For Quick Alerts
ALLOW NOTIFICATIONS  
For Daily Alerts

ಮಧುಮೇಹ ಇರುವ ಪುರುಷರು ನಿಮಿರು ದೌರ್ಬಲ್ಯವನ್ನು ನಿಯಂತ್ರಿಸುವುದು ಹೇಗೆ?

|

ದೇಹವು ಆರೋಗ್ಯವಾಗಿದ್ದರೆ ಆಗ ಲೈಂಗಿಕ ಶಕ್ತಿಯು ಸುಸೂತ್ರವಾಗಿ ಇರುವುದು. ಲೈಂಗಿಕ ರೋಗಗಳು ಕಾಣಿಸಿಕೊಳ್ಳಲು ಆರಂಭಿಸಿದರೆ ಅದರಿಂದ ಸಂಬಂಧದ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುವುದು. ಹೀಗಾಗಿ ಲೈಂಗಿಕ ಆರೋಗ್ಯ ಕೂಡ ಮನುಷ್ಯನಿಗೆ ಅತೀ ಮುಖ್ಯವಾಗಿರುವುದು. ಲೈಂಗಿಕ ಆರೋಗ್ಯವನ್ನು ಕಾಪಾಡಲು ದೈಹಿಕ ಆರೋಗ್ಯವು ಸರಿಯಾಗಿರಬೇಕು. ಅದರಲ್ಲೂ ಮಧುಮೇಹದಂತಹ ಕಾಯಿಲೆಯು ದೇಹವನ್ನು ಒಗ್ಗಿಕೊಂಡರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಇದು ದೇಹವನ್ನು ಹಿಂಡಿಹಿಪ್ಪೆ ಮಾಡುವ ಜತೆಗೆ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಮಧುಮೇಹದಿಂದಾಗಿ ನಿಮಿರು ದೌರ್ಜಲ್ಯ ಅಥವಾ ನಪುಂಸಕತೆಯು ಕಾಣಿಸಿಕೊಳ್ಳುವುದು. ಅದರಲ್ಲೂ ಮಧುಮೇಹವನ್ನು ನಿಯಂತ್ರಿಸದೆ ಇದ್ದರೆ ಆಗ ಈ ಸಮಸ್ಯೆಯು ಅತಿಯಾಗುವುದು. ನಿಮಿರು ದೌರ್ಬಲ್ಯವೆಂದರೆ ಲೈಂಗಿಕ ಕ್ರಿಯೆ ನಡೆಸಲು ಬೇಕಾಗಿರುವಂತಹ ನಿಮಿರುವಿಕೆ ಆಗದೆ ಇರುವುದು. ಕೆಲವು ಪುರುಷರಲ್ಲಿ ಸಣ್ಣ ಅವಧಿಗೆ ನಿಮಿರು ದೌರ್ಬಲ್ಯ ಸಮಸ್ಯೆಯು ಕಾಣಿಸುವುದು. ಆದರೆ ಇನ್ನು ಕೆಲವರಲ್ಲಿ ಇದು ದೀರ್ಘಕಾಲ ತನಕ ಮುಂದುವರಿಯುವುದು.

ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ

ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ

*ನಿಮಿರು ದೌರ್ಬಲ್ಯ ಉಂಟಾಗಲು ಕೆಲವೊಂದು ಕಾರಣಗಳು

*ನಿಮಿರು ದೌರ್ಬಲ್ಯವು ಕೆಲವೊಂದು ದೈಹಿಕ ಹಾಗೂ ಮಾನಸಿಕ ಕಾರಣಗಳಿಂದಾಗಿ ಉಂಟಾಗಬಹುದು. ಅವುಗಳು ಯಾವುದೆಂದರೆ

*ಒತ್ತಡ, ಆತಂಕ ಮತ್ತು ಭೀತಿ

*ಸಂಬಂಧದಲ್ಲಿನ ಸಮಸ್ಯೆ

*ಕೆಟ್ಟ ಆರೋಗ್ಯ

*ಅತಿಯಾಗಿ ಆಲ್ಕೋಹಾಲ್ ಸೇವನೆ

*ಧೂಮಪಾನ ಮಾಡುವುದು

Most Read: ಪುರುಷರ ನಿಮಿರು ದೌರ್ಬಲ್ಯ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

