Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಚ್ಚರ! ಮಧುಮೇಹ ಕಾಯಿಲೆ ಲೈಂಗಿಕ ಜೀವನವನ್ನೇ ಕೆಡಿಸಬಹುದು!
ಡಯಾಬಿಟಿಸ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಅಚ್ಚ ಕನ್ನಡದಲ್ಲಿ ಮಧುಮೇಹವೆಂದು ಹೇಳಲಾಗುವ ಸಕ್ಕರೆ ಕಾಯಿಲೆಯಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಿಂದ ದೇಹ ಸರಿಯಾಗಿ ಕಾರ್ಯನಿರ್ವಹಿಸದೆ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
ಅದರಲ್ಲೂ ಪುರುಷರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿರುವ ಸಂದರ್ಭದಲ್ಲಿ ನಿಮಿರುವಿಕೆ ಅಸಾಮಾನ್ಯ ಪ್ರಕ್ರಿಯೆ ಕಾಣಿಸಿಕೊಳ್ಳುವುದು ಅಧ್ಯಯನಗಳು ಕೂಡ ಹೇಳಿವೆ. ಆರೋಗ್ಯವಂತ ಪುರುಷರಿಗಿಂತ ಮಧುಮೇಹ ಇರುವವರಲ್ಲಿ ನಿಮಿರುವಿಕೆ ಅಸಾಮಾನ್ಯ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ.
ಸಾಮಾನ್ಯ ವ್ಯಕ್ತಿಗಿಂತ ಮಧುಮೇಹ ಇರುವ ವ್ಯಕ್ತಿಗಳಲ್ಲಿ 10-15 ವರ್ಷ ಬೇಗನೆ ನಿಮಿರುವಿಕೆ ಅಸಾಮಾನ್ಯ ಕಾಣಿಸಿಕೊಳ್ಳುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಶೇ.35ರಿಂದ 75ರಷ್ಟು ಮಂದಿ ಪುರುಷರು ಮಧುಮೇಹದಿಂದಾಗಿ ಒಂದಲ್ಲ ಒಂದು ರೀತಿಯ ಅಸಾಮಾನ್ಯ ನಿಮಿರುವಿಕೆ ಸಮಸ್ಯೆಗೆ ಗುರಿಯಾಗುವರು. ನರಗಳ ದುರ್ಬಲತೆ, ರಕ್ತನಾಳ ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡದೆ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ರಕ್ತದಲ್ಲಿನ ಅತಿಯಾದ ಸಕ್ಕರೆ ಮಟ್ಟದಿಂದ ಅಸಾಮಾನ್ಯ ನಿಮಿರುವಿಕೆ ಉಂಟಾಗುತ್ತದೆಯಾ ಎಂದು ಪ್ರಶ್ನೆಗಳು ಮೂಡುತ್ತವೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ಮತ್ತು ಅಸಾಮಾನ್ಯ ನಿಮಿರುವಿಕೆಗೆ ನಡುವೆ ಯಾವ ಸಂಬಂಧವಿದೆ ಎಂದು ತಿಳಿದುಕೊಳ್ಳಲು ಬೋಲ್ಡ್ ಸ್ಕೈ ಈ ಲೇಖನವನ್ನು ಪ್ರಸ್ತುತಪಡಿಸುತ್ತಿದೆ....

ನಿಮಿರುವಿಕೆಗೆ ಪುರುಷನಿಗೆ ಏನು ಅಗತ್ಯವಿದೆ
ಪುರುಷನಿಗೆ ನಿಮಿರುವಿಕೆ ಆಗಬೇಕಾದರೆ ರಕ್ತನಾಳ, ಪುರುಷರ ಹಾರ್ಮೋನು ಆರೋಗ್ಯವಾಗಿರಬೇಕು ಮತ್ತು ಲೈಂಗಿಕವಾಗಿ ಉತ್ತೇಜನಗೊಳ್ಳುವ ಆಕಾಂಕ್ಷೆಯಿರಬೇಕು.

ಮಧುಮೇಹ ಹೇಗೆ ಪರಿಣಾಮ ಬೀರುವುದು
ನಿಮಿರುವಿಕೆಗೆ ಕಾರಣವಾಗುವಂತಹ ರಕ್ತನಾಳ ಮತ್ತು ನರಗಳ ಮೇಲೆ ಮಧುಮೇಹವು ಪರಿಣಾಮ ಬೀರುತ್ತದೆ. ಪುರುಷರ ಹಾರ್ಮೋನು ಸರಿಯಾದ ಪ್ರಮಾಣದಲ್ಲಿದ್ದು, ಲೈಂಗಿಕ ಉತ್ತೇಜನಕ್ಕೆ ಆಕಾಂಕ್ಷೆಯಿದ್ದರೂ ನಿಮಿರುವಿಕೆ ಉಂಟಾಗಲು ಸಾಧ್ಯವಾಗುವುದಿಲ್ಲ. ಮಧುಮೇಹ ನಿಮಿರುವಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಾ ಎನ್ನುವುದಕ್ಕೆ ಉತ್ತರ ಸಿಕ್ಕಂತಾಗಿದೆ.

ನಿಮಿರುವಿಕೆ ಅಸಾಮಾನ್ಯದಿಂದ ಬೇರೇನು ಆಗುವುದು
ನಿಮಿರುವಿಕೆ ಅಸಾಮಾನ್ಯದಿಂದ ಹೃದಯಾಘಾತ ಉಂಟಾಗುವ ಸಾಧ್ಯತೆಯಿದೆ. ರಕ್ತನಾಳಗಳಲ್ಲಿ ಇಡಿಯಂತಹ ಪದರ ನಿರ್ಮಾಣವಾಗುವುದರಿಂದ ಹೃದಯಕ್ಕೂ ಇದರಿಂದ ಸಮಸ್ಯೆಯಾಗಬಹುದು.

ಅಪಾಯ ತಗ್ಗಿಸುವುದು ಹೇಗೆ
ವಾರದಲ್ಲಿ ಮೂರು ದಿನ ದ್ವಿದಳ ಧಾನ್ಯಗಳನ್ನು ತಿಂದರೆ ಮಧುಮೇಹದ ಸಮಸ್ಯೆಯು ಶೇ. 35ರಷ್ಟು ಕಡಿಮೆಯಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗದಂತೆ ನಾರಿನಾಂಶವು ನೆರವಾಗುವುದು. ಇದರಿಂದ ನಿಮಿರುವಿಕೆ ಅಸಾಮಾನ್ಯ ಕ್ರಿಯೆಯನ್ನು ತಡೆಯಬಹುದು.

ಹೆಚ್ಚುವರಿ ಚಿಕಿತ್ಸೆ ಏನಿದು?
ಇದಕ್ಕಿರುವಂತಹ ಕೆಲವೊಂದು ಚಿಕಿತ್ಸೆಗಳೆಂದರೆ ಅಂತರ್ಗತ ಇಂಜೆಕ್ಷನ್ ಥೆರಪಿ, ನಿರ್ವಾತ ನಿರ್ಮಾಣ, ರಕ್ತಪರಿಚಲನಾ ಸಂಕೋಚನ ಸಾಧನಗಳು ಮತ್ತು ಲೈಂಗಿಕ ಚಿಕಿತ್ಸೆ.



Click it and Unblock the Notifications
