For Quick Alerts
ALLOW NOTIFICATIONS  
For Daily Alerts

ಮಧುಮೇಹದ ಅಪಾಯಕಾರಿ ಲಕ್ಷಣಗಳು-ಅಪ್ಪಿ ತಪ್ಪಿಯೂ ನಿರ್ಲಕ್ಷಿಸಬೇಡಿ!

|

ಮಧುಮೇಹ ಎನ್ನುವ ಪದ ಕೇಳಿದರೆ ಬೆಚ್ಚಿ ಬೀಳುವಂತಹ ಜನರು ನಮ್ಮಲ್ಲಿದ್ದಾರೆ. ಯಾಕೆಂದರೆ ಇದು ಒಮ್ಮೆ ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಅದು ಸಂಪೂರ್ಣವಾಗಿ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಕೂಡ ಸವಾಲಿನ ಕೆಲಸ. ಯಾಕೆಂದರೆ ಸರಿಯಾದ ಆಹಾರ ಕ್ರಮ, ಪಥ್ಯ ಮತ್ತು ವ್ಯಾಯಾಮ ಮಾಡಿಕೊಂಡರೆ ಮಾತ್ರ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮಧುಮೇಹ ಇರುವಂತಹ ವ್ಯಕ್ತಿಗಳಿಗೆ ಸರಿಯಾಗಿ ಏನೂ ತಿನ್ನಲು ಆಗದು. ಯಾಕೆಂದರೆ ಅಷ್ಟು ಪಥ್ಯ ಮಾಡಿದರೆ ಮಾತ್ರ ಅದರಿಂದ ಮಧುಮೇಹ ನಿಯಂತ್ರಣಕ್ಕೆ ತರಬಹುದು.

shocking signs that you have diabetes and you don’t even know

ಇಂದು ವಿಶ್ವದಲ್ಲಿಯೇ ಭಾರತವು ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶವಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ. 5ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ನು ಕೆಲವರಿಗೆ ಮಧುಮೇಹ ಬಂದಿರುವ ಬಗ್ಗೆ ಸುಳಿವು ಕೂಡ ಸಿಗುವುದಿಲ್ಲ. ಕೆಲವೊಂದು ಚಿಹ್ನೆಗಳು ಹಾಗೂ ಲಕ್ಷಣಗಳನ್ನು ನಾವು ಕಡೆಗಣಿಸುತ್ತೇವೆ. ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಯಾವತ್ತೂ ಕಡೆಗಣಿಸಬಾರದು. ಯಾಕೆಂದರೆ ಇದರಿಂದ ಮುಂದೆ ಪ್ರಾಣಹಾನಿಯು ಸಂಭವಿಸಬಹುದು. ಮಧುಮೇಹವೆಂದು ಗುರುತಿಸಲು ಆಗದ ಕೆಲವು ಲಕ್ಷಣ ಹಾಗೂ ಚಿಹ್ನೆಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮಧುಮೇಹ ಎಂದರೇನು?

ಮಧುಮೇಹ ಎಂದರೇನು?

ಎಲ್ಲವನ್ನು ತಿಳಿಯುವ ಮೊದಲು ನಾವು ಮಧುಮೇಹ ಎಂದರೇನು ಎಂದು ತಿಳಿಯುವ. ಮಧುಮೇಹದಲ್ಲಿ ಕೂಡ ಮೂರು ವಿಧಗಳಿಗೆ ಟೈಪ್ 1, ಟೈಪ್ 2 ಮತ್ತು ಗರ್ಭಧಾರಣೆಯ ಮಧುಮೇಹ. ಟೈಪ್ 1 ಮತ್ತು ಟೈಪ್ 2 ಮಧುಮೇಹಗಳು ದೀಘಕಾಲಿಕ ಕಾಯಿಲೆಗಳಾಗಿವೆ. ಅದೇ ಗರ್ಭಧಾರಣೆಯ ಮಧುಮೇಹವು ಕೇವಲ ಗರ್ಭಧಾರಣೆ ವೇಳೆ ಮಾತ್ರ ಇರುವುದು ಮತ್ತು ಇದು ಮಗುವಿಗೆ ಜನ್ಮ ನೀಡಿದ ಬಳಿಕ ನಿವಾರಣೆ ಆಗುವುದು.