ಪುರುಷ ಹಾರ್ಮೋನು ಟೆಸ್ಟೊಸ್ಟೆರಾನ್ ಮಟ್ಟವು ಕುಗ್ಗಿರುವುದು

ಪುರುಷ ಹಾರ್ಮೋನು ಟೆಸ್ಟೊಸ್ಟೆರಾನ್ ಮಟ್ಟವು ಕುಗ್ಗಿರುವುದು

ದೈಹಿಕ ನಿಮಿರು ದೌರ್ಬಲ್ಯವು ಕೆಲವು ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಸಂಭವಿಸಬಹುದು ಮತ್ತು ಇದರ ಬಳಿಕ ಅದು ತನ್ನ ಕಾರ್ಯನಿರ್ವಹಿಸುವುದನ್ನು ಬಿಡುವುದು. ನಿಮಿರು ದೌರ್ಬಲ್ಯವು ಹೆಚ್ಚಾಗಿ ರಾತ್ರಿ ಮತ್ತು ಬೆಳಗ್ಗಿನ ವೇಳೆ ಮಾತ್ರ ನಡೆಯುತ್ತಲಿದ್ದರೆ ಆಗ ಇದನ್ನು ಮಾನಸಿಕ ಸಮಸ್ಯೆ ಎಂದು ಪರಿಗಣಿಸಬಹುದು.

ಮಧುಮೇಹ ಮತ್ತು ನಿಮಿರು ದೌರ್ಬಲ್ಯದ ನಡುವಿನ ಸಂಬಂಧ

ಮಧುಮೇಹ ಮತ್ತು ನಿಮಿರು ದೌರ್ಬಲ್ಯದ ನಡುವಿನ ಸಂಬಂಧ

ಮಧುಮೇಹಿಗಳು ಹೆಚ್ಚಾಗಿ ನಿಮಿರು ದೌರ್ಬಲ್ಯದ ಸಮಸ್ಯೆಗೆ ಯಾಕೆ ತುತ್ತಾಗುತ್ತಾರೆ ಎನ್ನುವುದು ಇದುವರೆಗೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಅದಾಗ್ಯೂ, ಮಧುಮೇಹಿಗಳು ತಮ್ಮ ಮಧುಮೇಹವನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಇದ್ದರೆ ಆಗ ನಿಮಿರು ದೌರ್ಬಲ್ಯವು ಕಾಣಿಸುವುದು. ದೀರ್ಘಕಾಲದ ತನಕ ಮಧುಮೇಹವನ್ನು ನಿಯಂತ್ರಿಸದೆ ಇದ್ದರೆ ಆಗ ನರಗಳಿಗೆ ಹಾನಿಯಾಗುವುದು ಮತ್ತು ಜನನೇಂದ್ರೀಯಗಳಿಗೆ ಆಗುವ ರಕ್ತಸಂಚಾರದ ಮೇಲೆ ಇದರಿಂದ ಪರಿಣಾಮವಾಗುವುದು. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ಇಟ್ಟುಕೊಂಡರೆ ಆಗ ಈ ಸಮಸ್ಯೆಯು ಬರುವಂತಹ ಅವಕಾಶವು ಕಡಿಮೆಯಾಗುವುದು.

ನಿಮಿರು ದೌರ್ಬಲ್ಯ ಪತ್ತೆ ಹಚ್ಚುವುದು ಹೇಗೆ?

ನಿಮಿರು ದೌರ್ಬಲ್ಯ ಪತ್ತೆ ಹಚ್ಚುವುದು ಹೇಗೆ?

ಯಾವ ಕಾರಣದಿಂದಾಗಿ ನಿಮಿರು ದೌರ್ಬಲ್ಯ ಬಂದಿದೆ ಎನ್ನುವುದನ್ನು ಕಂಡು ಹಿಡಿದು ಬಳಿಕ ಚಿಕಿತ್ಸೆ ನೀಡಬೇಕು. ವೈದ್ಯರೊಂದಿಗೆ ನಿಮ್ಮ ಸಮಸ್ಯೆಯನ್ನು ಚರ್ಚಿಸುವುದು ಅತೀ ಅಗತ್ಯವಾಗಿರುವುದು. ಇದು ದೈಹಿಕ ಅಥವಾ ಮಾನಸಿಕ ಕಾರಣಗಳಿಂದಾಗಿ ಬಂದಿದೆಯಾ ಎಂದು ತಿಳಿಯಲು ನೀವು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೂಡ ನೀಡಬೇಕಾಗಿ ಬರಬಹುದು. ಜನನೇಂದ್ರೀಯಗಳಿಗೆ ರಕ್ತ ಸಂಚಾರ ಆಗುವಲ್ಲಿ ಪರಿಣಾಮ ಬೀರಿದ್ದರೆ ಆಗ ಕೆಲವೊಂದು ಪರೀಕ್ಷೆಗಳನ್ನು ಮಾಡಿಕೊಳ್ಳಬೇಕು. ರಕ್ತ ಪರೀಕ್ಷೆಯಿಂದ ನಿಮಿರು ದೌರ್ಬಲ್ಯಕ್ಕೆ ಹಾರ್ಮೋನು ಸಮಸ್ಯೆ ಕಾರಣವೇ ಎಂದು ತಿಳಿಯಬಹುದು.

