For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ಪ್ರತಿದಿನವೂ ಮಾಡಲೇಬೇಕಾದ ಈ 10 ಕೆಲಸಗಳು

|

ಮನುಷ್ಯನಿಗೆ ಬರುವ ಇತರೆ ಕಾಯಿಲೆಗಳಂತೆ ಮಧುಮೇಹ ಕೂಡ ಒಂದು . ಆದರೆ ಒಮ್ಮೆ ಶುಗರ್ ಫ್ಯಾಕ್ಟರಿ ಓನರ್ ಆದ ತಕ್ಷಣ ಜೀವನವೇ ಮುಗಿಯಿತು ಎನ್ನುವ ಲೆಕ್ಕಾಚಾರ ಮಾತ್ರ ಬೇಡ. ಎಲ್ಲರಿಗೂ ಗೊತ್ತು . ಒಮ್ಮೆ ಮಧುಮೇಹ ದೇಹಕ್ಕೆ ಅಂಟಿಕೊಂಡರೆ ಅದನ್ನು ನಿಯಂತ್ರಿಸಲು ಏನೆಲ್ಲಾ ಹರಸಾಹಸ ಪಡಬೇಕೆಂದು . ಹಾಗೆಂದು ಅದರ ಬಗ್ಗೆಯೇ ಯೋಚಿಸಿ ಚಿಂತಿಸಿ ನಮ್ಮ ಮಾನಸಿಕ ಆರೋಗ್ಯವನ್ನೂ ಹಾಳು ಮಾಡಿಕೊಂಡು ದೇಹಕ್ಕೆ ಇತರೆ ರೋಗಗಳನ್ನೇಕೆ ತರಿಸಿಕೊಳ್ಳಬೇಕು .ಇದು ನಿಜಕ್ಕೂ ಸಮಂಜಸವೇ !!! "ಚಿಂತೆಯೇ ಚಿತೆಗೆ ದೂಡುತ್ತದೆ " ಎಂಬ ಮಾತಿಲ್ಲವೇ? ಹಾಗಿದ್ದ ಮೇಲೆ ಬೇರೇನು ಮಾಡಬೇಕು . ಏನು ಅನುಸರಿಸಿದರೆ ಉತ್ತಮ . ಈ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಉತ್ತರ ಇಲ್ಲಿದೆ .

ಮಧುಮೇಹ ನಿಯಂತ್ರಣಕ್ಕೆ ಮುಖ್ಯವಾಗಿ ಬೇಕಾಗಿರುವುದು ನೀವು ಅನುಸರಿಸುವ ನಿಮ್ಮ ದೈನಂದಿನ ಜೀವನ ಶೈಲಿ . ಅಂದರೆ ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದು , ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು , ತಿನ್ನುವ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು , ತಪ್ಪದೆ ವೈದ್ಯರು ಕೊಟ್ಟಿರುವ ಔಷಧಗಳನ್ನು ತೆಗೆದುಕೊಳ್ಳುವುದು , ಮನೆಯವರಿಂದ ಹಾಗು ಸ್ನೇಹಿತರಿಂದ ಒಳ್ಳೆಯ ಸಲಹೆ ಬೆಂಬಲ ಪಡೆಯುವುದು . ಇದರ ಜೊತೆಗೆ ನಾವು ಇಲ್ಲಿ ತಿಳಿಸಿರುವ ಕೆಲವೊಂದು ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಮಧುಮೇಹ ನಿಮ್ಮನ್ನು ಕಂಡಾಗಲೆಲ್ಲಾ ಸ್ವಲ್ಪ ದೂರವೇ ಉಳಿಯುತ್ತದೆ .

