For Quick Alerts
ALLOW NOTIFICATIONS  
For Daily Alerts

ನೇರಳೆ ಹಣ್ಣು: ರುಚಿಗಷ್ಟೇ ಅಲ್ಲ, ಅನೇಕ ಕಾಯಿಲೆ ನಿವಾರಿಸುವ ಔಷಧಿಯೂ ಹೌದು!

By Hemanth
|

ಪ್ರಕೃತಿ ಸಹಜವಾಗಿ ಸಿಗುವಂತಹ ಹಲವಾರು ಹಣ್ಣುಹಂಪಲುಗಳಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೆ ಇಂದು ಪ್ರತಿಯೊಂದು ಕಡೆಯಲ್ಲೂ ಕಾಂಕ್ರೀಟೀಕರಣದಾಗಿ ಕಾಡಗಳ ನಾಶವಾಗಿ ನಮಗೆ ಬೇಕಿರುವಂತಹ ಅಗತ್ಯವಾಗಿರುವ ಹಣ್ಣುಹಂಪಲುಗಳು ಲಭ್ಯವಾಗುವುದೇ ಇಲ್ಲ. ಋತುಮಾನಕ್ಕೆ ಅನುಗುಣವಾಗಿ ತಿನ್ನಬೇಕಾಗಿರುವ ಹಣ್ಣುಗಳನ್ನು ಯಾವ್ಯಾವುದೋ ಸಮಯದಲ್ಲಿ ತಿನ್ನುತ್ತೇವೆ.

ಸಾಮಾನ್ಯವಾಗಿ ಭಾರತದಲ್ಲಿ ಹೆಚ್ಚಾಗಿ ಬೆಳೆಯುವಂತಹ ನೇರಳೆ ಹಣ್ಣು ಕೂಡ ಪೋಷಕಾಂಶಗಳ ಆಗರವಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಇದರಲ್ಲಿ ಮಧುಮೇಹ, ಕ್ಯಾನ್ಸರ್, ಹೃದಯಾಘಾತ, ಸಂಧಿವಾತ, ಹೊಟ್ಟೆಯ ಕಾಯಿಲೆಗಳಾಗಿರುವ ಭೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳು ಇವೆ. ಈ ಹಣ್ಣು ಕಾಮಾಸಕ್ತಿ ಕೂಡ ಹೆಚ್ಚಿಸುವುದು. ಈ ಲೇಖನದಲ್ಲಿ ನೇರಳೆ ಹಣ್ಣಿನ ಪೋಷಕಾಂಶ ಗುಣಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದರ ಬೀಜ ಬಳಸಿಕೊಂಡು ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿಯುವ ಮತ್ತು ಇದರಲ್ಲಿರುವ ಇತರ ಆರೋಗ್ಯ ಲಾಭಗಳು ಇಲ್ಲಿವೆ.

jamun for diabetes

ನೇರಳೆಯಲ್ಲಿರುವ ಪೋಷಕಾಂಶಗಳು

ಈ ಕಡುನೇರಳೆ ಹಣ್ಣಿನಲ್ಲಿ ಒಂದು ಬೀಜ ಮಾತ್ರವಿದ್ದು, ಇದು ಸ್ವಲ್ಪ ಹಸಿರುಹಳದಿ ಬಣ್ಣ ಹೊಂದಿದೆ. ಸ್ವಲ್ಪ ಸಿಹಿ ಹಾಗೂ ಹುಳಿ ಹೊಂದಿರುವ ಈ ಹಣ್ಣಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪೋಷಕಾಂಶಗಳು ಇವೆ. 100 ಗ್ರಾಂ ನೇರಳೆಯಲ್ಲಿ ಇರುವಂತಹ ಪೋಷಕಾಂಶಗಳು ಈ ರೀತಿಯಾಗಿವೆ.

