For Quick Alerts
ALLOW NOTIFICATIONS  
For Daily Alerts

ಪುರುಷರಿಗೆ 'ಮಧುಮೇಹ' ಬಂದರೆ ಬಲು ಡೇಂಜರ್! ಯಾಕೆಂದರೆ...

By Manu
|

ಮಧುಮೇಹ ಆವರಿಸಿದ ಪುರುಷರ ಸಂತಾನಫಲತೆಯೂ ಕಡಿಮೆಯಾಗುತ್ತದೆಯೇ? ಮಧುಮೇಹಿಗಳು ಕೇಳುವ ಸಾಮಾನ್ಯ ಪ್ರಶ್ನೆ ಇದು. ಮಧುಮೇಹ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ. ಇದರಲ್ಲಿ ಪ್ರಮುಖವಾದುದೆಂದರೆ ಸಂತಾನಶಕ್ತಿ ಕುಂದುವುದು!

ಎಚ್ಚರ! ಮಧುಮೇಹ ಕಾಯಿಲೆ ಲೈಂಗಿಕ ಜೀವನವನ್ನೇ ಕೆಡಿಸಬಹುದು!

ಪುರುಷರ ಸಂತಾನಫಲ ಕಡಿಮೆಯಾಗಲು ಪ್ರಮುಖ ಅಂಶವೆಂದರೆ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತವಾಗುವುದು. ಮಧುಮೇಹ ಇದಕ್ಕೆ ಒಂದು ಕಾರಣವಾಗಿದೆ. ಭಾರತದಲ್ಲಿ ಮಧುಮೇಹ ಈಗ ಸರ್ವವ್ಯಾಪಿಯಾಗತೊಡಗಿದ್ದು ಪ್ರತಿ ಐವರಲ್ಲಿ ಒಬ್ಬರಾದರೂ ಮಧುಮೇಹಿಗಳಾಗಿದ್ದಾರೆ. ಮಧುಮೇಹದಿಂದ ಪುರುಷ ಸಂತಾನಫಲ ಹೇಗೆ ಬಾಧೆಗೊಳಗಾಗುತ್ತದೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ....

ಮಧುಮೇಹ ನಿಜವಾಗಿಯೂ ಪುರುಷರ ಸಂತಾನಫಲ ಕಡಿಮೆಗೊಳಿಸುತ್ತದೆಯೇ?

ಮಧುಮೇಹ ನಿಜವಾಗಿಯೂ ಪುರುಷರ ಸಂತಾನಫಲ ಕಡಿಮೆಗೊಳಿಸುತ್ತದೆಯೇ?

ಈ ಬಗ್ಗೆ ನಡೆಸಿದ ಸಂಶೋಧನೆಗಳ ಪ್ರಕಾರ ಇದು ಹೌದು ಎಂದು ಖಚಿತಪಡಿಸಲಾಗಿದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವ ಈ ಸ್ಥಿತಿಗೆ sperm apoptosis ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ವೀರ್ಯಾಣುಗಳ ಒಳಗಣ ಡಿ ಎನ್ ಎ ರಚನೆಯೇ ತುಂಡಾಗಿರುತ್ತದೆ.

ಈ ಸ್ಥಿತಿಯಲ್ಲಿ ಗರ್ಭಪಾತವಾಗುವ ಸಾಧ್ಯತೆ ಇದೆಯೇ?

ಈ ಸ್ಥಿತಿಯಲ್ಲಿ ಗರ್ಭಪಾತವಾಗುವ ಸಾಧ್ಯತೆ ಇದೆಯೇ?

ಒಂದು ವೇಳೆ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗಿದ್ದರೂ ಈ ಸ್ಥಿತಿಗೆ ಒಳಗಾಗಿದ್ದರೆ ಗರ್ಭ ನಿಂತರೂ ಸಹಾ ಪರಿಪೂರ್ಣ ಬೆಳವಣಿಗೆ ಸಾಧ್ಯವಾಗದೇ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಧುಮೇಹ ಪುರುಷನ ದಾಂಪತ್ಯ ಜೀವನವನ್ನು ಇನ್ನೂ ಯಾವ ರೀತಿ ಬಾಧಿಸುತ್ತದೆ?

ಮಧುಮೇಹ ಪುರುಷನ ದಾಂಪತ್ಯ ಜೀವನವನ್ನು ಇನ್ನೂ ಯಾವ ರೀತಿ ಬಾಧಿಸುತ್ತದೆ?

ಮಧುಮೇಹಿಗಳು ಕಾಮಕೂಟದಲ್ಲಿ ಮೊದಲಿನಷ್ಟು ಚಟುವಟಿಕೆಯಿಂದ ಪಾಲ್ಗೊಳ್ಳಲು ಸಾಧ್ಯವಾಗದೇ ಇರಬಹುದು. ಉದ್ರೇಕಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಹಾಗೂ ಉದ್ರೇಕತೆಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಸಾಧ್ಯವಾಗದೆಯೂ ಹೋಗಬಹುದು.

ಡಿ ಎನ್ ಎ ರಚನೆ ಹಾಳಾಗಲು ಕಾರಣವೇನು?

