For Quick Alerts
ALLOW NOTIFICATIONS  
For Daily Alerts

ಮಧುಮೇಹದಿಂದ ದೇಹಕ್ಕೆ ಆಗುವ ಅಡ್ಡಪರಿಣಾಮಗಳು

|

ಮಧುಮೇಹ ಬಂದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು. ದೇಹವು ರಕ್ತದಲ್ಲಿನ ಸಕ್ಕರೆ ಮತ್ತು ಗ್ಲೂಕೋಸ್ ಅಂಶವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುವುದು ಎನ್ನುವುದೇ ಮಧುಮೇಹ ಎನ್ನಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತಿಯಾಗಿ ಹೆಚ್ಚಿಸಬಹುದು. ಇದರಿಂದಾಗಿ ಕಣ್ಣು, ಹೃದಯ, ಕಿಡ್ನಿ, ನರಗಳು, ಜೀರ್ಣಕ್ರಿಯೆ ವ್ಯವಸ್ಥೆ, ಒಸಡು ಮತ್ತು ಹಲ್ಲುಗಳ ಮೇಲೆ ಪರಿಣಾಮ ಉಂಟಾಗಬಹುದು.

ಯಾವ ರೀತಿಯ ಮಧುಮೇಹ ಎನ್ನುವುದರ ಮೇಲೆ ಇದಕ್ಕೆ ಕಾರಣಗಳನ್ನು ಹೇಳಬಹುದು. ದೀರ್ಘಕಾಲದ ಮಧುಮೇಹದಲ್ಲಿ ಟೈಪ್ 1 ಟೈಪ್ 2 ಮಧುಮೇಹ ಮತ್ತು ಮಧುಮೇಹ ಪೂರ್ವ ಎಂದು ಕರೆಯಬಹುದಾಗಿದೆ. ಮಧುಮೇಹದ ಕೆಲವೊಂದು ಲಕ್ಷಣಗಳು ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಅನಿಯಮಿತ ತೂಕ ಕಳೆದುಕೊಳ್ಳುವುದು, ಅತಿಯಾದ ಹಸಿವು, ನಿಶ್ಯಕ್ತಿ, ಕಿರಿಕಿರಿ, ದೃಷ್ಟಿ ಮಂದವಾಗುವುದು ಮತ್ತು ಒಸಡು, ಚರ್ಮ ಮತ್ತು ಯೋನಿಯಲ್ಲಿ ಸೋಂಕು ಕಾಣಿಸುವುದು. ಮಧುಮೇಹದಿಂದ ದೇಹಕ್ಕೆ ದೀರ್ಘಕಾಲಿಕ ಹಾನಿಯು ಉಂಟಾಗುವುದು. ಈ ಲೇಖನದಲ್ಲಿ ಆ ಬಗ್ಗೆ ಚರ್ಚೆ ಮಾಡಲಾಗಿದೆ. ಮಧುಮೇಹದಿಂದ ದೇಹಕ್ಕೆ ಆಗುವ ಹಾನಿಗಳು

Diabetes

ಹೃದಯದ ಕಾಯಿಲೆ

ಮಧುಮೇಹದಿಂದಾಗಿ ಅಪಧಮನಿ ಹೃದಯದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಉಂಟಾಗಬಹುದು. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಮತ್ತು ಡೈಜೆಸ್ಟಿವ್ ಆಂಡ್ ಕಿಡ್ನಿ ಡಿಸೀಸ್ ನ ಪ್ರಕಾರ, ಮಧುಮೇಹದಿಂದಾಗಿ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗುವುದು ಮತ್ತು ಹೃದಯಾಘಾತ ಉಂಟಾಗಬಹುದು. ಇದರೊಂದಿಗೆ ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣದಿಂದಾಗಿ ರಕ್ತನಾಳಗಳಲ್ಲಿ ಕೊಬ್ಬು ನಿರ್ಮಾಣವಾಗಬಹುದು.

