ಮನೆ ಔಷಧ: ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

By Arshad
Subscribe to Boldsky

ನೋಡುವುದಕ್ಕೆ ಮಹಿಳೆಯರ ಬೆರಳಿನಂತೇನೂ ಇರದ ಬೆಂಡೇಕಾಯಿಗೆ Ladies Finger ಎಂಬ ಈ ಪಟ್ಟ ಹೇಗೋ ದೊರಕಿಬಿಟ್ಟಿದೆ. ಸಾಮಾನ್ಯವಾಗಿ ಇಡಿಯ ವರ್ಷ ಸಿಗುವ ಈ ತರಕಾರಿ ವಾಸ್ತವವಾಗಿ ವಿವಿಧ ವಿಟಮಿನ್ನುಗಳು, ಖನಿಜಗಳು ಮತ್ತು ಪೋಷಕಾಂಶಗಳ ಆಗರವಾಗಿದ್ದು ಅಗ್ಗವೂ ಆಗಿರುವುದರಿಂದ ಎಲ್ಲಾ ವರ್ಗದ ಜನರ ಮನೆಯ ಅಡುಗೆಯಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಎಳೆಯ ಬೆಂಡೆಕಾಯಿಯನ್ನು ಸಾರು, ಪಲ್ಯ, ಅಥವಾ ಇತರ ತರಕಾರಿಗಳ ಜೊತೆಸೇರಿಸಿ ವಿವಿಧ ಭಕ್ಷ್ಯಗಳನ್ನು ಮಾಡಿ ಅನ್ನ, ಚಪಾತಿ, ರೊಟ್ಟಿಗಳೊಂದಿಗೆ ಸೇವಿಸಬಹುದಾದ ಬಹುಪಯೋಗಿ ತರಕಾರಿಯಾಗಿದೆ.

ಇದರ ಪ್ರಯೋಜನಗಳೇನು ಎಂದು ಪಟ್ಟಿಮಾಡಹೊರಟರೆ ಬಹಳ ಉದ್ದದ ಪಟ್ಟಿ ಮಾಡಬೇಕಾಗಿ ಬರಬಹುದು. ಕೊಂಚ ಬಲಿತ ಕೂಡಲೇ ನಾರು ದೃಢವಾಗುವ ಕಾರಣ ಎಳೆತಿರುವಾಗಲೇ ಅಡುಗೆ ಮಾಡಬೇಕಾಗಿರುವ ಬೆಂಡೆಕಾಯಿಯಲ್ಲಿ ಹಲವು ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣದಿಂದ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಉತ್ತಮವಾದ ಆಯ್ಕೆಯಾಗಿದೆ.....

ಸರ್ವ ರೋಗಕ್ಕೂ ರಾಮಬಾಣವಾಗಿರುವ ಬೆಂಡೆಕಾಯಿಯ ಪ್ರಯೋಜನಗಳೇನು?

ಆಹಾರ ತಜ್ಞರ ಪ್ರಕಾರ ಈ ತರಕಾರಿಯಲ್ಲಿರುವ ಒಂದು ವಿಶಿಷ್ಟ ಗುಣ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ, ತೂಕ ಇಳಿಸಲು ನೆರವಾಗುತ್ತದೆ ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ತಜ್ಞರು ಕಂಡುಕೊಂಡಂತೆ ಬೆಂಡೆಯ ಸೇವನೆಯಿಂದ ಪಡೆಯ ಬಹುದಾದ ಪ್ರಯೋಜನಗಳನ್ನು ನೋಡೋಣ....

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹಿಗಳು ನಿಯಮಿತವಾಗಿ ತಮ್ಮ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇವಿಸುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಈ ನಾರು ಕರುಳುಗಳಲ್ಲಿ ಸಕ್ಕರೆಯನ್ನು ಅತಿ ನಿಧಾನವಾಗಿ ಹೀರಿಕೊಳ್ಳಲು ನೆರವಾಗುತ್ತದೆ, ತನ್ಮೂಲಕ ಊಟದ ಬಳಿಕ ರಕ್ತದಲ್ಲಿ ಸಕ್ಕರೆ ಥಟ್ಟನೇ ಏರದೇ ಇರಲು ನೆರವಾಗುತ್ತದೆ. ಇದು ಮಧುಮೇಹಿಗಳಿಗೆ ಪೂರಕವಾಗಿದೆ.