Most Read:ಗ್ರಾಮೀಣ ಭಾಗದ 'ನೀಲಿ' ಸುಂದರಿ 'ನೇರಳೆ ಹಣ್ಣಿನ' ಪ್ರಯೋಜನಗಳು

ಕ್ಯಾಲೋರಿಫಿಕ್ ಮೌಲ್ಯ-62
*ನಾರಿನಾಂಶ-0.9%
*ಕಾರ್ಬ್ಸ್-14%
*ಖನಿಜಾಂಶ-0.4 %
*ಕಬ್ಬಿನಾಂಶ-1.2 ಮಿ.ಗ್ರಾಂ
*ಫೋಸ್ಪರಸ್-15ಮಿ.ಗ್ರಾಂ
*ಕ್ಯಾಲ್ಸಿಯಂ-15 ಮಿ.ಗ್ರಾಂ
*ವಿಟಮಿನ್ ಸಿ-18%
*ಬಿ ಕಾಂಪ್ಲೆಕ್ಸ್(ಸಣ್ಣ ಪ್ರಮಾಣ)
*ನೀರಿನಾಂಶ-83.7%

ನೀವು ನೇರಳೆ ಜ್ಯೂಸ್ ಕುಡಿಯುತ್ತಲಿದ್ದರೆ ಆಗ 10-20 ಮಿ.ಲೀ.ನಷ್ಟು ನೀವು ಪ್ರತೀ ದಿನಕ್ಕೆ ಕುಡಿಯಬೇಕು. ಇದರ ಹುಡಿ ಸೇವನೆ ಮಾಡುತ್ತಲಿದ್ದರೆ ಆಗ 3-6 ಗ್ರಾಂನ್ನು ವಿಂಗಡಿಸಿ ದಿನದಲ್ಲಿ ಸೇವಿಸಬೇಕು.

ನೇರಳೆಯಲ್ಲಿರುವ ಆರೋಗ್ಯ ಲಾಭಗಳು

ನೇರಳೆಯು ವಿವಿಧ ರೀತಿಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದು ಮತ್ತು ಕಾಯಿಲೆಗಳನ್ನು ದೂರವಿಡುವುದು.

1.ಮಧುಮೇಹ ನಿಯಂತ್ರಣ

1.ಮಧುಮೇಹ ನಿಯಂತ್ರಣ

ನೇರಳೆಯು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು. ನೇರಳೆಯ ಬೀಜಗಳನ್ನು ಒಣಗಿಸಿ ಮತ್ತು ಅದನ್ನು ಹುಡಿ ಮಾಡಿಕೊಂಡು ವಿವಿಧ ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಹುಡಿಯನ್ನು ಪ್ರತಿನಿತ್ಯ ಊಟಕ್ಕೆ ಮೊದಲು ಮಧುಮೇಹಿಗಳು ಸೇವನೆ ಮಾಡಿ, ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗಿದೆಯಾ ಎಂದು ತಿಳಿದುಕೊಳ್ಳಬಹುದು. ನೇರಳ ಬೀಜದಲ್ಲಿ ಇರುವಂತಹ ಹೈಪೊಗ್ಲೈಸೆಮಿಕ್ ಎನ್ನುವ ಗುಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳಿದ್ದು, ದೇಹದಲ್ಲಿನ ಇನ್ಸುಲಿನ್ ಮಟ್ಟ ಹೆಚ್ಚಿಸಲು ನೆರವಾಗುವುದು ಮತ್ತು ರಕ್ತಕ್ಕೆ ಬಿಡುಗಡೆಯಾಗುವ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು.

2.ರಕ್ತ ಶುದ್ಧೀಕರಿಸುವುದು ಮತ್ತು ರಕ್ತಹೀನತೆ ನಿವಾರಣೆ

2.ರಕ್ತ ಶುದ್ಧೀಕರಿಸುವುದು ಮತ್ತು ರಕ್ತಹೀನತೆ ನಿವಾರಣೆ

ನೇರಳೆ ಹಣ್ಣಿನಲ್ಲಿ ಇರುವಂತಹ ಕಬ್ಬಿನಾಂಶವು ಋತುಚಕ್ರದ ವೇಳೆ ಮಹಿಳೆಯರಲ್ಲಿ ರಕ್ತಸ್ರಾವದಿಂದ ಆಗಿರುವ ರಕ್ತದ ಹಾನಿಯನ್ನು ಸರಿದೂಗಿಸುವುದು. ರಕ್ತಹೀನತೆಯಿಂದ ಬಳಲುವಂತಹ ಜನರು ನೇರಳೆಯನ್ನು ಆಹಾರ ಕ್ರಮದಲ್ಲಿ ಸೇರಿಸಬೇಕು. ಇದರಲ್ಲಿ ಇರುವಂತಹ ಕಬ್ಬಿನಾಂಶವು ರಕ್ತವನ್ನು ಶುದ್ಧೀಕರಿಸುವುದು ಮತ್ತು ಚರ್ಮಕ್ಕೂ ಇದು ಒಳ್ಳೆಯದು.

