For Quick Alerts
ALLOW NOTIFICATIONS  
For Daily Alerts

ಡಯಾಬಿಟೀಸ್ ಇರುವವರ ಆರೋಗ್ಯಕ್ಕೆ ಬಹಳ ಒಳ್ಳೆಯದು ಈ ಹಣ್ಣುಗಳು

|

"ಹಣ್ಣುಗಳಲ್ಲಿ ಸಕ್ಕರೆ ಅಂಶ ಜಾಸ್ತಿ. ಹೀಗಾಗಿ ನಾನು ಹಣ್ಣುಗಳನ್ನೇ ಸೇವಿಸಲ್ಲ ಎಂದು ಅನೇಕರು ಹೇಳುವುದನ್ನು ಕೇಳಿರುತ್ತೀರಿ. ಇದನ್ನೇ ನನ್ನ ಬಳಿಗೆ ಬರುವ ಹಲವಾರು ಜನ ಹೇಳುತ್ತಾರೆ. ಓರ್ವ ಪೌಷ್ಟಿಕಾಂಶ ತಜ್ಞೆಯಾಗಿರುವ ನನಗೆ ಜನರ ಈ ಅಭಿಪ್ರಾಯ ಸಂಪೂರ್ಣ ಸರಿಯಾಗಿದೆ ಎಂದೆನಿಸುವುದಿಲ್ಲ" ಎನ್ನುತ್ತಾರೆ ಖ್ಯಾತ ಆಹಾರ ತಜ್ಞೆಯೊಬ್ಬರು. ಅವರು ಹೇಳುವ ಪ್ರಕಾರ, "ಸಕ್ಕರೆಯಲ್ಲಿ ನಾವು ತಿನ್ನುವ ಸಾಮಾನ್ಯ ಸಕ್ಕರೆಯ ಅಂಶವಿರುವುದಿಲ್ಲ. ಮೇಲಾಗಿ ಇವುಗಳಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ವಿಟಮಿನ್, ಖನಿಜಾಂಶ ಹಾಗೂ ಫೈಬರಗಳಿರುತ್ತವೆ. ಅಷ್ಟೇ ಅಲ್ಲದೆ ಎಲ್ಲ ಹಣ್ಣುಗಳಲ್ಲಿಯೂ ಸಕ್ಕರೆಯ ಅಂಶ ಒಂದೇ ತೆರನಾಗಿರುವುದಿಲ್ಲ.

diabetes

ಕೆಲವುಗಳಲ್ಲಿ ಹೆಚ್ಚು ಹಾಗೂ ಇನ್ನು ಕೆಲವು ಹಣ್ಣುಗಳಲ್ಲಿ ತೀರಾ ಕಡಿಮೆ ಇರುತ್ತದೆ. ಅಲ್ಲದೆ ಸಕ್ಕರೆಯ ಅಂಶವಿದ್ದರೂ ಅವುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಸಕ್ಕರೆಯ ಅಂಶ ಕಡಿಮೆ ಮಾಡಲು ಉಪಯುಕ್ತವಾಗಿವೆ. ಹೀಗಾಗಿ ಸಕ್ಕರೆಯ ಬದಲು ಕೃತಕ ಸಕ್ಕರೆಯ ಸೇವನೆ ಅಥವಾ ಸಂಸ್ಕರಿತ ಆಹಾರ ಸೇವಿಸುವ ಬದಲು ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ" ಎನ್ನುತ್ತಾರೆ ಅವರು. ಡಯಾಬಿಟೀಸ್‌ನಿಂದ ಬಳಲುತ್ತಿರುವವರು ಅಥವಾ ಸಕ್ಕರೆಯನ್ನು ಕಡಿಮೆ ಸೇವಿಸಲು ಬಯಸುವವರು ಯಾವೆಲ್ಲ ಹಣ್ಣುಗಳನ್ನು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಖ್ಯಾತ ಪೌಷ್ಟಿಕಾಂಶ ತಜ್ಞರು ನೀಡಿರುವ ಹಣ್ಣುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಯಾವಾಗ ಬೇಕಾದರೂ ತಿನ್ನಬಹುದಾದ ಹಣ್ಣುಗಳು:

