For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆಗಳಿವೆಯೇ?

|

ಮಧುಮೇಹ ಬಂತೆಂದರೆ ಸಾಕು, ಆಗ ಆಹಾರದಲ್ಲೂ ಹಲವಾರು ಪಥ್ಯ ಮಾಡಿಕೊಂಡು ಹೋಗಬೇಕು. ವೈದ್ಯರು ಕೆಲವೊಂದು ಆಹಾರ ಪದ್ಧತಿ ಬಗ್ಗೆ ಸೂಚಿಸುತ್ತಾರೆ. ಇದನ್ನು ಪಾಲಿಸಿಕೊಂಡು ಹೋದರೆ ಆಗ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕೆಲವರಿಗೆ ತಮ್ಮಿಷ್ಟದ ಆಹಾರವನ್ನು ಈ ವೇಳೆ ತಿನ್ನಲು ಆಗಲ್ಲ. ಇದು ಮನಸ್ಸಿಗೆ ತುಂಬಾ ನೋವುಂಟು ಮಾಡುವುದು. ಅದರಲ್ಲೂ ಕೆಲವರಿಗೆ ಮಾಂಸಾಹಾರ ತುಂಬಾ ಇಷ್ಟವಾಗಿರುವುದು.

ಆದರೆ ಇದನ್ನು ಇತಿಮಿತಿಯಲ್ಲಿ ಸೇವನೆ ಮಾಡಬೇಕು. ಮೊಟ್ಟೆ ಎನ್ನುವುದು ಹೆಚ್ಚಾಗಿ ನಾವು ಬಳಸಲ್ಪಡುವಂತಹ ಮಾಂಸಾಹಾರವಾಗಿದೆ. ಇದು ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯ ಕೂಡ. ತೂಕ ಕಳೆದುಕೊಳ್ಳಬೇಕು ಎಂದರೆ ಮೊಟ್ಟೆಯ ಸೇವನೆ ಮಾಡಬಹುದು. ಯಾಕೆಂದರೆ ಇದರಲ್ಲಿ ಕಡಿಮೆ ಕಾರ್ಬ್ಸ್ ಇದೆ ಮತ್ತು ಉನ್ನತ ಮಟ್ಟದ ಪ್ರೋಟೀನ್ ಇದೆ. ಮಧುಮೇಹ ಇರುವವರು ಮೊಟ್ಟೆಯನ್ನು ತಿನ್ನಬಾರದು ಎನ್ನುವ ಮಾತಿದೆ. ಅದೇ ರೀತಿಯಾಗಿ ಹೃದಯದ ಕಾಯಿಲೆ ಇರುವಂತಹ ಜನರು ಕೂಡ ಮೊಟ್ಟೆ ಸೇವಿಸಬಾರದು ಎಂದು ಹೇಳುತ್ತಾರೆ.

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಮೊಟ್ಟೆಯಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಇದೆ. ಅದಾಗ್ಯೂ, ಮೊಟ್ಟೆಯ ಬಗ್ಗೆ ಇದ್ದ ಇಂತಹ ವಿಚಾರಗಳು ಈಗ ಸಂಪೂರ್ಣವಾಗಿ ಬದಲಾಗಿದೆ. ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ ಮೊಟ್ಟೆಯನ್ನು ಮಧುಮೇಹಿಗಳ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು ಎಂದು ಸಲಹೆ ನೀಡಲಾಗುತ್ತದೆ. ಮೊಟ್ಟೆ ಸೇವನೆ ಮಾಡುವುದರಿಂದಾಗಿ ಅಪಧಮನಿ ಕಾಯಿಲೆಯನ್ನು ದೂರವಿಡಬಹುದು ಮತ್ತು ದೇಹದ ತೂಕ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು. ದೇಹದ ತೂಕವು ಮಧುಮೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜರ್ನಲ್ ಹಾರ್ಟ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ ಮೊಟ್ಟೆಯು ಆಹಾರದಲ್ಲಿನ ಕೊಲೆಸ್ಟ್ರಾಲ್ ನ ಪ್ರಮುಖ ಮೂಲವಾಗಿದೆ. ಆಹಾರದ ಕೊಲೆಸ್ಟ್ರಾಲ್ (ಆಹಾರದಿಂದ ಪಡೆಯುವಂತಹ) ವ್ಯಕ್ತಿಯ ರಕ್ತದ ಒಟ್ಟು ಕೊಲೆಸ್ಟ್ರಾಲ್ ಗಣತಿಯಗಿಂತಲೂ ಕಡಿಮೆ ಇರುವುದು. ಸೇವಿಸುವ ಆಹಾರದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಗಿಂತಲೂ ಆ ವ್ಯಕ್ತಿಯ ಕೌಟುಂಬಿಕ ಇತಿಹಾಸವು ಇಲ್ಲಿ ಮುಖ್ಯ ಪಾತ್ರ ವಹಿಸುವುದು.

