For Quick Alerts
ALLOW NOTIFICATIONS  
For Daily Alerts

ಟೈಪ್-2 ಮಧುಮೇಹ ಕಾಯಿಲೆ ಇದ್ದವರು ಮದ್ಯಪಾನ ಮಾಡಬಹುದೇ?

|

ವಾಸ್ತವದಲ್ಲಿ ಮದ್ಯ ಅತ್ಯಲ್ಪ ಪ್ರಮಾಣದಲ್ಲಿದ್ದರೆ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ದೇಹವನ್ನು ಬಿಸಿಯಾಗಿಸುವುದು (ಇದೇ ಕಾರಣಕ್ಕೆ ಮಂಜಿನಲ್ಲಿ ಸಿಲುಕಿದವರನ್ನು ಹುಡುಕಲು ಕಳುಹಿಸುವ ನಾಯಿಗಳ ಕುತ್ತಿಗೆಯಲ್ಲಿ ಮದ್ಯದ ಚಿಕ್ಕ ಬಾಟಲಿಯನ್ನು ಕಟ್ಟಿರುತ್ತಾರೆ), ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಹೆಚ್ ಡಿ ಎಲ್ ಹೆಚ್ಚಿಸುವುದು ಮತ್ತು ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ.

ಅಧ್ಯಯನಗಳ ಪ್ರಕಾರ

ಅಧ್ಯಯನಗಳ ಪ್ರಕಾರ

ಇನ್ನೂ ಕೆಲವು ಅಧ್ಯಯನಗಳ ಪ್ರಕಾರ ಮದ್ಯಪಾನ ಟೈಪ್ 2 ಮಧುಮೇಹದ ಸಾಧ್ಯತೆಯನ್ನೂ ತಗ್ಗಿಸುತ್ತದೆ ಎಂದು ತಿಳಿಸುತ್ತವೆ. ಆದರೆ ಇದಕ್ಕೂ ಮಿತಿಯ ಒಳಗಿನ ಸೇವನೆ ಅಗತ್ಯ. ಅಮೇರಿಕಾದ ಹೃದಯ ಸಂಸ್ಥೆಯ ಪ್ರಕಾರ ದಿನವೊಂದರಲ್ಲಿ ಮಹಿಳೆಯರು ಒಂದು ಪ್ರಮಾಣ ಮತ್ತು ಪುರುಷರು ಎರಡು ಪ್ರಮಾಣದಷ್ಟು ಮದ್ಯವನ್ನು ಗರಿಷ್ಟ ಪ್ರಮಾಣದಲ್ಲಿ ಸೇವಿಸಬಹುದು. ಇಲ್ಲಿ ಪ್ರಮಾಣ ಎಂದರೆ ಯಾವ ವಿಧದ ಮದ್ಯವನ್ನು ಆಯ್ದುಕೊಳ್ಳುತ್ತೀರೋ ಅದಕ್ಕನುಗುಣವಾಗಿ ಇದು ಬದಲಾಗುತ್ತದೆ. ಅಂದರೆ ಬಿಯರ್ - ಹನ್ನೆರದು ಔನ್ಸ್, ವೈನ್-ಐದು ಔನ್, ಇತರ ಪ್ರಬಲ ಮದ್ಯ (ವೋಡ್ಕಾ, ವಿಸ್ಕಿ, ಜಿನ್ ಇತ್ಯಾದಿ) ಒಂದೂ ವರೆ ಔನ್ಸ್ ಮಾತ್ರ. ಒಂದು ಔನ್ಸ್ ಅಂದರೆ ಇಪ್ಪತ್ತೊಂಭತ್ತು ಮಿಲಿಲೀಟರ್.

ಮದ್ಯಸೇವನೆಯ ಪ್ರಮಾಣ ಹೆಚ್ಚಾಗಬಾರದು!

ಮದ್ಯಸೇವನೆಯ ಪ್ರಮಾಣ ಹೆಚ್ಚಾಗಬಾರದು!

