For Quick Alerts
ALLOW NOTIFICATIONS  
For Daily Alerts

ಆಹಾರ ಪದಾರ್ಥಗಳಲ್ಲಿ 'ಈರುಳ್ಳಿ' ಹೆಚ್ಚಾಗಿ ಬಳಸಿದರೆ-ಟೈಪ್-2 ಮಧುಮೇಹ ನಿಯಂತ್ರಿಸಬಹುದು

|

ಮಧುಮೇಹ ಎನ್ನುವುದು ಮನುಷ್ಯನನ್ನು ಸದ್ದಿಲ್ಲದೆ ಕೊಲ್ಲುವಂತಹ ಕಾಯಿಲೆ. ಇದು ಒಂದು ಸಲ ದೇಹದೊಳಗೆ ಬಂದರೆ ಅದನ್ನು ನಿವಾರಣೆ ಮಾಡುವುದು ಅಸಾಧ್ಯ. ಆದರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಆಗ ಒಳ್ಳೆಯ ಜೀವನ ಸಾಗಿಸಬಹುದು. ಮಧುಮೇಹದಿಂದಾಗಿ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ಒಕ್ಕರಿಸಿಕೊಳ್ಳುವುದು. ಮಧುಮೇಹದಿಂದಾಗಿ ಪ್ರತೀವರ್ಷ ವಿಶ್ವದಾದ್ಯಂತ ಲಕ್ಷಾಂತ ಮಂದಿ ಪ್ರಾಣ ಕಳೆದುಕೊಳ್ಳುವರು. ಮಧುಮೇಹದಿಂದ ಬಳಲುತ್ತಾ ಇರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇಲ್ಲವಾದಲ್ಲಿ ಮಧುಮೇಹದಿಂದ ಬೊಜ್ಜು, ಕಿಡ್ನಿ ವೈಫಲ್ಯ ಮತ್ತು ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುವುದು.

Onions

ಎಲ್ಲಾ ಕಾಯಿಲೆಗಳ ನಿವಾರಣೆಗೆ ನಾವು ಸೇವಿಸುವಂತಹ ಆಹಾರವು ಕಾರಣವಾಗುವುದು. ಅದೇ ರೀತಿಯಾಗಿ ಮಧುಮೇಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನೀವು ಸೇವಿಸುವ ಆಹಾರವು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಆರೋಗ್ಯವಾಗಿರಬೇಕಾದರೆ ಮಧುಮೇಹಿಗಳು ಕೆಲವೊಂದು ಕಠಿಣ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಈರುಳ್ಳಿಯು ಟೈಪ್-2 ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಹೇಳಲಾಗುತ್ತದೆ. ಇದನ್ನು ನೀವು ಈ ಲೇಖನದಲ್ಲಿ ತಿಳಿಯಿರಿ.

ಟೈಪ್-2 ಮಧುಮೇಹದಕ್ಕೆ ಈರುಳ್ಳಿ

ಟೈಪ್-2 ಮಧುಮೇಹದಕ್ಕೆ ಈರುಳ್ಳಿ

*ಕಾರ್ಬ್ಸ್ ಕಡಿಮೆ

*ಈರುಳ್ಳಿಯಲ್ಲಿ ಕಾರ್ಬ್ಸ್ ತುಂಬಾ ಕಡಿಮೆ ಇದೆ. ಒಂದು ಅರ್ಧ ಈರುಳ್ಳಿಯಲ್ಲಿ ಕೇವಲ 26 ಕ್ಯಾಲರಿ ಮತ್ತು 5.9 ಗ್ರಾಂ ಕಾರ್ಬ್ಸ್ ಮಾತ್ರ ಇದೆ. ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಸೇವನೆ ಮಾಡಿದರೆ ಅದರಿಂದ ಟೈಪ್ -2 ಮಧುಮೇಹಿಗಳಿಗೆ ಅಡ್ಡಪರಿಣಾಮಗಳು ಆಗುವುದು. ಈರುಳ್ಳಿಯಲ್ಲಿ ತುಂಬಾ ಕಡಿಮೆ ಕಾರ್ಬ್ಸ್ ಇದೆ. ಇದು ಮಧುಮೇಹಿಗಳಿಗೆ ತುಂಬಾ ನೆರವಾಗುವುದು. ಕಾರ್ಬೋಹೈಡ್ರೇಟ್ಸ್ ಕಡಿಮೆ ಇರುವಂತಹ ಆಹಾರ ಕ್ರಮದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ನೆರವಾಗುವುದು. ಈರುಳ್ಳಿಯಲ್ಲಿ ತುಂಬಾ ಕಡಿಮೆ ಕಾರ್ಬ್ಸ್ ಇರುವ ಕಾರಣದಿಂದ ನೀವು ಆಹಾರದ ಕ್ರಮದಲ್ಲಿ ಇದನ್ನು ಬಳಸಿಕೊಳ್ಳಬಹುದು.