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಮೊಟ್ಟೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇರುವ ಕಾರಣದಿಂದಾಗಿ ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಮೊಟ್ಟೆಯು ಅನಾರೋಗ್ಯಕರ ಹಸಿವಾಗುವುದನ್ನು ತಡೆಯುವುದು ಮತ್ತು ಮಧುಮೇಹ ಇರುವಂತಹ ಜನರಲ್ಲಿ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುವುದು. ಇದರೊಂದಿಗೆ ಮಧುಮೇಹವು ಹದ್ದುಬಸ್ತಿನಲ್ಲಿ ಇರುವುದು. ಯುನೈಟೆಡ್ ಸ್ಟೇಟ್ ಡಿಪಾರ್ಟ್ ಮೆಂಟ್ ಆಫ್ ಅರ್ಗಿಕಲ್ಚರ್(ಯುಎಸ್ ಡಿಎ) ಹೇಳಿರುವ ಪ್ರಕಾರ ಪ್ರತೀ ನೂರು ಗ್ರಾಂ ಮೊಟ್ಟೆಯಲ್ಲಿ ಸುಮಾರು 12.56 ಗ್ರಾಂನಷ್ಟು ಪ್ರೋಟೀನ ಇದೆ. ಪೋಷಕಾಂಶ ತಜ್ಞರು ಇದನ್ನು ತುಂಬಾ ಒಳ್ಳೆಯದು ಹಾಗೂ ತುಂಬಾ ಅಗ್ಗದಲ್ಲಿ ಸಿಗುವಂತಹ ಪ್ರೋಟೀನ್ ಆಗಿದೆ ಎಂದು ಹೇಳಿರುವರು. ಇದನ್ನು ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಬಹುದು. ಇದು ಸ್ವಲ್ಪ ಪ್ರಮಾಣದಲ್ಲಿ ಕ್ಯಾಲರಿ ಮತ್ತು ಕೊಬ್ಬನ್ನು ಕೂಡ ನೀಡುವುದು. ಇದರಿಂದಾಗಿ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಆರೋಗ್ಯ ತಜ್ಞರು ಮತ್ತು ಕೆಲವೊಂದು ಪೋಷಕಾಂಶ ತಜ್ಞರ ಪ್ರಕಾರ