ಒಂದು ವೇಳೆ ಮದ್ಯಸೇವನೆಯ ಪ್ರಮಾಣ ಹೆಚ್ಚಿದರೆ, ಅಂದರೆ ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಸುರಕ್ಷಿತ ಪ್ರಮಾಣದ ಐದು ಪಟ್ಟಿಗೂ ಹೆಚ್ಚಿನ ಪ್ರಮಾಣ ಸೇವಿಸಿದರೆ (ಮಹಿಳೆಯರಿಗೆ ನಾಲ್ಕು ಪಟ್ಟು) ಇದು ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಹಾಗೂ ಚಯಾಪಯಚ ಕ್ರಿಯೆಯನ್ನು ಬಾಧಿಸುವ metabolic syndrome ಎಂಬ ತೊಂದರೆಗಳ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಹೆಚ್ಚಿನ ಮದ್ಯ ದೇಹದಲ್ಲಿ ಗ್ಲುಕೋಸ್ ನಿಯಂತ್ರಣವನ್ನು ಸವಾಲಾಗಿಸುತ್ತದೆ, ತನ್ಮೂಲಕ ತೂಕದಲ್ಲಿ ಹೆಚ್ಚಳ ಮತ್ತು ಇನ್ಸುಲಿನ್ ಸಹಿಸಿಕೊಳ್ಳುವಿಕೆಯನ್ನೂ ಹೆಚ್ಚಿಸುತ್ತದೆ.

ನೀವು ಮದ್ಯವ್ಯಸನಿಯಾಗಿದ್ದರೆ....

ನೀವು ಮದ್ಯವ್ಯಸನಿಯಾಗಿದ್ದರೆ....

ಒಂದು ವೇಳೆ ಈಗಾಗಲೇ ನೀವು ಮದ್ಯವ್ಯಸನಿಯಾಗಿದ್ದರೆ ನಿಮಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಆಯ್ಕೆಗಳನ್ನು ಆಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ. ವಿಶೇಷವಾಗಿ, ಒಂದು ವೇಳೆ ನಿಮಗೆ ಈಗಾಗಲೇ ಮಧುಮೇಹ ಅಥವಾ ಇತರ ಗಂಭೀರ ಕಾಯಿಲೆಗಳಿದ್ದರೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮದ್ಯಪಾನ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ರಕ್ತದಲ್ಲಿ ಸಕ್ಕರೆಯನ್ನು ತಗ್ಗಿಸುತ್ತದೆ. The American Diabetes Association ಸಲಹೆ ಮಾಡುವ ಪ್ರಕಾರ ಮಧುಮೇಹಿ ವ್ಯಕ್ತಿಗಳು ಮದ್ಯಪಾನದ ಬಳಿಕ ರಕ್ತದಲ್ಲಿ ಸಕ್ಕರೆ ಕಡಿಮೆಯಾಗುವುದನ್ನು ತಪ್ಪಿಸಲು (ಅಥವಾ delayed hypoglycemia (low blood sugar) ಈ ತೊಂದರೆಯನ್ನು ನಿರ್ವಹಿಸುವುದು ಹೇಗೆ ಎನ್ನುವುದರ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ಮಧುಮೇಹ ನಿಯಂತ್ರಣಕ್ಕೆ ಇನ್ಸುಲಿನ್ ಅಥವಾ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಇತರ ಔಷಧಿಗಳನ್ನು ಸೇವಿಸುವ ವ್ಯಕ್ತಿಗಳು ಈ ಬಗ್ಗೆ ಅರಿವನ್ನು ಬೆಳೆಸಿಕೊಂಡು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು.

Most Read: ಈ ಆಶ್ಚರ್ಯಕರ ಕಾಯಿಲೆಗಳನ್ನು ನಿಮ್ಮ ಕೈಗಳು ಊಹಿಸುತ್ತವೆ ಎಂದರೆ ನಂಬುತ್ತೀರಾ ?

ಯಾವ ಬಗೆಯ ಮದ್ಯ ಬೇಡ ಮತ್ತು ಬದಲಿಗೆ ಯಾವುದು ಉತ್ತಮ?

ಯಾವ ಬಗೆಯ ಮದ್ಯ ಬೇಡ ಮತ್ತು ಬದಲಿಗೆ ಯಾವುದು ಉತ್ತಮ?

