For Quick Alerts
ALLOW NOTIFICATIONS  
For Daily Alerts

ಟೈಪ್ 2 ಮಧುಮೇಹಿಗಳಿಗೆ ವಾರದ 7 ದಿನಕ್ಕೆ ಡಯಟ್‌ ಚಾರ್ಟ್

|

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೊಂದು ಜೀವನಶೈಲಿ ಸಂಬಂಧಿಸಿದ ಸಮಸ್ಯೆಯಾಗಿದ್ದು ಸುಮಾರು 74 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

7-Day Indian Diet Plan for Type 2 Diabetes in Kannada

ಮಧುಮೇಹ ಬಂದ ಮೇಲೆ ಅದನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಮಧುಮೇಹಿಗಳು ನಿರ್ಧಿಷ್ಟವಾದ ಆಹಾರಕ್ರಮ ಪಾಲಿಸಬೇಕಾಗುತ್ತದೆ. ಮಧುಮೇಹಿಗಳಲ್ಲಿ ಹೆಚ್ಚಿನವರು ಡಯಟ್‌ ಚಾರ್ಟ್ ಫಾಲೋ ಮಾಡುವುದಿಲ್ಲ, ಇದರಿಂದಾಗಿ ಒಂದೋ ಸಕ್ಕರೆಯಂಶ ಹೆಚ್ಚು ಮಾಡಿಕೊಳ್ಳುತ್ತಾರೆ, ಇಲ್ಲಾ ತುಂಬಾ ಪಥ್ಯ ಮಾಡಿ ಇತರ ಪೋಷಕಾಂಶಗಳ ಕೊರತೆ ಉಂಟಾಗುವಂತೆ ಮಾಡಿಕೊಳ್ಳುತ್ತಾರೆ.

ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವ ಹಾಗೂ ಪೋಷಕಾಂಶವಿರುವ ಆಹಾರಗಳನ್ನು ಸೇವಿಸಬೇಕು. ದಿನವನ್ನು ಒಂದು ಲೋಟ ಬಿಸಿ ನೀರಿನೊಂದಿಗೆ ಪ್ರಾರಂಭಿಸಿ, ಬಿಸಿ ನೀರಿಗೆ ನೆಲ್ಲಿಕಾಯಿ ಪುಡಿ ಹಾಕಿ ಕುಡಿಯಿರಿ, ಇಲ್ಲಾ ರಾತ್ರಿ ಸ್ವಲ್ಪ ಮೆಂತೆ ನೆನೆಹಾಕಿ ಬೆಳಗ್ಗೆ ಎದ್ದು ಅದನ್ನು ತಿನ್ನಿ. ಇದನ್ನು ಪ್ರತಿನಿತ್ಯ ಮಾಡಿ, ಜೊತೆಗೆ ಈ ಡಯಟ್‌ ಚಾರ್ಟ್ ಫಾಲೋ ಮಾಡಿ.

ಹೀಗೆ ಮಾಡಿದ್ದೇ ಆದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ನಾವಿಲ್ಲಿ ವೆಜ್‌, ನಾನ್‌ವೆಜ್‌ ಇಬ್ಬರಿಗೂ ಸೇರಿ ಡಯಟ್‌ ಚಾರ್ಟ್ ನೀಡಿದ್ದೇವೆ, ನಿಮಗೆ ಸೂಕ್ತವಾದದ್ದನ್ನು ಪಾಲಿಸಿ, ಆರೋಗ್ಯ ವೃದ್ಧಿಸಿಕೊಳ್ಳಿ:

 ಸೋಮವಾರ

ಸೋಮವಾರ

ಬ್ರೇಕ್‌ಫಾಸ್ಟ್: ಚಪಾತಿ/ರೊಟ್ಟಿ ತರಕಾರಿ ಪಲ್ಯ/ ವೆಜ್‌ ಸೂಪ್‌/1 ಮೊಟ್ಟೆ, 1-2 ವೀಟ್ ಬ್ರೆಡ್‌ ಟೋಸ್ಟ್, 1 ಕಪ್ ಟೀ/ಕಾಫಿ/ಕೆನೆರಹಿತ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: 1-2 ಚಪಾತಿ, ಸ್ವಲ್ಪ ಬಾರ್ಲಿ, ತರಕಾರಿ ಬೇಯಿಸಿದ್ದು, 1 ಬೌಲ್ ದಾಲ್ ಅಥವಾ ಚಿಕನ್ ಮತ್ತು ಮೊಸರು

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಚಪಾತಿ, ತರಕಾರಿ ಪಲ್ಯ, ಸಲಾಡ್ ಜೊತೆಗೆ 1 ಬೌಲ್ ದಾಲ್ ಅಥವಾ ಮೊಸರು.

