For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗವನ್ನು ನಿಯಂತ್ರಿಸುವ ಪವರ್ ಫುಲ್ ನೈಸರ್ಗಿಕ ಪಾನೀಯ

By Hemanth
|

ಭೂಮಿ ಮೇಲಿರುವ ಎಷ್ಟೇ ಧೈರ್ಯವಂತ ಮನುಷ್ಯನಾಗಿದ್ದರೂ ಆತ ಹೆದರುವುದು ಎರಡೇ ವಿಷಯಗಳಿಗೆ. ಒಂದು ಸಾವು, ಮತ್ತೊಂದು ರೋಗ. ಅದರಲ್ಲೂ ಮನುಷ್ಯ ಪ್ರಮುಖವಾಗಿ ಡಯಾಬಿಟಿಸ್(ಮಧುಮೇಹ)ಗೆ ಅತಿಯಾಗಿ ಹೆದರುತ್ತಾನೆ. ಇದು ನಿಧಾನವಾಗಿ ಕೊಲ್ಲುವ ರೋಗವೆಂದರೂ ತಪ್ಪಿಲ್ಲ. ಯಾಕೆಂದರೆ ಇದು ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ ಜೀವನಪೂರ್ತಿ ಇದನ್ನು ಅನುಭವಿಸಬೇಕು. ಸರಿಯಾದ ಔಷಧಿ ಕ್ರಮ ಹಾಗೂ ಜೀವನಶೈಲಿ ಅಳವಡಿಸಿಕೊಂಡರೆ ಹೋದರೆ ಆಗ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ದೇಹದಲ್ಲಿ ಹಾರ್ಮೋನ್ ಇನ್ಸುಲಿನ್ ಉತ್ಪತ್ತಿಯಲ್ಲಿ ಏರುಪೇರಾದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗುವುದು. ಮಧುಮೇಹ ಆರಂಭದಲ್ಲಿ ಕೆಲವು ಲಕ್ಷಣಗಳನ್ನು ತೋರಿಸುವುದು. ಇದರಲ್ಲಿ ಅತಿಯಾದ ಬಾಯಾರಿಕೆ, ಪದೇಪದೇ ಮೂತ್ರವಿಸರ್ಜನೆ, ಗಾಯಗಳು ನಿಧಾನವಾಗಿ ಗುಣವಾಗುವುದು, ಪ್ರತಿರೋಧಕ ಶಕ್ತಿ ಕುಗ್ಗುವುದು, ತೂಕದಲ್ಲಿ ಏರುಪೇರು, ನಿಶ್ಯಕ್ತಿ ಇತ್ಯಾದಿಗಳು ಇದರ ಪ್ರಮುಖ ಲಕ್ಷಣಗಳು.

ಮಧುಮೇಹವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲವಾದರೂ ಸರಿಯಾದ ಔಷಧಿ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ಇದರ ಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ಮಧುಮೇಹ ಬಂದ ರೋಗಿಗಳು ಪ್ರತಿನಿತ್ಯ ಔಷಧಿ ಸೇವನೆ ಮಾಡಲೇಬೇಕು. ಪ್ರತಿನಿತ್ಯ ಔಷಧಿ ಸೇವನೆ ಮಾಡುವುದರಿಂದ ರೋಗ ಲಕ್ಷಣಗಳು ಕಡಿಮೆಯಾದರೂ ಇದು ದೀರ್ಘಕಾಲಕ್ಕೆ ದೇಹದ ಆರೋಗ್ಯದ ಮೇಲೆ ಹಾನಿಯುಂಟು ಮಾಡುವುದು. ಇದರಿಂದ ನೈಸರ್ಗಿಕವಾಗಿ ಇದರ ಲಕ್ಷಣಗಳನ್ನು ತಡೆಯುವಂತಹ ಪ್ರಯತ್ನಗಳನ್ನು ಮಾಡಬೇಕಾಗಿದೆ ಮತ್ತು ಔಷಧಿ ಸೇವನೆ ಕಡಿಮೆ ಮಾಡಬಹುದು.

diabetes home remedy

ನಮ್ಮ ಅಡುಗೆ ಮನೆ ಹಾಗೂ ಕೈದೋಟದಲ್ಲಿ ಹಲವಾರು ರೀತಿಯ ಸಾಮಗ್ರಿಗಳಿದ್ದು, ಇದನ್ನು ಬಳಸಿಕೊಂಡು ಹಲವಾರು ರೋಗಗಳನ್ನು ತಡೆಯುವುದು ಮಾತ್ರವಲ್ಲದೆ, ಅದಕ್ಕೆ ಚಿಕಿತ್ಸೆ ಕೂಡ ನೀಡಬಹುದು.

