'ಮಧುಮೇಹ ರೆಟಿನೋಪತಿ' ಬಗ್ಗೆ ಕೇಳಿದ್ದೀರಾ? ಇದು ತುಂಬಾನೇ ಅಪಾಯಕಾರಿ

Posted By: Deepu
Subscribe to Boldsky

ಮಧುಮೇಹ ಕಾಯಿಲೆ ಇರುವವರು ತಮ್ಮ ದೇಹದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಯಾಕೆಂದರೆ ಯಾವುದೇ ರೀತಿಯ ಸಣ್ಣ ಆರೋಗ್ಯ ಸಮಸ್ಯೆ ಕೂಡ ಮಧುಮೇಹಿಗಳಿಗೆ ದೊಡ್ಡದಾಗಿ ಪರಿಗಣಿಸಬಹುದು. ಇದರಲ್ಲಿ ಕಣ್ಣಿನ ರೆಟಿನಾ ಕಾಯಿಲೆ ಪ್ರಮುಖವಾಗಿದೆ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗುವುದರಿಂದ ಕಣ್ಣಿನ ರೆಟಿನೋಪತಿ ಅಥವಾ ಮಧುಮೇಹದ ರೆಟಿನಾ ಸಮಸ್ಯೆ ಕಾಣಿಸಿಕೊಳ್ಳುವುದು. ಮಧುಮೇಹ ಇರುವವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದರಿಂದ ಅದು ಕಣ್ಣಿನ ರೆಟಿನಾ ಮತ್ತು ಅದರ ರಕ್ತನಾಳಗಳ ಮೇಲೆ ಪರಿಣಾಮ ಉಂಟು ಮಾಡುವುದು. ಇದರಿಂದ ಕಣ್ಣಿನ ದೃಷ್ಟಿ ಕಳಕೊಳ್ಳಬಹುದು. ನೀವು ಮಧುಮೇಹಿಗಳಾಗಿದ್ದರೆ ಈ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯಿರಿ.

Diabetic Retinopathy

ಡಯಾಬಿಟಿಕ್ ರೆಟಿನೋಪತಿಯ ಅಪಾಯಗಳು

ಮಧುಮೇಹದ ಕಣ್ಣಿನ ಕಾಯಿಲೆಯು ಮಧುಮೇಹದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಮೊದಲ ಹಂತ ಹಾಗೂ ಎರಡನೇ ಹಂತದ ಮಧುಮೇಹಿಗಳಿಬ್ಬರಲ್ಲೂ ಇದು ಕಾಣಿಸಿಕೊಳ್ಳುವುದು. ಕಣ್ಣಿನ ಪರಿಸ್ಥಿತಿಯಲ್ಲಿ ಕೆಲವೊಂದು ಅಪಾಯಗಳ ಬಗ್ಗೆ ತಿಳಿಯಿರಿ.

1. ದೀರ್ಘ ಕಾಲದಿಂದ ಮಧುಮೇಹವಿರುವವರಿಗೆ

ತುಂಬಾ ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಾ ಇರುವಂತಹವರಲ್ಲಿ ಡಯಾಬಿಟಿಕ್ ರೆಟಿನೋಪತಿ ಕಾಣಿಸಿಕೊಳ್ಳುವುದು. ಈಗಾಗಲೇ ಮಧುಮೇಹ ಪತ್ತೆಯಾದವರಲ್ಲಿ ಈ ಸಮಸ್ಯೆ ಕಡಿಮೆ

2. ರಕ್ತದಲ್ಲಿನ ಸಕ್ಕರೆ ಮಟ್ಟ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿಯಂತ್ರಿಸದೆ ಇರುವಂತವರು ಮಧುಮೇಹದ ಕಣ್ಣಿನ ಕಾಯಿಲೆ ಸಹಿತ ಹಲವಾರು ರೀತಿಯ ಮಧುಮೇಹ ಸಂಬಂಧಿ ಕಾಯಿಲೆಗಳಿಗೆ ಒಳಗಾಗುವರು.

3. ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದೊಂದಿಗೆ ರಕ್ತನಾಳಗಳಲ್ಲಿ ರಕ್ತ ಸಂಚಾರವಾಗುವುದನ್ನು ಹೆಚ್ಚಿನ ಕಾಲ ರಕ್ತನಾಳಗಳು ಸಹಿಸಿಕೊಳ್ಳದು. ಇದರಿಂದ ರಕ್ತದೊತ್ತಡ ಇರುವಂತಹ ವ್ಯಕ್ತಿಗಳಲ್ಲಿ ಮಧುಮೇಹದ ರೆಟಿನೋಪತಿ ಸಮಸ್ಯೆ ಕಾಣಿಸುವುದು.