Most Read: ಕೆಂಪು ಈರುಳ್ಳಿ ವೈದ್ಯಲೋಕದ ಸಂಜೀವಿನಿ

ನಾರಿನಾಂಶ ಅಧಿಕವಾಗಿದೆ

ನಾರಿನಾಂಶ ಅಧಿಕವಾಗಿದೆ

ಈರುಳ್ಳಿಯಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದು ಮಧುಮೇಹಿಗಳಿಗೆ ತುಂಬಾ ಲಾಭಕಾರಿ ಆಗಿದೆ. ನಾರಿನಾಂಶವು ನಿಧಾನವಾಗಿ ವಿಘಟನೆ ಯಾಗುವುದು ಮತ್ತು ಜೀರ್ಣವಾಗುವುದು. ಇದರಿಂದ ರಕ್ತನಾಳಗಳಿಗೆ ತುಂಬಾ ನಿಧಾನವಾಗಿ ಸಕ್ಕರೆ ಅಂಶವು ಬಿಡುಗಡೆ ಆಗುವುದು. ನಾರಿನಾಂಶವನ್ನು ತಿನ್ನುವುದರಿಂದ ಕರುಳಿನ ಚಟುವಟಿಕೆಗಳು ಸಕ್ರಿಯವಾಗಿರುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು. ಮಧುಮೇಹಿಗಳಲ್ಲಿ ಮಲಬದ್ಧತೆಯು ದೊಡ್ಡ ಸಮಸ್ಯೆಯಾಗಿರುವುದು. ನಾರಿನಾಂಶವು ಅಧಿಕವಾಗಿ ಇರುವಂತಹ ಆಹಾರ ಸೇವನೆ ಮಾಡಿದರೆ, ಅದರಿಂದ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿ ಇರುವುದು. ಹೀಗಾಗಿ ಹೃದಯದ ಕಾಯಿಲೆಗಳು ಬರುವಂತಹ ಅಪಾಯವು ಕಡಿಮೆ ಇರುವುದು.

ಗ್ಲೆಸೆಮಿಕ್ ಸೂಚ್ಯಂಕ ಕಡಿಮೆ

ಗ್ಲೆಸೆಮಿಕ್ ಸೂಚ್ಯಂಕ ಕಡಿಮೆ

ನೀವು ಸೇವಿಸಿದ ಆಹಾರವು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಯಾವ ರೀತಿಯ ಪರಿಣಾಮ ಬೀರುವುದು ಎಂದು ಗ್ಲೆಸೆಮಿಕ್ ಸೂಚ್ಯಂಕವು ತಿಳಿಸುವುದು. ಈರುಳ್ಳಿಯ ಗ್ಲೆಸೆಮಿಕ್ ಸೂಚ್ಯಂಕವು 10 ಆಗಿದೆ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯ ಆಹಾರವಾಗಿದೆ. ಗ್ಲೆಸೆಮಿಕ್ ಸೂಚ್ಯಂಕವು 55ಕ್ಕಿಂತ ಕಡಿಮೆ ಇರುವಂತಹ ಆಹಾರವು ರಕ್ತನಾಳಗಳಿಗೆ ತುಂಬಾ ನಿಧಾನವಾಗಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಅಧಿಕ ವಿಟಮಿನ್ ಹಾಗೂ ಖನಿಜಾಂಶಗಳು

ಅಧಿಕ ವಿಟಮಿನ್ ಹಾಗೂ ಖನಿಜಾಂಶಗಳು

ಮಧುಮೇಹದಿಂದ ಬಳಲುತ್ತಾ ಇರುವಂತಹವರು ವಿಟಮಿನ್ ಹಾಗೂ ಖನಿಜಾಂಶ ಸೇವನೆ ಮಾಡಬೇಕು. ಈರುಳ್ಳಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಅದೇ ರೀತಿಯಾಗಿ ಇದರಲ್ಲಿ ವಿಟಮಿನ್ ಎ ಮತ್ತು ಕೆ, ಫಾಲಟೆ ಮತ್ತು ನಿಯಾಸಿನ್ ಕೂಡ ಇದೆ. ಈರುಳ್ಳಿಯು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಮೆಗ್ನಿಶಿಯಂ, ಸತು, ಪೊಟಾಶೀಯಂ, ಕಬ್ಬಿಣ ಮತ್ತು ಫೋಸ್ಪರಸ್ ಇದೆ.

