ಮಧುಮೇಹ ರೋಗಲಕ್ಷಣಗಳನ್ನು ಹದ್ದುಬಸ್ತಿನಲ್ಲಿಡುವ ಸೂಪರ್ ಮನೆಮದ್ದುಗಳು

By: manu
Subscribe to Boldsky

ಇಂದು ಮಧುಮೇಹ ಎಂಬ ಕಾಯಿಲೆಯು ಪ್ರತಿಯೊಬ್ಬರನ್ನೂ ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡು ಜೀವ ಹಿಂಡುತ್ತಿದೆ. ಎಳೆಯರು ಹಿರಿಯರು ಎಂಬ ಭೇದವಿಲ್ಲದೆಯೇ ಈ ರೋಗ ಚಿತ್ರಹಿಂಸೆಯನ್ನು ನೀಡುತ್ತಿದೆ. ಮೊದಲೆಲ್ಲಾ ಹಿರಿಯರನ್ನು ಅಪರೂಪವಾಗಿ ಕಾಡುತ್ತಿದ್ದ ಈ ಕಾಯಿಲೆಯು ಹಾಲುಗಲ್ಲದ ಹಸುಳೆಗೂ ನಿರಂತರವಾಗಿ ಬಾಧಿಸುತ್ತಿದೆ. ಇಂದು ನಮ್ಮಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವುದೇ ಇಂತಹ ರೋಗಗಳು ನಮ್ಮನ್ನು ಕಾಡುತ್ತಿರುವುದಕ್ಕೆ ಕಾರಣವಾಗಿರುವುದು ಎಂಬುದು ವೈದ್ಯ ಲೋಕದ ಅನಿಸಿಕೆಯಾಗಿದೆ.

ಮೊದಲೆಲ್ಲಾ ಕಾಲ್ನಡಿಗೆಯಲ್ಲೇ ಓಡಾಟ ಮಾಡುತ್ತಿದ್ದವರು ಇಂದು ವಾಹನಗಳನ್ನು ಆಧರಿಸುವಂತಾಗಿದೆ, ಏಕೆಂದರೆ ಸಣ್ಣದಾಗಿ ನಡೆಯುವ ದಾರಿ ಕೂಡ ನಮಗೆ ಏದುಸಿರು ಬಿಡುವಂತೆ ಮಾಡುತ್ತಿದೆ. ನಮ್ಮ ಆಹಾರ ಶೈಲಿ ತುಂಬಾ ಭಿನ್ನವಾಗುತ್ತಿದ್ದು ಇದರಿಂದ ನಮ್ಮ ದೇಹ ನಮ್ಮ ಚಟುವಟಿಕೆಗಳಿಗೆ ಮುಷ್ಕರವನ್ನು ಹೂಡುತ್ತಿದೆ.

Diabetes

ಇದರಿಂದಾಗಿಯೇ ಮಧುಮೇಹದಂತಹ ಶ್ರೀಮಂತ ಕಾಯಿಲೆ ಬಡವರನ್ನೂ ಎಡತಾಕುತ್ತಿದೆ. ವಾತಾವರಣದ ಕಲುಷಿತ ವಿದ್ಯಮಾನ, ತಿನ್ನುವ ಆಹಾರದಲ್ಲಿರುವ ವಿಷ ಮೊದಲಾದ ಕಾರಣಗಳಿಂದ ಇಂದು ಸಕ್ಕರೆ ಕಾಯಿಲೆ ಎಲ್ಲರನ್ನೂ ಶೋಷಿಸುತ್ತಿದೆ. ಇಂದಿನ ಲೇಖನದಲ್ಲಿ ಸಕ್ಕರೆ ಕಾಯಿಲೆಯ ರೋಗಲಕ್ಷಣಗಳನ್ನು ಹತ್ತಿಕ್ಕುವ ಕೆಲವೊಂದು ಮನೆಮದ್ದುಗಳನ್ನು ನಾವು ತಿಳಿಸುತ್ತಿದ್ದು ಇದರಿಂದ ನಿಮ್ಮ ಸಕ್ಕರೆ ಕಾಯಿಲೆಯನ್ನು ಹದ್ದುಬಸ್ತಿನಲ್ಲಿಡಬಹುದಾಗಿದೆ.

Vinegar

ಬೇಕಾಗುವ ಸಾಮಾಗ್ರಿಗಳು

ಆಪಲ್ ಸೀಡರ್ ವಿನೇಗರ್ - 3 ಚಮಚಗಳು

ದಾಲ್ಚಿನ್ನಿ ಹುಡಿ - 1/2 ಚಮಚ

ಬಿಸಿ ನೀರು - 1 ಲೋಟ

ಈ ನೈಸರ್ಗಿಕ ಮದ್ದು ನಿಮ್ಮ ಮಧುಮೇಹ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಸಹಾಯ ಮಾಡಲಿದೆ. ಇದನ್ನು ನಿತ್ಯವೂ ಸೇವಿಸಬೇಕು ಮತ್ತು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ಕಡ್ಡಾಯವಾಗಿದೆ. ಅದಾಗ್ಯೂ ನಿಮ್ಮ ವೈದ್ಯರು ಸೂಚಿಸಿರುವ ಔಷಧಗಳನ್ನು ಇದರೊಂದಿಗೆ ತೆಗೆದುಕೊಳ್ಳಬೇಕು.

