For Quick Alerts
ALLOW NOTIFICATIONS  
For Daily Alerts

ಮಧುಮೇಹಿ ರೋಗಿಗಳಿಗೆ ಹೇಳಿ ಮಾಡಿಸಿದ ಪಾನೀಯಗಳಿವು! ತಪ್ಪದೇ ಸೇವಿಸಿ...

By Hemanth
|

ಮಧುಮೇಹ ಇರುವಂತಹ ಜನರು ತಿನ್ನುವ ಆಹಾರ, ಕುಡಿಯುವ ಪಾನೀಯ ಸಹಿತ ಪ್ರತಿಯೊಂದರ ಬಗ್ಗೆ ಕೂಡ ಗಮನ ಹರಿಸಬೇಕಾಗುತ್ತದೆ. ಯಾಕೆಂದರೆ ಏರ್ರಾಬಿರ್ರಿಯಾಗಿ ತಿಂದು, ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರಾಗಿ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲೇಖನದಲ್ಲಿ ಮಧುಮೇಹಿಗಳಿಗಾಗಿ ಕೆಲವೊಂದು ಪಾನೀಯಗಳನ್ನು ಹೇಳಲಾಗುತ್ತಿದೆ. ಅಮೆರಿಕಾದ ಡಯಾಬಿಟಿಸ್ ಅಸೋಸಿಯೇಶನ್ ಇದನ್ನು ಮಧುಮೇಹಿಗಳಿಗಾಗಿ ಹೇಳಿರುವಂತದ್ದಾಗಿದೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾಗದಂತೆ ನೋಡಿ ಕೊಳ್ಳುವುದು. ಮಧುಮೇಹಿಗಳು ತಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತೀ ಅಗತ್ಯ. ಮಧುಮೇಹಿಗಳಿಗಾಗಿ ತಯಾರಿಸಲಾಗುವ ಈ ಪಾನೀಯವು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಮಧುಮೇಹಿಗಳು ಒಂದು ಸೋಡಾ ಅಥವಾ ಒಂದು ಲೋಟ ತಂಪು ಪಾನೀಯ ಕುಡಿಯಲೇಬಾರದು. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚುವುದು. ಇದು ಟೈಪ್ 1 ಮತ್ತು ಟೈಪ್ 2 ಮಧುಮೇಹಿ ರೋಗಿಗಳಿಗೆ ಅಪಾಯಕಾರಿ...

ಕಾಫಿ

ಕಾಫಿ

2006ರ ಅಧ್ಯಯನವೊಂದರ ಪ್ರಕಾರ ಕೆಫಿನ್ ಇರುವ ಮತ್ತು ಕೆಫಿನ್ ಮುಕ್ತ ಕಾಫಿಯನ್ನು ಮಿತವಾಗಿ ಸೇವನೆ ಮಾಡಿದರೆ ಅದರಿಂದ ಹದಿಹರೆಯ ಮತ್ತು ಮಧ್ಯವಯಸ್ಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡಬಹುದು. ಅತಿಯಾಗಿ ಕಾಫಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು. ಕಾಫಿಯಲ್ಲಿ ಇರುವಂತಹ ಕ್ಲೋರೊಜೆನಿಕ್ ಆಮ್ಲವು ರಕ್ತಕಣಗಳು ಗ್ಲೂಕೋಸ್ ಹೀರಿಕೊಳ್ಳುವುದನ್ನು ವಿಳಂಬಗೊಳಿಸುವುದು.

ಹಾಲು

ಹಾಲು

ಹಾಲನ್ನು ತುಂಬಾ ಆರೋಗ್ಯಕಾರಿ ಮತ್ತು ಲಾಭಕಾರಿ ಪಾನೀಯವೆಂದು ಪರಿಗಣಿಸಲಾಗಿದೆ. ಇದು ಮಧುಮೇಹಕ್ಕೆ ಕೂಡ ಒಳ್ಳೆಯದು. ಕಡಿಮೆ ಕೊಬ್ಬು ಇರುವಂತಹ ಹಾಲಿನ ಉತ್ಪನ್ನಗಳು ಮಧುಮೇಹದಿಂದ ಆಗುವಂತಹ ಮರಣ, ಮಧುಮೇಹ ಬರುವುದನ್ನು ತಡೆಯುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು. ಟೈಪ್ 2 ಮಧುಮೇಹ ಇರುವಂತಹವರಲ್ಲಿ ಹಾಲು, ತೂಕ ಕಳೆದುಕೊಳ್ಳಲು ಸಹಕರಿಸುವುದು. ಇದರಿಂದ ದೇಹದ ಎಲ್ಲಾ ಕಾರ್ಯಗಳು ಸರಿಯಾಗಿ ಆಗುವುದು.