4. ಅಧಿಕ ಕೊಲೆಸ್ಟ್ರಾಲ್

ಅಧಿಕ ಕೊಲೆಸ್ಟ್ರಾಲ್ ಅಪಧಮನಿಗಳ ರಕ್ತನಾಳಗಳನ್ನು ಮುಚ್ಚುವುದು ಮಾತ್ರವಲ್ಲದೆ ಕಣ್ಣು ಸಹಿತ ದೇಹದ ಇತರ ಭಾಗದಲ್ಲಿನ ರಕ್ತನಾಳಗಳನ್ನು ಕೂಡ ಮುಚ್ಚಬಹುದು.

5. ಗರ್ಭಧಾರಣೆ

ಗರ್ಭಧಾರಣೆಯು ಮಹಿಳೆಯ ಜೀವನದ ಅತ್ಯಂತ ಸುಂದರ ಕ್ಷಣಗಳು. ಆದರೆ ಹೆಚ್ಚಿನ ಮಹಿಳೆಯರು ಈ ವೇಳೆ ಗರ್ಭಧಾರಣೆ ಸಂದರ್ಭದ ಮಧುಮೇಹಕ್ಕೆ ಒಳಗಾಗುವರು.

6. ತಂಬಾಕು ಬಳಕೆ

ತಂಬಾಕು ಬಳಕೆಯಿಂದ ಎಂಡ್ಟಾರ್ಟಿಟಿಸ್ ಉಂಟಾಗುವುದು. ಇದು ಸೂಕ್ಷ್ಮಾಣುಗಳ ಸಂಕೋಚನವನ್ನು ಉಂಟು ಮಾಡಿ ದೇಹದ ವಿವಿಧ ಭಾಗದಲ್ಲಿ ರಕ್ತ ಪೂರೈಕೆ ಕಡಿತಗೊಳಿಸುವುದು.

We Bet You Didn’t Know This About Diabetic Retinopathy

ಡಯಾಬಿಟಿಕ್ ರೆಟಿನೋಪತಿಯ ಲಕ್ಷಣಗಳು

ಡಯಾಬಿಟಿಕ್ ರೆಟಿನೋಪತಿಯು ದೀರ್ಘಕಾಲದ ಮಧುಮೇಹ ಇರುವವರಲ್ಲಿ ಕಾಣಿಸಿಕೊಳ್ಳುವುದು. ಇದು ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ತೋರಿಸಲ್ಲ. ಕಾಯಿಲೆಯು ಒಂದು ಮಟ್ಟಕ್ಕೆ ಬಂದ ಬಳಿಕ ಇದರ ಲಕ್ಷಣಗಳು ಗೋಚರಿಸುವುದು.

1. ದೃಷ್ಟಿ ಮಂದವಾಗುವುದು.

2. ದೃಷ್ಟಿಯ ಕ್ಷೇತ್ರದಲ್ಲಿ ಏರಿಳಿತ

3. ದೃಷ್ಟಿಯ ಕ್ಷೇತ್ರದಲ್ಲಿ ಕಡುಕಪ್ಪು ಬಣ್ಣ ಕಲೆಗಳು ಕಾಣಿಸಿಕೊಳ್ಳುವುದು. ಕಣ್ಣಿನ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವ ಕಾರಣದಿಂದ ಈ ರೀತಿಯಾಗುವುದು.

4. ಬಣ್ಣದ ದೃಷ್ಟಿದೋಷ

5. ದೃಷ್ಟಿದೋಷ

ಡಯಾಬಿಟಿಕ್ ರೆಟಿನೋಪತಿಯ ವಿಧಗಳು

ಡಯಾಬಿಟಿಕ್ ರೆಟಿನೋಪತಿಯನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಇದರ ಪ್ರಗತಿಯ ಆಧಾರದ ಮೇಲೆ ಇದನ್ನು ಎರಡು ವಿಭಾಗಗಳಾಗಿ ಮಾಡಲಾಗಿದೆ.