ಮಧುಮೇಹಿಗಳು ಮದ್ಯಪಾನಿಗಳಾಗಿದ್ದರೂ ಅಲ್ಲದಿದ್ದರೂ ಇವರಿಗೆ ಹೆಚ್ಚಿನ ಸಕ್ಕರೆ ಇರುವ ಪೇಯ, ಜ್ಯೂಸ್, ಸಕ್ಕರೆ ಬೆರೆಸಿದ ತಿಂಡಿ, ಸಿರಪ್ ಮೊದಲಾದವು ವರ್ಜ್ಯವಾಗಿವೆ. ಏಕೆಂದರೆ ಇವರಿಗೆ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸೇವನೆಯ ಬಳಿಕ ಥಟ್ಟನೇ ರಕ್ತದಲ್ಲಿ ಸಕ್ಕರೆಯ ಪ್ರಮಾನವನ್ನು ಹೆಚ್ಚಿಸುವ ಯಾವುದೇ ಆಹಾರ ಮಧುಮೇಹಿಗಳಿಗೆ ಸಲ್ಲದು. ಇದರಿಂದ ತೂಕದಲ್ಲಿ ಹೆಚ್ಚಳವೂ ಆಗುತ್ತದೆ. ಹಾಗಾಗಿ ಮಧುಮೇಹಿಗಳು ಮದ್ಯಪಾನಿಗಳಾಗಿದ್ದರೆ ಇವರು ಮನೆಯಲ್ಲಿ ತಯಾರಿಸಿದ ವೈನ್, ಕಡಿಮೆ ಮದ್ಯಸಾರ ಇರುವ ಶಾಂಪೇನ್ ಮೊದಲಾದವುಗಳನ್ನು ಮಿತಪ್ರಮಾಣದಲ್ಲಿ ಸೇವಿಸಬಹುದು. ಒಂದು ವೇಳೆ ಇತರ ಪ್ರಬಲ ಮದ್ಯಕ್ಕೆ ಈಗಾಗಲೇ ವ್ಯಸನಿಯಾಗಿದ್ದರೆ ಸುರಕ್ಷಿತ ಪ್ರಮಾಣದ ಮದ್ಯವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಸಕ್ಕರೆ ರಹಿತ ಕ್ಲಬ್ ಸೋಡಾ ಅಥವಾ ಸಾದಾ ನೀರಿನೊಂದಿಗೆ ಬೆರೆಸಿ ಸೇವಿಸಬಹುದು.

ಉದಹರಣೆಗೆ

ಉದಹರಣೆಗೆ

ಕ್ರ್ಯಾನ್ಬೆರಿ ಮತ್ತು ವೋಡ್ಕಾ (ಅರ್ಧ ಔನ್ಸ್ ವೋಡ್ಕಾ ಮತ್ತು ಆರು ಔನ್ಸ್ ಕ್ರ್ಯಾನ್ಬೆರಿ ಜ್ಯೂಸ್ : ಇನ್ನೂರು ಕ್ಯಾಲೋರಿಗಳು ಮತ್ತು 23 ಗ್ರಾಂ ಸಕ್ಕರೆ

ಇದರ ಬದಲಿಗೆ:

ವೋಡ್ಕಾ ಮತ್ತು ಕ್ಲಬ್ ಸೋಡಾ, ಜೊತೆಗೆ ಕೆಲವು ತೊಟ್ಟು ಲಿಂಬೆರಸ (ಅರ್ಧ ಔನ್ಸ್ ವೋಡ್ಕಾ ಮತ್ತು ಆರು ಔನ್ಸ್ ಸೋಡಾ) : ನೂರು ಕ್ಯಾಲೋರಿ, ಸಕ್ಕರೆ ರಹಿತ