ಬೆರ್ರೀಸ್

ಬೆರ್ರೀಸ್

ಬಹುತೇಕ ಎಲ್ಲ ಬಗೆಯ ಬೆರ್ರೀಸ್ ಹಣ್ಣುಗಳು ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಇತರ ಹಣ್ಣುಗಳಿಗೆ ಹೋಲಿಸಿದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ. ಮೊಸರು, ಓಟ್ ಮೀಲ್ ಅಥವಾ ಇನ್ನಾವುದೇ ಪ್ರೋಟೀನ್ ಯುಕ್ತ ಆಹಾರಗಳೊಂದಿಗೆ ಇವನ್ನು ತಿನ್ನಬಹುದಾಗಿದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಜಾತಿಗೆ ಸೇರಿದ ದ್ರಾಕ್ಷಿ ಹಾಗೂ ಆರೆಂಜ್ ಮುಂತಾದ ಹಣ್ಣುಗಳಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಕಾಪಾಡಲು ಸಹಕಾರಿಯಾಗಿವೆ. ಇವುಗಳಲ್ಲಿನ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪಿಯರ್ಸ್ ಹಣ್ಣು

ಪಿಯರ್ಸ್ ಹಣ್ಣು

ಒಂದು ಮಧ್ಯಮ ಗಾತ್ರದ ಪಿಯರ್ಸ್ ಹಣ್ಣಿನಲ್ಲಿ ಸುಮಾರು 6 ಗ್ರಾಮ್ ನಷ್ಟು ನಾರಿನಂಶ ಇರುತ್ತದೆ. 50 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಒಂದು ದಿನಕ್ಕೆ ಅವಶ್ಯವಿರುವ ನಾರಿನಂಶದ ಶೇ.24 ರಷ್ಟನ್ನು ಈ ಹಣ್ಣಿನ ಸೇವನೆಯಿಂದ ಪಡೆಯಬಹುದು. ಪ್ರಯಾಣದಲ್ಲಿರುವಾಗ ಸೇವಿಸಬಹುದಾದ ಚಿಕ್ಕ ತಿಂಡಿಯ ರೀತಿಯಲ್ಲಿ ಇವನ್ನು ತಿನ್ನಬಹುದು.

ಸೇಬು

ಸೇಬು

ಬಹಳ ಜನರಿಗೆ ಇಷ್ಟದ ಹಣ್ಣು ಸೇಬು. ಹೆಚ್ಚು ಪ್ರೊಟೀನ್ ಆಹಾರಗಳಾದ ಚೀಸ್ ಹಾಗೂ ಬಟರ್ ಗಳೊಂದಿಗೆ ಹೆಚ್ಚು ನಾರಿನಂಶ ಹೊಂದಿರುವ ಸೇಬು ಸೇವನೆ ಉತ್ತಮವಾಗಿದೆ. ಕೆಲ ಆರೋಗ್ಯಕರ ಬ್ಯಾಕ್ಟೀರಿಯಾಗಳು ಸಹ ಇದರಲ್ಲಿರುವುದರಿಂದ ಸೇಬಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಬೀಜದ ಹಣ್ಣುಗಳು

ಬೀಜದ ಹಣ್ಣುಗಳು

ಮಧ್ಯದಲ್ಲಿ ಬೀಜ ಹೊಂದಿರುವ ಹಣ್ಣುಗಳಾದ ನೆಕ್ಟರೈನ್, ಪ್ಲಮ್ ಹಾಗೂ ಪೀಚ್ ಗಳು ತಾಜಾ ಇರುವಾಗ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿರುತ್ತವೆ. ಹೀಗಾಗಿ ಇವು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು. ಆದರೆ ಇವು ಒಣಗಿದಾಗ ಗ್ಲಿಸೆಮಿಕ್ ಇಂಡೆಕ್ಸ್ ಹೆಚ್ಚಾಗುವುದರಿಂದ ಒಣಗಿದ ಹಣ್ಣು ಸೇವಿಸುವುದು ಸೂಕ್ತವಲ್ಲ.