ಇದರಲ್ಲಿ ಮಧುಮೇಹ ನಿವಾರಕ ಗುಣಗಳಿವೆ

ಇದರಲ್ಲಿ ಮಧುಮೇಹ ನಿವಾರಕ ಗುಣಗಳಿವೆ

ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಬೆಂಡೆಯಲ್ಲಿರುವ ಕೆಲವು ಕಿಣ್ವಗಳು ಆಹಾರದ ಮೂಲಕ ಲಭ್ಯವಾದ ಕಾರ್ಬೋಹೈಡ್ರೇಟುಗಳನ್ನು ಚಯಾಪಚಯ ಕ್ರಿಯೆಯಲ್ಲಿ ಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಮೇದೋಜೀರಕ ಗ್ರಂಥಿಯಲ್ಲಿ ಬೀಟಾ ಜೀವಕೋಶಗಳ ಉತ್ಪತ್ತಿ ಹೆಚ್ಚಿಸುತ್ತದೆ. ಈ ಜೀವಕೋಶಗಳು ಇನ್ಸುಲಿನ್ ಉತ್ಪಾದನೆಗೆ ಮೂಲವಾಗಿದ್ದು ಈ ಮೂಲಕ ಉತ್ತಮ ಪ್ರಮಾಣದ ಇನ್ಸುಲಿನ್ ಲಭ್ಯತೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಮಧುಮೇಹ ಆವರಿಸಿದ ಬಳಿಕ ತೂಕವನ್ನು ಆರೋಗ್ಯಕರ ಮಟ್ಟದಲ್ಲಿರಿಸಿ ಕೊಳ್ಳುವುದು ತುಂಬಾ ಅಗತ್ಯ. ತೂಕವನ್ನು ಮಿತಿಯೊಳಗೇ ಇರಿಸಿಕೊಂಡರೆ ಇದರಿಂದ ಎದುರಾಗಬಹುದಾದ ಹಲವಾರು ತೊಂದರೆಗಳನ್ನೂ ದೂರ ಮಾಡಿದಂತಾಗುತ್ತದೆ. ಬೆಂಡೆಯಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ಹಾಗೂ ಹೆಚ್ಚು ಕರಗದ ನಾರು ಇರುವ ಮೂಲಕ ಜೀರ್ಣಿಸಿಕೊಳ್ಳಲು ಕೊಬ್ಬು ಬಳಸಿ ಕೊಳ್ಳುತ್ತದೆ. ಪ್ರತಿ ನೂರು ಗ್ರಾಮ್ ಬೆಂಡೆಯಲ್ಲಿ ಕೇವಲ ಮೂವತ್ತಮೂರು ಕ್ಯಾಲೋರಿ ಶಕ್ತಿ ಇರುವ ಕಾರಣ ತೂಕ ಇಳಿಸಲು ನೆರವಾಗುತ್ತದೆ.