ಸುರಕ್ಷತೆಯ ಬಗ್ಗೆ ಪರಿಗಣಿಸಬೇಕಾದ ವಿಷಯಗಳು-ಊಟದ ಜೊತೆಗೇ ಮದ್ಯ ಸೇವಿಸಿ

ಸುರಕ್ಷತೆಯ ಬಗ್ಗೆ ಪರಿಗಣಿಸಬೇಕಾದ ವಿಷಯಗಳು-ಊಟದ ಜೊತೆಗೇ ಮದ್ಯ ಸೇವಿಸಿ

ಮದ್ಯ ಸೇವನೆ ಅನಿವಾರ್ಯ ಅನಿಸುವಷ್ಟರ ವರೆಗೆ ಮದ್ಯಪಾನ ಮಾಡದಿರುವುದೇ ಜಾಣತನ. ಮಾಡಲೇಬೇಕಾದರೆ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಬೇಡ. ಮೊದಲು ನಿಮ್ಮ ನಿತ್ಯದ ಆಹಾರ ಅಥವಾ ಸೂಕ್ತವಾದ ಆಹಾರವನ್ನು ಸೇವಿಸಿ ಹೈಪೋಗ್ಲೈಸೀಮಿಯಾ ಅಥವಾ ರಕ್ತದಲ್ಲಿ ಅಗತ್ಯಕ್ಕೂ ಸಕ್ಕರೆ ಕಡಿಮೆಯಾಗುವ ಸಾಧ್ಯತೆಯನ್ನು ತಪ್ಪಿಸಿ. ಅಲ್ಲದೇ ಈ ಆಹಾರದಲ್ಲಿ ಸಾಕಷ್ಟು ಕಾರ್ಬೋ ಹೈಡ್ರೇಟುಗಳು ಇರುವಂತೆ ನೋಡಿಕೊಳ್ಳಿ. ಇದರಿಂದ ಸಕ್ಕರೆ ಕಡಿಮೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ನಿಮ್ಮ ಊಟ ನಿಗದಿತ ಕಾರ್ಬೋಹೈಡ್ರೇಟುಗಳ ಮಿತಿಯಲ್ಲಿದ್ದರೆ ಮದ್ಯಪಾನದ ಸಮಯದಲ್ಲಿ ಈ ಮಿತಿಗೂ ಕೊಂಚ ಹೆಚ್ಚು ಸೇವಿಸಬೇಕು. ಆದರೆ ಎಂದಿಗೂ ಆಹಾರದ ಪ್ರಮಾಣವನ್ನು ತಗ್ಗಿಸಿ ಆ ಸ್ಥಾನದಲ್ಲಿ ಮದ್ಯವನ್ನು ಸೇವಿಸಬಾರದು. ಅಲ್ಲದೇ ಮದ್ಯವನ್ನು ನಿಮ್ಮ ಕಾರ್ಬೋಹೈಡ್ರೇಟುಗಳಿಗೆ ಬದಲಾಗಿಯೂ ಪರಿಗಣಿಸಬಾರದು. ಯಾವುದಕ್ಕೂ, ಮದ್ಯ ನಿಮಗೆ ಸಹ್ಯವೋ ಅಲ್ಲವೋ ಎನ್ನುವುದನ್ನು ಕೇವಲ ಮದ್ಯಪಾನದ ಬಳಿಕದ ರಕ್ತಪರೀಕ್ಷೆಯ ಮೂಲಕವೇ ಖಚಿತಪಡಿಸಬಹುದು.