ಮೊಟ್ಟೆಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ವಿಟಮಿನ್ ಎ, ಬಿ2, ಡಿ ಮತ್ತು ಇ ಇದೆ. ಮೊಟ್ಟೆಯ ಲೋಳೆಯಲ್ಲಿ ಬಿಯೋಟಿನ್ ಇದೆ. ಇದರಿಂದಾಗಿ ಕೂದಲು, ಚರ್ಮ ಮತ್ತು ಉಗುರಿನ ಆರೋಗ್ಯವು ಸುಧಾರಣೆಯಾಗುವುದು. ಅದೇ ರೀತಿಯಾಗಿ ಇನ್ಸುಲಿನ್ ಕೂಡ ಉತ್ಪತ್ತಿಯಾಗುವುದು. ಸಾವಯವವಾಗಿ ಪಡೆಯುವಂತಹ ಮೊಟ್ಟೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಇರುವುದು. ಇದು ಮಧುಮೇಹಿಗಳಿಗೆ ತುಂಬಾ ಲಾಭಕಾರಿಯಾಗಿರುವಂತಹ ಕೊಬ್ಬು ಆಗಿರುವುದು. ಒಂದು ದೊಡ್ಡ ಮೊಟ್ಟೆ(50 ಗ್ರಾಂ)ಯಲ್ಲಿ ಸುಮಾರು 72 ಕ್ಯಾಲರಿ ಮತ್ತು 4.75 ಗ್ರಾಂ.ನಷ್ಟು ಕೊಬ್ಬು ಇದ್ದು, ಕೇವಲ 1.5 ಗ್ರಾಂ.ನಷ್ಟು ಮಾತ್ರ ಸಂಸ್ಕರಿಸಲ್ಪಟ್ಟಿ ರುವಂತಹ ಕೊಬ್ಬು ಇದೆ ಎಂದು ಯುಎಸ್ ಡಿಎ ಹೇಳಿದೆ. ಮೊಟ್ಟೆಯು ತುಂಬಾ ವೈವಿಧ್ಯಮಯ ಆಹಾರವಾಗಿದ್ದು, ಇದನ್ನು ಹಲವಾರು ವಿಧಾನಗಳಿಂದ ತಯಾರಿಸಿಕೊಳ್ಳಬಹುದು. ಮೊಟ್ಟೆಗೆ ಟೊಮೆಟೊ, ಈರುಳ್ಳಿ ಮತ್ತು ಇತರ ಕೆಲವು ತರಕಾರಿಗಳನ್ನು ಸೇರಿಸಿಕೊಂಡು ತುಂಬಾ ಆರೋಗ್ಯಕರವಾದ ಆಮ್ಲೇಟ್ ಮಾಡಬಹುದು. ಮಧುಮೇಹಿಗಳು ಮಾಡಿಕೊಳ್ಳಬಹುದಾದ ಕೆಲವೊಂದು ಮೊಟ್ಟೆಯ ಖಾದ್ಯಗಳನ್ನು ನಾವು ಇಲ್ಲಿ ನಿಮಗಾಗಿ ನೀಡಿದ್ದೇವೆ.

ಇದು ಮೂಳೆಗಳಿಗೆ ತುಂಬಾ ಒಳ್ಳೆಯದು

ಇದು ಮೂಳೆಗಳಿಗೆ ತುಂಬಾ ಒಳ್ಳೆಯದು

ಮೊಟ್ಟೆಯಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಮೂಳೆಗಳು ಬಲಿಷ್ಠಗೊಳ್ಳಲು ಅತೀ ಅಗತ್ಯವಾಗಿರುವುದು. ಇದರೊಂದಿಗೆ ಇದರಲ್ಲಿ ಅಧಿಕ ಮಟ್ಟದ ಫೋಸ್ಪರಸ್ ಕೂಡ ಇದೆ. ಈ ಎರಡರ ಸಮ್ಮಿಶ್ರಣದಿಂದಾಗಿ ದೇಹವು ಆರೋಗ್ಯಕರ ಮೂಳೆಗಳು ಹಾಗೂ ಹಲ್ಲುಗಳನ್ನು ನಿರ್ಮಿಸಲು ನೆರವಾಗುವುದು.

ಆ್ಯಂಟಿಆಕ್ಸಿಡೆಂಟ್ ಮೂಲ

ಆ್ಯಂಟಿಆಕ್ಸಿಡೆಂಟ್ ಮೂಲ

ಮೊಟ್ಟೆಯಲ್ಲಿ ತುಂಬಾ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳಾಗಿರುವಂತಹ ಲ್ಯುಟೆಯಿನ್ ಮತ್ತು ಜೀಕ್ಸಾಂಥಿನ್ ಇದೆ. ಇದು ಅಕ್ಷಿಪಟಲದ ಅವನತಿ ಮತ್ತು ಟ್ರಿಪ್ಟೊಫಾನ್ ನಿಂದ ಕಣ್ಣುಗಳನ್ನು ರಕ್ಷಿಸಲು ತುಂಬಾ ನೆರವಾಗುವುದು.