Most Read:ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

3.ರಕ್ತದೊತ್ತಡ ತಗ್ಗಿಸುವುದು

3.ರಕ್ತದೊತ್ತಡ ತಗ್ಗಿಸುವುದು

ನೇರಳೆ ಬೀಜಗಳು ರಕ್ತದೊತ್ತಡ ಕಡಿಮೆ ಮಾಡುವುದು. ಏಶ್ಯನ್ ಸ್ಪೆಸಿಫಕ್ ಜರ್ನಲ್ ಆಫ್ ಟ್ರೊಪಿಕಲ್ ಬಯೋಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರ ಪ್ರಕಾರ ನಿಯಮಿತವಾಗಿ ನೇರಳೆ ಹಣ್ಣು ಸೇವನೆ ಮಾಡುವಂತಹ ವ್ಯಕ್ತಿಗಳಲ್ಲಿ ರಕ್ತದೊತ್ತಡದ ಮಟ್ಟವು 34.6% ಕಡಿಮೆಯಾಗಿರುವುದು ಕಂಡುಬಂದಿದೆ.

4.ಹೊಟ್ಟೆ ಸಂಬಂಧಿ ಕಾಯಿಲೆಗಳ ನಿವಾರಣೆ

4.ಹೊಟ್ಟೆ ಸಂಬಂಧಿ ಕಾಯಿಲೆಗಳ ನಿವಾರಣೆ

ಕರುಳಿನಲ್ಲಿ ಕಾಣಿಸಿಕೊಳ್ಳುವಂತಹ ಅಲ್ಸರ್ ನ ಸಮಸ್ಯೆಯನ್ನು ನೇರಳೆ ಬೀಜಗಳು ನಿವಾರಣೆ ಮಾಡುವುದು. ಕ್ಯಾಂಡಿಡಾ ಅಲ್ಬಿಕನ್ ಎನ್ನುವ ಯೀಸ್ಟ್ ಸೋಂಕಿನಿಂದ ಉಂಟಾಗುವಂತಹ ಜನನೇಂದ್ರಿಯದ ಸೋಂಕಿಗೂ ಇದು ಪರಿಣಾಮಕಾರಿ. ಸೋಂಕಿನಿಂದಾಗಿ ಆಗುವಂತಹ ಭೇದಿಗೆ ಕೂಡ ಇದು ತುಂಬಾ ಪರಿಣಾಮಕಾರಿಯಾಗಿರುವುದು. ಹೊಟ್ಟೆ ಸೆಳೆತ ಮತ್ತು ಭೇದಿಯಿಂದಾಗಿ ನಿರ್ಜಲೀಕರಣ ಉಂಟಾಗಿ ಸಾವು ಸಂಭವಿಸಬಹುದು.

5.ನಿರ್ವಿಷಗೊಳಿಸುವುದು

5.ನಿರ್ವಿಷಗೊಳಿಸುವುದು

ನೇರಳೆ ಹಣ್ಣಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ನ್ನು ಹೊರಗೆ ಹಾಕುವುದು ಮತ್ತು ದೇಹವನ್ನು ನೈಸರ್ಗಿಕ ವಿಧಾನದಿಂದ ನಿರ್ಷಿಷಗೊಳಿಸುವುದು. ಇದು ನಿಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಗೆ ನೆರವಾಗುವುದು. ಈ ಹಣ್ಣಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ.