ಪರೀಕ್ಷೆ

ಪರೀಕ್ಷೆ

ಮದ್ಯಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟದ ಮೇಲಾಗುವ ಪರಿಣಾಮ ಸೇವನೆಯ ಒಂದು ದಿನದ ಬಳಿಕವೂ ಕಾಣಿಸಿಕೊಳ್ಳಬಹುದು. ಹಾಗಾಗಿ ಮಲಗುವ ಮುನ್ನ ಒಂದು ಬಾರಿ ಸಕ್ಕರೆಯ ಮಟ್ಟವನ್ನು ನೋಡಿಕೊಳ್ಳಿ. ಇದು 100-140mg/dL ಮಿತಿಗಳಲ್ಲಿದ್ದರೆ ಚಿಂತೆ ಬೇಡ. ಇದಕ್ಕೂ ಕಡಿಮೆ ಇದ್ದರೆ (ಆದರೆ 70mg/dLಕ್ಕಿಂತಲೂ ಕಡಿಮೆಯಾಬಾರದು) ನೀವು ಮಲಗುವ ಮುನ್ನ ಕೊಂಚ ಪ್ರಮಾಣದಲ್ಲಿ ಅಂದರೆ ಸುಮಾರು ಐದು ಗ್ರಾಂ ಕಾರ್ಬೋಹೈಡ್ರೇಟು ಇರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಉದಹಾರಣೆಗೆ ಇಡಿಯ ಧಾನ್ಯದಿಂದ ತಯಾರಿಸಿದ ಒಂದು ಎಸಳು ಬ್ರೆಡ್ ಮತ್ತು ಒಂದು ಚಿಕ್ಕ ಚಮಚ ನೆಲಗಡೆಲೆ-ಬೆಣ್ಣೆಯ ಮಿಶ್ರಣ ಸವರಿ ತಿನ್ನಿ. ಹೆಚ್ಚಿನ ಪ್ರಮಾಣದ ಆಹಾರ ರಾತ್ರಿ ಮಲಗುವ ಮುನ್ನ ಸೇವಿಸುವುದು ಒಳ್ಳೆಯದಲ್ಲವಾದರೂ, ಮಧುಮೇಹಿಗಳಿಗೆ, ಮದ್ಯಪಾನದ ಬಳಿಕ ಅನಿವಾರ್ಯವಾಗಿ ಕೈಗೊಳ್ಳಬೇಕಾದ ಸುರಕ್ಷಾಕ್ರಮವಾಗಿದೆ.

ಕೊಂಚ ಉಪಾಹಾರವನ್ನು ಜೊತೆಗೇ ಕೊಂಡೊಯ್ಯಿರಿ

ಕೊಂಚ ಉಪಾಹಾರವನ್ನು ಜೊತೆಗೇ ಕೊಂಡೊಯ್ಯಿರಿ

ಒಂದು ವೇಳೆ ನೀವು ಸಕ್ಕರೆಯ ಮಟ್ಟ ಇಳಿಯುವುದನ್ನು ತಡೆಯಲು ಇನ್ಸುಲಿನ್ ಅಥವಾ ಇತರ ಔಷಧಿ ಸೇವಿಸುತ್ತಿರುವವರಾದರೆ ನೀವು ನಿಮ್ಮೊಂದಿಗೆ ಸದಾ ಕೊಂಚ ಆಹಾರವನ್ನು ಜೊತೆಗೇ ಕೊಂಡೊಯ್ಯಬೇಕು. ಅನಿವಾರ್ಯ ಕಾರಣಗಳಿಂದ ಒಂದು ವೇಳೆ ಊಟದ ಸಮಯ ಮೀರಿ ಹೋದರೆ ನಿಮ್ಮ ದೇಹ ಇದಕ್ಕೆ ಸಿದ್ಧವಾಗಿರದೇ ತೊಂದರೆಗೆ ಒಳಗಾಗುವುದನ್ನು ಇದರಿಂದ ತಪ್ಪಿಸಬಹುದು. ನಿಮ್ಮ ಅಹಾರದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟುಗಳು, ಕೆಲವು ಹಣ್ಣುಗಳು, ಇಡಿಯ ಧಾನ್ಯಗಳಿಂದ ತಯಾರಿಸಿದ ಸಿದ್ಧ ಆಹಾರಗಳು ಅಥವಾ ಒಂದು ಊಟಕ್ಕೆ ಸರಿಸಮನಾದ ಪೋಷಕಾಂಶಗಳನ್ನು ಒದಗಿಸುವ ಬಾರ್ ರೂಪದ ಸಿದ್ಧ ಆಹಾರಗಳು ಇರಲಿ. ಒಂದು ವೇಳೆ ಸಕ್ಕರೆಯ ಮಟ್ಟ <70mg/dLಕ್ಕೂ ಕೆಳಗಿದ್ದರೆ ನಿಮ್ಮ ಅಹಾರದಲ್ಲಿ ಕನಿಷ್ಟ ಹದಿನೈದು ಗ್ರಾಂ ಕಾರ್ಬೋಹೈಡ್ರೇಟ್ ಇರಬೇಕು. ಉದಾಹರಣೆಗೆ ಮೂರರಿಂದ ನಾಲ್ಕು ಗ್ಲೂಕೋಸ್ ಮಾತ್ರೆ, ನಾಲ್ಕು ಔನ್ಸ್ ಜ್ಯೂಸ್ (ಒಂದು ಸಾಮಾನ್ಯ ಚಿಕ್ಕ ಜ್ಯೂಸ್ ಬಾಟಲಿ) ಚಾಕಲೇಟ್ ಅಲ್ಲದ ಕ್ಯಾಂಡಿಯಾದರೆ ಸುಮಾರು ಐದು.

