For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಜೀವನ ಶೈಲಿ ಅನುಸರಿಸಿ, ಮಧುಮೇಹ ನಿಯಂತ್ರಿಸಿ

By Deepu
|

ಆರೋಗ್ಯದ ಮೇಲೆ ನಾವು ಕಾಳಜಿಯನ್ನು ತೆಗೆದುಕೊಂಡಷ್ಟೂ ನಮ್ಮ ಆಯುಷ್ಯ ಹೆಚ್ಚುತ್ತದೆ. ದೈಹಿಕ ಕಾಯಿಲೆಗಳು ಯಾವುದೇ ಇರಲಿ ಅವು ಒಮ್ಮೆ ದೇಹವನ್ನು ಹೊಕ್ಕಿಬಿಟ್ಟಿತೆಂದರೆ ಸಾಯುವವರೆಗೆ ಯಾತನೆಯನ್ನು ನೀಡುತ್ತಲೇ ಇರುತ್ತದೆ. ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

ಇಂದಿನ ಯುವಜನಾಂಗವನ್ನೂ ಸದ್ದಿಲ್ಲದೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕಾಯಿಲೆಯಾಗಿದೆ ಸಕ್ಕರೆ ಕಾಯಿಲೆ. ಹೆಸರಿಗೆ ಮಾತ್ರವೇ ಸಿಹಿಯಾದ ಕಾಯಿಲೆಯಾಗಿದ್ದರೂ ಇದು ಉಂಟುಮಾಡುವ ವೇದನೆ ವಿಪರೀತವಾಗಿರುತ್ತದೆ. ನಿಮ್ಮ ರಕ್ತದ ಸಕ್ಕರೆ ಪ್ರಮಾಣ ಏರಿಕೆಯಾದಲ್ಲಿ ಸಕ್ಕರೆ ಕಾಯಿಲೆ ನಿಮ್ಮನ್ನು ಬೇಟೆಯಾಡಿಬಿಡುತ್ತದೆ. ಬೊಜ್ಜು-ಮಧುಮೇಹ ನಿಯಂತ್ರಣಕ್ಕೆ-ಒಂದೆರಡು ಲಿಂಬೆ ಸಾಕು!

ಹತೋಟಿಯ ಆಹಾರ ಸೇವನೆ ಕ್ರಮವನ್ನು ಪಾಲಿಸಿಕೊಂಡು ಪಥ್ಯದಲ್ಲಿ ಆಹಾರವನ್ನು ಸೇವಿಸುತ್ತಾ ನಿಮ್ಮ ಜೀವನವನ್ನು ನೀವು ನಡೆಸಬೇಕಾಗುತ್ತದೆ. ಒಂದು ವೇಳೆ ದೇಹದಲ್ಲಿ ಸಣ್ಣ ಮಟ್ಟಿಗಿನ ಗಾಯಗಳು ಉಂಟಾದಾರೂ ಕೂಡ ನೀವು ವೈದ್ಯರನ್ನು ಕಾಣಬೇಕು ಮತ್ತು ಆರೈಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ನೆನಪಿಡಿ, ಇದೇ ಕಾರಣಕ್ಕೆ ಮಧುಮೇಹ ರೋಗ ಕಾಣಿಸಿಕೊಳ್ಳುವುದು!

ಇಷ್ಟೆಲ್ಲಾ ಕಷ್ಟ ಅನುಭವಿಸುವುದಕ್ಕಿಂತ ಈ ಕಾಯಿಲೆ ಬರದಂತೆ ತಡೆಗಟ್ಟುವುದು ಉತ್ತಮವಲ್ಲವೇ? ಹಾಗಿದ್ದರೆ ಸಕ್ಕರೆ ಕಾಯಿಲೆಗೆ ತುತ್ತಾಗದಂತೆ ನಿಮ್ಮನ್ನು ಕಾಪಾಡಿಕೊಳ್ಳಲು ನೀವು ಪಾಲಿಸಬೇಕಾದ ಕ್ರಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮುಂದೆ ಓದಿ...


ನಿಮ್ಮ ತೂಕದ ಮೇಲೆ ಗಮನವಿಡಿ

ನಿಮ್ಮ ತೂಕದ ಮೇಲೆ ಗಮನವಿಡಿ

ನಿಮ್ಮ ತೂಕದ ಮೇಲೆ ಕಟ್ಟುನಿಟ್ಟಾದ ಗಮನವನ್ನು ಹರಿಸಬೇಕು. ನಿಯಮಿತವಾಗಿ ವ್ಯಾಯಾಮವನ್ನು ಅನುಸರಿಸುವುದು ಅಗತ್ಯವಾಗಿದೆ. ವ್ಯಾಯಾಮವು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿರಿಸುವುದು ಮಾತ್ರವಲ್ಲದೆ, ಕ್ಯಾಲೊರಿಗಳನ್ನು ಕರಗಿಸಲು ಮತ್ತು ನಿಮ್ಮನ್ನು ಆರೋಗ್ಯವಾಗಿರಿಸುವಲ್ಲಿ ಸಹಾಯ ಮಾಡಲಿದೆ. ಅನಗತ್ಯ ತೂಕವನ್ನು ತಡೆಗಟ್ಟಲು ನಿಮ್ಮ ಆಹಾರ ಕ್ರಮವನ್ನು ಸೀಮಿತಗೊಳಿಸಿ. ಆಹಾರ ಸೇವನೆಯ ಮುನ್ನ ಅರ್ಧ ಲೋಟದಷ್ಟು ನೀರು ಸೇವಿಸುತ್ತಿರಿ.

