For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸಮಯದಲ್ಲಿ ಮಧುಮೇಹಿಗಳಿಗೆ ಕೆಲವು ಸಲಹೆಗಳು-ತಪ್ಪದೇ ಅನುಸರಿಸಿ

|

ಭಾರತದಲ್ಲಿ ಹಬ್ಬಗಳೆಂದರೆ ಅಲ್ಲಿ ಸಿಹಿ ಇಲ್ಲದೆ ಖಂಡಿತವಾಗಿಯೂ ಅದು ಪರಿಪೂರ್ಣವಾಗಲ್ಲ. ದೇಶದ ಯಾವ ಪ್ರದೇಶಕ್ಕೂ ಹೋದರೂ ಸಿಹಿ ಮಾತ್ರ ಇದ್ದೇ ಇರುವುದು. ಸಿಹಿಯಲ್ಲಿ ಬದಲಾವಣೆಗಳು ಇರಬಹುದು. ಆದರೆ ಬಾಯಿಗೆ ಮಾತ್ರ ಸಿಹಿ ರುಚಿಯಿರುವುದು. ಅದರಲ್ಲೂ ದೀಪಾವಳಿ ಎಂದರೆ ಅದು ಸಿಹಿಯ ಹಬ್ಬವೆಂದೇ ಪರಿಗಣಿಸಲಾಗಿದೆ. ಯಾಕೆಂದರೆ ದೀಪಾವಳಿ ಸಮಯದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವಷ್ಟು ಸಿಹಿತಿಂಡಿಗಳು ಬೇರೆ ಯಾವ ಹಬ್ಬಹರಿದಿನಗಳಿಗೂ ಮಾರಾಟವಾಗುವುದಿಲ್ಲ.

Tips for Diabetic Patients

ಇಂತಹ ಸಮಯದಲ್ಲಿ ಸಿಹಿತಿಂಡಿಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮಧುಮೇಹಿಗಳು ಈ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಸಿಹಿತಿಂಡಿಗಳು ನಿಮ್ಮನ್ನು ಅದರತ್ತ ಆಕರ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇಂತಹ ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ಕಡೆಗಣಿಸುವುದು ತುಂಬಾ ಕಷ್ಟಕರವಾಗಿರುವುದು. ಹೀಗಾಗಿ ನೀವು ಚಿಂತೆ ಮಾಡಿ ಖಿನ್ನತೆಗೆ ಬೀಳುವುದು ಬೇಡ. ದೀಪಾವಳಿಯನ್ನು ಸಂಪೂರ್ಣವಾಗಿ ಖುಷಿಯಿಂದ ಆಚರಿಸಿಕೊಳ್ಳಲು ಮಧುಮೇಹಿಗಳು ಈ ಕೆಳಗಿನ ವಿಧಾನಗಳನ್ನು ಪಾಲಿಸಿಕೊಂಡು ಹೋಗಿ.

ದಿನಕ್ಕೆ ತಯಾರಿ ನಡೆಸಿ

ದಿನಕ್ಕೆ ತಯಾರಿ ನಡೆಸಿ

ದೀಪಾವಳಿ ಹಬ್ಬವು ವಾರಕ್ಕೆ ಮೊದಲೇ ಆರಂಭವಾಗುವ ಕಾರಣದಿಂದಾಗಿ ಇದಕ್ಕಾಗಿ ನೀವು ಆಹಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನೀವು ಆದಷ್ಟು ಮಟ್ಟಿಗೆ ಕಡಿಮೆ ಕ್ಯಾಲರಿ ಇರುವಂತಹ ಆಹಾರವನ್ನು ಸೇವಿಸಲು ವಾರಕ್ಕಿಂತ ಮೊದಲೇ ಆರಂಭಿಸಬೇಕು. ಇದರಿಂದ ನೀವು ದೀಪಾವಳಿ ದಿನ ಸ್ವಲ್ಪ ಹೆಚ್ಚುವರಿ ಸಕ್ಕರೆ ತಿಂದರೂ ಕರಗಿಸಿಕೊಳ್ಳಬಹುದು.

Most Read: ದೀಪಾವಳಿ ದಿನ ಮನೆಗೆ ಉಪ್ಪು ತರಬೇಕು ಹೇಳುತ್ತಾರೆ, ಯಾಕೆ ಗೊತ್ತೇ?