Most Read: ಆಹಾರ ಪದಾರ್ಥಗಳಲ್ಲಿ 'ಈರುಳ್ಳಿ' ಹೆಚ್ಚಾಗಿ ಬಳಸಿದರೆ-ಟೈಪ್-2 ಮಧುಮೇಹ ನಿಯಂತ್ರಿಸಬಹುದು

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿ ತುಂಬಾ ಸಿಹಿಯಾಗಿರುತ್ತದೆ ಎಂದು ಅನೇಕರು ದ್ರಾಕ್ಷಿ ತಿನ್ನಲು ಹಿಂಜರಿಯುತ್ತಾರೆ. ಆದರೆ ಮೆದುಳಿನ ಸಮರ್ಪಕ ಕಾರ್ಯ ನಿರ್ವಹಣೆಗೆ ಅಗತ್ಯವಾದ ವಿಟಮಿನ್ ಬಿ೬ ಹಾಗೂ ಫೈಬರಗಳು ದ್ರಾಕ್ಷಿಯಲ್ಲಿ ಯಥೇಚ್ಛವಾಗಿರುತ್ತವೆ. ಕೇವಲ 15 ದ್ರಾಕ್ಷಿ ತಿಂದರೆ ಸಾಕು ದೇಹಕ್ಕೆ ಬೇಕಾದ ಕಾರ್ಬೋಹೈಡ್ರೇಟ್ಗಳು ಸಿಕ್ಕು ಬಿಡುತ್ತವೆ.

ಹಿತ ಮಿತವಾಗಿ ತಿನ್ನಬೇಕಾದ ಹಣ್ಣುಗಳು

ಹಿತ ಮಿತವಾಗಿ ತಿನ್ನಬೇಕಾದ ಹಣ್ಣುಗಳು

ಮೇಲೆ ತಿಳಿಸಲಾದ ಹಣ್ಣುಗಳ ಪಟ್ಟಿಯಲ್ಲಿರುವ ಯಾವುದೇ ಹಣ್ಣನ್ನು ಊಟದೊಂದಿಗೆ ಅಥವಾ ಹಾಗೆಯೇ ಬೇಕಾದಾಗಲೆಲ್ಲ ತಿನ್ನಬಹುದು. ಆದರೆ ಎಲ್ಲ ಹಣ್ಣುಗಳು ಹೀಗೆ ಅಲ್ಲ. ಕೆಲವು ಹಣ್ಣುಗಳಲ್ಲಿ ಗ್ಲಿಸೆಮಿಕ್ ಇಂಡೆಕ್ಸ್ ಹೆಚ್ಚಾಗಿದ್ದು, ಇವು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಆದರೆ ಇವು ಸಹ ಸಾಕಷ್ಟು ಉತ್ತಮ ಆರೋಗ್ಯಕರ ಅಂಶಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಇವುಗಳನ್ನು ಸ್ವಲ್ಪ ವಿಚಾರ ಮಾಡಿ ಸೇವಿಸುವುದು ಉತ್ತಮ. ಅಂಥ ಕೆಲವು ಹಣ್ಣುಗಳ ಪಟ್ಟಿ ಹೀಗಿದೆ

Most Read: ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೀಬೆಹಣ್ಣಿನ ಎಲೆಗಳು ನೆರವಾಗಲಿದೆ!

ಹಿತ ಮಿತವಾಗಿ ತಿನ್ನಬೇಕಾದ ಹಣ್ಣುಗಳು

ಹಿತ ಮಿತವಾಗಿ ತಿನ್ನಬೇಕಾದ ಹಣ್ಣುಗಳು

ಬಾಳೆಹಣ್ಣು

*ಪೈನಾಪಲ್

*ಮಾವು

*ಒಣಗಿದ ಹಣ್ಣುಗಳು (ಡ್ರೈ ಫ್ರೂಟ್ಸ್)

ಸಕ್ಕರೆ ಮಟ್ಟ ನಿಯಂತ್ರಿಸಲು ಈ ಹಣ್ಣುಗಳ ಸೇವನೆಯನ್ನು ಸಂಪೂರ್ಣ ನಿಲ್ಲಿಸಬೇಕೆಂದೇನೂ ಅಲ್ಲ. ವಿಭಿನ್ನ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನು ಪಡೆಯಲು ಸಾಧ್ಯ.