1 . ನಿಮ್ಮ ಬ್ಲಡ್ - ಶುಗರ್ ಲೆವೆಲ್ ನ ಮೇಲೆ ಸದಾ ಒಂದು ಕಣ್ಣಿಡಿ

1 . ನಿಮ್ಮ ಬ್ಲಡ್ - ಶುಗರ್ ಲೆವೆಲ್ ನ ಮೇಲೆ ಸದಾ ಒಂದು ಕಣ್ಣಿಡಿ

ನೀವು ನಿಮ್ಮ ಮಧುಮೇಹವನ್ನು ನಿಯಂತ್ರಣ ಮಾಡಲೇಬೇಕೆಂದು ಪಣತೊಟ್ಟ ಮೇಲೆ ಮೊಟ್ಟ ಮೊದಲು ಮಾಡಬೇಕಾದ ಕೆಲಸವೆಂದರೆ ನಿಮ್ಮ ರಕ್ತದಲ್ಲಿನ ಈಗಿರುವ ಸಕ್ಕರೆ ಅಂಶವನ್ನು " ಗ್ಲುಕೋಮೀಟರ್ " ಎಂಬ ಸಾಧನದಿಂದ ಕಂಡು ಹಿಡಿಯುವುದು . ಈ ಸಾಧನದಿಂದ ನೀವೇ ಬೇಕಾದರೂ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು ಅಥವಾ ಹತ್ತಿರದ ಯಾವುದಾದರೂ ಒಂದು ಕ್ಲಿನಿಕ್ ನಲ್ಲಿ ವೈದ್ಯರಿಂದ ಚೆಕ್ ಮಾಡಿಸಬಹುದು . ನಿಮಗೆ ನಿಮ್ಮ ದೇಹದಲ್ಲಿ ಮಧುಮೇಹ ನಿಜಕ್ಕೂ ಯಾವ ಮಟ್ಟಕ್ಕಿದೆ ಎಂದು ತಿಳಿಯಬೇಕಾದರೆ ಬೆಳಗಿನ ಉಪಹಾರದ ಮುಂಚೆ ಮತ್ತು ಉಪಹಾರದ ನಂತರ ಎರಡು ಗಂಟೆ ಬಿಟ್ಟು ಪರೀಕ್ಷಿಸಿ . ಹೀಗೆ ಎರಡರಿಂದ ಮೂರು ದಿನ ಮಾಡಿ .

ಬ್ಲಡ್ - ಶುಗರ್ ನ ಮಟ್ಟ :

* ಉಪಹಾರದ ಮುಂಚೆ :: 95 ಎಂಜಿ/ಡಿಎಲ್ ಗಿಂತ ಕಡಿಮೆ .

* ಉಪಹಾರದ ನಂತರ :: 120 ಎಂಜಿ/ಡಿಎಲ್ ಗಿಂತ ಕಡಿಮೆ ಇದ್ದರೆ ನೀವು ನಾರ್ಮಲ್ ಎಂದು ಅರ್ಥ .

ಮನೆಯಲ್ಲೇ ಶುಗರ್ ಚೆಕ್ ಮಾಡುವ ವಿಧಾನ :

ಮಧುಮೇಹ ಪರೀಕ್ಷಿಸುವ ಗ್ಲುಕೋಮೀಟರ್ ಕಿಟ್ ದುಬಾರಿಯೇನಲ್ಲ . ನಿಮ್ಮ ಹತ್ತಿರದ ಯಾವುದಾದರೂ ಮೆಡಿಕಲ್ ಶಾಪ್ ನಲ್ಲಿ ಅಥವಾ ಈಗಿನ ಕಾಲದಲ್ಲಂತೂ ಆನ್ಲೈನ್ ನಲ್ಲಿ ಸುಲಭವಾಗಿ ಲಭ್ಯವಿದೆ . ಆ ಕಿಟ್ ನಲ್ಲಿ ಗ್ಲುಕೋಮೀಟರ್ , ಟೆಸ್ಟ್ ಸ್ಟ್ರಿಪ್ಗಳು , ಬೆರಳಿಗೆ ರಕ್ತಕ್ಕಾಗಿ ಚುಚ್ಚುವ ಸೂಜಿಗಳು ಇರುತ್ತವೆ . ಒಮ್ಮೆ ಈ ಕಿಟ್ ಖರೀದಿಸಿದರೆ ಸಾಕು . ಸೂಜಿ ಚುಚ್ಚಿ ನಿಮ್ಮ ಬೆರಳಿನಿಂದ ಒಂದು ತೊಟ್ಟು ರಕ್ತವನ್ನು ಟೆಸ್ಟ್ ಸ್ಟ್ರಿಪ್ ನ ಮೇಲೆ ಹಾಕಿ ಅದನ್ನು ಗ್ಲುಕೋಮೀಟರ್ ಗೆ ಸೇರಿಸಿದರೆ ಸಾಕು . ಕೆಲವೇ ಸೆಕೆಂಡ್ ಗಳಲ್ಲಿ ಫಲಿತಾಂಶ ನಿಮ್ಮ ಕಣ್ಣ ಮುಂದೆ ಬರುತ್ತದೆ .