 ಮಂಗಳವಾರ:

ಮಂಗಳವಾರ:

ಬ್ರೇಕ್‌ಫಾಸ್ಟ್: ಓಟ್ಸ್ ಉಪ್ಪಿಟ್ಟು ಅಥವಾ ಹಾಲಿನೊಂದಿಗೆ ಓಟ್ಸ್ ಅಥವಾ 2 ಮೊಟ್ಟೆಯ ಬಿಳಿ

ಇವುಗಳ ಜೊತೆಗೆ 1-2 ವೀಟ್ ಬ್ರೆಡ್, ಗ್ರಿಲ್ಡ್ ಮಾಡಿದ ತರಕಾರಿ , 1 ಕಪ್ ಕಾಫಿ/ಟೀ/ ಕೆನೆರಹಿತ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: 2 ಚಪಾತಿ (ಬೇಯಿಸಿದ ಬೇಳೆ ಹಾಕಿ ಮಾಡಿದ್ದು) ಮತ್ತು ತರಕಾರಿ ಪಲ್ಯ ಅಥವಾ ಸಾರು ಹಾಗೂ ಸಲಾಡ್ ಮತ್ತು 1 ಕಪ್ ಮೊಸರು.

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಚಪಾತಿ ಜೊತೆಗೆ ತರಕಾರಿ ಮತ್ತು ಸಲಾಡ್ ಹಾಗೂ 1 ಬೌಲ್ ಬೇಳೆ ರಸ ಅಥವಾ ಮೀನು.

 ಬುಧವಾರ

ಬುಧವಾರ

ಬ್ರೇಕ್‌ಫಾಸ್ಟ್: ಓಟ್ಸ್ ಅಥವಾ ಹಾಲಿನೊಂದಿಗೆ ಓಟ್ಸ್ ಅಥವಾ 2 ಮೊಟ್ಟೆಯ ಬಿಳಿ

ಇವುಗಳ ಜೊತೆಗೆ 1-2 ವೀಟ್ ಬ್ರೆಡ್, ಗ್ರಿಲ್ಡ್ ಮಾಡಿದ ತರಕಾರಿ , 1 ಕಪ್ ಕಾಫಿ/ಟೀ/ ಕೆನೆರಹಿತ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: 2 ಚಪಾತಿ (ಶೇ.50ರಷ್ಟು ಅವಲಕ್ಕಿ ಹಾಕಿ ಮಾಡಿದ್ದು) ಮತ್ತು ಕಡಿಮೆ ಕೊಬ್ಬಿನ ಪನ್ನೀರ್ ಅಥವಾ ಚಿಕನ್

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಅವಲಕ್ಕಿ ಸೇರಿಸಿ ಮಾಡಿದ ಚಪಾತಿ ಜೊತೆಗೆ ತರಕಾರಿ ಮತ್ತು ಸಲಾಡ್ ಹಾಗೂ 1 ಬೌಲ್ ಬೇಳೆ ರಸ ಅಥವಾ ಮೀನು.

 ಗುರುವಾರ

ಗುರುವಾರ

ಬ್ರೇಕ್‌ಫಾಸ್ಟ್: ಇಡ್ಲಿ ಅಥವಾ ಉಪ್ಪಿಟ್ಟು ಜೊತೆ ತರಕಾರಿ ಹಾಗೂ 1 ಕಪ್ ಟೀ/ಕಾಫಿ/ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: ರಾಗಿ ರೊಟ್ಟಿ ಮತ್ತು ತರಕಾರಿ ಪಲ್ಯ ಅಥವಾ ಸಾರು ಹಾಗೂ ಸಲಾಡ್ ಮತ್ತು 1 ಕಪ್ ಮೊಸರು ಹಾಗೂ ಕಡಿಮೆ ಕೊಬ್ಬಿನಂಶವಿರುವ ಪನ್ನೀರ್

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: ಓಟ್ಸ್, ತರಕಾರಿ, ಸಲಾಡ್‌ , ಒಂದು ಬೌಲ್ ದಾಲ್ ಅಥವಾ ಮೀನು

ಶುಕ್ರವಾರ

ಶುಕ್ರವಾರ

ಬ್ರೇಕ್‌ಫಾಸ್ಟ್: ವೀಟ್‌ ಬ್ರೆಡ್ ಸ್ಯಾಂಡ್‌ವಿಚ್‌ ಅಥಚಾ ಚಿಕನ್ ಸ್ಯಾಂಡ್‌ವಿಚ್ ಜೊತೆಗೆ ಒಂದು ಕಪ್ ಟೀ/ಕಾಫಿ/ ಕಡಿಮೆ ಕೊಬ್ಬಿನಂಶವಿರುವ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: ಕಡಲೆಹಿಟ್ಟು ಸೇರಿಸಿ ಮಾಡಿದ ಚಪಾತಿ, ತರಕಾರಿ, ಸಲಾಡ್, ಕಡಿಮೆ ಕೊಬ್ಬಿನಂಶವಿರುವ ಪನ್ನೀರ್ ಅಥವಾ 1 ಬೌಲ್ ಮೊಸರು

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಚಪಾತಿ(ಕಡಲೆ ಹಿಟ್ಟು ಸೇರಿಸಿ ಮಾಡಿದ್ದು) ಜೊತೆಗೆ ತರಕಾರಿ ಮತ್ತು ಸಲಾಡ್ ಹಾಗೂ 1 ಬೌಲ್ ಬೇಳೆ ರಸ ಅಥವಾ ಮೀನು.

