ಮನೆ ಔಷಧಿ: ಮಧುಮೇಹ ರೋಗ ನಿವಾರಿಸುವ ಗಿಡಮೂಲಿಕೆಗಳು

By: Anuradha Yogesh
Subscribe to Boldsky

ಮಧುಮೇಹ ಒಂದು ರೋಗವಂತೂ ಅಲ್ಲವೇ ಅಲ್ಲ, ಇದು ಕೇವಲ ಒಂದು ದೈಹಿಕ ಸ್ಥಿತಿ. ಎಚ್ಚರಿಕೆಯಿಂದ ಆಹಾರದಲ್ಲಿ ಪಥ್ಯ, ವ್ಯಾಯಾಮ ಮತ್ತು ಧ್ಯಾನ ಮಾಡಿಕೊಂಡಿದ್ದರೆ ಮಧುಮೇಹವನ್ನು ನಿಯಂತ್ರಿಸಿಕೊಂಡು ಆರೋಗ್ಯಕರ ಜೀವನ ತೆಗೆಯಬಹುದು. ನಮಗೆ ಸಾಮಾನ್ಯವಾಗಿ ದೊರೆಯುವ ಸುಮಾರು ಗಿಡಮೂಲಿಕೆಗಳಲ್ಲಿ ಮಧುಮೇಹ ನಿರೋಧಕ ಶಕ್ತಿ ಇದೆ.

ಮಧುಮೇಹ ಟೈಪ್ 1 ಮತ್ತು ಟೈಪ್ 2: ಏನು ವ್ಯತ್ಯಾಸ?

ಈ ಮೂಲಿಕೆಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತವೆ, ಅಷ್ಟೆ ಅಲ್ಲದೆ ದೇಹದಲ್ಲಿ ಇನ್ಸುಲಿನ್ ಹೆಚ್ಚಿಸುತ್ತವೆ. ಈ ಲೇಖನದಲ್ಲಿ ನಿಮಗೆ ಮೂಲಿಕೆಗಳ ಸಂಪೂರ್ಣ ಮಾಹಿತಿ ಕೊಡಲಾಗಿದೆ. ಯಾವದಕ್ಕೂ ಒಮ್ಮೆ ನಿಮ್ಮ ವೈದ್ಯರ ಭೇಟಿ ಮಾಡದೆ ಸ್ವಯಂ ಚಿಕಿತ್ಸೆ ಮಾಡಬೇಡಿ....

ಅರಿಶಿಣ

ಅರಿಶಿಣ

ಅರಿಶಿಣದಲ್ಲಿರುವ "ಕರ್ಕ್ಯುಮಿನ್" ಔಷಧೀಯ ಗುಣವನ್ನು ಹೊಂದಿದೆ. ಇದು ಮಧುಮೇಹ ನಿರೋಧಕವಾಗಿ ಕೆಲಸ ಮಾಡುತ್ತದೆ. ಕರ್ಕ್ಯುಮಿನ್ ಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ಸುಮಾರು ಅಧ್ಯಯನಗಳಿಂದ ತಿಳಿದು ಬಂದಿದೆ.

ಮೆಂತೆ

ಮೆಂತೆ

ಕೆಲವು ಅಧ್ಯಯನಗಳ ಪ್ರಕಾರ ಮೆಂತೆ ಇಡೀ ದಿನದ ದೇಹದಲ್ಲಿನ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ(ಖಾಲಿ ಹೊಟ್ಟೆಯಾಗಿರಬಹುದು, ಇಲ್ಲವೆ ಊಟದ ಮೊದಲಾಗಿರಬಹುದು, ಅಥವ ಊಟದ ನಂತರವಾಗಿರಬಹುದು) ಅದರಲ್ಲಿನ ಕರಗಬಹುದಾದ ನಾರಿನಂಶ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ. ಇದು ಕಾರ್ಬೋಹೈಡ್ರೇಟ್ ಗಳ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಇನ್ಸುಲಿನ್ ನಿರೋಧತ್ವವನ್ನು ಕಡಿಮೆಗೊಳಿಸುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಶೇ.೨೪ ರಷ್ಟು ಕಡಿಮೆಗೊಳಿಸುತ್ತದೆ. ಊಟದ ನಂತರದ ಗ್ಲೂಕೋಸ್ ಹೀರುವಿಕೆಯನ್ನು ನಿಯಂತ್ರಿಸುತ್ತದೆ.

