For Quick Alerts
ALLOW NOTIFICATIONS  
For Daily Alerts

ಮಧುಮೇಹದ ಅಡ್ಡಪರಿಣಾಮಗಳು: ಇದು ತುಂಬಾನೇ ಅಪಾಯಕಾರಿ ಕಾಯಿಲೆ!!

|

ಮಧುಮೇಹವೆನ್ನುವುದು ಇಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡಲು ಆರಂಭಿಸಿರುವುದು ಬದಲಾಗುತ್ತಿರುವಂತಹ ಜೀವನಶೈಲಿ, ಚಟುವಟಿಕೆಯಿಲ್ಲದ ಬದುಕು, ವ್ಯಾಯಾಮವಿಲ್ಲದೆ ಇರುವಂತಹ ದೇಹ...ಹೀಗೆ ಹಲವಾರು ಕಾರಣಗಳು ಇವೆ. ಮಧುಮೇಹವು ಸದ್ದಿಲ್ಲದೆ ಕೊಲ್ಲುವಂತಹ ರೋಗವಾಗಿದೆ. 2040ರಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಮಧುಮೇಹಿಗಳು ಇರಲಿದ್ದಾರೆ ಎಂದು ವರದಿಗಳು ಹೇಳಿವೆ.

ಈಗ ವಿಶ್ವದೆಲ್ಲೆಡೆ ಸುಮಾರು 123 ಮಿಲಿಯನ್ ಮಧುಮೇಹಿಗಳಿದ್ದಾರೆ. ಮಧುಮೇಹವೆನ್ನುವುದು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದ ಮೇಲೆ ಅದು ಸಂಪೂರ್ಣವಾಗಿ ಆತನ ಜೀವನವನ್ನು ನರಕ ಮಾಡಿಬಿಡುವುದು. ಮಧುಮೇಹದಿಂದ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ. ಉದಾಹರಣೆಗೆ ಜ್ವರದಿಂದಾಗಿ ನೀವು ನಿಶ್ಯಕ್ತಿಯಿಂದ ಬಳಲಬಹುದು, ಸಿಡುಬಿನಂತಹ ಕಾಯಿಲೆಗಳು ನಿಮ್ಮ ದೇಹದ ಮೇಲೆ ಶಾಶ್ವತ ಗುರುತನ್ನು ಮಾಡಿಬಿಡಬಹುದು ...

1.ಅಸಾಮಾನ್ಯ ಚರ್ಮದ ಪದರ ನಿರ್ಮಾಣವಾಗುತ್ತಿದ್ದರೆ

1.ಅಸಾಮಾನ್ಯ ಚರ್ಮದ ಪದರ ನಿರ್ಮಾಣವಾಗುತ್ತಿದ್ದರೆ

ಚರ್ಮ ದಪ್ಪಾಗುತ್ತಿದ್ದರೆ, ಇದು ತುಂಬಾ ಗಡಸು, ಕಪ್ಪು, ನಯವಾಗಿದ್ದರೆ ಆಗ ಇದು ಟೈಪ್ 2 ಮಧುಮೇಹದ ಲಕ್ಷಣವೆಂದು ಹೇಳಬಹುದು. ವ್ಯಕ್ತಿಯ ದೇಹವು ಉತ್ಪತ್ತಿಯಾಗುವ ಇನ್ಸುಲಿನ್ ಹಾರ್ಮೋನ್ ಗೆ ಪ್ರತಿರೋಧ ಒಡ್ಡುವುದು. ಇನ್ಸುಲಿನ್ ದೇಹದಲ್ಲಿ ಅತಿಯಾಗಿ ಪರಿಚಲನೆಯಾದಾಗ, ದೇಹವು ಚರ್ಮದ ಕೋಶಗಳಿಗೆ ಹೊಸತನ್ನು ಉತ್ಪತ್ತಿ ಮಾಡಲು ಉತ್ತೇಜಿಸುವುದು ಮತ್ತು ಚರ್ಮದಲ್ಲಿ ಮೆಲನಿನ್ ಉತ್ತತ್ತಿಯನ್ನು ಇದು ಉತ್ತೇಜಿಸುವುದು. ಇದರಿಂದ ದಪ್ಪ ಹಾಗೂ ಕಡು ಬಣ್ಣದಲ್ಲಿ ಚರ್ಮದ ಪದರ ಕಂಡುಬರುವುದು.