2 . ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದು

2 . ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದು

ನಿತ್ಯ ನಿಯಮಿತ ವ್ಯಾಯಾಮ ನಿಮ್ಮ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕಡಿಮೆ ಮಾಡುತ್ತದೆ . ನಿಮ್ಮ ದೇಹದಲ್ಲಿನ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೀರಿ ಅದನ್ನು ದೇಹದ ಚಟುವಟಿಕೆಗಾಗಿ ಅವಶ್ಯಕತೆಯಿರುವ ಶಕ್ತಿಯಾಗಿ ಮಾರ್ಪಾಡು ಮಾಡುತ್ತದೆ . ನೀವು ಮಾಡುವ ವಾಕಿಂಗ್ , ವ್ಯಾಯಾಮ ನಿಮ್ಮ ದೇಹದಲ್ಲಿನ ಇನ್ಸುಲಿನ್ ಅಂಶವನ್ನು ಹೆಚ್ಚುಮಾಡುತ್ತದೆ ಮತ್ತು ಇನ್ಸುಲಿನ್ ಇಲ್ಲದೆಯೂ ನಿಮ್ಮ ದೇಹದ ಮಾಂಸಖಂಡಗಳು ಸಕ್ಕರೆ ಅಂಶವನ್ನು ಹೀರಿ ಅದನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ .

ಇನ್ನು ವಾಕಿಂಗ್ ವಿಷಯಕ್ಕೆ ಬರುವುದಾದರೆ 2005 ನೇ ಇಸವಿಯಲ್ಲಿ ಪ್ರಕಟಗೊಂಡ " ಡಯಾಬಿಟಿಸ್ ಕೇರ್ ರಿಪೋರ್ಟ್ " ನ ಪ್ರಕಾರ ಬ್ರಿಸ್ಕ್ ವಾಕಿಂಗ್ ಎನ್ನುವುದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮ ಇದ್ದಂತೆ . 2012 ನೇ ಇಸವಿಯಲ್ಲಿ ಪ್ರಕಟಗೊಂಡ " ಡಯಾಬಿಟಿಸ್ ರಿಪೋರ್ಟ್ " ನಲ್ಲಿ ೧೨ ಮಂದಿ ಟೈಪ್ - 1 ಮಧುಮೇಹಿ ರೋಗಿಗಳನ್ನು ಸುಮಾರು 88 ಗಂಟೆಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು . ಅವರೆಲ್ಲರೂ ಊಟವಾದ ನಂತರ ಮಾಡಿದ ವ್ಯಾಯಾಮ ಮತ್ತು ವಾಕಿಂಗ್ ಅವರ ಸಕ್ಕರೆ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡಿತ್ತು. ಆದ್ದರಿಂದಲೇ ತಜ್ಞರು ಹೇಳುವ ಪ್ರಕಾರ ಮಧುಮೇಹಿಗಳು ವಾರದಲ್ಲಿ ಕನಿಷ್ಠ ಪಕ್ಷ 5 ದಿನವಾದರೂ ಸುಮಾರು ಅರ್ಧ ಗಂಟೆಗಳ ಕಾಲ ವಾಕಿಂಗ್ ಮತ್ತು ವ್ಯಾಯಾಮ ಮಾಡಲೇಬೇಕು .

Most Read: ಒಂದು ವೇಳೆ ನಿಮಗೆ ಟೈಪ್-2 ಮಧುಮೇಹವಿದ್ದರೆ ಅನಾನಸ್ ಹಣ್ಣು ತಿನ್ನಬಹುದೇ?

3 . ಬಾಯಿಯ ಮತ್ತು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು :

3 . ಬಾಯಿಯ ಮತ್ತು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು :

ಪ್ರತಿಯೊಬ್ಬರಿಗೂ ಬಾಯಿಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ . ಅದರಲ್ಲೂ ಮಧುಮೇಹಿಗಳಿಗೆ ಇನ್ನೂ ಮುಖ್ಯ . ಏಕೆಂದರೆ ಮಧುಮೇಹ ಬಾಯಿಯ ಆರೋಗ್ಯವನ್ನು ಬಹಳಷ್ಟು ಹಾಳುಮಾಡುತ್ತದೆ . ಹಲ್ಲಿನ ವಸಡಿಗೆ ಸಂಬಂಧಿತ ಹೈಪರ್ಪ್ಲಾಸಿಯಾ ಮತ್ತು ಪೆರಿಯೊರಾಟಿಸ್ (ಪೈರೋರಿಯಾ) , ದಂತ ಕ್ಷಯ , ಕ್ಯಾಂಡಿಡಿಯಾಸಿಸ್ , ಬಾಯಿ ಒಣಗುವುದು ( ಝೀರೋಸ್ಟೋಮಿಯಾ ) ಮತ್ತು ಉಸಿರಾಡಿದರೆ ದುರ್ನಾತ ಬರುವುದು ಇವೆಲ್ಲ ಮಧುಮೇಹದಿಂದ ಉಂಟಾಗುವ ಲಕ್ಷಣಗಳು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳುವ ಪ್ರಕಾರ ಮಧುಮೇಹಿಗಳಲ್ಲಿ ಸುಮಾರು ಜನರು ಮೇಲ್ಕಂಡ ಎಲ್ಲಾ ರೀತಿಯ ವಸಡಿನ ಸಮಸ್ಯೆ ಎದುರಿಸುತ್ತಿದ್ದಾರೆ .

2012 ನೇ ಇಸವಿಯ " ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ " ನ ವರದಿಯಲ್ಲಿ ಕೂಡ ಮಧುಮೇಹಿಗಳು ಬಾಯಿಯ ಮತ್ತು ವಸಡಿನ ಆರೋಗ್ಯದ ಕಡೆಗೆ ವಿಶೇಷ ಗಮನ ಕೊಡಬೇಕೆಂದೂ ಮತ್ತು ಇದಕ್ಕಾಗಿ ವೈದ್ಯರಿಂದ ಸೂಕ್ತ ಸಲಹೆಗಳನ್ನು ಕಾಲಕಾಲಕ್ಕೆ ಪಡೆಯಬೇಕೆಂದೂ ಹೇಳಿದೆ. ಬಾಯಿಯ ಆರೋಗ್ಯ ಕಾಪಾಡಲು ನಮ್ಮ ಪ್ರಾಚೀನ ಪದ್ಧತಿಯೊಂದು ತುಂಬಾ ನಂಬಿಕಾರ್ಹವಾಗಿದೆ . ಇದಕ್ಕೆ ಸಾಕ್ಷಿ ಎಂಬಂತೆ " ಜರ್ನಲ್ ಆಫ್ ಟ್ರೆಡಿಷನಲ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ " ನ 2017 ನೇ ವರದಿಯಲ್ಲಿ ವರ್ಜಿನ್ ತೆಂಗಿನ ಎಣ್ಣೆಯಲ್ಲಿ ಮಾಡುವ ಈ ಒಂದು ವಿಧಾನ ಬಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಇಡೀ ದೇಹದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ.

ಅದು ಹೇಗೆಂದರೆ,

* ಒಂದು ಟೀ ಚಮಚದಷ್ಟು ವರ್ಜಿನ್ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಬೇಕು .

* ಸುಮಾರು 20 ನಿಮಿಷಗಳ ಕಾಲ ಅದನ್ನು ಬಾಯಿಯೊಳಗೆ ಸುರಳಿಯಾಕಾರದಂತೆ ಸುತ್ತಿಸುತ್ತಿರಬೇಕು .

* ನಂತರ ಅದನ್ನು ಆಚೆ ಉಗಿದು ಹಲ್ಲುಜ್ಜಿ ಬಾಯಿ ತೊಳೆದುಕೊಳ್ಳಬೇಕು .

* ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ರೀತಿ ಮಾಡಬೇಕು .

ವಿ . ಸೂಚನೆ : ದಯವಿಟ್ಟು ಬಾಯಿಯಲ್ಲಿ ವರ್ಜಿನ್ ತೆಂಗಿನ ಎಣ್ಣೆ ಹಾಕಿಕೊಂಡು ಬಾಯಿ ಮುಕ್ಕಳಿಸಬೇಡಿ ಮತ್ತು ನುಂಗಬೇಡಿ .