Most Read: ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿ...

ಮಧುಮೇಹಕ್ಕೆ ಇತರ ಕೆಲವು ಸಲಹೆಗಳು

ಮಧುಮೇಹಕ್ಕೆ ಇತರ ಕೆಲವು ಸಲಹೆಗಳು

ಮಧುಮೇಹದಿಂದ ಆಗುವಂತಹ ತೊಡಕುಗಳನ್ನು ನಿವಾರಣೆ ಮಾಡಲು ನೀವು ಆಗಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಂಡು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಇದ್ದರೆ ಆಗ ಮಧುಮೇಹದ ಅಪಾಯದಿಂದ ಆಗುವಂತಹ ತೊಡಕುಗಳನ್ನು ತಡೆಯಬಹುದಾಗಿದೆ.

ಮಧುಮೇಹಿಗಳು ಪ್ರೋಟೀನ್ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಬೇಕು. ಪ್ರೋಟೀನ್ ನಿಂದಾಗಿ ದೇಹದಲ್ಲಿನ ಶಕ್ತಿಯು ಉನ್ನತ ಮಟ್ಟದಲ್ಲಿ ಇರುವುದು ಮತ್ತು ಚಯಾಪಚಯ ಕ್ರಿಯೆಯನ್ನು ಅಧಿಕವಾಗಿಸುವ ಮೂಲಕ ದೇಹದಲ್ಲಿ ಆಗುವಂತಹ ಯಾವುದೇ ರೀತಿಯ ಹಾನಿಯನ್ನು ಇದು ತಪ್ಪಿಸುವುದು.

Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮಟನ್ ಬಿರಿಯಾನಿ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?

ಮಧುಮೇಹಕ್ಕೆ ಇತರ ಕೆಲವು ಸಲಹೆಗಳು

ಮಧುಮೇಹಕ್ಕೆ ಇತರ ಕೆಲವು ಸಲಹೆಗಳು

*ಮಧುಮೇಹ ಇರುವಂತಹವರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಧಿಕ ರಕ್ತದೊತ್ತಡದಿಂದಾಗಿ ಹೃದಯಾಘಾತ, ಕಿಡ್ನಿ ವೈಫಲ್ಯ ಮತ್ತು ಕಣ್ಣಿನ ಕಾಯಿಲೆಗಳಂತಹ ಕೆಲವೊಂದು ಕಾಯಿಲೆಗಳು ಕಾಣಿಸಿಕೊಳ್ಳಬಹುದು.

*ಮಧುಮೇಹದಿಂದಾಗಿ ಪಾದಗಳಲ್ಲಿ ರಕ್ತ ಸಂಚಾರವು ಹೆಚ್ಚಾಗುವುದು. ಇದರಿಂದಾಗಿ ಪಾದದ ಅಲ್ಸರ್ ನ ಸಮಸ್ಯೆಯು ಕಾಡಬಹುದು. ಇದರಿಂದ *ಮಧುಮೇಹಿಗಳು ಯಾವಾಗಲೂ ತಮ್ಮ ಪಾದದಲ್ಲಿನ ಗಾಯದ ಬಗ್ಗೆ ನಿಗಾ ವಹಿಸುತ್ತಾ ಇರಬೇಕು.

*ಮಧುಮೇಹಿಗಳು ಕಣ್ಣುಗಳ ಸಮಸ್ಯೆ ಬಗ್ಗೆ ಕೂಡ ಎಚ್ಚರಿಕೆ ವಹಿಸಬೇಕು. ಮಧುಮೇಹದಿಂದಾಗಿ ಅಕ್ಷಿಪಟಲದಲ್ಲಿ ಇರುವಂತಹ ಸಣ್ಣ ರಕ್ತನಾಳಗಳಿಗೆ ಹಾನಿಯಾಗಬಹುದು. ಇದು ಮುಂದೆ ದೀರ್ಘಾವಧಿಗೆ ಕಾಡಬಹುದು. ಯಾವುದೇ ರೀತಿಯ ತೊಂದರೆಯಿಂದ ಪಾರಾಗಲೂ ನೀವು ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು.

English summary

Add Onions to your Diet to control Type-2 Diabetes Risk

Diabetes takes millions of lives every year. People suffering from the disease need to keep their blood sugar levels in control. Diabetes may lead to obesity, kidney failure and cardiovascular diseases. Your diet plays a very important role when it comes to your health. Diabetics are recommended to follow a strict diet to keep themselves healthy.
X
Desktop Bottom Promotion