ಡಿ ಎನ್ ಎ ರಚನೆ ಹಾಳಾಗಲು ಕಾರಣವೇನು?

ಮಧುಮೇಹದ ಪರಿಣಾಮವಾಗಿ ಉತ್ಕರ್ಷಣಶೀಲ ಒತ್ತಡ (oxidative stress) ಎದುರಾಗಬಹುದು. ಇದು ವೀರ್ಯಾಣುಗಳ ಡಿ ಎನ್ ಎ ರಚನೆ ವಿರೂಪಗೊಳ್ಳಲು ಪ್ರಮುಖ ಕಾರಣವಾಗಿದೆ.

ಟೈಪ್ 1 ಅಥವಾ ಟೈಪ್ 2 ಮಧುಮೇಹ? ಇವೆರಡರಲ್ಲಿ ಯಾರಿಗೆ ಹೆಚ್ಚು ಬಾಧಿಸುತ್ತದೆ?

ಟೈಪ್ 1 ಅಥವಾ ಟೈಪ್ 2 ಮಧುಮೇಹ? ಇವೆರಡರಲ್ಲಿ ಯಾರಿಗೆ ಹೆಚ್ಚು ಬಾಧಿಸುತ್ತದೆ?

ಒಂದು ಸಂಶೋಧನೆಯ ಪ್ರಕಾರ ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರ ವೀರ್ಯಾಣುಗಳು ಹೆಚ್ಚು ಘಾಸಿಗೊಳಗಾಗಿರಬಹುದು. ಅಲ್ಲದೇ ಈ ವ್ಯಕ್ತಿಗಳ ವೀರ್ಯಾಣುಗಳ ಸಂಖ್ಯೆಯ ಪ್ರಮಾಣವೂ ಕಡಿಮೆಯಾಗಿರಬಹುದು.

ಮಧುಮೇಹ ಟೈಪ್ 1 ಮತ್ತು ಟೈಪ್ 2: ಏನು ವ್ಯತ್ಯಾಸ?

ಇದನ್ನು ಸಂಶೋಧಕರು ಕಂಡುಕೊಂಡಿದ್ದಾದರೂ ಹೇಗೆ?

ಇದನ್ನು ಸಂಶೋಧಕರು ಕಂಡುಕೊಂಡಿದ್ದಾದರೂ ಹೇಗೆ?

ಇತ್ತೀಚಿನ ಸಂಶೋಧನೆಯೊಂದರಲ್ಲಿ ಸಾಮಾನ್ಯ ಜೀವನ ನಡೆಸುತ್ತಿರುವ 25-45 ವರ್ಷ ವಯಸ್ಸಿನ ಮಧುಮೇಹಿ ಪುರುಷರ ಆರೋಗ್ಯವನ್ನು ಅಭ್ಯಸಿಸಲಾಗಿತ್ತು. ಮಧುಮೇಹಿಗಳಲ್ಲಿ ಈ ಬಗೆಯ ವಿರೂಪ ಡಿ ಎನ್ ಎ ಇರುವ ವೀರ್ಯಾಣುಗಳು ಮಧುಮೇಹಿಗಳಲ್ಲಿಯೇ ಕಂಡುಬಂದಿತ್ತು.

ಅಂತಿಮ ತೀರ್ಮಾನ

ಅಂತಿಮ ತೀರ್ಮಾನ

ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ ಈ ಬಗ್ಗೆ ಅಧೀರರಾಗುವ ಅಗತ್ಯವೇನೂ ಇಲ್ಲ. ಮೊದಲು ಸ್ಕ್ರೀನ್ ಟೆಸ್ಟ್ ಎಂಬ ಪರೀಕ್ಷೆಗೆ ಒಳಗಾಗಿ ನಿಮ್ಮ ವೀರ್ಯಾಣುಗಳು ಫಲವತ್ತಾಗಿವೆಯೇ ಇಲ್ಲವೇ ಎಂದು ಕಂಡುಕೊಳ್ಳಿ. ಈಗ ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದು ಈ ಪರಿಸ್ಥಿತಿಯನ್ನು ಸರಿಪಡಿಸಲು ಕೆಲವಾರು ಔಷಧಿಗಳು ಲಭ್ಯವಿವೆ. ವೈದ್ಯರು ನಿಮ್ಮ ಆರೋಗ್ಯದ ಮಾಹಿತಿಯನ್ನು ಆಧರಿಸಿ ಸೂಕ್ತ ಔಷಧಿಯನ್ನು ಸೂಚಿಸಬಲ್ಲರು. ಇದರಿಂದ ಖಂಡಿತಾ ಸಾಮಾನ್ಯ ಜೀವನ ಹಾಗೂ ಸುಖಕರ ದಾಂಪತ್ಯ ನಡೆಸಲು ಸಾಧ್ಯ.

English summary

How Diabetes Troubles Men

Does diabetes affect male fertility? Diabetes does a lot of damage to the health. But there is something else that diabetes specifically does to men. It could rob them off their fertility powers! Diabetes could even affect the sperm count and several other factors that may hit the male fertility.
X
Desktop Bottom Promotion