2. ಅಧಿಕ ಕೊಲೆಸ್ಟ್ರಾಲ್

2. ಅಧಿಕ ಕೊಲೆಸ್ಟ್ರಾಲ್

ನಿಮಗೆ ಮಧುಮೇಹವಿದೆಯೆಂದು ತಿಳಿದಾಗ ಕೊಲೆಸ್ಟ್ರಾಲ್ ಕೂಡ ಅತಿಯಾಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂದರೆ, ಇದು ಮಧುಮೇಹದ ಮತ್ತೊಂದು ಅಡ್ಡಪರಿಣಾಮ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಅದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್(ಎಚ್ ಡಿಎಲ್) ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಅನಾರೋಗ್ಯಕರ ಕೊಬ್ಬಿನ ಕೋಶ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಿಸುವುದು. ಯಾಕೆಂದರೆ ದೇಹವು ಇನ್ಸುಲಿನ್ ನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಿಲ್ಲ.

3. ಮೆದುಳಿನ ಆರೋಗ್ಯ ಸಮಸ್ಯೆಗಳು

3. ಮೆದುಳಿನ ಆರೋಗ್ಯ ಸಮಸ್ಯೆಗಳು

ನ್ಯೂರಾಲಜಿ ಎನ್ನುವ ಜರ್ನಲ್ ನಲ್ಲಿ ಪ್ರಕಟವಾಗಿರುವಂತಹ ಅಧ್ಯಯನ ವರದಿ ಪ್ರಕಾರ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಅಡ್ಡಪರಿಣಾಮವೆಂದರೆ, ಅವರ ಜ್ಞಾಪಕಶಕ್ತಿ ಮತ್ತು ಮೆದುಳಿನ ಕಾರ್ಯವು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುವುದು. ಇದರಿಂದ ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಸಮಸ್ಯೆ ಕಾಣಿಸಬಹುದು. ಕೆಲವು ಮಧುಮೇಹಿಗಳಲ್ಲಿ ಮೆದುಳಿಗೆ ರಕ್ತಸಂಚಾರವು ಅಸಾಮಾನ್ಯವಾಗಿರುವ ಕಾರಣದಿಂದ ಹೀಗೆ ಆಗಬಹುದು ಎಂದು ಅಧ್ಯಯನವು ತಿಳಿಸಿವೆ.

4. ಒಸಡಿನ ಕಾಯಿಲೆಗಳು

4. ಒಸಡಿನ ಕಾಯಿಲೆಗಳು

ಕೊಲಂಬಿಯಾ ಯೂನಿವರ್ಸಿಟಿ ಕೈಗೊಂಡ ಅಧ್ಯಯನವೊಂದರ ಪ್ರಕಾರ ಮಧುಮೇಹಿಗಳು ಒಸಡಿನ ಸಮಸ್ಯೆಗೆ ಸಿಲುಕುವುದು ಅಧಿಕ ಮತ್ತು ಇದು ಅನಿರೀಕ್ಷಿತವಾದ ಅಡ್ಡಪರಿಣಾಮವಾಗಿದೆ. ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾದಾಗ, ಅದು ಒಸಡಿನಲ್ಲಿ ಕಾಲಜನ್ ಅಂಗಾಂಶವನ್ನು ಮಾರ್ಪಡಿಸುವ ಕಾರಣದಿಂದಾಗಿ ಹೆಚ್ಚು ಉರಿಯೂತ ಮತ್ತು ಸೋಂಕಿಗೆ ಒಳಗಾಗುವುದು. ಮಧುಮೇಹದಿಂದಾಗಿ ಗಾಯಗಳು ತುಂಬಾ ನಿಧಾನವಾಗಿ ಒಣಗುವ ಕಾರಣದಿಂದ ಒಸಡಿನ ಸೋಂಕು ಶಮನವಾಗಲು ದೀರ್ಘಕಾಲ ಬೇಕಾಗಬಹುದು.