ತೂಕ ಇಳಿಸಿಕೊಳ್ಳಲು ನೆರವಾಗುವುದು

ತೂಕ ಇಳಿಸಿಕೊಳ್ಳಲು ನೆರವಾಗುವುದು

ಪ್ರೋಟೀನ್ ನ ಸಮೃದ್ಧ ಮೂಲವಾಗಿರುವಂತಹ ಮೊಟ್ಟೆಯು ತೂಕ ಕಳೆದುಕೊಳ್ಳಲು ತುಂಬಾ ನೆರವಾಗುವುದು. ಇದರಿಂದಾಗಿ ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಮರೆಯಬೇಡಿ.

ಮೊಟ್ಟೆಯಲ್ಲಿ ಕ್ಯಾಲರಿ ಕಡಿಮೆ ಇದೆ

ಮೊಟ್ಟೆಯಲ್ಲಿ ಕ್ಯಾಲರಿ ಕಡಿಮೆ ಇದೆ

ಮೊಟ್ಟೆಯಲ್ಲಿ ಕ್ಯಾಲರಿಯು ತುಂಬಾ ಕಡಿಮೆ ಪ್ರಮಾಣದಲ್ಲಿ ಯುಎಸ್ ಡಿಎ ಹೇಳಿರುವ ಪ್ರಕಾರವಾಗಿ ಇದರಲ್ಲಿ ಕೇವಲ 78 ಕ್ಯಾಲರಿ ಇದೆ. ನೀವು ಮೊಟ್ಟೆಯನ್ನು ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಸೇರಿಸಿಕೊಳ್ಳಬಹುದು. ಇದರಿಂದ ಯಾವುದೇ ಸಮಸ್ಯೆಯಿಲ್ಲ.

ಅಂತಿಮ ನಿರ್ಣಯ

ಅಂತಿಮ ನಿರ್ಣಯ

ಮೊಟ್ಟೆಯು ಆರೋಗ್ಯಕಾರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದನ್ನು ತುಂಬಾ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಮಧುಮೇಹಿಗಳು ಬೆಳಗ್ಗಿನ ಉಪಾಹಾರಕ್ಕೆ ಒಂದು ಮೊಟ್ಟೆ ಸೇವನೆ ಮಾಡಬಹುದು. ಅದಾಗ್ಯೂ, ಮೊಟ್ಟೆಯ ಬಿಳಿ ಭಾಗವನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಳದಿ ಭಾಗದಲ್ಲಿ ಎಲ್ಲಾ ಕೊಲೆಸ್ಟ್ರಾಲ್ ತುಂಬಿರುವ ಕಾರಣದಿಂದಾಗಿ ಬಿಳಿ ಭಾಗವನ್ನು ನೀವು ಯಾವುದೇ ಚಿಂತೆ ಮಾಡದೆ ಸೇವನೆ ಮಾಡಬಹುದು. ಇದು ನಿಮ್ಮ ದೈನಂದಿನ ಕೊಲೆಸ್ಟ್ರಾಲ್ ಸೇವನೆ ಮೇಲೆ ಯಾವುದೇ ಪರಿಣಾಮ ಬೀರದು. ಮಧುಮೇಹಿಗಳು ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರನ್ನು ಭೇಟಿ ಮಾಡಿ, ಅವರಿಂದ ಸಲಹೆ ಪಡೆಯಿರಿ.

English summary

Eggs For Diabetes: Can You Eat Eggs If You Are A Diabetic?

Eggs are perfect for breakfast and are hugely popular. If you are looking to lose weight, you can bring eggs to your rescue as they are low in carbs and are an excellent source of high-quality protein. If we go back in time, eggs used to have a bad reputation, especially among diabetics and people with heart ailments as they were considered to be too high in cholesterol. However, a lot has changed since then.
X
Desktop Bottom Promotion