4 . ದಿನನಿತ್ಯ ತೆಂಗಿನ ಎಣ್ಣೆ ಬಳಸಿ

4 . ದಿನನಿತ್ಯ ತೆಂಗಿನ ಎಣ್ಣೆ ಬಳಸಿ

ಯಾರು ಮಧುಮೇಹದಿಂದ ಬಳಲುತ್ತಿರುವರೋ ಅವರು ತಮ್ಮ ದಿನನಿತ್ಯದ ಅಡುಗೆಯಲ್ಲಿ ಅಥವಾ ಬಳಕೆಯಲ್ಲಿ ಒಂದರಿಂದ ಎರಡು ಚಮಚದಷ್ಟು ತೆಂಗಿನ ಎಣ್ಣೆಯನ್ನು ಬಳಸುವುದು ಸೂಕ್ತ . ಏಕೆಂದರೆ ತೆಂಗಿನ ಎಣ್ಣೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಉತ್ಪತ್ತಿಯನ್ನು ಜಾಸ್ತಿ ಮಾಡುತ್ತದೆ ಜೊತೆಗೆ ಟೈಪ್ - 2 ಮಧುಮೇಹಕ್ಕೆ ಇದು ರಾಮ ಬಾಣ .2009 ರ ವರದಿಯ ಪ್ರಕಾರ ತೆಂಗಿನ ಎಣ್ಣೆ ಬೊಜ್ಜನ್ನೂ ಕರಗಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧದ ಜೊತೆ ಹೋರಾಡುತ್ತದೆ .ಭಾರತೀಯ ಜರ್ನಲ್ ಆಫ್ ಫಾರ್ಮಾಕಾಲಜಿ ಯಾ 2010 ರ ವರದಿಯ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಅಡಗಿರುವ " ಲಾರಿಕ್ ಆಸಿಡ್ " ನ ಅಂಶ ಮಧುಮೇಹ ದಿಂದ ಉಂಟಾಗುವ ಡಿಸ್ಲಿಪಿಡೆಮಿಯಾವನ್ನು ತಡೆಗಟ್ಟುತ್ತದೆ .

ಆದರೂ ಒಂದು ಎಚ್ಚರಿಕೆಯ ಮಾತೆಂದರೆ ಮಧುಮೇಹದ ಜೊತೆಗೆ ಹೃದಯ ಸಂಬಂಧಿ ರೋಗವಿರುವವರು ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಬೇಕು ಇಲ್ಲವೆಂದರೆ ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ.

Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆಗಳಿವೆಯೇ?

5 . ನೀರಿನ ಜೊತೆ ನಿಂಬೆ ರಸ ಸೇವಿಸಿ

5 . ನೀರಿನ ಜೊತೆ ನಿಂಬೆ ರಸ ಸೇವಿಸಿ

" ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ " ನ ಪ್ರಕಾರ ನಿಂಬೆ ಮಧುಮೇಹಿಗಳಿಗೆ ಸೈನಿಕನಿದ್ದಂತೆ . ಏಕೆಂದರೆ ನಿಂಬೆಯಲ್ಲಿರುವ ವಿಟಮಿನ್ - ಸಿ ಒಂದು ಪ್ರಬಲ ಆಂಟಿಆಕ್ಸಿಡೆಂಟ್ ಆಗಿದ್ದು ದೇಹದಲ್ಲಿನ ಫ್ರೀ ರಾಡಿಕಲ್ ಅನ್ನು ಕಡಿಮೆ ಮಾಡುತ್ತವೆ . ಫ್ರೀ ರಾಡಿಕಲ್ ಗಳು ದೇಹದಲ್ಲಿನ ಜೀವಕೋಶಗಳನ್ನು ನಾಶಪಡಿಸಿ ಬ್ಲಡ್ ಶುಗರ್ ಅಂಶವನ್ನು ಜಾಸ್ತಿ ಮಾಡುತ್ತವೆ . ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ ನಿಮಗೆ ಬೇಕೆಂದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯುವುದನ್ನು ರೂಡಿ ಮಾಡಿಕೊಳ್ಳಿ .

6 . ದಾಲ್ಚಿನ್ನಿ ಚಹಾ ಮಧುಮೇಹ ಕಹಾ?

6 . ದಾಲ್ಚಿನ್ನಿ ಚಹಾ ಮಧುಮೇಹ ಕಹಾ?