5. ಶ್ರವಣದೋಷ

5. ಶ್ರವಣದೋಷ

ಮಧುಮೇಹಿ ಅಲ್ಲದೆ ಇರುವವರಿಗಿಂತ ಮಧುಮೇಹಿಗಳಲ್ಲಿ ಶ್ರವಣದೋಷವು ಅತಿಯಾಗಿ ಕಾಣಿಸಿಕೊಳ್ಳುವುದು ಎಂದು ಹಲವಾರು ಅಧ್ಯಯನ ವರದಿಗಳು ಮತ್ತು ಸಮೀಕ್ಷೆಗಳು ಹೇಳಿವೆ. ಇದು ಮಧುಮೇಹದ ಮತ್ತೊಂದು ಅಡ್ಡಪರಿಣಾಮವಾಗಿದೆ. ಮಧುಮೇಹವು ಕಿವಿಯೊಳಗಿನ ರಕ್ತನಾಗಳಿಗೆ ಹಾನಿಯುಂಟು ಮಾಡುವುದು. ಇದರಿಂದಾಗಿ ಕೆಲವು ವರ್ಷಗಳ ಬಳಿಕ ಮಧುಮೇಹಿಗಳಿಗೆ ಕಿವಿ ಕೇಳುವುದು ಕಡಿಮೆಯಾಗುವುದು.

6. ಕಿಡ್ನಿ ವೈಫಲ್ಯ

6. ಕಿಡ್ನಿ ವೈಫಲ್ಯ

ಇದು ತುಂಬಾ ಗಂಭೀರವಾಗಿರುವಂತಹ ಮತ್ತು ಅನಿರೀಕ್ಷಿತವಾಗಿ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿರುವಂತಹ ವ್ಯಕ್ತಿಯ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವು ಕಿಡ್ನಿಯು ರಕ್ತವನ್ನು ಶುದ್ಧೀಕರಿಸುವ ವೇಳೆ ಅದರ ಕೋಶಗಳಿಗೆ ಹಾನಿ ಮಾಡುವುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೆ ಇದ್ದರೆ ಆಗ ಪ್ರಾಣಹಾನಿ ಸಂಭವಿಸುವಂತಹ ಸಾಧ್ಯತೆಗಳು ಹೆಚ್ಚಾಗಿರುವುದು.

7. ಕಾಮಾಸಕ್ತಿ ಕುಂದುವಿಕೆ

7. ಕಾಮಾಸಕ್ತಿ ಕುಂದುವಿಕೆ

ಮಧುಮೇಹ ಇರುವಂತಹ ವ್ಯಕ್ತಿಗಳಲ್ಲಿ ಕೆಲವೊಂದು ಕಾಮಾಸಕ್ತಿ ಕುಂದುವಂತಹ ಕೆಲವೊಂದು ಸಮಸ್ಯೆಗಳಾದ ಅಸಾಮಾನ್ಯ ನಿಮಿರುವಿಕೆ, ಶೀಘ್ರ ಸ್ಖಲನ, ಯೋನಿ ಒಣಗುವಿಕೆ ಇತ್ಯಾದಿಗಳು. ಇದನ್ನು ಮಧುಮೇಹದ ಇತರ ಕೆಲವೊಂದು ಅಡ್ಡಪರಿಣಾಮಗಳು ಎಂದು ಹೇಳಲಾಗುತ್ತದೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಹಾರ್ಮೋನು ಅಸಮತೋಲನದಿಂದಾಗಿ ಲೈಂಗಿಕಾಸಕ್ತಿಯು ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಪುರುಷರಲ್ಲಿ ಟೆಸ್ಟೊಸ್ಟೆರಾನ್ ಮಟ್ಟವು ಕುಗ್ಗುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

8. ಕಣ್ಣಿನ ನರಗಳ ಶಕ್ತಿ ಕುಂದಿ ಹೋಗುವುದು

8. ಕಣ್ಣಿನ ನರಗಳ ಶಕ್ತಿ ಕುಂದಿ ಹೋಗುವುದು

ಮಧುಮೇಹ ಹೃದಯ, ಕಿಡ್ನಿಗಳ ವೈಫಲ್ಯಕ್ಕೆ ಮಾತ್ರ ಕಾರಣವಾಗುವುದಿಲ್ಲ, ಮಧುಮೇಹವನ್ನು ನಿರ್ಲಕ್ಷಿಸದರೆ, ಅದು ದೇಹದ ಅತಿ ಮುಖ್ಯ ಅಂಗವಾದ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ದೀರ್ಘಕಾಲ ಹಾಗೇ ಉಳಿದರೆ ನಿಮ್ಮ ಕಣ್ಣು ಕುರುಡಾಗುವ ಸಂಭವವೂ ಇದೆ. ರಕ್ತದಲ್ಲಿನ ಅತಿಯಾದ ಸಕ್ಕರೆ ಅಂಶದಿಂದ ಕಣ್ಣಿನ ರಕ್ತಕಣಗಳು ಸಮಸ್ಯೆಗೆ ಒಳಗಾಗುತ್ತದೆ. ಕಣ್ಣಿನ ಈ ರಕ್ತಕಣಗಳು ತೊಂದರೆಗೊಳಗಾದರೆ ಕಣ್ಣಿಗೆ ಸಂಬಂಧಿಸಿದ ನರಗಳ ಶಕ್ತಿಯೂ ಕುಂದುಹೋಗಿ, ರೆಟಿನಾ ಹಾನಿಗೊಳಗಾಗಿ ಕುರುಡುತನವನ್ನು ತಂದೊಡ್ಡುತ್ತದೆ.