ಹೈಡ್ರೇಟ್ ಆಗಿರಿ

ಹೈಡ್ರೇಟ್ ಆಗಿರಿ

ಹೆಚ್ಚು ಸಮಯಗಳ ಕಾಲ ಬಾಯಾರಿಕೆ ಮತ್ತು ಹಸಿವನ್ನು ದೇಹ ತಡೆದುಕೊಂಡಿರುವುದಿಲ್ಲ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬರಿಯ ಆಹಾರದಲ್ಲಿರುವ ನೀರಿನ ಪ್ರಮಾಣವನ್ನು ಮಾತ್ರವೇ ದೇಹಕ್ಕೆ ನೀಡದಿರಿ.

ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಊಟಕ್ಕೆ ಕುಳಿತುಕೊಳ್ಳುವ ಮುನ್ನ ತರಕಾರಿಗಳನ್ನು ಸೇವಿಸಿ ನಂತರವಷ್ಟೇ ಇತರ ಆಹಾರಗಳತ್ತ ಕಣ್ಣು ಹಾಯಿಸಿ. ತರಕಾರಿಗಳ ಸೇವನೆಯಿಂದ ವಿಪರೀತ ತಿನ್ನವ ಹವ್ಯಾಸವನ್ನು ನೀವು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಆಹಾರ ಸೇವಿಸುತ್ತಿರುವಾಗ ಟಿವಿ ನೋಡದಿರಿ

ಆಹಾರ ಸೇವಿಸುತ್ತಿರುವಾಗ ಟಿವಿ ನೋಡದಿರಿ

ನೀವು ಆಹಾರ ಸೇವನೆ ಮಾಡುತ್ತಿರುವಾಗ ಟಿವಿ ನೋಡದಿರಿ. ಈ ಸಮಯದಲ್ಲಿ ನೀವು ಹೆಚ್ಚುವರಿಯಾಗಿ ಆಹಾರ ಸೇವಿಸಿದರೂ ಅದು ನಿಮಗೆ ತಿಳಿದಿರುವುದಿಲ್ಲ. ಆಹಾರವನ್ನು ಮಿತವಾಗಿ ಸೇವನೆ ಮಾಡಿದಾಗ ಸೇವಿಸುವ ಕ್ಯಾಲೋರಿ ಪ್ರಮಾಣ ಇಳಿಮುಖಗೊಳ್ಳಲಿದೆ.

ದಾಲ್ಚಿನ್ನಿ

ದಾಲ್ಚಿನ್ನಿ

ನಿಮ್ಮ ಆಹಾರದಲ್ಲಿ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು

ನಿಯಂತ್ರಣದಲ್ಲಿಸಿಕೊಳ್ಳಲು ಇದು ಸಹಾಯಕವಾಗಲಿದೆ.

ಒತ್ತಡ

ಒತ್ತಡ

ನಿಮ್ಮನ್ನು ಆದಷ್ಟು ಒತ್ತಡ ರಹಿತರನ್ನಾಗಿರಿಸಿಕೊಳ್ಳಿ. ಒತ್ತಡವು ಮಧುಮೇಹಕ್ಕೆ ಕಾರಣವಾಗಿದೆ. ಆದಷ್ಟು ಧ್ಯಾನ ಮತ್ತು ಯೋಗದ ಮೂಲಕ ನಿಮ್ಮನ್ನು ಒತ್ತಡರಹಿತರನ್ನಾಗಿಸಿ.

ನಿದ್ದೆ

ನಿದ್ದೆ

ನಿತ್ಯವೂ ಸಾಕಷ್ಟು ನಿದ್ದೆಯನ್ನು ಮಾಡಿ. ನಿದ್ದೆಯ ಅಭಾವವುಳ್ಳವರು ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಿರುತ್ತಾರೆ.

English summary

Here Are Ways Never To Get Diabetes

Diabetes is a deadly disease and steps need to be taken to prevent it as it can lead to a number of fatal conditions. Diabetes mellitus can be responsible for blindness in adults. It also causes problems in vision, heart diseases and affects the organs of the body negatively. Today in this article we shall discuss certain ways in which you can prevent diabetes.
X
Desktop Bottom Promotion