 ಶನಿವಾರ

ಶನಿವಾರ

ಬ್ರೇಕ್‌ಫಾಸ್ಟ್: ಮೊಳಕೆ ಬರಿಸಿದ ಹೆಸರು ಕಾಳು ಬೇಯಿಸಿದ್ದು ಜೊತೆಗೆ ತಕಕಾರಿ ಅಥವಾ ಮಲ್ಟಿ ಗ್ರೈನ್ ಚಪಾತಿ ಜೊತೆಗೆ 1 ಲೋಟ ಕಾಫಿ/ಟೀ/ಕೊಬ್ಬಿನಂಶ ಕಡಿಮೆ ಇರುವ ಹಾಲು.

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: 2 ಚಪಾತಿ (ಸೊಪ್ಪು ಸೇರಿಸಿ ಮಾಡಿದ್ದು) ಮತ್ತು ತರಕಾರಿ ಪಲ್ಯ , 1 ಬೌಲ್ ಮೊಳಕೆ ಕಾಳುಗಳು ಅಥವಾ 2 ಮೊಟ್ಟೆಯ ಬಿಳಿ

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಚಪಾತಿ ಜೊತೆಗೆ ತರಕಾರಿ ಮತ್ತು ಸಲಾಡ್ ಹಾಗೂ 1 ಬೌಲ್ ಬೇಳೆ ರಸ ಅಥವಾ ಮೊಸರು.

ಭಾನುವಾರ

ಭಾನುವಾರ

ಬ್ರೇಕ್‌ಫಾಸ್ಟ್: ಬೇಯಿಸಿದ ತರಕಾರಿ ಕಟ್ಲೇಟ್ ಅಥವಾ 1 ಮೊಟ್ಟೆ ಜೊತೆಗೆ 1-2

ವೀಟ್ ಬ್ರೆಡ್, ಗ್ರಿಲ್ಡ್ ಮಾಡಿದ ತರಕಾರಿ , 1 ಕಪ್ ಕಾಫಿ/ಟೀ/ ಕೆನೆರಹಿತ ಹಾಲು

ಬೆಳಗ್ಗಿನ ಸ್ನ್ಯಾಕ್ಸ್: ಹಣ್ಣುಗಳು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳು)

ಮಧ್ಯಾಹ್ನ: 1-2 ಕಪ್ ಕೆಂಪಕ್ಕಿ ಅನ್ನ, ತರಕಾರಿ, ಸಲಾಡ್ ಮತ್ತು 1 ಬೌಲ್ ಕಡಲೆ ಬೇಯಿಸಿದ್ದು ಅಥವಾ ಚಿಕನ್ ಅಥವಾ ಸಲಾಡ್

ಸಂಜೆ ಸ್ನ್ಯಾಕ್ಸ್: ಹುರಿದ ನೆಲಗಡಲೆ, ಅವಲಕ್ಕಿ ಅಥವಾ ಹಣ್ಣುಗಳು, 1 ಕಪ್ ಮೊಸರು

ರಾತ್ರಿ: 1-2 ಚಪಾತಿ ಜೊತೆಗೆ ತರಕಾರಿ ಮತ್ತು ಸಲಾಡ್ ಹಾಗೂ 1 ಬೌಲ್ ಬೇಳೆ ರಸ .

ಈ ರೀತಿಯ ಆಹಾರ ಆಹಾರಕ್ರಮ ಪಾಲಿಸಿದರೆ ಆರೋಗ್ಯವೂ ಚೆನ್ನಾಗಿರುತ್ತದೆ, ಪಥ್ಯದ ಆಹಾರ ತರ ಬೋರ್ ಅನಿಸುವುದಿಲ್ಲ, ದೇಹಕ್ಕೆ ಅಗ್ಯತವಾದ ಎಲ್ಲಾ ಪೋಷಕಾಂಶಗಳು ಈ ಆಹಾರಕ್ರಮದಿಂದ ಸಿಗುವುದು.

English summary

7-Day Indian Diet Plan for Type 2 Diabetes in Kannada

Here are 7 day Indian plan for type 2 diabetes, read on,
X
Desktop Bottom Promotion