯಂತ್ರಣದಲ್ಲಿರುವುದು.

ಅಮೃತ ಬಳ್ಳಿಯ ಮಾತ್ರೆಗಳು ನಿಮಗೆ ಆಯುರ್ವೇದ ಔಷಧ ಅಂಗಡಿಗಳಲ್ಲಿ ದೊರೆಯುವುದು.

English summary

Giloy for diabetics: How it helps to manage blood sugar

Giloy for diabetics, here is how it help to manage blood sugar, read on.
X
Desktop Bottom Promotion