For Quick Alerts
ALLOW NOTIFICATIONS  
For Daily Alerts

ಮಧುಮೇಹದ ನರಗಳ ನೋವಿಗೆ ಮನೆಮದ್ದುಗಳು

|

ಮಧುಮೇಹ ಎನ್ನುವುದು ಹೆಚ್ಚಿನವರನ್ನು ಇಂದಿನ ದಿನಗಳಲ್ಲಿ ಇನ್ನಿಲ್ಲದಂತೆ ಕಾಡುವ ರೋಗ. ಪ್ರತಿನಿತ್ಯ ಮಧುಮೇಹಕ್ಕೆ ಒಳಗಾಗುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಮಧುಮೇಹಿ ರೋಗಿಗಳ ಸಂಖ್ಯೆಯು 108 ಮಿಲಿಯನ್ ನಿಂದ 422 ಮಿಲಿಯನ್ ಗೆ ಹೆಚ್ಚಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಹೋದರೆ ಅದು ದೊಡ್ಡ ಸಮಸ್ಯೆಯಾಗಿ ಕಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಮತ್ತು ಇದರಿಂದ ಮಧುಮೇಹ ನರರೋಗ(ಡಯಾಬಿಟಿಕ್ ನ್ಯೂರೋಪತಿ) ಉಂಟಾಗಬಹುದು.

ಮನೆಔಷಧಿ: ಮಧುಮೇಹ ನಿಯಂತ್ರಿಸುವ ಅಡುಗೆಮನೆಯ 'ಲವಂಗ'

ಮಧುಮೇಹ ನರರೋಗವನ್ನು ಬಾಹ್ಯ ನರರೋವೆಂದೂ ಕರೆಯಲಾಗುತ್ತದೆ. ಮಧುಮೇಹದಿಂದ ನರಗಳಿಗೆ ಉಂಟಾಗುವ ಸಮಸ್ಯೆಯೇ ಇದು. ಅಂಗಾಂಗಗಳು, ಕಾಲು ಮತ್ತು ಕೈಗಳ ನರಗಳ ಮೇಲೆ ಇದು ಪರಿಣಾಮ ಬೀರುವುದು. ಅಧಿಕ ರಕ್ತದ ಸಕ್ಕರೆಯಿಂದಾಗಿ ಉಂಟಾಗುವ ವಿಷಕಾರಿ ಪರಿಣಾಮದಿಂದ ನರಗಳ ಮೇಲೆ ಪರಿಣಾಮವಾಗುವುದು. ಇದರಿಂದ ಕಾಲು, ಕೈ, ಬೆರಳುಗಳಲ್ಲಿ ಜುಮ್ಮೆನ್ನಿಸುವಿಕೆ ಮತ್ತು ಮರಗಟ್ಟುವಿಕೆ ಉಂಟಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ನೋವಿಗೆ ಕೆಲವೊಂದು ಮನೆಮದ್ದನ್ನು ಮಾಡಿದರೆ ಒಳ್ಳೆಯದು. ಈ ನೋವಿಗೆ ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ತಿಳಿಯಿರಿ.

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಮಧುಮೇಹದಿಂದ ಉಂಟಾಗುವ ನರಗಳ ನೋವು ಕಡಿಮೆ ಮಾಡಲು ಪ್ರಮುಖ ಮನೆಮದ್ದು ಎಂದರೆ ಅದು ಬಿಸಿ ನೀರಿನ ಸ್ನಾನ.

ಬಿಸಿಯು ರಕ್ತಸಂಚಾರವನ್ನು ಉತ್ತಮಪಡಿಸಿ, ಶಮನಕಾರಿಯಾಗಿ ವರ್ತಿಸುವುದು.

20 ನಿಮಿಷ ಕಾಲ ದಿನನಿತ್ಯ ಬಿಸಿ ನೀರಿನ ಸ್ನಾನ ಮಾಡಿ.

ಕಲ್ಲುಪ್ಪು ಹಾಕಿಕೊಂಡು ಸ್ನಾನ ಮಾಡಬಹುದು.

ಶುಂಠಿ ಚಹಾ

ಶುಂಠಿ ಚಹಾ

ಶುಂಠಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಮಧುಮೇಹದ ನರಗಳ ನೋವು ಕಡಿಮೆ ಮಾಡುವುದು. ಶುಂಠಿ ಚಹಾ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುವುದು.

