Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ವೇಳೆ ನಿಮಗೆ ಟೈಪ್-2 ಮಧುಮೇಹವಿದ್ದರೆ ಅನಾನಸ್ ಹಣ್ಣು ತಿನ್ನಬಹುದೇ?
ಮಧುಮೇಹ ಎದುರಾದ ಬಳಿಕ ನಿಮ್ಮ ಆಹಾರಕ್ರಮವನ್ನು ಸೂಕ್ತವಾಗಿ ಕಾಪಾಡಿಕೊಳ್ಳುವುದು ಎಷ್ಟು ಅವಶ್ಯಕ ಎಂದು ನಿಮಗೀಗಾಗಲೇ ಗೊತ್ತಿದೆ. ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಬೇಕಾದರೆ ನಿಮ್ಮ ಆಹಾರಕ್ರಮವನ್ನು ಮೊತ್ತ ಮೊದಲಾಗಿ ನಿಯಂತ್ರಿಸಬೇಕಾಗುತ್ತದೆ, ತನ್ಮೂಲಕ ಆರೋಗ್ಯ ಹಾಗೂ ತೂಕ ಸಹಾ ನಿಯಂತ್ರಣದಲ್ಲಿರುತ್ತವೆ. ಉದಾಹರಣೆಗೆ ಮಧುಮೇಹಿಗಳಿಗೆ ಯಾವುದೇ ಸಿಹಿಪದಾರ್ಥ ವರ್ಜ್ಯವಾಗಿದ್ದರೂ ಅನಾನಾಸು ಮಾತ್ರ ತಿನ್ನಬಹುದಾದ ಹಣ್ಣಾಗಿದೆ. ಈ ಮಾಹಿತಿಯನ್ನು ಅರಿಯದ ಎಷ್ಟೊ ಮಧುಮೇಹಿಗಳು ಇದನ್ನು ಸೇವಿಸದೇ ಇದರಿಂದ ಪಡೆಯಬಹುದಾದ ಪ್ರಯೋಜನಗಳಿಂದ ವಂಚಿತರಾಗುತ್ತಾರೆ.

ಸಮೃದ್ಧ ಪ್ರಮಾಣದ ವಿಟಮಿನ್ನುಗಳನ್ನು ಒಳಗೊಂಡಿದೆ
ಅನಾನಾಸಿನಲ್ಲಿ ಸಮೃದ್ಧ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಹಾಗೂ ಮುಖ್ಯವಾಗಿ ಕರಗದ ನಾರು ಇದೆ. ಇದೇ ಮಧುಮೇಹಿಗಳಿಗೆ ಅತ್ಯಂತ ಪ್ರಮುಖವಾಗಿ ಅಗತ್ಯವಿರುವ ಪೋಷಕಾಂಶ. ಅಧ್ಯಯನಗಳ ಮೂಲಕ ಕಂಡುಕೊಂಡ ಪ್ರಕಾರ ಆಹಾರದಲ್ಲಿ ಕರಗದ ನಾರು ಇದ್ದಷ್ಟೂ ರಕ್ತದಲ್ಲಿ ಸಕ್ಕ್ರೆಯ ಮಟ್ಟ ಕೆಳಗಿರಿಸಲು ಸಾಧ್ಯವಾಗುತ್ತದೆ, ಕೊಲೆಸ್ಟ್ರಾಲ್ ಕಡಿಮೆಗೊಳಿಸಲು, ಕರುಳುಗಳಲ್ಲಿ ಜೀರ್ಣವಾದ ಆಹಾರ ಸುಗಮವಾಗಿ ಮುಂದೆ ಸರಿಯಲು ಹಾಗೂ ಮುಖ್ಯವಾಗಿ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯನ್ನು ತಡೆಯುವ ಮೂಲಕ ತೂಕ ಇಳಿಕೆಗೆ ನೆರವಾಗುವುದು ಹಾಗೂ ಅತಿ ಸೂಕ್ಷ್ಮ ಪೋಷಕಾಂಶಗಳ ಹೀರುವಿಕೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಸೊಂಟದ ಸುತ್ತ ತುಂಬಿಕೊಂಡಿರುವ ಕೊಬ್ಬು ಹಲವಾರು ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಕೊಬ್ಬನ್ನು ಕರಗಿಸಲೂ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿರುವ ಆಹಾರಗಳ ಸೇವನೆ ಅಗತ್ಯ. ಅಲ್ಲದೇ ಇತರ ಸಿಹಿಯಾದ ಹಣ್ಣುಗಳಿಗೆ ಹೋಲಿಸಿದರೆ ಅನಾನಾಸಿನ ಗ್ಲೈಸೆಮಿಕ್ ಕೋಷ್ಟಕ (GI ranking ಅಂದರೆ ಆಹಾರ ಸೇವನೆಯ ಬಳಿಕ ಎಷ್ಟು ನಿಧಾನವಾಗಿ ರಕ್ತಕ್ಕೆ ಸೇರುತ್ತದೆ ಎಂಬ ಮಾಪನ) ಹೆಚ್ಚೇ ಇರುವ ಕಾರಣ ಮಧುಮೇಹಿಗಳು ಸೇವಿಸಬಹುದಾದ ಹಣ್ಣಾಗಿದೆ. ಆದರೆ ಸೇವಿಸಬಹುದು ಎಂದ ಮಾತ್ರಕ್ಕೇ ಇಷ್ಟಬಂದಷ್ಟು ಎಂದು ಅರ್ಥವಲ್ಲ, ಬದಲಿಗೆ ಮಿತಪ್ರಮಾಣದಲ್ಲಿ ಮಾತ್ರವೇ ಸೇವಿಸಬಹುದು.

ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ Institute of Obesity, Nutrition, and Exercise ಎಂಬ ವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ತಾಜಾ ಮತ್ತು ಇಡಿಯ ಅನಾನಾಸು GI ranking ಕೋಷ್ಟಕದಲ್ಲಿ 59 ಕ್ರಮಾಂಕ ಹೊಂದಿದೆ. ಅಂದರೆ ಸುರಕ್ಷಿತ ಎಂದು ಪರಿಗಣಿಸಬಹುದಾದ ವ್ಯಾಪ್ತಿಯ ಅಂಚಿನಲ್ಲಿದೆ. ಆದರೆ ಒಂದು ವೇಳೆ ಅನಾಸಿನ ರಸವನ್ನು ಹಿಂಡಿ ಇದಕ್ಕೆ ಸಕ್ಕರೆ ಸೇರಿಸದೇ ಇದ್ದಾಗ ಇದರ ಕ್ರಮಾಂಕ ಇಳಿದು ಅಪಾಯಕಾರಿ ಮಟ್ಟಕ್ಕೆ ಬಂದುಬಿಡುತ್ತದೆ. ಏಕೆಂದರೆ ಅನಾನಸಿನಲ್ಲಿರುವ ಪ್ರಮುಖ ಕರಗದ ನಾರು ಮತ್ತು ಕಾರ್ಬೋಹೈಡ್ರೇಟುಗಳನ್ನು ರಸ ಹಿಂಡಿದ ಬಳಿಕ ನಿವಾರಿಸಿದ ಕಸದಲ್ಲಿಯೇ ಮಧುಮೇಹಿಗಳಿಗೆ ಅಗತ್ಯವಾದ ಪೋಷಕಾಂಶಗಳಿವೆ. ಹಾಗಾಗಿ ಅನಾನಾಸು ತಾಜಾ ಅಥವಾ ಶೀತಲೀಕರಿಸಿದ್ದರೆ ಇದರ ಒಂದು ಪ್ರಮಾಣದಲ್ಲಿ ಕಡಿಮೆ ಕಾರ್ಬೋಹೈಡ್ರೇಟುಗಳಿರುತ್ತವೆ.