ಮಧುಮೇಹ ಮತ್ತು ಇತರ ಕಾಯಿಲೆಗಳಿಗೆ ನೇರಳೆ ಬೀಜ ಸೇವಿಸಲು ಇರುವಂತಹ ವಿಧಾನಗಳು

*ನೇರಳೆ ಹಣ್ಣನ್ನು ತೊಳೆದು ಅದರ ಬೀಜ ತೆಗೆಯಿರಿ.

*ಇದರ ಬಳಿಕ ಬೀಜ ತೊಳೆಯಿರಿ ಮತ್ತು ಬೀಜದಲ್ಲಿ ಉಳಿದಿರುವ ತಿರುಳು ತೆಗೆಯಿರಿ.

*ಬೀಜಗಳನ್ನು ಒಂದು ಸ್ವಚ್ಛ ಮತ್ತು ಒಣಗಿದ ಬಟ್ಟೆ ಮೇಲೆ ಹಾಕಿ ಮತ್ತು 3-4 ದಿನಗಳ ಕಾಲ ಬಿಸಿಲಿಗೆ ಒಣಗಿಸಿ

*ಬೀಜಗಳು ಸರಿಯಾಗಿ ಒಣಗಿದ ಬಳಿಕ ಇದರ ಹೊರಗಿನ ಭಾಗದ ಸಿಪ್ಪೆ ತೆಗೆಯಿರಿ, ಹಸಿರು ಬಣ್ಣವಿರುವ ಭಾಗವನ್ನು ಸಂಗ್ರಹಿಸಿ ಮತ್ತು ಇದು ಸುಲಭವಾಗಿ ತುಂಡಾಗುವುದು.

*ಹಸಿರು ಬೀಜಗಳನ್ನು ತುಂಡು ಮಾಡಿಕೊಳ್ಳಿ ಮತ್ತು ಬಿಸಿಲಿನಲ್ಲಿ ಇನ್ನು ಕೆಲವು ದಿನಗಳ ಕಾಲ ಒಣಗಲು ಹಾಕಿ.

*ಬೀಜಗಳು ಸರಿಯಾಗಿ ಒಣಗಿದ ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಪಡೆದ ಹುಡಿಯನ್ನು ಶುದ್ಧೀಕರಿಸಿ, ನಯವಾದ ಹುಡಿ ಬರುವ ತನಕ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

*ಗಾಳಿಯಾಡದೆ ಇರುವಂತಹ ಡಬ್ಬದಲ್ಲಿ ಹಾಕಿಟ್ಟು ಇದನ್ನು ಸಂಗ್ರಹಿಸಿ.

ಸೇವಿಸುವುದು ಹೇಗೆ?

ಖಾಲಿ ಹೊಟ್ಟೆಯಲ್ಲಿ ನೇರಳೆ ಬೀಜದ ಹುಡಿಯ ಸೇವನೆ ಮಾಡಬೇಕು. ಒಂದು ಲೋಟ ನೀರಿಗೆ ಒಂದು ಚಮಚ ನೇರಳೆ ಬೀಜದ ಹುಡಿ ಹಾಕಿಕೊಂಡು ಸರಿಯಾಗಿ ಕಲಸಿ ಮತ್ತು ಇದನ್ನು ನಿಯಮಿತವಾಗಿ ಸೇವಿಸಿ. ನಿಮಗೆ ಆರೋಗ್ಯದಲ್ಲಿ ಅದ್ಭುತ ಪರಿಣಾಮ ಕಂಡುಬರುವುದು.

(ಸೂಚನೆ: ಮಧುಮೇಹ ನಿಯಂತ್ರಣ ಮಾಡಲು ನೀವು ನೇರಳಬೀಜದ ಹುಡಿ ಸೇವನೆ ಮಾಡುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ)

English summary

Jamun Seeds For Controlling Diabetes

Jamun, which is also called Indian blackberry and black plum, has numerous medicinal benefits and nutritional value. This home remedy aids in combating and controlling many health conditions like diabetes, cancer, heart diseases, arthritis, stomach disorders such as diarrhoea, etc. This fruit also aids in increasing one's sexual activity. In this article, we will discuss the nutritional value of jamun, how exactly jamun seeds aid in controlling blood sugar naturally and its various other health benefits.
X
Desktop Bottom Promotion