We Bet You Didn’t Know This About Diabetic Retinopathy

ಮೊದಲ ವಿಧ: ಪ್ರಚೋದಕವಲ್ಲದಿರುವುದು

ನಿಮ್ಮ ಕಣ್ಣು ಅಥವಾ ರೆಟಿನಾಗೆ ರಕ್ತಸಂಚಾರ ಮಾಡುವಂತಹ ರಕ್ತನಾಳಗಳಿಗೆ ಹಾನಿಯಾದಾಗ ಡಯಾಬಿಟಿಕ್ ರೆಟಿನೋಪತಿ ಉಂಟಾಗುವುದು. ಮುಚ್ಚಿದ ರಕ್ತವನ್ನು ತಳ್ಳಲು ವಿಫಲವಾದಾಗ ನಿಮಿಷದ ಕೊಳವೆ ಅಥವಾ ಎನ್ಯೂರಿಮ್ ಗಳು ಕಾರಣವಾಗುವುದು. 

ಎರಡನೇ ವಿಧ: ಪ್ರಚೋದಕ

ಈ ಕಾಯಿಲೆಗೆ ತುಂಬಾ ಅಭಿವೃದ್ಧಿಯಾದ ಬಳಿಕ ಹಲವಾರು ಸಂಖ್ಯೆಯ ಅಪಧಮನಿಗಳು ಮುಚ್ಚಲ್ಪಡುವುದು. ಹೊಸ ರಕ್ತನಾಳಗಳು ಇದೇ ಹಾನೀಡಾವುದರಿಂದ ಜನ್ಮ ಪಡೆಯುವುದು. ಇವುಗಳು ತುಂಬಾ ಅಸಾಮಾನ್ಯ ರಕ್ತನಾಳಗಳಾಗಿರುವುದು ಮತ್ತು ಸರಿಯಾಗಿ ಕಣ್ಣಿಗೆ ರಕ್ತಪೂರೈಕೆ ಮಾಡಲು ವಿಫಲವಾಗುವುದು. ಇದು ಕಣ್ಣಿನಲ್ಲಿ ರಕ್ತ ಮತ್ತು ದ್ರವ ಸೋರಿಕೆ ಮಾಡುವುದು. ಇದರಿಂದಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಂದರ್ಭ ಬರಬಹುದು.

ಏನು ಮಾಡಬೇಕು?

ಮಧುಮೇಹವಿದ್ದವರಿಗೆ ಡಯಾಬಿಟಿಕ್ ರೆಟಿನೋಪತಿ ಬರುವ ಅಪಾಯ ಹೆಚ್ಚಾಗಿರುವುದು. ಈ ಬಗ್ಗೆ ಡಾ. ಭುಜಂಗ ಶೆಟ್ಟಿ ಅವರೊಂದಿಗೆ ಮಾತನಾಡಿದಾಗ, ಮಧುಮೇಹ ಇರುವಂತಹ ವ್ಯಕ್ತಿಗಳು ಪ್ರತೀ ವರ್ಷ ತಮ್ಮ ಕಣ್ಣುಗಳನ್ನು ನೇತ್ರತಜ್ಞರಿಂದ ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಹೆಚ್ಚಿನವರು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಟ್ಟರೂ ದೃಷ್ಟಿದೋಷ ಸಮಸ್ಯೆ ಎದುರಿಸುವರು. 

We Bet You Didn’t Know This About Diabetic Retinopathy

ನಿಮಗೆ ಮಧುಮೇಹವಿದ್ದರೆ ಖಂಡಿತವಾಗಿಯೂ ನೀವು ಸಮೀಪದ ಕಣ್ಣಿನ ಆಸ್ಪತ್ರೆಗೆ ತೆರಳಿ ಪ್ರತೀ ವರ್ಷವು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ. ಡಯಾಬಿಟಿಕ್ ರೆಟಿನೋಪತಿ ಬಂದ ಬಳಿಕ ನಿಮ್ಮ ದೃಷ್ಟಿ ಮಂದುವಾಗದೆ ಇರುವಂತೆ ತಡೆಯುವುದು ಹೇಗೆ ಎಂದು ನೇತ್ರತಜ್ಞರಿಗೆ ಮಾತ್ರ ತಿಳಿದಿರುವುದು.

English summary

We Bet You Didn’t Know This About Diabetic Retinopathy

Diabetic retinopathy, a.k.a diabetic eye disease, does not occur overnight. But over time, an excessively high level of blood sugar does end up damaging the retina of your eyes and its blood vessels, which in turn, turns you blind. So if you are a diabetic, you really need to read this.
Story first published: Tuesday, October 17, 2017, 7:01 [IST]