For Quick Alerts
ALLOW NOTIFICATIONS  
For Daily Alerts

ಸಕ್ಕರೆ ರೋಗವನ್ನು ಹೇಗೆ ನಿಯಂತ್ರಿಸಬಹುದು: ಪ್ರಮುಖವಾದ 5 ದಾರಿಗಳು

By Anuradha Yogesh
|

ಭಾರತ ದೇಶವು 'ಸಕ್ಕರೆ ರೋಗದ ದೇಶ' ಎಂದು ಕರೆಸಿಕೊಳ್ಳುವ ಮಟ್ಟಿಗೆ ಸಕ್ಕರೆ ರೋಗಿಗಳನ್ನು ಹೊಂದಿದೆ. ಸುಮಾರು 5 ಕೋಟಿ ಜನ ಸಕ್ಕರೆ ರೋಗಿಗಳು ಇದ್ದರೆ, 2025 ರ ಹೊತ್ತಿಗೆ ಈ ಸಂಖ್ಯೆ ಇನ್ನೂ ಮೂರು ಕೋಟಿ ಹೆಚ್ಚಾಗಬಹುದು.

ಆದರೆ ಈ ಅಂಕಿಅಂಶಗಳು ಈ ರೋಗವು ರೋಗಿಯನ್ನು ಹೇಗೆ ನಿಧಾನವಾಗಿ ಮರಣದ ಶಯ್ಯೆಯ ಕಡೆಗೊಯ್ಯುವದು ಎಂದು ಹೇಳುವದಿಲ್ಲ. ನಿಮ್ಮ ಜೀವನದಲ್ಲಿ ಈ ರೋಗ ನಿಯಂತ್ರಣಕ್ಕೆ ಸಹಾಯಕವಾಗುವ 5 ದಾರಿಗಳು ಹೀಗಿವೆ...

ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು

ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು

ಮಾನವರ ದೇಹ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಿದೆ. ಕಡಿಮೆ ಆಹಾರ ಸೇವಿಸಿದರೆ, ಇನ್ನೂ ಜಾಸ್ತಿ ಶೇಖರಣೆಗೆ ಅನುಕೂಲ ಮಾಡಿಕೊಳ್ಳುತ್ತದೆ. ಅವಶ್ಯಕತೆಗಿಂತ ಜಾಸ್ತಿ ತಿಂದರೆ ದೇಹದ ಎಲ್ಲಾ ಕಡೆಗೆ ಸಮನಾಗಿ ಹಂಚುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ವ್ಯವಸ್ಥೆ ಸರಿಯಾಗಿ ಚಾಲನೆಯಲ್ಲಿರುತ್ತದೆ. ಆದರೆ, ಸಕ್ಕರೆ ರೋಗಿಗಳ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು-ಕಡಿಮೆ ಆಗಿ, ಹೈಪೊಗ್ಲೈಸೆಮಿಕ್ ಆಘಾತವಾಗಬಹುದು. ಆದ್ದರಿಂದ ರೋಗಿಗಳು ಆಹಾರದ ದಿನಚರಿಯನ್ನು ಸರಿಯಾಗಿ ಪಾಲಿಸುವದಲ್ಲದೆ, ದಿನವಿಡೀ ಸಮಯಕ್ಕೆ ಸರಿಯಾಗಿ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು.

ಪುರುಷರಿಗೆ 'ಮಧುಮೇಹ' ಬಂದರೆ ಬಲು ಡೇಂಜರ್! ಯಾಕೆಂದರೆ...

 ಆಹಾರದಲ್ಲಿ ನಾರಿನ ಅಂಶವನ್ನು ಹೆಚ್ಚಿಸಬೇಕು

ಆಹಾರದಲ್ಲಿ ನಾರಿನ ಅಂಶವನ್ನು ಹೆಚ್ಚಿಸಬೇಕು

ಬ್ರೌನ್ ರೈಸ್, ತರಕಾರಿ, ಹಣ್ಣಿನ ಬೀಜ, ಸಿಪ್ಪೆಗಳಲ್ಲಿರುವ ಕರಗಲಾರದ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸೇಬು, ಓಟ್ಸ್, ಒಣಹಣ್ಣುಗಳಲ್ಲಿ ಕಂಡುಬರುವ ಕರಗಬಹುದಾದ ನಾರಿನ ಅಂಶ ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಅಂಶಗಳನ್ನು ನಿಯಂತ್ರಿಸುತ್ತದೆ. ನಾರಿನಂಶವು ಬೇಗನೆ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ, ಇದರಿಂದ ಸಕ್ಕರೆ ರೋಗಕ್ಕೆ ಪ್ರಮುಖ ಕಾರಣವಾದ ಅನವಶ್ಯಕ ಆಹಾರ ಸೇವನೆ ನಿಯಂತ್ರಣಕ್ಕೆ ಬರುತ್ತದೆ.