ಟೈಪ್ 1 ಮಧುಮೇಹ

ಟೈಪ್ 1 ಮಧುಮೇಹ

ಟೈಪ್ 1 ಮಧುಮೇಹವು ಸಾಮಾನ್ಯವಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡುಬರುವುದು. ಆದರೆ ಇದು ಸಾಮಾನ್ಯ ಎಂದು ಹೇಳಲು ಆಗದು. ಯಾಕೆಂದರೆ ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರು ಶೇ. 5ರಷ್ಟು ಜನರು ಮಾತ್ರ ಇದ್ದಾರೆ. ಟೈಪ್ 1 ಮಧುಮೇಹ ಇರುವಂತಹ ವ್ಯಕ್ತಿಗಳ ದೇಹವು ಇನ್ಸುಲಿನ್ ನ್ನು ಬಿಡುಗಡೆ ಮಾಡುವುದಿಲ್ಲ. ಅದೇ ರೀತಿಯಾಗಿ ಟೈಪ್ 2 ಮಧುಮೇಹ ಇರುವಂತಹ ವ್ಯಕ್ತಿಗಳು ಸರಿಯಾಗಿ ಇನ್ಸುಲಿನ್ ಗೆ ಪ್ರತಿಕ್ರಿಯಿಸುವುದಿಲ್ಲ.

ಮಧುಮೇಹದ ಕೆಲವೊಂದು ಸೂಕ್ಷ್ಮ ಚಿಹ್ನೆಗಳು ಹಾಗೂ ಲಕ್ಷಣಗಳ ಬಗ್ಗೆ ನಾವು ಇಲ್ಲಿ ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ತಿಳಿದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಿಮಗೆ ದಿನವಿಡಿ ಬಾಯಾರಿಕೆ ಆಗುವುದು

ನಿಮಗೆ ದಿನವಿಡಿ ಬಾಯಾರಿಕೆ ಆಗುವುದು

ಹೆಚ್ಚಿನ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಅದರೆ ನಿಮಗೆ ದಿನವಿಡಿ ಪದೇ ಪದೇ ಬಾಯಾರಿಕೆಯಾಗುತ್ತಲಿದ್ದರೆ ಆಗ ಇದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ ನೀವು ಬಾಯಾರಿಕೆಗೆ ನೀರು ಕುಡಿದ ಬಳಿಕವೂ ಬಾಯಾರಿಕೆ ಆಗುತ್ತಲಿದ್ದರೆ ಇದು ಮಧುಮೇಹದ ಲಕ್ಷಣವಾಗಿದೆ.

Most Read: ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!

ಪದೇ ಪದೇ ಮಲ ವಿಸರ್ಜನೆಗೆ ಹೋಗುವುದು

ಪದೇ ಪದೇ ಮಲ ವಿಸರ್ಜನೆಗೆ ಹೋಗುವುದು

ಮಧುಮೇಹದಿಂದ ಬಳಲುತ್ತಿರುವ ವೇಳೆ ಹೆಚ್ಚು ಮಲ ವಿಸರ್ಜನೆ ಮಾಡಬೇಕಾಗುತ್ತದೆ. ಯಾಕೆಂದರೆ ಮಲ ವಿಸರ್ಜನೆಯಿಂದ ದೇಹದ ರಕ್ತನಾಳಗಳಲ್ಲಿ ಇರುವಂತಹ ಅತಿಯಾದ ಸಕ್ಕರೆ ಅಂಶವು ಹೊರಗೆ ಹೋಗುವುದು. ಪದೇ ಪದೇ ಮಲ ವಿಸರ್ಜನೆಯಿಂದಾಗಿ ನಿಮ್ಮ ದೈನಂದಿನ ಚಟುವಟಿಕೆ ಮತ್ತು ನಿಮ್ಮ ನಿದ್ರೆಗೆ ಹಾನಿಯಾಗುತ್ತಿದೆಯಾ ಎಂದು ನೀವು ಗಮನಿಸಿ. ಹೀಗೆ ಆಗಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.