ಒಂದು ಕಪ್ ನೀರು ಕುದಿಸಿ ಅದಕ್ಕೆ ಎರಡು ತುಂಡು ಶುಂಠಿ ಅಥವಾ ಒಂದು ಚಮಚ ಶುಂಠಿ ಹುಡಿ ಹಾಕಿ.

5-10 ನಿಮಿಷ ಕಾಲ ಹಾಗೆ ಇರಲಿ ಮತ್ತು ದಿನನಿತ್ಯ ಇದನ್ನು ಕುಡಿಯಿರಿ.

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ

ಮಧುಮೇಹದಿಂದ ಉಂಟಾಗುವ ನರಗಳ ನೋವು ನಿವಾರಣೆ ಮಾಡಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದರಿಂದ ರಕ್ತಪರಿಚಲನೆಯು ಸುಧಾರಣೆಯಾಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದು. ಇದರಿಂದಾಗಿ ಮಧುಮೇಹ ನಿಯಂತ್ರಣದಲ್ಲಿ ಇರುವುದು. 20 ನಿಮಿಷ ಕಾಲ ದಿನನಿತ್ಯ ನಡಿಗೆ ಅಥವಾ ಈಜಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸುಧಾರಣೆಯಾಗುವುದು.

ಮಸಾಜ್

ಮಸಾಜ್

ಮಧುಮೇಹದಿಂದ ಉಂಟಾಗುವ ನರಗಳ ನೋವಿಗೆ ಮತ್ತೊಂದು ಪರಿಹಾರವೆಂದರೆ ಮಸಾಜ್. ಇದು ರಕ್ತಪರಿಚಲನೆಯನ್ನು ಸುಧಾರಣೆ ಮಾಡಿ, ಸ್ನಾಯುಗಳನ್ನು ಬಲಗೊಳಿಸುವುದು. ಬಾಧಿತ ಪ್ರದೇಶಕ್ಕೆ ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿಕೊಂಡು ಮಸಾಜ್ ಮಾಡಿ.

5-10 ನಿಮಿಷ ಕಾಲ ಬಾಧಿತ ಪ್ರದೇಶಕ್ಕೆ ಮಸಾಜ್ ಮಾಡಿ. ಮಸಾಜ್ ಬಳಿಕ ಈ ಭಾಗಕ್ಕೆ ಬಿಸಿ ಟವೆಲ್ ಕಟ್ಟಿಕೊಳ್ಳಿ. ದಿನದಲ್ಲಿ ಹಲವಾರು ಸಲ ಹೀಗೆ ಮಾಡಿ.

ಸಾರಭೂತ ತೈಲಗಳು

ಸಾರಭೂತ ತೈಲಗಳು

ಸಾರಭೂತ ತೈಲಗಳು ನೋವು ಮತ್ತು ಉರಿಯೂತ ಕಡಿಮೆ ಮಾಡುವುದು. ಪುದೀನಾ, ಲ್ಯಾವೆಂಡರ್ ಅಥವಾ ಸಾಂಬ್ರಾಣಿ ಸಾರಭೂತ ತೈಲ ಬಳಸಬಹುದು. ಇದರಿಂದ ಮಧುಮೇಹದಿಂದ ಉಂಟಾಗುವ ನರದ ನೋವು ಕಡಿಮೆಯಾಗುವುದು. ಸಾರಭೂತ ತೈಲವನ್ನು ಆಯ್ಕೆ ಮಾಡಿಕೊಂಡು ಅದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯಲ್ಲಿ ಆ್ಯಂಟಿಆಕ್ಸಿಡೆಂಟ್, ಉರಿಯೂತ ವಿರೋಧಿ, ಸೂಕ್ಷ್ಮಾಣು ವಿರೋಧಿ, ಮಧುಮೇಹಿ ವಿರೋಧಿ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವ ಗುಣಗಳು ಇವೆ. ಇದು ಮಧುಮೇಹದಿಂದ ನರಗಳಿಗೆ ಉಂಟಾಗುವ ನೋವು ನಿವಾರಿಸಲು ನೆರವಾಗುವುದು.

ಮಸಾಜ್ ಮಾಡಲು ದಾಲ್ಚಿನಿ ಎಣ್ಣೆ ಬಳಸಿ.

ದಾಲ್ಚಿನಿ ಚಹಾ ಕುಡಿಯಿರಿ.

ಆಹಾರದಲ್ಲೂ ದಾಲ್ಚಿನಿ ಬಳಕೆ ಮಾಡಿ.