ಬೆಳಗಿನ ಉಪಹಾರ ಚೆನ್ನಾಗಿ ತಿಂದು, ರಾತ್ರಿಯ ಊಟ ಹಿತಮಿತವಾಗಿ ಮಾಡಬೇಕು:

ಬೆಳಗಿನ ಉಪಹಾರ ಚೆನ್ನಾಗಿ ತಿಂದು, ರಾತ್ರಿಯ ಊಟ ಹಿತಮಿತವಾಗಿ ಮಾಡಬೇಕು:

"ಉಪಹಾರ ರಾಜನಂತೆ, ಮಧ್ಯಾಹ್ನದ ಊಟ ಸಾಮಾನ್ಯ ವ್ಯಕ್ತಿಯಂತೆ, ರಾತ್ರಿ ಊಟ ಭಿಕ್ಷುಕನಂತೆ ಮಾಡಬೇಕು" ಎಂಬ ಪ್ರಸಿದ್ಧ ನಾಣ್ಣುಡಿಯೇ ಇದೆ. ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ, ಮುಖ್ಯವಾಗಿ ಟೈಪ್-೨ ಸಕ್ಕರೆ ರೋಗ ಇರುವವರಿಗೆ. ಸುಮಾರು ಅಧ್ಯಯನಗಳ ಪ್ರಕಾರ ಪ್ರೋಟೀನ್ ಭರಿತ ಆದರೆ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರ ಮತ್ತು ಮಿತವಾದ ರಾತ್ರಿಯ ಭೋಜನ ಆಹಾರದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದು ನಿಯಂತ್ರಿಸುವದಲ್ಲದೆ, ಉತ್ತಮವಾದ ಜೀವನಶೈಲಿಯನ್ನು ಒದಗಿಸುತ್ತದೆ.

ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಬೇಕು

ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಬೇಕು

ಇದು ಸಕ್ಕರೆ ರೋಗ ನಿಯಂತ್ರಣಕ್ಕೆ ಅತಿ ಪ್ರಮುಖವಾದ ದಾರಿ. ಮೊದಲನೆಯದೆಂದರೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಸಕ್ಕರೆ ರೋಗಕ್ಕೆ ಮುಖ್ಯ ಕಾರಣವಾದ ಬೊಜ್ಜನ್ನು ನಿಯಂತ್ರಿಸುತ್ತದೆ.

ಎರಡನೆಯದಾಗಿ, ಸಕ್ಕರೆ ರೋಗದಿಂದ ನಿಧಾನವಾಗಿ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುತ್ತದೆ.ಆದ್ದರಿಂದ, ತಪ್ಪದೆ ಕನಿಷ್ಠ 3೦ ನಿಮಿಷದ ವ್ಯಾಯಮ ಮಾಡಲೇಬೇಕು. ಉದ್ಯಾನವನದಲ್ಲಿ ಕೇವಲ ಬಿರುಸಾದ ನಡಿಗೆಯಾದರೂ ತೊಂದರೆಯಿಲ್ಲ.

ಆರೋಗ್ಯಕರವಾದ ಕೊಬ್ಬಿನಂಶವಿರುವ ಆಹಾರ ಮತ್ತು ಹಣ್ಣುಗಳನ್ನು ತಿನ್ನಬೇಕು

ಆರೋಗ್ಯಕರವಾದ ಕೊಬ್ಬಿನಂಶವಿರುವ ಆಹಾರ ಮತ್ತು ಹಣ್ಣುಗಳನ್ನು ತಿನ್ನಬೇಕು

ಸಕ್ಕರೆ ರೋಗಕ್ಕೆ ಸಮತೋಲಿತ ಆಹಾರ ಅತಿಮುಖ್ಯ, ಆದರೆ ಸ್ವಲ್ಪ ಸಣ್ಣ ಪುಟ್ಟ ಬದಲಾವಣೆ ಅಗತ್ಯವಾಗಿದೆ. ಅಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾದ ಮೈದಾ ಬ್ರೆಡ್, ಅನ್ನ, ಆಲೂಗಡ್ಡೆಗಳನ್ನು ತ್ಯಜಿಸಬೇಕು. ಸಂಕೀರ್ಣ ಆಹಾರಗಳದ ಸಂಪೂರ್ಣ ಗೋಧಿ ಧಾನ್ಯಗಳು, ಬೇಳೆ, ಕಾಳುಗಳ ಸೇವನೆಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟೆ ಅಲ್ಲದೆ, ಆಹಾರದಲ್ಲಿ ಕಡಿಮೆ ಕೊಬ್ಬಿನಂಶವಿರುವ ಪ್ರೋಟೀನ್(ಚೀಸ್, ಮೊಟ್ಟೆ,ಮೊಸರು,ಸೊಯಾ),ಆರೋಗ್ಯಕರವಾದ ಕೊಬ್ಬಿನಂಶವಿರುವ ಅವಕಡೊ,ಒಣಹಣ್ಣುಗಳು,ಹೆಚ್ಚು ನಾರಿನಂಶವಿರುವ ತರಕಾರಿ,ಹಣ್ಣುಗಳನ್ನು(ಬ್ರೊಕೋಲಿ,ಬೆರ್ರಿಹಣ್ಣುಗಳು) ಸೇವಿಸಬೇಕು. ಆದರೆ ಕಿತ್ತಳೆ, ಮಾವು ಹಾಗು ಕಲ್ಲಂಗಡಿಯಂತಹ ಸಕ್ಕರೆ ಅಂಶ ಭರಿತ ಹಣ್ಣುಗಳ ಸೇವನೆ ವ್ಯರ್ಜ್ಯವಾಗಿದೆ.

ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು
English summary

How to Control Diabetes: The Top 5 Ways

India is the Diabetes Capital of the World with over 50 million residents suffering from it, and an additional 30 million estimated to join the ranks by 2025. But what these statistics fail to project is the fact that diabetes, once diagnosed, is a nightmare that kills you slowly with time. So here are the top 5 ways to control diabetes that you can implement in your life right now
X
Desktop Bottom Promotion