ಮಧುಮೇಹಿಗಳು ಸುರಕ್ಷಿತವಾಗಿ ಅನಾನಾಸು ಸೇವಿಸುವ ವಿಧಾನ ಯಾವುದು?
ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಕೋಷ್ಟಕದ ಆಹಾರಗಳ ಜೊತೆ ಜೊತೆಯಾಗಿಯೇ ಅನಾನಾಸನ್ನು ಸೇವಿಸುವ ಮೂಲಕ ಥಟ್ಟನೇ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವುದನ್ನು ತಡೆಗಟ್ಟಬಹುದು. ಅತ್ಯುತ್ತಮ ಎಂದರೆ ಪ್ರೋಟೀನ್ ಯುಕ್ತ ಹಾಗೂ ಕಡಿಮೆ ಕೊಬ್ಬಿನ ಕಾಟೇಜ್ ಚೀಸ್ ಅಥವಾ ಗ್ರೀಕ್ ಯೋಗರ್ಟ್ ನೊಂದಿಗೆ ಕೊಂಚ ಪ್ರಮಾಣದಲ್ಲಿ ಅನಾನಾಸಿನ ತಾಜಾ ತಿರುಳನ್ನು ಸೇವಿಸುವುದು ಆರೋಗ್ಯಕರವಾಗಿದೆ.

ಅನಾನಾಸಿನೊಂದಿಗೆ ಸೇವಿಸಬಹುದಾದ ಇತರ ಆಹಾರಗಳು
*ದ್ವಿದಳ ಧಾನ್ಯಗಳು
*ಇಡಿಯ ಗೋಧಿಯ ಬ್ರೆಡ್
*ಬಾರ್ಲಿ
*ಕುಚ್ಚಿಗೆ ಅಕ್ಕಿ
*ಓಟ್ಸ್ ರವೆ (ಚಪ್ಪಟೆಯಾಗಿಸಿದ ಅಥವಾ ರವೆಯಾಗಿಸಿದ)

ನೀವು ಅನಾನಾಸು ಪ್ರಿಯರಾದ್ದರೆ
ಒಂದು ವೇಳೆ ನೀವು ಅನಾನಾಸು ಪ್ರಿಯರಾಗಿದ್ದು ನಿಮ್ಮ ಆಹಾರದಲ್ಲಿ ಈ ಹಣ್ಣನ್ನು ಅಳವಡಿಸಿಕೊಳ್ಳುವ ಬಯಕೆ ಹೊಂದಿದ್ದರೆ ನಿಮ್ಮ ಊಟದಲ್ಲಿ ಇದು ಒಂದು ಪ್ರಮಾಣಕ್ಕೂ ಮೀರದಂತೆ ಎಚ್ಚರ ವಹಿಸಿ. ಜೊತೆಗೇ ಪ್ರೋಟೀನ್ ಭರಿತ ಆಹಾರಗಳನ್ನೂ ಸೇವಿಸಿ. ಮಧುಮೇಹವನ್ನು ನಿಯಂತ್ರಿಸಲು ಆಹಾರಕ್ರಮದಲ್ಲಿ ಕಟ್ಟು ನಿಟ್ಟು ಅನುಸರಿಸುವುದೇ ಅಗತ್ಯ ಕ್ರಮವಾಗಿದ್ದು ಇದಕ್ಕೆ ಸೂಕ್ತವಾದ ಆಹಾರಗಳನ್ನು ಹೊಂದಿಸಿಕೊಳ್ಳುವುದು ಜಾಣತನದ ಕ್ರಮವಾಗಿದೆ. ಈ ಪ್ರಕಾರ ಅಹಾರದ ನಿಯಂತ್ರಣದಿಂದ ನಿಮ್ಮ ತೂಕ ಆರೋಗ್ಯಕರ ಮಟ್ಟದಲ್ಲಿರುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಳಿತವಾಗುವುದಿಲ್ಲ. ತನ್ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಹಾಗೂ ಆರೋಗ್ಯಕರ ಜೀವನವನ್ನು ಮುಂದುವರೆಸಲು ಸಾಧ್ಯವಾಗುತ್ತದೆ.



Click it and Unblock the Notifications