9 ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು!

9 ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು!

ಮಧುಮೇಹಿಗಳು ಕಾಮಕೂಟದಲ್ಲಿ ಮೊದಲಿನಷ್ಟು ಚಟುವಟಿಕೆಯಿಂದ ಪಾಲ್ಗೊಳ್ಳಲು ಸಾಧ್ಯವಾಗದೇ ಇರಬಹುದು. ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಹಾಗೂ ಉದ್ರೇಕತೆಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಸಾಧ್ಯವಾಗದೆಯೂ ಹೋಗಬಹುದು. ಮಧುಮೇಹದಿಂದ ಆಕ್ಸಿಡೇಟಿವ್ ಒತ್ತಡ ಉಂಟಾಗುವುದು. ಇದರಿಂದ ವೀರ್ಯದಲ್ಲಿರುವ ಡಿಎನ್‌ಎಯು ವಿಘಟನೆಯಾಗಬಹುದು. ಅಲ್ಲದೆ ಮೊದಲ ಹಂತದ ಮಧುಮೇಹದಿಂದ ಬಳಲುವ ವ್ಯಕ್ತಿಯ ಡಿಎನ್ ಎಗೆ ಹಾನಿಯಾಗುವ ಸಾಧ್ಯತೆಯು ತುಂಬಾ ಹೆಚ್ಚಿರುವುದು. ಇಂತಹ ಜನರಲ್ಲಿ ವೀರ್ಯದ ಪ್ರಮಾಣವು ಕಡಿಮೆಯಾಗಿರುವುದು. ಇತ್ತೀಚೆಗೆ ನಡೆಸಿರುವ ಅಧ್ಯಯನದಲ್ಲಿ ಮಧುಮೇಹವಿರುವ ಪುರುಷರು ಮತ್ತು ಸಾಮಾನ್ಯವಾಗಿರುವ ಪುರುಷರ ಮೇಲೆ ಸಂಶೋಧನೆ ನಡೆಸಲಾಯಿತು. ಇವರೆಲ್ಲರ ವಯಸ್ಸು 25-45ರ ಹರೆಯವಾಗಿತ್ತು. ಸಾಮಾನ್ಯ ಪುರುಷರಿಗೆ ಹೋಲಿಸಿದರೆ ಮಧುಮೇಹ ಇರುವಂತಹ ವ್ಯಕ್ತಿಗಳಲ್ಲಿ ಡಿಎನ್ಎ ಅಪಾಯವು ಹೆಚ್ಚಾಗಿರುವುದು ಕಂಡು ಬಂದಿದೆ.

10. ಗರ್ಭಾವಸ್ಥೆಯಲ್ಲಿ ಬಹಳ ಅಪಾಯಕಾರಿ

10. ಗರ್ಭಾವಸ್ಥೆಯಲ್ಲಿ ಬಹಳ ಅಪಾಯಕಾರಿ

ನೀವು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಇದರಿಂದ ಗರ್ಭಧಾರಣೆಯ ಡಯಾಬಿಟಿಸ್ ನ್ನು ಸರಿಯಾಗಿ ಗಮನಿಸಲು ಸಾಧ್ಯ. ಗರ್ಭಧಾರಣೆಯ ಡಯಾಬಿಟಿಸ್ ರೋಗಿಯಾಗಿದ್ದರೆ ನೀವು ನಿಯಮಿತವಾಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡು ಡಯಾಬಿಟಿಸ್ ಪರಿಸ್ಥಿತಿ ಗಮನಿಸಬೇಕು.

English summary

Unexpected Side Effects Of Diabetes You Must Know

Diabetes is a health condition so common these days, that it has become a household name! It has been estimated that India has the highest number of diabetes patients in the world and by the year 2040, the number of diabetes patients in the world would be around 123 million! So, we can see how prevalent this disease has become over the years and probably the changing lifestyle factors of people have played a role in its increase.
Story first published: Friday, September 14, 2018, 18:19 [IST]
X
Desktop Bottom Promotion