Most Read: ಶೀಘ್ರ ಸ್ಖಲನ ಬಗ್ಗೆ ಇರುವಂತಹ ಸತ್ಯ ಹಾಗೂ ಸುಳ್ಳುಗಳು-ಇವೆಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆಗಳು

ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆಗಳು

ನಿಮಿರು ದೌರ್ಬಲ್ಯಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ನಿಮ್ಮ ಚಿಕಿತ್ಸೆ ಬಗ್ಗೆ ವೈಧ್ಯರೊಂದಿಗೆ ಮಾತನಾಡಿಕೊಳ್ಳಿ. ನಿಮಿರು ದೌರ್ಬಲ್ಯವು ಯಾವುದರಿಂದ ಆಗುತ್ತಿದೆ ಎನ್ನುವುದರ ಮೇಲೆ ಚಿಕಿತ್ಸೆಯು ಅವಲಂಬಿತವಾಗಿದೆ. ಅದರಲ್ಲಿ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಮಾನಸಿಕ ಕಾರಣಗಳು

ಮಾನಸಿಕ ಕಾರಣಗಳು

ಇದರಿಂದ ಒತ್ತಡ ನಿವಾರಣೆ ಮಾಡಲು ನೆರವಾಗುವುದು. ನಡವಳಿಕೆ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಇಲ್ಲಿ ತುಂಬಾ ಪರಿಣಾಮ ಕಾರಿಯಾಗುವುದು. ಇದರಲ್ಲಿ ನಿಮ್ಮ ಸಂಗಾತಿಯು ಕೂಡ ಒಳಗೊಂಡಿದ್ದರೆ ಅದು ಪರಿಣಾಮಕಾರಿ.

ದೈಹಿಕ ಕಾರಣಗಳು

ದೈಹಿಕ ಕಾರಣಗಳು

ಇಲ್ಲಿ ಕೆಲವು ಸಾಧ್ಯತೆಯ ಚಿಕಿತ್ಸೆಗಳು ಇವೆ. ದೈಹಿಕ ಕಾರಣಗಳನ್ನು ತಿಳಿದುಕೊಂಡ ಬಳಿಕ ಚಿಕಿತ್ಸೆ ನೀಡಲಾಗುವುದು. ನರಕ್ಕೆ ಆಗಿರುವ ಹಾನಿ ಅಥವಾ ರಕ್ತ ಸರಬರಾಜು ಸರಿಯಾಗಿ ಆಗದೆ ಇರುವ ಕಾರಣದಿಂದಾಗಿ ಹೀಗೆ ಆಗುತ್ತಲಿದ್ದರೆ ಆಗ ಔಷಧಿ, ವ್ಯಾಕ್ಯೂಮ್ ಯಂತ್ರ ಮತ್ತು ಶಸ್ತ್ರಚಿಕಿತ್ಸೆಯು ಇದಕ್ಕೆ ಪರಿಹಾರವಾಗಿದೆ.

ರಕ್ತದಲ್ಲಿನ ಅತಿಯಾದ ಸಕ್ಕರೆ ಮಟ್ಟ ಕಾರಣವೇ?

ರಕ್ತದಲ್ಲಿನ ಅತಿಯಾದ ಸಕ್ಕರೆ ಮಟ್ಟ ಕಾರಣವೇ?

ರಕ್ತದಲ್ಲಿನ ಅತಿಯಾದ ಸಕ್ಕರೆ ಮಟ್ಟದಿಂದ ಅಸಾಮಾನ್ಯ ನಿಮಿರುವಿಕೆ ಉಂಟಾಗುತ್ತದೆಯಾ ಎಂದು ಪ್ರಶ್ನೆಗಳು ಮೂಡುತ್ತವೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ಮತ್ತು ಅಸಾಮಾನ್ಯ ನಿಮಿರುವಿಕೆಗೆ ನಡುವೆ ಯಾವ ಸಂಬಂಧವಿದೆ ಎಂದು ತಿಳಿದುಕೊಳ್ಳಲು ಬೋಲ್ಡ್ ಸ್ಕೈ ಈ ಲೇಖನವನ್ನು ಪ್ರಸ್ತುತಪಡಿಸುತ್ತಿದೆ.... ಪುರುಷನಿಗೆ ನಿಮಿರುವಿಕೆ ಆಗಬೇಕಾದರೆ ರಕ್ತನಾಳ, ಪುರುಷರ ಹಾರ್ಮೋನು ಆರೋಗ್ಯವಾಗಿರಬೇಕು ಮತ್ತು ಲೈಂಗಿಕವಾಗಿ ಉತ್ತೇಜನಗೊಳ್ಳುವ ಆಕಾಂಕ್ಷೆಯಿರಬೇಕು.