ಅಂತೆಯೇ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಈ ಮದ್ದನ್ನು ತೆಗೆದುಕೊಳ್ಳಿ. ಆರೋಗ್ಯಕರ ಜೀವನ ಪದ್ಧತಿ ಮತ್ತು ಸ್ನೇಹಕರವಾದ ಡಯೆಟ್ ವಿಧಾನದೊಂದಿಗೆ ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ಆಪಲ್ ಸೀಡರ್ ವಿನೇಗರ್‌ನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಆಹಾರವನ್ನು ಕಡಿತಗೊಳಿಸುವುದರಿಂದ ಉಂಟಾಗುವ ಜೀರ್ಣ ಕಿಣ್ವಗಳ ಪ್ರಮಾಣವನ್ನು ಕುಗ್ಗಿಸುತ್ತದೆ ಇದರಿಂದ ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

cinnamon

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಯಂತ್ರಣದಲ್ಲಿದ್ದಾಗ ಮಧುಮೇಹ ರೋಗಲಕ್ಷಣಗಳು ನಿಯಂತ್ರಣದಲ್ಲಿರುತ್ತವೆ. ದಾಲ್ಚಿನ್ನಿ ಇನ್ನೊಂದು ಆರೋಗ್ಯಕರ ಮಧುಮೇಹಿ ಸಾಂಬಾರು ಪದಾರ್ಥವಾಗಿದ್ದು ಇದರಲ್ಲಿ ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ಅಂಶ ಹೇರಳವಾಗಿದೆ. ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಮಧುಮೇಹಿ ಅಂಶಗಳನ್ನು ಕುಗ್ಗಿಸುತ್ತದೆ.

ಮಾಡುವ ವಿಧಾನ

ಒಂದು ಲೋಟ ಬಿಸಿನೀರಿಗೆ ಆಪಲ್ ಸೀಡರ್ ವಿನೇಗರ್ ಮತ್ತು ದಾಲ್ಚಿನ್ನಿ ಹುಡಿಯನ್ನು ಸೇರಿಸಿಕೊಳ್ಳಿ.

ಚಮಚದ ಸಹಾಯದೊಂದಿಗೆ ಇವುಗಳನ್ನು ಚೆನ್ನಾಗಿ ಕಲಸಿ

ಈ ಮಿಶ್ರಣವನ್ನು ಪ್ರತಿ ದಿನ ಮುಂಜಾನೆ ಉಪಹಾರದ ನಂತರ ತೆಗೆದುಕೊಳ್ಳಿ.

 water Boiling

ಮಧುಮೇಹ ನಿಯಂತ್ರಿಸಬಹುದಾದ ಒಂದಿಷ್ಟು ನೈಸರ್ಗಿಕ ಆಹಾರಗಳು

ಬೆಳಿಗ್ಗೆ ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು. 

lady finger

ಬೆಂಡೆಕಾಯಿ

ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ. 

ಒಂದು ಲೋಟ ಹಾಗಲಕಾಯಿಯ ಜ್ಯೂಸ್

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ.

karela Juice

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

*ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ.

*ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ.

*ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ.

*ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.

*ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ.

*ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. *ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ. 

ನುಗ್ಗೆಸೊಪ್ಪು

ನುಗ್ಗೆಸೊಪ್ಪು

ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು. ಇನ್ನೊಂದು ವಿಧಾನವೆಂದರೆ ಕೊಂಚ ಬೇಯಿಸಿದ ಎಲೆಗಳನ್ನು ಚಪಾತಿ ಹಿಟ್ಟಿನ ಜೊತೆಗೆ ಕಲಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು. 

ಆದಷ್ಟು ಎಲೆಕೋಸು ಅಡುಗೆಗಳನ್ನು ಬಳಸಿ

ಕೋಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರ ನಿಧಾನವಾಗಿ ಸಕ್ಕರೆಯನ್ನು ಸೇರುವ ಗುಣ (antihyperglycemic property) ಮಧುಮೇಹವನ್ನು ನಿಯಂತ್ರಿಸಲು ಸೂಕ್ತವಾಗಿದ್ದು ಅಗತ್ಯಪ್ರಮಾಣದಲ್ಲಿ ಸಕ್ಕರೆ ನಿಧಾನವಾಗಿ ರಕ್ತವನ್ನು ಸೇರುತ್ತಾ ಇರುವಂತೆ ಮಾಡುವುದರಿಂದ ಮಧುಮೇಹಿಗಳು ಇಡಿಯ ದಿನ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. 2008ರಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಅರವತ್ತು ದಿನಗಳವರೆಗೆ ಕೋಸು ಆಧಾರಿತ ಆಹಾರವನ್ನು ನೀಡಿದ ಬಳಿಕ ಅವುಗಳ ರಕ್ತದೊತ್ತಡ ಕಡಿಮೆಯಾಗಿದ್ದು ಬಳಿಕ ಆರೋಗ್ಯಕರ ಮಟ್ಟದಲ್ಲಿದ್ದುದನ್ನು ಕಂಡುಕೊಳ್ಳಲಾಯಿತು. 

ಹೀರೇಕಾಯಿ

ಹೀರೇಕಾಯಿ ಕೂಡ ಒಳ್ಳೆಯದು

ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

English summary

Miracle Home Remedy To Keep Diabetes Symptoms Under Control!

Diabetes is a metabolic condition in which the affected person's body is unable to produce enough insulin or is unable to absorb the insulin produced well, causing a spike in the blood sugar levels. Some of the common symptoms of diabetes are, fatigue, excess hunger and urination, weight fluctuations, lowered immunity, blurred vision, heart ailments, etc. Diabetes is a disorder which can be treated but not cured, so, here is a home remedy which can help treat and reduce its symptoms.
Story first published: Saturday, October 21, 2017, 16:42 [IST]
Subscribe Newsletter