ಈವ್ನಿಂಗ್ ಪ್ರಿಮ್ರೋಸ್ ತೈಲ

ಈವ್ನಿಂಗ್ ಪ್ರಿಮ್ರೋಸ್ ತೈಲ

ಈವ್ನಿಂಗ್ ಪ್ರಿಮ್ರೋಸ್ ತೈಲದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ಮರಗಟ್ಟುವಿಕೆ, ಉರಿಯೂತದ ಅನುಭವವು ಕಡಿಮೆಯಾಗುವುದು.

ಒಂದು ಚಮಚ ಈವ್ನಿಂಗ್ ಪ್ರಿಮೋಸ್ ತೈಲ ಹಚ್ಚಿಕೊಳ್ಳಿ.

ಈವ್ನಿಂಗ್ ಪ್ರಿಮೋಸ್ ತೈಲದ ಕ್ಯಾಪ್ಸೂಲ್ ತೆಗೆದುಕೊಳ್ಳಬಹುದು.

ವಿಟಮಿನ್ ಸಿ

ವಿಟಮಿನ್ ಸಿ

ವಿಟಮಿನ್ ಸಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡಿ ನರಗಳ ನೋವು ಕಡಿಮೆ ಮಾಡುವುದು ಮತ್ತು ಹಾನಿಯಾಗಿರುವ ನರಗಳನ್ನು ಸರಿಪಡಿಸುವುದು. ವಿಟಮಿನ್ ಸಿ ಯಿಂದ ನರಗಳು ಬೇಗನೆ ಶಮನವಾಗುವುದು.

ಕಿತ್ತಳೆ, ಲಿಂಬೆ, ಅನಾನಸು, ಟೊಮೆಟೋ, ಬಸಳೆ, ಸ್ಟ್ರಾಬೆರಿ ಇತ್ಯಾದಿ ಸೇವಿಸಿ.

 ಕ್ಯಾಪ್ಸಿಸಿನ್ ಕ್ರೀಮ್

ಕ್ಯಾಪ್ಸಿಸಿನ್ ಕ್ರೀಮ್

ಕ್ಯಾಪ್ಸಿಸಿನ್ ಉರಿಯೂತ ಶಮನಕಾರಿ ಮತ್ತು ಸಂಕೋಚನ ಗುಣವನ್ನು ಹೊಂದಿದೆ. ಇದು ನೋವು ಕಡಿಮೆ ಮಾಡಿ, ಮಧುಮೇಹದಿಂದ ಉಂಟಾಗಿರುವ ನರದ ನೋವು ನಿವಾರಿಸುವುದು.

ಬಾಧಿತ ಪ್ರದೇಶಕ್ಕೆ ದಿನಕ್ಕೆ 2-3 ಸಲ ಕ್ರೀಮ್ ಹಚ್ಚಿಕೊಳ್ಳಿ.

ವಿಟಮಿನ್ ಬಿ6

ವಿಟಮಿನ್ ಬಿ6

ವಿಟಮಿನ್ ಬಿ6 ಜುಮ್ಮೆನ್ನಿಸುವ ಮತ್ತು ಮರಗಟ್ಟುವಿಕೆ ತಡೆಯುವುದು ಮತ್ತು ಹಾನಿಗೊಳಗಾಗಿರುವ ನರಗಳನ್ನು ಸರಿಪಡಿಸುವುದು. ವಿಟಮಿನ್ ಬಿ6 ಇರುವ ಆಹಾರ ಸೇವನೆ ಮಾಡಿದರೆ ಅದರಿಂದ ಮಧುಮೇಹದ ನರದ ನೋವಿನ ಸಮಸ್ಯೆ ಕಡಿಮೆಯಾಗುವುದು.

ಬಾಳೆಹಣ್ಣು, ನೆಲಗಡಲೆ ಬೆಣ್ಣೆ, ಟೊಮೆಟೋ ಜ್ಯೂಸ್, ಸೋಯಾಬೀನ್ಸ್, ಅಕ್ರೋಟ ಇತ್ಯಾದಿ ಸೇವಿಸಿ.

English summary

10 Home Remedies For Diabetic Nerve Pain

Diabetic neuropathy, also called peripheral neuropathy, occurs when there is a nerve damage caused by diabetes. It is most likely to affect the nerves in the limbs, feet and hands, which is a result of nerve damage caused by the toxic effects of high blood sugar. This may cause numbness and tingling sensation in the fingers, toes, hands and feet. So, it is very important to monitor the blood glucose levels and apply/use some home remedies to help deal with the pain. Have a look at the home remedies for diabetic nerve pain, below.
Story first published: Tuesday, February 27, 2018, 16:18 [IST]
X
Desktop Bottom Promotion