For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ರಕ್ತದಾನ ಮಾಡಬಹುದೇ?

|

ರಕ್ತದಾನ ಮಾಡುವ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತೇವೆ. ರಕ್ತದಾನವನ್ನು ಎಲ್ಲರೂ ಮಾಡುವಂತಿಲ್ಲ. ರಕ್ತದಾನ ಮಾಡುವುದಾದರೆ ದಾನಿಗಳು ಯಾವುದೇ ಕಾಯಿಲೆಯಿಂದ ಬಳಲುತ್ತಿರಬಾರದು,ಕಡಿಮೆ ತೂಕವನ್ನು ಹೊಂದಿರಬಾರದು, ಮದ್ಯಪಾನ ಮಾಡಿರಬಾರದು. ಈ ಎಲ್ಲಾ ಅಂಶಗಳನ್ನು ಗಮನಿಸಿದ ಬಳಿಕವೇ ದಾನಿಗಳಿಂದ ರಕ್ತವನ್ನು ಪಡೆಯಲಾಗುವುದು. ಇಲ್ಲಿ ನಾವು ಮಧುಮೇಹಿಗಳು ರಕ್ತದಾನ ಮಾಡಬಹುದೇ, ಇಲ್ಲವೇ ಎಂಬುವುದರ ಕುರಿತು ಮಾಹಿತಿ ನೀಡಿದ್ದೇವೆ ನೋಡಿ.

ಮಧುಮೇಹಿಗಳು ರಕ್ತದಾನ ಮಾಡಬಹುದೇ?

ಮಧುಮೇಹಿಗಳು ರಕ್ತದಾನ ಮಾಡಲು ಬಯಸಿದರೆ ಟೈಪ್ 1 ಮಧುಮೇಹ ಹಾಗೂ ಟೈಪ್‌ 2 ಮಧುಮೇಹ ಕಾಯಿಲೆ ಇದ್ದರೂ ಕೂಡ ರಕ್ತದಾನ ಮಾಡಬಹುದಾಗಿದೆ. ಆದ್ದರಿಂದ ಯಾರಿಗಾದರೂ ರಕ್ತದ ಅಗ್ಯತ ಕಂಡು ಬಂದರೆ ಮಧುಮೇಹಿಗಳು ರಕ್ತ ನೀಡಲು ನೀಡಲು ಮುಂದಾಗಬಹುದು, ಆದರೆ ಗಮನಿಸಬೇಕಾದ ಅಂಶವೆಂದರೆ ನಿಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರಬೇಕಷ್ಟೆ.

Can Diabetics Donate Blood?

ನಿಮ್ಮಲ್ಲಿ ಮಧುಮೇಹ ನಿಯಂತ್ರಣದಲ್ಲಿದ್ದರೆ, ದೇಹದಲ್ಲಿ ಸಕ್ಕರೆಯಂಶದ ಪ್ರಮಾಣ ಆರೋಗ್ಯಕರವಾಗಿರುತ್ತದೆ. ಪ್ರತಿದಿನವೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಗಮನ ನೀಡಬೇಕಾಗುತ್ತದೆ. ಇದಕ್ಕಾಗಿ ಆಹಾರಕ್ರಮ ಪಾಲಿಸಬೇಕು ಹಾಗೂ ವ್ಯಾಯಾಮ ಮಾಡಬೇಕು. ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿರಬೇಕು.

ರಕ್ತದಾನದಲ್ಲಿ ಈ ಅಂಶಗಳನ್ನು ಗಮನಿಸಲಾಗುವುದು

ರಕ್ತದಾನವನ್ನು ಮಾಡಲು ಎಲ್ಲರಿಂದ ಸಾಧ್ಯವಿಲ್ಲ, ಏಕೆಂದರೆ ರಕ್ತದಾನಕ್ಕೆ ಮುನ್ನ ದಾನಿಗಳ ಸ್ವಲ್ಪ ರಕ್ತವನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಗುವುದು, ಇದರಲ್ಲಿ ದಾನಿಗಳ ಹಿಮೋಗ್ಲೋಬಿನ್ ಪ್ರಮಾಣ ಎಷ್ಟಿದೆ ಎಂದು ತಿಳಿದುಬರುವುದು, ಇನ್ನು ರಕ್ತದೊತ್ತಡವನ್ನು ಪರೀಕ್ಷೆ ಮಾಡಲಾಗುವುದು ಜತೆಗೆ ದಾನಿಗಳ ಬಳಿ ಯಾವುದಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದೀರಾ? ಎಂದು ದಾನಿಗಳ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುವುದು. ಮಧುಮೇಹಿಗಳು ರಕ್ತದಾನ ಮಾಡಲು ಯಾವುದೇ ತೊಂದರೆಯಿಲ್ಲ, ಆದರೆ ರಕ್ತದಾನ ಮಾಡಬಯಸುವುದಾದರೆ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು:

* ರಕ್ತದಾನ ಮಾಡುವ ದಿನ ಅವರ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕು.
* ಕಡಿಮೆಯೆಂದರೂ 55 ಕೆಜಿ ಮೈ ತೂಕ ಹೊಂದಿರಬೇಕು.
* ವಯಸ್ಸು 16 ವರ್ಷ ಮೇಲ್ಪಟ್ಟಿರಬೇಕು.