ರಕ್ತದ ಸಕ್ಕರೆ ಮಟ್ಟ ಪರೀಕ್ಷೆ

ರಕ್ತದ ಸಕ್ಕರೆ ಮಟ್ಟ ಪರೀಕ್ಷೆ

ದೀಪಾವಳಿಗೆ ಮೊದಲು ಮತ್ತು ಬಳಿಕ ನೀವು ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿಕೊಳ್ಳಿ. ಇದರಿಂದ ನೀವು ಎಷ್ಟು ಕ್ಯಾಲರಿ ಸೇವಿಸಬಹುದು ಮತ್ತು ಅದನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿಯಬಹುದು. ಸ್ವಲ್ಪ ಮಟ್ಟಿನ ವ್ಯಾಯಾಮ ಕೂಡ ನಿಮ್ಮ ನೆರವಿಗೆ ಬರಲಿದೆ.

ಕ್ಯಾಲರಿ ಲೆಕ್ಕಹಾಕಿ

ಕ್ಯಾಲರಿ ಲೆಕ್ಕಹಾಕಿ

ನೀವು ಎಷ್ಟು ಮಟ್ಟಿನ ಕ್ಯಾಲರಿ ಸೇವನೆ ಮಾಡುತ್ತೀರಿ ಎಂದು ಲೆಕ್ಕಹಾಕಿಕೊಂಡರೆ ಆಗ ನಿಮಗೆ ಸಕ್ಕರೆ ಮಟ್ಟದ ಬಗ್ಗೆ ಯಾವುದೇ ರೀತಿಯ ಗೊಂದಲವು ಇರದು. ಶುಗರ್ ಫ್ರೀ ಸಿಹಿತಿಂಡಿಗಳು ಕಡಿಮೆ ಸಕ್ಕರೆ ಹೊಂದಿದ್ದರೂ ಇದನ್ನು ಅತಿಯಾಗಿ ಸೇವಿಸಬೇಡಿ. ನಿಮ್ಮ ವೈದ್ಯರ ಸಲಹೆ ಪಡೆದುಕೊಂಡು ಎಷ್ಟು ಮಟ್ಟಿನ ಕೃತಕ ಸಕ್ಕರೆ ನೀವು ಸೇವಿಸಬಹುದು ಎಂದು ತಿಳಿಯಿರಿ.

Most Read: ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ

ನಿಮ್ಮ ದಿನಿತ್ಯದ ಮಧುಮೇಹದ ಕ್ರಮ ಪಾಲಿಸಿ

ನಿಮ್ಮ ದಿನಿತ್ಯದ ಮಧುಮೇಹದ ಕ್ರಮ ಪಾಲಿಸಿ

ಮಧುಮೇಹಿಗಳಿಗೆ ಯಾವಾಗ ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವುದನ್ನು ತಿನ್ನಬೇಕು, ಏನನ್ನು ಕಡೆಗಣಿಸಬೇಕು ಎಂದು ಸರಿಯಾಗಿ ತಿಳಿದಿರುವುದು. ಹಬ್ಬಗಳ ಸಂದರ್ಭದಲ್ಲಿ ನೀವು ಇದನ್ನು ಕಠಿಣವಾಗಿ ಪಾಲಿಸಬೇಕು. ಮಧುಮೇಹದ ನಿಯಮದ ಪ್ರಕಾರ ನೀವು ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ಒಳ್ಳೆಯ ಆರೋಗ್ಯಕ್ಕಾಗಿ ವೈದ್ಯರು ಸೂಚಿಸಿರುವಂತಹ ವಿಧಾನಗಳನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ. ಪ್ಯಾಕ್ ಮಾಡಲ್ಪಟ್ಟಿರುವ ಆಹಾರದಲ್ಲಿರುವ ಪೋಷಕಾಂಶಗಳ ಮಾಹಿತಿ ಬಗ್ಗೆ ನೀವು ತಿಳಿಯಿರಿ. ಯಾಕೆಂದರೆ ಇದರಿಂದ ನಿಮಗೆ ಸಕ್ಕರೆ ಮಟ್ಟ ತಿಳಿಯುವುದು.

ಮನೆಯಲ್ಲೇ ಸಿಹಿತಿಂಡಿಗಳನ್ನು ತಯಾರಿಸಿ.

ಮನೆಯಲ್ಲೇ ಸಿಹಿತಿಂಡಿಗಳನ್ನು ತಯಾರಿಸಿ.