ಕಿಡ್ನಿಗೆ ಹಾನಿ

ಮಧುಮೇಹದಿಂದಾಗಿ ಕಿಡ್ನಿಗಳಿಗೆ ಹಾನಿಯಾಗಬಹುದು ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಅದರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದನ್ನು ಡಯಾಬಿಟಿಕ್ ನ್ಯೂರೋಪಥಿ ಎಂದು ಕರೆಯಲಾಗುತ್ತದೆ. ಕಿಡ್ನಿಗೆ ವರ್ಷ ಕಳೆದಂತೆ ಹಾನಿ ಸಂಭವಿಸುವುದು. ಕಿಡ್ನಿಗೆ ಆಗುವ ಹಾನಿ ಅಥವಾ ಕಿಡ್ನಿ ವೈಫಲ್ಯವನ್ನು ತಪ್ಪಿಸಲು ನ್ಯೂರೋಪಥಿ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು.

ದೃಷ್ಟಿ ಕಳೆದುಕೊಳ್ಳುವುದು

ಮಧುಮೇಹದಿಂದಾಗಿ ಡಯಾಬಿಟಿಕ್ ರೆಟಿನೋಪತಿ ಬರಬಹುದು. ಇದು ಕಣ್ಣಿನ ಹಿಂಬದಿ(ರೆಟಿನಾ)ಯಲ್ಲಿ ರಕ್ತನಾಳಗಳಿಗೆ ಆಗುವ ಹಾನಿಯಿಂದ ಸಂಭವಿಸುವುದು. ಮಧುಮೇಹದಿಂದಾಗಿ ದೃಷ್ಟಿ ಕಳೆದುಕೊಳ್ಳಬಹುದು ಮತ್ತು ಇತರ ಕೆಲವೊಂದು ಸಮಸ್ಯೆಗಳಾಗಿರುವಂತಹ ಅಕ್ಷಿಪಟಲದ ಅವನತಿ ಮತ್ತು ಗ್ಲೂಕೋಮಾ ಬರಬಹುದು.

ನರಗಳಿಗೆ ಹಾನಿ

ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದರೆ ಆಗ ಅದು ನರಗಳಿಗೆ ಹಾನಿ ಉಂಟು ಮಾಡುವುದು. ಇದರಿಂದ ಪಾದಗಳಲ್ಲಿ ಸೊಂಕು ಅಥವಾ ಅಲ್ಸರ್ ಕಾಣಿಸಿಕೊಳ್ಳಬಹುದು. ಮಧುಮೇಹದಿಂದಾಗಿ ಎರಡು ರೀತಿಯಲ್ಲಿ ನರಗಳಿಗೆ ಹಾನಿ ಸಂಭವಿಸುವುದು. ಬಾಹ್ಯ ಮಧುಮೇಹ ನರರೋಗ ಮತ್ತು ಸ್ವಯಂನಿಯಂತ್ರಿತ ನರರೋಗ ಮತ್ತು ಡಯಾಬಿಟಿಕ್ ಅಮಿಯೋಟ್ರೋಫಿ.

ಒಸಡಿನ ಸಮಸ್ಯೆ

ಮಧುಮೇಹದಿಂದಾಗಿ ಒಸಡಿನ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಒಸಡುಗಳು ಕೆಂಪಾಗುವುದು, ಊದಿಕೊಳ್ಳುವುದು ಮತ್ತು ರಕ್ತಸ್ರಾವವಾಗುವುದು ಇದರಲ್ಲಿ ಪ್ರಮುಖವಾಗಿದೆ. ಇದು ರಕ್ತನಾಳಗಳನ್ನು ದಪ್ಪಗೊಳಿಸುವುದು. ಇದರಿಂದಾಗಿ ಸರಿಯಾದ ಪೋಷಕಾಂಶಗಳು ಸರಬರಾಜು ಆಗದು ಮತ್ತು ವಿಷಕಾರಿ ಅಂಶಗಳು ಹಾಗೆ ಉಳಿದುಕೊಳ್ಳುವುದು. ಇದರಿಂದ ಒಸಡಿನಲ್ಲಿ ಹಾಗೂ ಮೂಳೆಯ ಅಂಗಾಂಶಗಳಲ್ಲಿ ದುರ್ಬಲತೆ ಕಾಣಿಸಿಕೊಳ್ಳುವುದು.