ಗ್ರೀನ್ ಟೀ

ಗ್ರೀನ್ ಟೀ

ಮಧುಮೇಹಿಗಳಿಗೆ ಮತ್ತೊಂದು ಆರೋಗ್ಯಕಾರಿ ಪಾನೀಯವೆಂದರೆ ಅದು ಗ್ರೀನ್ ಟೀ. ಇದರಲ್ಲಿ ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಮತ್ತು ಕ್ಯಾಲರಿ ಇದೆ. ಗ್ರೀನ್ ಟೀಯು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡಿ, ರಕ್ತದೊತ್ತಡ ತಗ್ಗಿಸುವುದು ಎಂದು ಅಧ್ಯಯನವೊಂದು ಹೇಳಿದೆ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಉರಿಯೂತದ ಪರಿಣಾಮ ತಟಸ್ಥಗೊಳಿಸುವುದು. ಇದರಿಂದಾಗಿ ಅಪಧಮನಿ ಹೃದಯದ ಕಾಯಿಲೆ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುವುದು.

ಹಾಗಲಕಾಯಿ

ಹಾಗಲಕಾಯಿ

ಹಾಗಲಕಾಯಿಯ ಜ್ಯೂಸ್ ಮಧುಮೇಹಿಗಳಿಗೆ ತುಂಬಾ ಆರೋಗ್ಯಕಾರಿ. ಇದು ಗ್ಲೂಕೋಸ್ ನ ಸಂಚಾರದ ಮೇಲೆ ಪರಿಣಾಮ ಬೀರುವ ಕಾರಣದಿಂದ ಟೈಪ್-1 ಮತ್ತು ಟೈಪ್-2 ಮಧುಮೇಹಕ್ಕೆ ಇದು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಹಾಗಲಕಾಯಿಯು ಗ್ಲೂಕೋಸ್ ನ ತಾಳ್ಮೆಯ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಇದು ತುಂಬಾ ಪರಿಣಾಮಕಾರಿ. ಹಾಗಲಕಾಯಿಯು ಮೂತ್ರದಲ್ಲಿನ ಸಕ್ಕರೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

*ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.

*ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

ಸೌತೆಕಾಯಿ ಜ್ಯೂಸ್

ಸೌತೆಕಾಯಿ ಜ್ಯೂಸ್

ಸೌತೆಯಿಯಲ್ಲಿ ಕ್ಯಾಲ್ಸಿಯಂ, ಪ್ರೋಸ್ಪರಸ್, ಕಬ್ಬಿನಾಂಶ, ವಿಟಮಿನ್ ಎ, ಅಮಿನೋ ಆಮ್ಲ, ವಿಟಮಿನ್ ಬಿ1, ವಿಟಮಿನ್ ಸಿ ಮತ್ತು ವಿಟಮಿನ್ ಬಿ2 ಸಮೃದ್ಧವಾಗಿದೆ. ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು. ಸೌತೆಕಾಯಿಯು ದೇಹದ ಉಷ್ಣತೆ ಕಡಿಮೆ ಮಾಡುವುದು, ಉರಿಯೂತ ನಿವಾರಿಸುವುದು, ಊತ ತಗ್ಗಿಸುವುದು ಮತ್ತು ಸಂಧಿವಾತಕ್ಕೆ ಪರಿಣಾಮಕಾರಿ.

ಸೌತೆಕಾಯಿ ಜ್ಯೂಸ್ ತಯಾರಿಸುವ ವಿಧಾನ

ಸೌತೆಕಾಯಿ ಜ್ಯೂಸ್ ತಯಾರಿಸುವ ವಿಧಾನ

ಒ೦ದು ಸೌತೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ಬಳಿಕ ಸೌತೆಕಾಯಿಯನ್ನು ಮಿಕ್ಸರ್ ನಲ್ಲಿ ಚೆನ್ನಾಗಿ ಅರೆಯಿರಿ. ಮಿಕ್ಸರ್‌ನ ಜಾರ್‌ನಿ೦ದ ಸೌತೆಕಾಯಿಯ ಚೂರುಗಳನ್ನು ತೆಗೆಯಿರಿ ಹಾಗೂ ಬಳಿಕ ಇದಕ್ಕೆ ಅರ್ಧ ಲೋಟದಷ್ಟು ನೀರನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿರಿ.

ನೀರು

ನೀರು

ಮಧುಮೇಹಿಗಳಿಗೆ ನೀರು ತುಂಬಾ ಒಳ್ಳೆಯ ಆಯ್ಕೆಯಾಗಿದೆ. ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಸಕ್ಕರೆ ಮಟ್ಟ ಅಧಿಕವಾದರೆ ನಿರ್ಜಲೀಕರಣ ಉಂಟಾಗುವುದು. ಮಧುಮೇಹಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದರಿಂದ ದೇಹದಲ್ಲಿನ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗುವುದು. ಮಹಿಳೆಯರು ದಿನದಲ್ಲಿ 8 ಲೋಟ ನೀರು ಕುಡಿಯಬೇಕು. ಅದೇ ಪುರುಷರು 10 ಲೋಟ ನೀರು ಸೇವಿಸಬೇಕು.

English summary

Healthy Drinks For Diabetes You Should Know

Having diabetes means that you have to be aware of everything you eat or drink regardless of whatever food it is. You should also know the amount of carbohydrates you consume and how they may affect your blood sugar levels. In this article, we will be writing about the healthy drinks for diabetes. Diabetic patients should not drink a can of soda or a glass of soft drinks, as this can increase the blood glucose levels. This is extremely harmful for type 1 and type 2 diabetes patients.
X
Desktop Bottom Promotion