ಹಿತ ಮಿತವಾಗಿ ಸೇವಿಸುವುದು ಒಳ್ಳೆಯದು

ಹಿತ ಮಿತವಾಗಿ ಸೇವಿಸುವುದು ಒಳ್ಳೆಯದು

ಯಾವುದೇ ಹಣ್ಣಾದರೂ ಹಿತ ಮಿತವಾಗಿ ಹಾಗೂ ಅದನ್ನು ಯಾವ ಆಹಾರದೊಂದಿಗೆ ಸಮತೋಲನಗೊಳಿಸಿ ಸೇವಿಸಬೇಕೆಂದು ತಿಳಿದುಕೊಳ್ಳುವುದು ಮುಖ್ಯ. ಹೀಗೆ ಮಾಡಿದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾರ್ಬೊಹೈಡ್ರೇಟ್ ಶರೀರಕ್ಕೆ ಸೇರುವುದನ್ನು ತಪ್ಪಿಸಬಹುದು. ಅಂದರೆ ಹಣ್ಣುಗಳ ಹೊರತಾಗಿ ನೀವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ ಮಟ್ಟದ ಬಗ್ಗೆಯೂ ಗಮನವಿರಿಸಿದಂತಾಗುತ್ತದೆ. ಉದಾಹರಣೆಗೆ ನೋಡುವುದಾದರೆ, ಬೆಳಗಿನ ತಿಂಡಿಗೆ ಟೋಸ್ಟ್, ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಜ್ಯೂಸ್ ಕುಡಿದರೆ ಖಂಡಿತವಾಗಿಯೂ ದೇಹದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಏಕೆಂದರೆ ಈ ಎಲ್ಲ ಆಹಾರ ಪದಾರ್ಥಗಳೂ ಕಾರ್ಬೊಹೈಡ್ರೇಟಗಳಿಂದ ಸಮೃದ್ಧವಾಗಿವೆ.

ಪ್ರೋಟೀನ್‌ಯುಕ್ತ ಆಹಾರ

ಪ್ರೋಟೀನ್‌ಯುಕ್ತ ಆಹಾರ

ಇದರ ಬದಲಾಗಿ ಕೆಲ ಹೆಚ್ಚು ಪ್ರೋಟೀನ್‌ಯುಕ್ತ ತಿಂಡಿ, ಸಾದಾ ಮೊಸರು ಹಾಗೂ ಒಂದಿಷ್ಟು ಚೂರು ಪೈನಾಪಲ್ ಅಥವಾ ಮಾವಿನ ಹಣ್ಣು ಸೇವಿಸಬಹುದು. ಪೈನಾಪಲ್ ಹಾಗೂ ಮಾವಿನಲ್ಲಿ ಸಕ್ಕರೆ ಅಂಶ ಹೆಚ್ಚಿಸುವ ಗ್ಲಿಸೆಮಿಕ್ ಇಂಡೆಕ್ಸ್ ಹೆಚ್ಚಾಗಿದ್ದರೂ ಇದರ ಜೊತೆಗೆ ಸೇವಿಸುವ ಪ್ರೋಟೀನ್ ಪೌಡರ್ ಅಥವಾ ಸಾದಾ ಮೊಸರು ಸಕ್ಕರೆಯನ್ನು ನಿಯಂತ್ರಣದಲ್ಲಿರಿಸುತ್ತದೆ.

Most Read: ನೇರಳೆ ಹಣ್ಣು: ರುಚಿಗಷ್ಟೇ ಅಲ್ಲ, ಅನೇಕ ಕಾಯಿಲೆ ನಿವಾರಿಸುವ ಔಷಧಿಯೂ ಹೌದು!