ಎಲ್ಲಾ ಸಮಯ ನಿಶ್ಯಕ್ತಿಯಿಂದ ಬಳಲುವುದು

ಎಲ್ಲಾ ಸಮಯ ನಿಶ್ಯಕ್ತಿಯಿಂದ ಬಳಲುವುದು

ನಿಮಗೆ ಸರಿಯಾಗಿ ನಿದ್ರೆ ಬರುತ್ತಿದ್ದರೂ ದೇಹ ಮಾತ್ರ ಬಳಲಿಕೆಯಿಂದ ಇದ್ದರೆ ಆಗ ಇದು ಮಧುಮೇಹದ ಲಕ್ಷಣವಾಗಿರ ಬಹುದು. ಇದನ್ನು ನೀವು ಕಡೆಗಣಿಸಬೇಡಿ. ಮಧುಮೇಹವಿದ್ದರೆ ಆಗ ನಿಮ್ಮ ದೇಹವು ಕಾರ್ಬ್ರೋಹೈಡ್ರೇಟ್ಸ್ ನ್ನು ವಿಘಟಿಸಲು ವಿಫಲವಾಗುವುದು. ಇದರಿಂದಾಗಿ ನೀವು ತಿನ್ನುತ್ತಿರುವ ಆಹಾರವು ಸರಿಯಾಗಿ ವಿಘಟನೆಯಾಗದೆ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ಶಕ್ತಿಯ ರೂಪದಲ್ಲಿ ದೇಹವು ಸದುಪಯೋಗ ಪಡಿಸಿಕೊಳ್ಳಲು ಆಗದು. ಇದರಿಂದಾಗಿ ನೀವು ಇಡೀ ದಿನ ಬಳಲಿಕೆಯನ್ನು ಅನುಭವಿಸುವಿರಿ ಮತ್ತು ಆಯಾಸ ಕಾಡುವುದು. ನಿಮಗೆ ಎಲ್ಲವನ್ನು ಮಾಡಬೇಕೆಂದು ಆಸೆಯಿರುವುದು. ಆದರೆ ಏನೂ ಮಾಡಲು ಆಗದೆ ಇರುವಂತಹ ಪರಿಸ್ಥಿತಿ ಇರುವುದು.

ಉಸಿರಾಟವು ಕುಗ್ಗುವುದು

ಉಸಿರಾಟವು ಕುಗ್ಗುವುದು

ಮಧುಮೇಹದಿಂದಾಗಿ ಕೆಟೊನೆಸ್ ರಕ್ತದಲ್ಲಿ ಜಮೆ ಆಗುವುದು ಮತ್ತು ಮೂತ್ರದಲ್ಲಿ ಕೂಡ ಇದು ಜಮೆ ಆಗುವುದು. ಇದರ ಪರಿಣಾಮವಾಗಿ ಉಸಿರು ತುಂಬಾ ದುರ್ವಾಸನೆಯಿಂದ ಕೂಡಿರಬಹುದು. ಉಸಿರಿನ ದುರ್ವಾಸನೆಗೆ ಮತ್ತೊಂದು ಕಾರಣವೆಂದರೆ ನಿರ್ಜಲೀಕರಣದಿಂದಾಗಿ ಬಾಯಿ ಒಣಗಿರುವುದು.

ಹಸಿವು ಆಗುವುದು

ಹಸಿವು ಆಗುವುದು

ಇನ್ಸುಲಿನ ಪ್ರತಿರೋಧಕದಿಂದಾಗಿ ದೇಹದಲ್ಲಿರುವ ರಕ್ತನಾಳಗಳು ಸಕ್ಕರೆಯನ್ನು ಹೀರಿಕೊಳ್ಳಲು ವಿಫಲವಾದ ವೇಳೆ ದೇಹವು ಬೇರೆ ಮೂಲಗಳಿಂದ ಶಕ್ತಿ ಪಡೆಯಲು ಎದುರುನೋಡುವುದು. ಇದರಿಂದಾಗಿ ನಿಮಗೆ ಹಸಿವು ಹೆಚ್ಚಾಗುತ್ತಾ ಇರುವುದು.