ಹಬ್ಬಗಳ ದಿನಗಳಲ್ಲಿ ಮನೆಯಲ್ಲೇ ಸಿಹಿತಿಂಡಿಗಳನ್ನು ತಯಾರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ತುಂಬಾ ತಯಾರಿ, ಸಮಯ ಬೇಕಾಗುತ್ತದೆ. ಇದಕ್ಕಾಗಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮಾರುಕಟ್ಟೆಯಿಂದ ಸಿಹಿತಿಂಡಿಗಳನ್ನು ಖರೀದಿಸುವರು. ಆದರೆ ಮನೆಯಲ್ಲೇ ತಯಾರಿಸಿದ ಸಿಹಿತಿಂಡಿಗಳು ನಿಮಗೆ ಭವಿಷ್ಯದಲ್ಲಿ ಹೆಚ್ಚಿನ ತಲೆನೋವು ಉಂಟು ಮಾಡದು. ಅಂಗಡಿಯಿಂದ ತರಿಸಿಕೊಂಡಿರುವ ಸಿಹಿಯು ನಿಮ್ಮ ಸಕ್ಕರೆ ಮಟ್ಟ ಅತಿಯಾಗಿ ಹೆಚ್ಚಿಸುವುದು. ಈ ದೀಪಾವಳಿಗೆ ನೀವು ಆರೋಗ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಮನೆಯಲ್ಲೇ ಎಲ್ಲವನ್ನು ತಯಾರಿಸಿಕೊಳ್ಳಿ. ತುಂಬಾ ಕರಿದ ತಿಂಡಿಯ ಬದಲು ಬೇಕ್ ಮಾಡಿದ ತಿಂಡಿಗಳು ಉತ್ತಮವೆಂದು ವೈದ್ಯರು ಹೇಳುತ್ತಾರೆ. ಇಂಟರ್ನೆಟ್ ನಲ್ಲಿ ಇರುವ ಸಾವಿರಾರು ಸಿಹಿತಿಂಡಿ ತಯಾರಿಸುವ ವಿಧಾನ ತಿಳಿದುಕೊಂಡು ಅದನ್ನು ಮನೆಯಲ್ಲೇ ಮಾಡಿ.

ವ್ಯಾಯಾಮ

ವ್ಯಾಯಾಮ

ನೀವು ಹಬ್ಬಗಳ ದಿನಗಳಲ್ಲಿ ಹೆಚ್ಚಾಗಿ ಉದಾಸೀನಗೊಳ್ಳುವಿರಿ. ಸಿಹಿತಿಂಡಿ ತಿಂದು, ಕುಟುಂಬದವರೊಂದಿಗೆ ಮಾತನಾಡಿ ಸಮಯ ಕಳೆಯುವಿರಿ. ನಿಮ್ಮ ನಿತ್ಯದ ಕೆಲವೊಂದು ಚಟುವಟಿಕೆಗಳೊಂದಿಗೆ ವ್ಯಾಯಾಮವನ್ನು ಕೂಡ ಸೇರಿಸಿಕೊಳ್ಳಿ. ದೈಹಿಕ ವ್ಯಾಯಾಮವು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಕ್ಯಾಲರಿ ಕಡಿಮೆ ಮಾಡುವುದು. ಇದರಿಂದ ನೀವು ಒಂದು ತುಂಡು ಹೆಚ್ಚು ಸಿಹಿ ತಿನ್ನಬಹುದು.

ನೀವು ಹಬ್ಬದ ದಿನಗಳ ಸಂತೋಷವನ್ನು ಹೆಚ್ಚಿಸಿಕೊಳ್ಳಲು ಡ್ಯಾನ್ಸ್ ಮಾಡಿ. ಇದು ಕ್ಯಾಲರಿ ದಹಿಸಲು ಮಾತ್ರ ನೆರವಾಗುವುದಲ್ಲದೆ, ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುವುದು.

Most Read:ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಆನಂದಿಸಿ

ಆನಂದಿಸಿ

ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸುವ ಜತೆಗೆ ದೀಪಾವಳಿಯು ಸಂಭ್ರಮ ಹಾಗೂ ಸಂತೋಷದ ಸಮಯವೆನ್ನುವುದನ್ನು ಮರೆಯಬೇಡಿ. ನಿಮ್ಮ ಸಂತೋಷದ ಬಗ್ಗೆ ಕೂಡ ಗಮನಹರಿಸಿ. ನೀವು ಅನಾರೋಗ್ಯದಿಂದ ಇದ್ದೀರಿ ಎಂದು ತಿಳಿದು ಮನಸ್ಸು ಕೊರಗಬಾರದು. ಎಲ್ಲವನ್ನೂ ಆನಂದಿಸಿ.

ಸಂತೋಷ ಹಾಗೂ ಆರೋಗ್ಯವಾಗಿರಲು ಹಲವಾರು ಕಾರಣಗಳು ಇವೆ.

ದೀಪಾವಳಿಯ ಶುಭಾಶಯಗಳು.

English summary

Tips for Diabetic Patients, during deepavali time

Diabetics need to be very careful about what they eat during Diwali. Here are some helpful diet tips for diabetes patients that can ensure a healthy Diwali for them.
X
Desktop Bottom Promotion