ಹಣ್ಣುಗಳ ಜ್ಯೂಸ್ ಮಾಡಿ, ಹೆಚ್ಚಾಗಿ ಕುಡಿಯಿರಿ

ಹಣ್ಣುಗಳ ಜ್ಯೂಸ್ ಮಾಡಿ, ಹೆಚ್ಚಾಗಿ ಕುಡಿಯಿರಿ

ಹಣ್ಣುಗಳನ್ನು ನೇರವಾಗಿ ಸೇವಿಸುವ ಬದಲು ಅವನ್ನು ಜ್ಯೂಸ್ ಮಾಡಿ ಕುಡಿಯುವುದು ಕೆಲ ಬಾರಿ ದೇಹಕ್ಕೆ ಹಾನಿ ಉಂಟುಮಾಡಬಲ್ಲದು. ಹಣ್ಣಿನ ಜ್ಯೂಸ್ ವಿಟಮಿನ್, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುತ್ತದೆ. ಆದರೆ ಜ್ಯೂಸ್ ಮಾಡುವ ಪ್ರಕ್ರಿಯೆಯಲ್ಲಿ ಹಣ್ಣಿನ ನಾರಿನಂಶ ಸಂಪೂರ್ಣವಾಗಿ ತೆಗೆದುಹಾಕಲ್ಪಡುವುದರಿಂದ ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. ಅಂದರೆ ಒಂದು ಆರೆಂಜ್ ತಿನ್ನುವುದಕ್ಕೂ, ನಾಲ್ಕಾರು ಆರೆಂಜ್‌ಗಳಿಂದ ಮಾಡಿದ ಜ್ಯೂಸ್ ಕುಡಿಯುವುದಕ್ಕೂ ಬಹಳ ವ್ಯತ್ಯಾಸವಿದೆ.

ತರಕಾರಿ ಹಾಗೂ ಹಣ್ಣುಗಳ ಜ್ಯೂಸ್‌

ತರಕಾರಿ ಹಾಗೂ ಹಣ್ಣುಗಳ ಜ್ಯೂಸ್‌

ಒಂದೊಮ್ಮೆ ಜ್ಯೂಸ್ ಕುಡಿಯಲೇಬೇಕೆಂದಾದಲ್ಲಿ ತರಕಾರಿ ಹಾಗೂ ಹಣ್ಣುಗಳ ಜ್ಯೂಸ್‌ಗಳನ್ನು ಸಮತೋಲನದಲ್ಲಿ ಸೇವಿಸುವುದು ಉತ್ತಮ. ಸೇಬು, ಆರೆಂಜ್, ಸೌತೆಕಾಯಿ, ಬೀಟರೂಟ್, ಪಾಲಕ್ ಹೀಗೆ ಹಣ್ಣು ಹಾಗೂ ತರಕಾರಿಗಳ ಜ್ಯೂಸ್‌ಗಳನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು. ಅರ್ಧ ಕಪ್ ಜ್ಯೂಸ್ ಕುಡಿದರೆ ಸಾಕು ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲ ಅಷ್ಟರಲ್ಲಿ ಇರುತ್ತವೆ. ಜೊತೆಗೆ ಕುದಿಸಿದ ಮೊಟ್ಟೆ, ಮೊಳಕೆ ಕಾಳುಗಳನ್ನು ಜ್ಯೂಸ್ ಜೊತೆಗೆ ಸೇವಿಸಿದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಸಾಧ್ಯವಾಗುವುದು. ಬೆಳಗಿನ ತಿಂಡಿ ಅಥವಾ ಊಟವಾದ ಮೇಲೆ ಗ್ಲೂಕೋಮೀಟರ್ ಬಳಸಿ ನಿಮ್ಮ ಸಕ್ಕರೆಯ ಮಟ್ಟವನ್ನು ಆಗಾಗ ಪರೀಶೀಲಿಸುವುದು ಒಳ್ಳೆಯದು. ಇದರಿಂದ ಯಾವ ರೀತಿಯ ಆಹಾರ ಸೇವನೆ ನಿಮ್ಮ ದೇಹಕ್ಕೆ ಸೂಕ್ತ ಎಂಬುದು ನಿಮಗೇ ತಿಳಿಯಲಾರಂಭಿಸುತ್ತದೆ.

English summary

the best fruits when you have diabetes

While fruit does contain naturally-occurring sugars, it is also packed with valuable vitamins, minerals, and fiber that hold so many health benefits for the body. What’s more, not all fruit has the same sugar content: some are higher in sugar than others, and some have more fiber than others, which helps to reduce the impact of the sugar on your blood glucose levels. This makes fruit much better than processed foods or artificial sweeteners for curbing a sweet tooth.
X
Desktop Bottom Promotion