ದಾಲ್ಚಿನ್ನಿಯಲ್ಲಿ ಅಡಕವಾಗಿರುವ ಅನೇಕ ಅಂಶಗಳು ನಿಮ್ಮ ದೇಹದಲ್ಲಿ ಗ್ಲುಕೋಸ್ ಮೆಟಬಾಲಿಸಂ ಅನ್ನು ಹೆಚ್ಚಿಸಿ ಇನ್ಸುಲಿನ್ ಗೆ ಸಹಕಾರಿಯಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಮಟ್ಟಕ್ಕೆ ಕೊಂಡೊಯ್ಯುತ್ತದೆ . ಒಂದು ಸಾಮಾನ್ಯ ಗಾತ್ರದ ದಾಲ್ಚಿನ್ನಿ ಚಕ್ಕೆಯನ್ನು ಸುಮಾರು ಹತ್ತು ನಿಮಿಷದಷ್ಟು ಬಿಸಿ ನೀರಿನಲ್ಲಿ ಕುದಿಸಿ ಶೋಧಿಸಿ ಪ್ರತಿದಿನ ಒಂದು ಬಾರಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮಧುಮೇಹದ ಸುಳಿವೇ ಇರುವುದಿಲ್ಲ .

7 . ಹಾಗಲಕಾಯಿ ರಸ ಕುಡಿಯಲು ಮಾತ್ರ ಕಹಿ ಆದರೆ ಫಲಿತಾಂಶ ಎಂದಿಗೂ ಸಿಹಿ

7 . ಹಾಗಲಕಾಯಿ ರಸ ಕುಡಿಯಲು ಮಾತ್ರ ಕಹಿ ಆದರೆ ಫಲಿತಾಂಶ ಎಂದಿಗೂ ಸಿಹಿ

ಹಾಗಲಕಾಯಿ ಎಂದರೆ ಮಾರುದ್ದ ಓಡುವವರಿದ್ದಾರೆ . ಅಂತವರಿಗೆ ನಮ್ಮದೊಂದು ಕಿವಿ ಮಾತು . ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಜ್ಯೂಸು ಪ್ರತಿದಿನ ಕುಡಿಯುವ ಅಭ್ಯಾಸವಿಟ್ಟುಕೊಂಡಿರುವವರಿಗೆ ಕೇವಲ ಮಧುಮೇಹ ಮಾತ್ರವಲ್ಲ ಬೇರೆ ಯಾವ ಖಾಯಿಲೆಯೂ ಹತ್ತಿರ ಬರುವುದಕ್ಕೆ ಹಿಂದೆ ಮುಂದೆ ನೋಡುತ್ತದೆ . ಮಧುಮೇಹದ ವಿರುದ್ಧ ಹಾಗಲಕಾಯಿಯಲ್ಲಿರುವ ಚರಾಂಟಿನ್, ವಸಿನ್ ಮತ್ತು ಪಾಲಿಪೆಪ್ಟೈಡ್-ಪಿ ಎಂಬ ಅಂಶಗಳು ಬಹಳ ಸಲೀಸಾಗಿ ಮತ್ತು ಪರಿಣಾಮಕಾರಿಯಾಗಿ ಹೋರಾಡುತ್ತವೆ . ಮನುಷ್ಯನ ದೇಹದಲ್ಲಿರುವ ಪ್ಯಾಂಕ್ರಿಯಾಸ್ ನಲ್ಲಿ ಇನ್ಸುಲಿನ್ ಉತ್ಪತ್ತಿಗಾಗಿ ಬಹಳ ಶ್ರಮಿಸಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡಕ್ಕೂ ತಡೆಗೋಡೆಯಾಗುತ್ತದೆ ಈ ಹಾಗಲಕಾಯಿ . ಆದ್ದರಿಂದ ದಿನನಿತ್ಯ 1 / 2 - 1 ಕಪ್ ಹಾಗಲಕಾಯಿ ಜ್ಯೂಸು ಕುಡಿಯುವುದನ್ನು ರೂಡಿಸಿಕೊಳ್ಳಿ .

8 . ವೈದ್ಯರು ನಿಮ್ಮನ್ನು ಪರೀಕ್ಷೆಗೊಳಪಡಿಸಿ ನಿಮಗೆ ನಿಗದಿ ಪಡಿಸಿರುವ ಔಷಧಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳಿ

8 . ವೈದ್ಯರು ನಿಮ್ಮನ್ನು ಪರೀಕ್ಷೆಗೊಳಪಡಿಸಿ ನಿಮಗೆ ನಿಗದಿ ಪಡಿಸಿರುವ ಔಷಧಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳಿ

ನಿಮ್ಮ ಮಧುಮೇಹದ ನಿಯಂತ್ರಣಕ್ಕೆ ನಿಮಗೆ ದೈಹಿಕ ವ್ಯಾಯಾಮ ಮತ್ತು ವಾಕಿಂಗ್ ಎಷ್ಟು ಮುಖ್ಯವೋ ನಿಮಗೆ ವೈದ್ಯರು ನೀಡಿರುವ ಮಾತ್ರೆಗಳು ಟಾನಿಕ್ ಅಷ್ಟೇ ಮುಖ್ಯ . ಬರೀ ದೈಹಿಕ ವ್ಯಾಯಾಮದಿಂದಲೇ ಮಧುಮೇಹವನ್ನು ನಿಯಂತ್ರಿಸಬಹುದು ಎಂಬುದು ಸುಳ್ಳು . ಪ್ರತಿದಿವೂ ಔಷಧಗಳನ್ನು ತೆಗೆದುಕೊಳ್ಳುವುದನ್ನು ಮರೆಯಬಾರದು . ಹಾಗೆಯೇ ವೈದ್ಯರೇನಾದರೂ ವಿಟಮಿನ್ ಗಳು , ಇನ್ಸುಲಿನ್ ಇಂಜೆಕ್ಷನ್ ಅಥವಾ ಅದಕ್ಕೆ ಪೂರಕವಾದ ಓರಲ್ ಇನ್ಸುಲಿನ್ ಶಿಫಾರಸ್ಸು ಮಾಡಿದ್ದರೆ , ಅದನ್ನೂ ಯಾವುದೇ ನಿರ್ಲಕ್ಷ್ಯವಿಲ್ಲದೆ ತೆಗೆದುಕೊಳ್ಳುವುದು ಕಡ್ಡಾಯ .

9 . ನಿಮ್ಮ ಪಾದಗಳನ್ನು ಪ್ರತಿದಿನ ಗಮನಿಸಿ

9 . ನಿಮ್ಮ ಪಾದಗಳನ್ನು ಪ್ರತಿದಿನ ಗಮನಿಸಿ

ಮಧುಮೇಹವಿರುವವರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಕಾಲುಗಳ ಅದರಲ್ಲೂ ಅವರ ಪಾದಗಳ ಕಡೆ ಹೆಚ್ಚು ಗಮನ ವಹಿಸಬೇಕಾಗುತ್ತದೆ . ಏಕೆಂದರೆ ಬೇರೆ ಜನರಿಗೆ ಹೋಲಿಸಿದರೆ ಮಧುಮೇಹ ಇರುವವರು ಕಾಲುಗಳ ಸಮಸ್ಯೆಯನ್ನು ಬಹಳ ಎದುರಿಸುತ್ತಾರೆ . 2009 ನೇ ಡಯಾಬಿಟಿಕ್ ಮೆಡಿಸಿನ್ ವರದಿಯ ಪ್ರಕಾರ ಮಧುಮೇಹ ಇರುವವರಿಗೆ ನರಗಳ ಮತ್ತು ಚರ್ಮದಲ್ಲಿ ರಕ್ತ ಸಂಚಾರದ ನಾಳಗಳ ಸಮಸ್ಯೆಗಳು ಜೊತೆಗೆ ಅಂಟಿಕೊಂಡಿರುತ್ತವೆ . ಇನ್ನು ಕಾಲುಗಳ ವಿಷಯದಲ್ಲಿ ಏನಾದರೂ ನಿರ್ಲಕ್ಷ್ಯ ವಹಿಸಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ . ಪ್ರತಿದಿನ ಸಂಜೆ ಊಟಕ್ಕೆ ಮುಂಚೆ ಕಾಲು ತೊಳೆಯುವಾಗ ಕಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ . ಅಲ್ಲಿ ಏನಾದರೂ ಹುಣ್ಣುಗಳು , ಕೆಂಪು ಗುಳ್ಳೆಗಳು ಅಥವಾ ನೀವೇ ಯಾವುದಾದರೂ ಕೆಲಸ ಮಾಡಲು ಹೋಗಿ ಮೂಗೇಟು ಮಾಡಿಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ . ಏಕೆಂದರೆ ಮಧುಮೇಹ ಇರುವವರಿಗೆ ಗಾಯಗಳು ಬೇಗ ಮಾಗುವುದಿಲ್ಲ ಎಂಬ ಮಾತಿದೆ .