ಚರ್ಮದ ಕಾಯಿಲೆ

ಮಧುಮೇಹದಿಂದಾಗಿ ಚರ್ಮಕ್ಕೂ ಹಾನಿ ಆಗುವುದು ಮತ್ತು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟದಿಂದಾಗಿ ಚರ್ಮವು ಒಣಗುವಂತೆ, ನಿರ್ಜಲೀಕರಣ ಮತ್ತು ಒಡೆಯುವಂತೆ ಮಾಡುವುದು. ಇದು ದೇಹದಲ್ಲಿ ಇರುವಂತಹ ಸಣ್ಣ ರಕ್ತನಾಳಗಳ ಮೇಲೆ ಪರಿಣಾಮ ಬೀರುವುದು. ಇದನ್ನು ಮಧುಮೇಹದ ಡೆರ್ಮೊಪಥಿ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ಸೋಂಕು ಉಂಟಾಗಿರುವ ಉಗುರಿನ ಸಮಸ್ಯೆ ಬರಬಹುದು.

ಸಂತಾನೋತ್ಪತ್ತಿ ಸಮಸ್ಯೆ

ಗರ್ಭಧಾರಣೆ ಸಂದರ್ಭದಲ್ಲಿ ಗರ್ಭಧಾರಣೆಯ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಇದು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚು ಮಾಡುವುದು. ಇದರ ಪ್ರಮುಖ ಲಕ್ಷಣಗಳೆಂದರೆ ಯೋನಿ ಮತ್ತು ಮೂತ್ರನಾಳದ ಸೋಂಕು. ಗರ್ಭಿಣಿ ಮಹಿಳೆಯರು ಎರಡು ರೀತಿಯ ಅಧಿಕ ರಕ್ತದೊತ್ತಡವಾಗಿರುವಂತಹ ರಿಕ್ಲಾಂಪ್ಸಿಯಾ ಅಥವಾ ಎಕ್ಲಾಂಪ್ಸಿಯಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ ಹೆಚ್ಚಿನ ಸಂದರ್ಭದಲ್ಲಿ ಹೆರಿಗೆ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕೆ ಬರುವುದು.

ಜೀರ್ಣಕ್ರಿಯೆ ಸಮಸ್ಯೆ

ಮಧುಮೇಹದಿಂದಾಗಿ ಜೀರ್ಣಕ್ರಿಯೆ ಸಮಸ್ಯೆಯು ಕಾಡುವುದು. ಹೊಟ್ಟೆಯು ಹಾರ ಜೀರ್ಣಿಸಿಕೊಳ್ಳಲು ತುಂಬಾ ದೀರ್ಘಕಾಲ ತೆಗೆದುಕೊಂಡರೆ ಈ ಸಮಸ್ಯೆ ಬರುವುದು. ಇದರಿಂದಾಗಿ ವಾಂತಿ, ವಾಕರಿಕೆ ಮತ್ತು ಹೊಟ್ಟೆ ತುಂಬಿದಂತೆ ಆಗುವ ಸಮಸ್ಯೆ ಬರಬಹುದು.

English summary

Effects Of Diabetes On The Body

Diabetes is a group of diseases that affect how your body uses blood sugar or glucose. It increases blood sugar levels that can lead to serious health problems like eye, heart, kidney, nerves, gastrointestinal tract, gums and teeth diseases. The underlying cause of diabetes depends on the type. Chronic diabetes includes type 1 diabetes, type 2 diabetes and prediabetes. The symptoms of diabetes include increased thirst, frequent urination, unexplained weight loss, extreme hunger, fatigue, irritability, blurred vision, and gum, skin, and vaginal infections.
X
Desktop Bottom Promotion