ನೈಸರ್ಗಿಕದತ್ತವಾದ ಗಿಡಮೂಲಿಕೆಗಳನ್ನು ಬಳಸಿಕೊಂಡು ತಲೆನೋವಿನಿಂದ ಹಿಡಿದು ದೊಡ್ಡ ಮಟ್ಟದ ರೋಗಗಳನ್ನು ನಿವಾರಿಸಬಹುದು. ಇಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವ ಮನೆಯಲ್ಲೇ ತಯಾರಿಸಿದ ಪಾನೀಯದ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ನೈಸರ್ಗಿಕ ಔಷಧಿಗಳ ಶಕ್ತಿ

ಆಯುರ್ವೇದವೆನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆಯುರ್ವೇದವು ಹಲವಾರು ಗಿಡಮೂಲಿಕೆಗಳನ್ನು ಬಳಸಿಕೊಂಡು ಶಕ್ತಿಶಾಲಿ ಔಷಧಿಗಳನ್ನು ತಯಾರಿಸಿ, ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು ಮತ್ತು ರೋಗಗಳ ನಿವಾರಣೆ ಮಾಡಿರುವುದು. ಆಯುರ್ವೇದದಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಇರುವುದು ದೇಹಕ್ಕೆ ತುಂಬಾ ಒಳ್ಳೆಯದು. ನೈಸರ್ಗಿಕ ಮನೆಮದ್ದುಗಳನ್ನು ತುಂಬಾ ದೀರ್ಘಕಾಲದ ತನಕ ಬಳಸಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವ ಭೀತಿಯಿಲ್ಲ.

ಮಧುಮೇಹ ಲಕ್ಷಣ ನಿವಾರಿಸುವ ಕೆಲವು ನೈಸರ್ಗಿಕ ಪಾನೀಯ.

ಬೇಕಾಗುವ ಸಾಮಗ್ರಿಗಳು

* ತಾಜಾ ನೆಲ್ಲಿಕಾಯಿಯ ಜ್ಯೂಸ್- 4 ಚಮಚ
* ದಾಲ್ಚಿನಿ ಹುಡಿ- 1 ಚಮಚ
* ಕರಿಬೇವಿನ ಎಲೆಗಳು-5-6 ಚಮಚ

ತಯಾರಿಸುವ ವಿಧಾನ

  1. ಹೇಳಿದಷ್ಟು ಪ್ರಮಾಣದ ನೆಲ್ಲಿಕಾಯಿ ಜ್ಯೂಸ್, ದಾಲ್ಚಿನ್ನಿ ಹುಡಿ, ಕರಿಬೇವಿನ ಎಲೆಗಳು ಮತ್ತು 1/2 ಕಪ್ ನೀರು ಹಾಕಿಕೊಂಡು ಜ್ಯೂಸರ್ ನಲ್ಲಿ ಮಿಶ್ರಣ ಮಾಡಿ. ಈ ಜ್ಯೂಸ್ ನ್ನು ಪ್ರತಿನಿತ್ಯ ಉಪಾಹಾರಕ್ಕೆ ಮೊದಲು ಸೇವನೆ ಮಾಡಿ. ಸಕ್ಕರೆ ಅಥವಾ ಉಪ್ಪು ಹಾಕಬೇಡಿ.
  2. ಇದನ್ನು ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಬಳಸಿದಾಗ ಅದು ಅದ್ಭುತವಾಗಿ ಕೆಲಸ ಮಾಡುವುದು. ಈ ಜ್ಯೂಸ್ ನೊಂದಿಗೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.
  3. ಆಹಾರ ಕ್ರಮದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಸಮತೋಲಿತ ಆಹಾರ, ಪ್ರತಿನಿತ್ಯ ವ್ಯಾಯಾಮ, ಧೂಮಪಾನ, ಮದ್ಯಪಾನ ತ್ಯಜಿಸುವುದು ಹೀಗೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳು ಅತೀ ಅಗತ್ಯ.
  4. ನೆಲ್ಲಿಕಾಯಿ ಜ್ಯೂಸ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಕ್ಕರೆ ಮಟ್ಟವನ್ನು ಕಾಪಾಡುವುದು. ಇದರಿಂದ ಮಧುಮೇಹದ ಲಕ್ಷಣಗಳು ನಿವಾರಣೆಯಾಗುವುದು.
  5. ದಾಲ್ಚಿನ್ನಿಯಲ್ಲಿ ಶಕ್ತಿಶಾಲಿ ಕಿಣ್ವಗಳು ಇದೆ ಎಂದು ಈಗಾಗಲೇ ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಇದು ಮಧುಮೇಹವಿರುವವರಲ್ಲಿ ಸಕ್ಕರೆ ಮಟ್ಟವನ್ನು ಸಾಮಾನ್ಯವಾಗಿಸುವುದು.
  6. ಸಾಮಾನ್ಯವಾಗಿ ಒಗ್ಗರಣೆಗೆ ಬಳಸುವಂತಹ ಕರಿಬೇವಿನ ಎಲೆಗಳಲ್ಲಿ ಕೂಡ ಔಷಧೀಯ ಗುಣಗಳು ಇವೆ. ಇದರಲ್ಲಿ ಫೋಸ್ಪರಸ್ ಮತ್ತು ವಿಟಮಿನ್ ಸಿ ಇದ್ದು, ಮಧುಮೇಹದ ಲಕ್ಷಣಗಳನ್ನು ನಿವಾರಿಸುವುದು.
  7. ಈ ಎಲ್ಲಾ ಮೂರು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಮಧುಮೇಹದ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.
  8. ನೀವು ನೈಸರ್ಗಿಕವಾದ ಮನೆಮದ್ದನ್ನು ಸೇವಿಸುತ್ತಿದ್ದರೂ ವೈದ್ಯರು ಸೂಚಿಸಿರುವ ಮದ್ದನ್ನು ನಿಲ್ಲಿಸಬೇಡಿ. ವೈದ್ಯರೊಂದಿಗೆ ಚರ್ಚಿಸಿದ ಬಳಿಕ ನೀವು ಔಷಧಿ ನಿಲ್ಲಿಸುವ ಬಗ್ಗೆ ಯೋಚಿಸಬಹುದು.