Most Read: ಮಸಾಲೆ ಭರಿತ ಆಹಾರ ಇಷ್ಟ ಪಡುವವರ ಸೆಕ್ಸ್ ಲೈಫ್ ಹೇಗಿರುತ್ತದೆ ಗೊತ್ತಾ?

ನಿಮ್ಮ ವೈದ್ಯಕೀಯ ಗುರುತುಪತ್ರ ಸಹಾ ನಿಮ್ಮೊಂದಿಗಿರಲಿ

ನಿಮ್ಮ ವೈದ್ಯಕೀಯ ಗುರುತುಪತ್ರ ಸಹಾ ನಿಮ್ಮೊಂದಿಗಿರಲಿ

ನಿಮ್ಮ ಆರೋಗ್ಯದ ಸ್ಥಿತಿಯನ್ನು ಕ್ಷಿಪ್ರವಾಗಿ ವಿವರಿಸುವ ಹಾಗೂ ನೀವು ಮಧುಮೇಹಿಗಳೆಂದು ತಕ್ಷಣವೇ ಗುರುತಿಸಲು ಸಾಧ್ಯವಾಗುವ ಗುರುತಿನ ಪಟ್ಟಿಯನ್ನು ವೈದ್ಯರು ನೀಡಿದ್ದರೆ ಇದು ನಿಮ್ಮೊಂದಿಗೆ ಸದಾ ಇದ್ದು ಇತರರಿಗೆ ಪ್ರಥಮ ನೋಟದಲ್ಲಿಯೇ ಕಾಣುವಂತಿರ ಬೇಕು. ಏಕೆಂದರೆ ಯಾವುದೇ ತುರ್ತು ಸ್ಥಿತಿಯಲ್ಲಿ ಆರೋಗ್ಯ ತಜ್ಞರು ಈ ಗುರುತಿನ ಪತ್ರವನ್ನು ನೋಡುವ ಮೂಲಕ ನಿಮಗೆ ಅಗತ್ಯವಿರುವ ವೈದ್ಯಕೀಯ ಸೇವೆಯನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಲು ಸಾಧ್ಯವಾಗುತ್ತದೆ.

 ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಪ್ರತಿ ಪ್ರಮಾಣದ ಮದ್ಯ ಸೇವಿಸಿದ ಬಳಿಕ ಕನಿಶ್ಟ ಒಂದು ಲೋಟವಾದರೂ ನೀರು ಅಥವಾ ಸೋಡಾವನ್ನು ಕುಡಿಯಿರಿ. ಇದರಿಂದ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇರುತ್ತದೆ ಹಾಗೂ ಕಡಿಮೆ ಮದ್ಯ ಸೇವನೆಗೆ ನೆರವಾಗುತ್ತದೆ. ಅಲ್ಲದೇ ಮದ್ಯ ನೇರವಾಗಿ ಜಠರದಲ್ಲಿಯೇ ರಕ್ತಕ್ಕೆ ಸೇರುವ ಕಾರಣ ಹಸಿವು ಇಮ್ಮಡಿಸುತ್ತದೆ. ಹಾಗಾಗಿ ನಡುನಡುವೆ ನೀರು ಮತ್ತು ಸೋಡಾ ಕುಡಿಯುವ ಮೂಲಕ ಅತಿಯಾಗಿ ಸೇವಿಸುವುದರಿಂದ ತಪ್ಪಿಸಿಕೊಳ್ಳಬಹುದು.

English summary

Can Type 2 Diabetes people Drink Alcohol?

Studies have shown that moderate alcohol consumption may have favorable effects, such as raising good cholesterol (HDL) and lowering the risk of cardiovascular disease. Some studies suggest that moderate alcohol consumption may even reduce the risk of developing type 2 diabetes. The most important rule is to keep consumption moderate. The American Heart Association defines moderate alcohol consumption as one drink per day for women and two drinks per day for men.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more