Most Read: ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳು ಸಂಪೂರ್ಣ ಸೆಕ್ಸ್ ಸುಖ ಅನುಭವಿಸಲು ಹೀಗೆ ಮಾಡಿ

ಮಧುಮೇಹ ಹೇಗೆ ಪರಿಣಾಮ ಬೀರುವುದು

ಮಧುಮೇಹ ಹೇಗೆ ಪರಿಣಾಮ ಬೀರುವುದು

ನಿಮಿರುವಿಕೆಗೆ ಕಾರಣವಾಗುವಂತಹ ರಕ್ತನಾಳ ಮತ್ತು ನರಗಳ ಮೇಲೆ ಮಧುಮೇಹವು ಪರಿಣಾಮ ಬೀರುತ್ತದೆ. ಪುರುಷರ ಹಾರ್ಮೋನು ಸರಿಯಾದ ಪ್ರಮಾಣದಲ್ಲಿದ್ದು, ಲೈಂಗಿಕ ಉತ್ತೇಜನಕ್ಕೆ ಆಕಾಂಕ್ಷೆಯಿದ್ದರೂ ನಿಮಿರುವಿಕೆ ಉಂಟಾಗಲು ಸಾಧ್ಯವಾಗುವುದಿಲ್ಲ. ಮಧುಮೇಹ ನಿಮಿರುವಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಾ ಎನ್ನುವುದಕ್ಕೆ ಉತ್ತರ ಸಿಕ್ಕಂತಾಗಿದೆ.

ಇದರ ಅಪಾಯ ತಗ್ಗಿಸುವುದು ಹೇಗೆ?

ಇದರ ಅಪಾಯ ತಗ್ಗಿಸುವುದು ಹೇಗೆ?

ವಾರದಲ್ಲಿ ಮೂರು ದಿನ ದ್ವಿದಳ ಧಾನ್ಯಗಳನ್ನು ತಿಂದರೆ ಮಧುಮೇಹದ ಸಮಸ್ಯೆಯು ಶೇ. 35ರಷ್ಟು ಕಡಿಮೆಯಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗದಂತೆ ನಾರಿನಾಂಶವು ನೆರವಾಗುವುದು. ಇದರಿಂದ ನಿಮಿರುವಿಕೆ ಅಸಾಮಾನ್ಯ ಕ್ರಿಯೆಯನ್ನು ತಡೆಯಬಹುದು.

ಪಾಲಕ್ ಸೊಪ್ಪು ಹೆಚ್ಚಾಗಿ ಸೇವಿಸಿ

ಪಾಲಕ್ ಸೊಪ್ಪು ಹೆಚ್ಚಾಗಿ ಸೇವಿಸಿ

ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

ಏಲಕ್ಕಿ

ಏಲಕ್ಕಿ

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಏಲಕ್ಕಿಯೂ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

ದಾಳಿಂಬೆ

ದಾಳಿಂಬೆ

ಇದರಲ್ಲಿ ಹಲವಾರು ಕಾರಣಗಳಿಂದ ಸೂಪರ್ ಫುಡ್ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಇದರಲ್ಲಿ ಸಮೃದ್ಧವಾದ ಖನಿಜಾಂಶಗಳು ಮತ್ತು ವಿಟಮಿನ್‍ಗಳು ಇದ್ದು, ಪ್ರಾಕೃತಿಕವಾಗಿ ನಿರ್ವೀರ್ಯತೆಯನ್ನು ಹೋಗಲಾಡಿಸುತ್ತದೆ. ದಾಳಿಂಬೆಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡೆಂಟ್‍ಗಳು ಪುರುಷರಲ್ಲಿ ವೀರ್ಯಗಳು ವೃದ್ಧಿಯಾಗುವಂತೆ ಮಾಡುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಲಿಂಗ ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬಾಳೆಹಣ್ಣುಗಳಲ್ಲಿ ಬ್ರೊಮೆಲೈನ್ ಎಂಬ ಎನ್‍ಜೈಮ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಸೆಕ್ಸ್ ಹಾರ್ಮೊನುಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ಖಚಿತಪಡಿಸಿದೆ. ಇದರ ಜೊತೆಗೆ ಬಾಳೆಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಬಿ1 ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಗಂಡಸರಲ್ಲಿ ಸಾಮರ್ಥ್ಯವನ್ನು ತುಂಬುವುದರ ಜೊತೆಗೆ, ಲೈಂಗಿಕಾಸಕ್ತಿಯನ್ನು ಸಹ ಹೆಚ್ಚಿಸುತ್ತದೆ.

English summary

How can diabetic men control erectile dysfunction?

Men with diabetes are at a higher risk of erectile dysfunction or impotence, especially if their diabetes is not well controlled. Erectile dysfunction means you cannot have an erection that is sufficient to perform sexual intercourse. Many men experience short-term episodes of erectile dysfunction but, for about one in 10 men, the problem may continue.See your doctor if you notice any failure to achieve an erection.
X
Desktop Bottom Promotion