ಮಧುಮೇಹ ರೋಗಕ್ಕೆ ಒಂದಿಷ್ಟು ಮದ್ದುಗಳು

*ಪೇರಳೆ ಎಲೆ- ಸುಮಾರು ನಾಲ್ಕರಿಂದ ಐದು ತಾಜಾ ಪೇರಳೆ ಎಲೆಗಳನ್ನು ಸಂಗ್ರಹಿಸಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿರುವ ನೀರಿನಲ್ಲಿ ಮುಳುಗಿಸಿ ನೀರನ್ನು ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಬಳಿಕ ಸುಮಾರು ಐದು ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ. ಈ ನೀರು ಉಗುರುಬೆಚ್ಚಗಾದ ಬಳಿಕವೇ ಪ್ರತಿ ಊಟದ ಬಳಿಕ ಸೇವಿಸಿ. ಎಲೆಗಳನ್ನು ಸ್ವಚ್ಛಗೊಳಿಸಿ ಹಸಿಯಾಗಿ ಅಗಿದು ನುಂಗುವುದು ಇನ್ನಷ್ಟು ಉತ್ತಮ.

*ನುಗ್ಗೆ ಎಲೆಗಳು -ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

*ನೆಲ್ಲಿಕಾಯಿ- ಆಮ್ಲ ಎಂದೇ ಕರೆಯಿಲ್ಪಡುವ ನೆಲ್ಲಿಕಾಯಿ, ಅಜ್ಜಿ ಔಷಧಿ ಎಂದೇ ಕರೆಯಲಾಗಿದೆ. ಇದು 2 ನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಉತ್ತಮವಾದುದು. ವಿಟಮಿನ್ ಸಿ ಅಂಶಗಳು ಇದರಲ್ಲಿದ್ದು, ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದನ್ನು ಜ್ಯೂಸ್ ಅಥವಾ ಹುಡಿಯನ್ನು ತಣ್ಣೀರಿನಲ್ಲಿ ಕರಗಿಸಿಕೊಂಡು ಬೆಳಗ್ಗಿನ ಹೊತ್ತು ಸೇವಿಸಬೇಕು.

*ಜೀರಿಗೆ ನೀರು- ಒಂದು ಲೀಟರ್ ನೀರಿಗೆ ಎರಡು ದೊಡ್ಡ ಚಮಚ ಜೀರಿಗೆ ಹಾಕಿ ಕುದಿಸಿ. ಕುದಿಯಲು ಪ್ರಾರಂಭಿಸ ಬಳಿಕ ಸುಮಾರು ನಾಲ್ಕೈದು ನಿಮಿಷಗಳವರೆಗೆ ನೀರನ್ನು ಗಮನಿಸಿ. ಒಂದು ಹಂತದಲ್ಲಿ ಜೀರಿಗೆಯಿಂದ ಬಣ್ಣ ಹೊರಬರಲು ಪ್ರಾರಂಭವಾಗುತ್ತದೆ. ಈಗ ಉರಿಯನ್ನು ಆರಿಸಿ ತಣಿಯಲು ಬಿಡಿ.ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಇದು ಕೊಂಚವೇ ಬಿಸಿಯಾಗಿರಬೇಕೇ ಹೊರತು ತೀರಾ ತಣ್ಣಗೂ ಇರಬಾರದು, ತೀರಾ ಬಿಸಿಯಾಗಿಯೂ ಇರಬಾರದು.

English summary

This Homemade Drink Can Reduce Diabetes Symptoms Naturally!

Here is a natural drink for diabetic patients, which can treat diabetic symptoms with the help of kitchen ingredients.
X
Desktop Bottom Promotion