10 . ನೀವು ಹೊರಗೆ ಹೋದಾಗ ನಿಮ್ಮದೇ ನೀರಿನ ಬಾಟಲಿ ಮತ್ತು ಊಟದ ಬುತ್ತಿ ಕೊಂಡೊಯ್ಯಿರಿ

10 . ನೀವು ಹೊರಗೆ ಹೋದಾಗ ನಿಮ್ಮದೇ ನೀರಿನ ಬಾಟಲಿ ಮತ್ತು ಊಟದ ಬುತ್ತಿ ಕೊಂಡೊಯ್ಯಿರಿ

ಮೇಲೆ ತಿಳಿಸಿದ ಎಲ್ಲ ಅಂಶಗಳ ಜೊತೆಗೆ ಮಧುಮೇಹಿಗಳು ತಮ್ಮ ಆಹಾರ ಪದ್ದತಿಯ ಬಗ್ಗೆಯೂ ವಿಶೇಷ ಗಮನ ವಹಿಸಬೇಕಾಗಿರುವುದು ಅತ್ಯಗತ್ಯ . ಹೊರಗಡೆ ಎಲ್ಲಾದರೂ ಹೋದರೆ ನಿಮ್ಮ ಜೊತೆಯಲ್ಲೇ ಒಂದು ಶುದ್ಧ ಕುಡಿಯುವ ನೀರಿನ ಬಾಟಲಿ ಮತ್ತು ನಿಮಗೆ ವೈದ್ಯರು ನಿಗದಿಪಡಿಸಿದ ಆಹಾರವನ್ನು ತೆಗೆದುಕೊಂಡು ಹೋಗುವುದು ಸೂಕ್ತ . ಆಗ ಅಲ್ಲಿ ಒಂದು ವೇಳೆ ಬಾಯಾರಿಕೆಯಾಗಿ ರಸ್ತೆ ಬದಿಯಲ್ಲೋ ಅಥವಾ ಯಾವುದಾದರೂ ಬೇಕರಿಯಲ್ಲೋ ಸಿಗುವ ತಂಪು ಪಾನೀಯದ ಮೊರೆ ಹೋಗಿ ಮಧುಮೇಹವನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುವ ಪ್ರಮೇಯ ಬರುವುದಿಲ್ಲ .

ಡಯಾಬಿಟಿಸ್ ಇರುವವರು ಹೆಚ್ಚು ನೀರು ಕುಡಿಯಬೇಕೆಂದು ವೈದ್ಯರು ಹೇಳುತ್ತಾರೆ . ಮಧುಮೇಹಿಗಳು ಎಷ್ಟು ನೀರು ಕುಡಿಯುತ್ತಾರೋ ಅಷ್ಟೂ ಒಳ್ಳೆಯದೇ . ಆಗಾಗ್ಗೆ ನೀರು ಕುಡಿಯಲು ನಿಮಗೆ ನೆನಪಿಸುವಂತೆ ನಿಮ್ಮ ಮೊಬೈಲ್ ನಲ್ಲಿ ರಿಮೈಂಡರ್ ಅನ್ನು ಸೆಟ್ ಮಾಡಿಕೊಳ್ಳಿ ಇಷ್ಟೆಲ್ಲಾ ಅಂಶಗಳನ್ನು ನೀವು ನಿಮ್ಮ ಆತ್ಮಬಲದಿಂದ ಪಾಲಿಸಿದ್ದೇ ಆದರೆ ಮಧುಮೇಹ ನಿಮ್ಮ ಪಾಲಿಗೆ ಒಂದು ರೋಗವೇ ಅಲ್ಲ .

Most Read: ಬಾಟಲಿ ನೀರು ನಲ್ಲಿ ನೀರಿಗಿಂತಲೂ ಹೆಚ್ಚು ಅಪಾಯಕಾರಿ!

" ಸರ್ವೇಜನಃ ಸುಖಿನೋ ಭವಂತು "

English summary

10 Things that Diabetic People Should Do Daily

Being diagnosed with diabetes is not the end of the world.It is true that life can get a little frustrating when you have so much to do to keep your blood sugar level under control and keep diabetes-related complications at bay. But thinking too much about it and increasing your stress level will only worsen your condition. Remember that diabetes is a balancing act. A balanced diet, an exercise routine, your medications and good support from family and friends can help you in managing your disease. In addition, there are certain small things that can help in your mission. Taking one step at a time and consistently following these tips is all you need to do.
X