ಇದರಲ್ಲಿ ಅತಿ ಕಡಿಮೆ ಗ್ಲೈಸೆಮಿಕ್ ಸೂಚಕವಿದೆ

ಇದರಲ್ಲಿ ಅತಿ ಕಡಿಮೆ ಗ್ಲೈಸೆಮಿಕ್ ಸೂಚಕವಿದೆ

ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಎಷ್ಟು ಬೇಗನೇ ಸಕ್ಕರೆ ಲಭ್ಯವಾಗುತ್ತದೆ ಎಂಬುದನ್ನು ಸೂಚಿಸುವ ಸೂಚಿಯೇ ಗ್ಲೈಸೆಮಿಕ್ ಇಂಡೆಕ್ಸ್. ಈ ಸೂಚಕ ಹೆಚ್ಚಿದ್ದಷ್ಟೂ ಸಕ್ಕರೆ ಅಷ್ಟು ಶೀಘ್ರವಾಗಿ ರಕ್ತದಲ್ಲಿ ಲಭ್ಯವಾಗುತ್ತದೆ. ಕಡಿಮೆ ಇದ್ದಷ್ಟೂ ನಿಧಾನವಾಗಿ ಲಭ್ಯವಾಗುತ್ತದೆ. ಬೆಂಡೆಯ ಗ್ಲೈಸೆಮಿಕ್ ಸೂಚಕ ಅತಿ ಕಡಿಮೆ ಇರುವ ಕಾರಣ ಆಹಾರ ಸೇವನೆಯ ಬಳಿಕ ಅತಿ ನಿಧಾನವಾಗಿ ರಕ್ತದಲ್ಲಿ ಸಕ್ಕರೆ ಲಭ್ಯವಾಗುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬಹುದು.

ವಿಟಮಿನ್ನುಗಳು ಹಾಗೂ ಖನಿಜಗಳ ಆಗರವಾಗಿದೆ

ವಿಟಮಿನ್ನುಗಳು ಹಾಗೂ ಖನಿಜಗಳ ಆಗರವಾಗಿದೆ

ಬೆಂಡೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಮಧುಮೇಹಿಗಳಿಗೆ ಸಾಮಾನ್ಯವಾಗಿ ಇತರ ಸೋಂಕುಗಳು ಸುಲಭವಾಗಿ ಆವರಿಸುತ್ತವೆ. ಬೆಂಡೆಯ ಸೇವನೆಯಿಂದ ಮಧುಮೇಹಿಗಳ ದೇಹದಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ಹಲವಾರು ಸೋಂಕುಗಳಿಂದ ನೈಸರ್ಗಿಕ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಇದರಲ್ಲಿರುವ ಫೋಲೇಟ್, ವಿಟಮಿನ್ ಬಿ೯ ಸಹಾ ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.

ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿವೆ

ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿವೆ

ನ್ಯೂಟ್ರಿಷನ್ ಜರ್ನಲ್ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಬೆಂಡೆಯಲ್ಲಿ ಇತರ ತರಕಾರಿಗಳಿಗಿಂತಲೂ ಹೆಚ್ಚಿನ ಸಾಂದ್ರತೆಯಲ್ಲಿ ಆಂಟಿ ಆಕ್ಸಿಡೆಂಟುಗಳಿವೆ. ಇವು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧಹೋರಾಡುತ್ತದೆ ಹಾಗೂ ದೇಹದ ಪ್ರಮುಖ ಅಂಗಗಳಿಗೆ ಆವರಿಸುವ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುಪೇರಾದರೆ ನಮ್ಮ ಪ್ರಮುಖ ಅಂಗಗಳ ಕ್ಷಮತೆಯೂ ಏರುಪೇರಾಗುತ್ತದೆ.

ಬೆಂಡೆಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳುವ ಬಗೆ

ಬೆಂಡೆಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳುವ ಬಗೆ

ಬೆಂಡೆ ನೀರು:

ಬೆಂಡೆಯನ್ನು ಚೆನ್ನಾಗಿ ತೊಳೆದು ತುದಿ ಮತ್ತು ತೊಟ್ಟುಗಳನ್ನು ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ. ಬಳಿಕ ಈ ತುಂಟುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಮುಚ್ಚಳ ಮುಚ್ಚಿ ಇಡಿಯ ರಾತಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ನೀರನ್ನು ಸೋಸಿ ಕುಡಿಯಿರಿ. ಈ ನೀರಿನಲ್ಲಿ ಇನ್ಸುಲಿನ್ ಅನ್ನೇ ಹೋಲುವ ಗುಣವಿದ್ದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ.