ಆಲೋವೆರ

ಆಲೋವೆರ

ಕೆಲವು ಅಧ್ಯಯನಗಳ ಪ್ರಕಾರ ಆಲೊವೆರ ರಾತ್ರಿಯಿಡಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ, ಅಷ್ಟೆ ಅಲ್ಲದೆ ಕೇವಲ ಕೆಲವೇ ತಿಗಳುಗಳಲ್ಲಿ ಶೇ.೫೦ ರಷ್ಟು ಕಡಿಮೆಗೊಳಿಸುತ್ತದೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶವನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ, ಆದರೂ ಇದಕ್ಕೆ ಪೂರಕವಾಗಿ ಇನ್ನೂ ಮಾಹಿತಿಗಳ ಸಂಗ್ರಹದ ಅವಶ್ಯಕತೆಯಿದೆ.

ಶುಂಠಿ

ಶುಂಠಿ

ಶುಂಠಿ ಆಂಟಿಇನಫ್ಲಮೆಟರಿ ಆಗಿ ಕೆಲಸ ಮಾಡುತ್ತದೆ. ೪ ಗ್ರಾಮ್ ಗಳಶ್ಟು ಶುಂಠಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವದಲ್ಲದೆ, ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಅಷ್ಟೆ ಅಲ್ಲದೆ ಶುಂಠಿಯು ದೇಹದಲ್ಲಿ ಗ್ಲೂಕೊಸ್ ಪ್ರಮಾಣದ ಏರುಪೇರಿನಿಂದ ಆಗುವ ಪರಿಣಾಮಗಳನ್ನು ನಿಗ್ರಹಿಸುತ್ತದೆ.

ಈರುಳ್ಳಿ

ಈರುಳ್ಳಿ

ಕೆಲವು ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನಗಳಿಂದ ಈರುಳ್ಳಿ ಮಧುಮೇಹಕ್ಕೆ ರಾಮಬಾಣವಾಗಬಹುದು ಎಂಬ ಭರವಸೆಗಳಿವೆ. ಅಲ್ಲಿಯಮ್ ಸೆಪ ಎಂಬ, ಈರುಳ್ಳಿಯಿಂದ ದೊರಕುವ ಪದಾರ್ಥದಿಂದ ಇಲಿಗಳ ಮೇಲೆ ಮಾಡಿದ ಪ್ರಯೋಗಗಳು ಯಶಸ್ವಿ ಪರಿಣಾಮಗಳನ್ನು ತಂದು ಕೊಟ್ಟಿವೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಹಾಗು ಬೆಳ್ಳುಳ್ಳಿಯಲ್ಲಿರುವ "ವಿಟಮಿನ್ ಸಿ" ಅಂಶವು ಮಧುಮೇಹದ ನಿವಾರಣೆಯಲ್ಲಿ ಅಚ್ಚರಿಕರ ಪರಿಣಾಮ ತಂದುಕೊಟ್ಟಿದೆ. ಕೊತ್ತಂಬರಿಯು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವದಲ್ಲದೆ, ರಕ್ತದ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ.

ಬ್ಲೂಬೆರಿ

ಬ್ಲೂಬೆರಿ

ಬ್ಲೂಬೆರಿ ಉರಿಯೂತ ಕಡಿಮೆಗೊಳಿಸುತ್ತದೆ, ಅಷ್ಟೆ ಅಲ್ಲದೆ ಆಕ್ಸಿಡೇಟಿವ್ ಹಾನಿಯನ್ನು ನಿಭಾಯಿಸಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಬ್ಲೂಬೆರಿ ರಸದ ಸೇವನೆಯಿಂದ ಕೆಲವೇ ದಿನಗಳಲ್ಲಿ ರಕ್ತದಲ್ಲಿನ ಇನ್ಸುಲಿನ್ ಅಂಶ ಸುಧಾರಿಸುತ್ತದೆ. ಬ್ಲೂಬೆರಿಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಮಧುಮೇಹ ನಿಯಂತ್ರಣದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ.

English summary

These Herbs Help Sugar Patients!

Diabetes is not actually a disease; it is a condition. If you are careful with your diet, exercise and medication, you can keep diabetes under control and live a normal life. There are many herbs which contain anti-diabetic properties. Such herbs can help in keeping your blood sugar levels under control. They increase insulin sensitivity.
Subscribe Newsletter