Most Read: ದೇಹದ ಲಿವರ್‌ನ ಬಗ್ಗೆ ನಿಮಗೆ ತಿಳಿಯದೇ ಇರುವ ಪ್ರಮುಖ ಸಂಗತಿಗಳು

ಅನಿರೀಕ್ಷಿತ ತೂಕ ಇಳಿಕೆ

ಅನಿರೀಕ್ಷಿತ ತೂಕ ಇಳಿಕೆ

ನೀವು ತೂಕ ಇಳಿಸಿಕೊಳ್ಳುವಂತಹ ಯಾವುದೇ ಆಹಾರ ಕ್ರಮವನ್ನು ಪಾಲಿಸದೆ, ವ್ಯಾಯಾಮ ಮಾಡದೆ ಇದ್ದರೂ ತೂಕ ತನ್ನಷ್ಟಕ್ಕೆ ಇಳಿಕೆಯಾಗುತ್ತಿದೆ ಎಂದರೆ ಆಗ ಇದನ್ನು ನಾವು ಮಧುಮೇಹ ಎಂದು ಹೇಳಬಹುದು. ಇದು ಕಾರಣವು ತುಂಬಾ ಸರಳವಾಗಿದೆ. ಇನ್ಸುಲಿನ್ ಪ್ರತಿರೋಧಕದಿಂದಾಗಿ ದೇಹವು ಸಕ್ಕರೆಯಿಂದ ಹೆಚ್ಚಿನ ಶಕ್ತಿಯನ್ನು ಪಡೆಯಲು ವಿಫಲವಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿನ ಕೊಬ್ಬನ್ನು ಶಕ್ತಿಯಾಗಿ ಪರಿವರ್ತನೆ ಮಾಡುವುದು.

ದೃಷ್ಟಿ ಮಂದವಾಗುವುದು

ದೃಷ್ಟಿ ಮಂದವಾಗುವುದು

ಮಧುಮೇಹದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ದೃಷ್ಟಿ ಮಂದವಾಗುವುದು. ಕಣ್ಣಿನಲ್ಲಿ ದ್ರವವು ಶೇಖರಣೆಯಾಗುವ ಪರಿಣಾಮವಾಗಿ ಕಣ್ಣಿನ ದೃಷ್ಟಿಯು ಮಂದವಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೊದಲು ಪರೀಕ್ಷೆ ಮಾಡಿಕೊಂಡು ಅದನ್ನು ನಿಯಂತ್ರಣಕ್ಕೆ ತಂದರೆ ಆಗ ಕಣ್ಣಿನ ದೃಷ್ಟಿಯು ಮರಳಿ ಬರುವುದು.

Most Read: ದಂಪತಿಗಳಲ್ಲಿ ಮಕ್ಕಳಾಗದಿರುವುದಕ್ಕೆ ಡಯಾಬಿಟಿಸ್ ರೋಗ ಕೂಡ ಕಾರಣವಾಗಬಹುದು!

ಗಾಯ ಒಣಗಲು ತುಂಬಾ ಸಮಯ ಬೇಕಾಗುವುದು

ಗಾಯ ಒಣಗಲು ತುಂಬಾ ಸಮಯ ಬೇಕಾಗುವುದು

ಯಾವುದೇ ಗಾಯ ಅಥವಾ ತರಚಿದ ಗಾಯವು ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾ ಇದ್ದರೆ ಆಗ ನಿಮ್ಮ ದೇಹದಲ್ಲಿ ಏನೋ ಸರಿಯಾಗಿಲ್ಲವೆಂದು ತಿಳಿಯಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾಗಿದ್ದರೆ ಆಗ ದೇಹದಲ್ಲಿ ಬ್ಯಾಕ್ಟೀರಿಯಾವು ಸಂತಾನೋತ್ಪತ್ತಿ ಮಾಡಲು ಹೆಚ್ಚು ಸಹಕಾರಿ ಆಗುವುದು. ಸರಿಯಾದ ರಕ್ತ ಪರಿಚಲನೆ ಇಲ್ಲದೆ ಮತ್ತು ರಕ್ತನಾಳಗಳ ಕುಗ್ಗುವಿಕೆಯಿಂದಾಗಿ ಗಾಯವು ಗುಣಮುಖವಾಗಲು ತುಂಬಾ ಸಮಯ ಬೇಕಾಗುವುದು.

ಈ ಮೇಲಿನ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಒಂದು ಸಲ ಪರೀಕ್ಷೆ ಮಾಡಿಕೊಂಡರೆ ತುಂಬಾ ಒಳ್ಳೆಯದು.

English summary

shocking signs that you have diabetes and you don’t even know

India has the largest number of diabetes patients in the world. In fact, currently, 5 percent of the Indian population is suffering from this deadly disease. There are a lot of subtle signs and symptoms of diabetes, that we end up ignoring. These symptoms may occur over a period of time or might come to fore suddenly.
X
Desktop Bottom Promotion