ಬೇಯಿಸಿದ ಬೆಂಡೆ

ಬೇಯಿಸಿದ ಬೆಂಡೆ

ಬೆಂಡೆಯನ್ನು ಬೇಯಿಸಿ ತಯಾರಿಸಿದ ಖಾದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು. ಮೊದಲು ಬೆಂಡೆಯನ್ನು ನೀರಿನಲ್ಲಿ ಬೇಯಿಸಿ ಇದಕ್ಕೆ ಕೊಂಚ ಉಪ್ಪು, ಕೊಂಚ ಲಿಂಬೆರಸ ಬೆರೆಸಿ ಪಲ್ಯದಂತೆ ಸೇವಿಸಿ. ನೀರನ್ನು ಬಸಿಯಬೇಡಿ, ಬದಲಿಗೆ ಇಂಗಿಸಿ. ಇದರಿಂದ ಬೆಂಡೆಯ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

ಬೆಂಡೆಪಲ್ಯ

ಬೆಂಡೆಪಲ್ಯ

ಆಲೂ ಭಿಂಡಿ, ಭಿಂಡಿ ಮಸಾಲಾ, ಮಿಕ್ಸ್ ತರಕಾರಿ, ಮೊದಲಾದ ಬೆಂಡೆಯನ್ನು ಬಳಸುವ ನಿಮ್ಮ ನೆಚ್ಚಿನ ಖಾದ್ಯವನ್ನು ತಯಾರಿಸಿ ಅನ್ನ ಅಥವಾ ರೊಟ್ಟಿಯೊಡನೆ ಸೇವಿಸಿ. ಆದರೆ ಈ ಪಲ್ಯಗಳನ್ನು ತಯಾರಿಸುವಾಗ ಎಣ್ಣೆ ಮತ್ತು ಮಸಾಲೆಗಳು ಕನಿಷ್ಟ ಮಟ್ಟದಲ್ಲಿರುವಂತೆ ನೋಡಿಕೊಳ್ಳಿ. ಅನಾರೋಗ್ಯಕರ ಎಣ್ಣೆ ಅಥವಾ ಹೆಚ್ಚು ಪ್ರಮಾಣದ ಎಣ್ಣೆ ಆರೋಗ್ಯಕರವಲ್ಲ ಹಾಗೂ ಇದು ಬೆಂಡೆಯ ಆರೋಗ್ಯಕರ ಗುಣವನ್ನು ಕುಂದಿಸಬಹುದು.

ಆದರೆ ಬೆಂಡೆ ಮಧುಮೇಹಕ್ಕೆ ಪೂರಕ ಆಹಾರವೇ ಹೊರತು ಔಷಧಿಯಲ್ಲ.

ಆದರೆ ಬೆಂಡೆ ಮಧುಮೇಹಕ್ಕೆ ಪೂರಕ ಆಹಾರವೇ ಹೊರತು ಔಷಧಿಯಲ್ಲ.

ಸಂಶೋಧನೆಗಳ ಮೂಲಕ ಬೆಂಡೆಯ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದೇ ಹೊರತು ಮಧುಮೇಹವನ್ನು ಗುಣಪಡಿಸುವುದಿಲ್ಲ. ಹಾಗಾಗಿ ನೀವು ಈಗ ಸೇವಿಸುತ್ತಿರುವ ಔಷಧಿಗಳನ್ನು ನಿಲ್ಲಿಸದಿರಿ. ನೆನಪಿರಲಿ, ಮಧುಮೇಹವನ್ನು ನಿಯಂತ್ರಿಸಬಹುದೇ ಹೊರತು ಇದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಬೆಂಡೆಯನ್ನು ನಿಮ್ಮ ನಿತ್ಯದ ಔಷಧಿಗಳೊಡನೆ ಪೂರಕ ಆಹಾರವಾಗಿ ಸೇವಿಸಿ. ಹಾಗೂ ಮಧುಮೇಹದ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಿರಿ.

For Quick Alerts
ALLOW NOTIFICATIONS
For Daily Alerts

    English summary

    reasons-okra-or-bhindi-is-a-superfood-for-diabetics

    Your very own okra or bhindi, a staple vegetable enjoyed by many is becoming a superfood for diabetes. Experts believe that the fruit-vegetable has properties that can control blood glucose level, help in weight management and boost overall health. Here are a few ways how okra or bhindi can help you control diabetes if included in your diet regularly...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more