ರಕ್ತದಾನ ಮಾಡುವವರು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?

* ರಕ್ತದಾನಿಗಳು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ರಕ್ತದಾನಕ್ಕೆ ಕೆಲವು ದಿನ ಇರುವಾಗಲೇ ನೀರು ತುಂಬಾ ಕುಡಿದರೆ ಒಳ್ಳೆಯದು. ಯಾವುದೇ ಕಾರಣಕ್ಕೂ ದೇಹದ್ಲಿ ನೀರಿನಂಶ ಕಡಿಮೆಯಾಗಬಾರದು.
* ಕಬ್ಬಿಣದಂಶ ಅಧಿಕವಿರುವ ಆಹಾರ ಅಂದರೆ ಸೊಪ್ಪು -ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು.
* ರಕ್ತದಾನ ಮಾಡುವ ಮುನ್ನ ದಿನ ರಾತ್ರಿ ನಿದ್ದೆ ಚೆನ್ನಾಗಿ ಮಾಡಬೇಕು.
* ಸಮತೋಲನವಿರುವ ಆಹಾರ ಸೇವಿಸಬೇಕು. ಅದರಲ್ಲೂ ಮಧುಮೇಹಿಗಳು ಆಹಾರಕ್ರಮದ ಕಡೆ ಹೆಚ್ಚಿನ ಗಮನ ಕೊಡಬೇಕು.
* ರಕ್ತದಾನ ಮಾಡುವ ದಿನ ಕೆಫೀನ್‌ ಇರುವ ಪದಾರ್ಥಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬಾರದು.
* ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಲಿಸ್ಟ್‌ ತಂದು ರಕ್ತದಾನ ಮಾಡುವ ಮುನ್ನ ವೈದ್ಯರಿಗೆ ತೋರಿಸಬೇಕು.
* ಗುರುತಿನ ಚೀಟಿ ಜತೆಯಲ್ಲಿ ಕೊಂಡೊಯ್ಯಬೇಕು.

ರಕ್ತದಾನ ಮಾಡಿದ ಬಳಿಕ ಏನು ಮಾಡಬೇಕು?

* ರಕ್ತದಾನ ಮಾಡಿದ ಬಳಿಕ ದೇಹದಲ್ಲಿ ಸಕ್ಕರೆಯಂಶ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು.ಆದ್ದರಿಂದ ರಕ್ತದಾನದ ಬಳಿಕ ಕಬ್ಬಿಣದಂಶವಿರುವ ಆಹಾರವನ್ನು ತೆಗೆದುಕೊಳ್ಳಬೇಕು.
* ರಕ್ತ ತೆಗೆದ ಜಾಗದ ಊತ ಕಂಡು ಬಂದರೆ ವೈದ್ಯರು ಸೂಚಿಸಿದ ನೋವು ನಿವಾರಕ ತೆಗೆದುಕೊಳ್ಳಿ.
* ಸೂಜಿ ಚುಚ್ಚಿದ ಜಾಗಕ್ಕೆ ಹಾಕಿದ ಬ್ಯಾಂಡೇಜ್‌ ಕಡಿಮೆಯೆಂದರೂ ನಾಲ್ಕು ಗಂಟೆ ಇರಲಿ.
* ಸುಸ್ತು ಅನಿಸಿದರೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ.
* ರಕ್ತದಾನ ಮಾಡಿ 24 ಗಂಟೆ ಕಳೆಯುವವರೆಗೆ ಸುಸ್ತಾಗುವ ಯಾವುದೇ ಚಟುವಟಿಕೆ ಮಾಡಬೇಡಿ, ವ್ಯಾಯಾಮ ಕೂಡ ಮಾಡಬೇಡಿ.
* ಜ್ಯೂಸ್‌, ನೀರು ಸಾಕಷ್ಟು ಡುಇಯಿರಿ.

ರಕ್ತದಾನ ಬಳಿಕ ತುಂಬಾ ಆಯಾಸ ಅನಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಮಧುಮೇಹಿಗಳು ರಕ್ತದಾನ ಮಾಡಬಯಸುವುದಾದರೆ, ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡು 56 ದಿನಕ್ಕೊಮ್ಮೆ ರಕ್ತದಾನ ಮಾಡಬಹುದಾಗಿದೆ.

ಮಧುಮೇಹ ಎನ್ನುವುದು ಜೀವನಶೈಲಿ ಸಂಬಂಧಿತ ಸಮಸ್ಯೆಯಾಗಿದ್ದು, ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸಾಕು, ಎಲ್ಲರಂತೆ ಆರೋಗ್ಯಕರವಾದ ಜೀವನ ಸಾಗಿಸಬಹುದಾಗಿದೆ.

English summary

Can Diabetics Donate Blood?

By donating blood can save life of people. If you are a diabetic patient, wants to donate blood you need to meet few requirements. In this article explained when diabetic patient can donate blood.
X
Desktop Bottom Promotion