Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮನೆ ಔಷಧಿ: ಜೀರಿಗೆ ಮಧುಮೇಹಕ್ಕೆ ನೈಸರ್ಗಿಕ ಮದ್ದು
ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರ್ಯದಲ್ಲಿ ದೊಡ್ಡದನ್ನು ಸಾಧಿಸುವ ಯಾವುದೇ ಕ್ರಿಯೆ ಅಥವಾ ವ್ಯಕ್ತಿಯನ್ನು ಜೀರಿಗೆಯೊಂದಿಗೆ ಹೋಲಿಸಲಾಗುತ್ತದೆ. ಅಷ್ಟೇ ಏಕೆ ಅತಿ ಖಾರವಾದ ಪುಟ್ಟಮೆಣಸಿನ ಹೆಸರೂ ಜೀರಿಗೆ ಮೆಣಸು. ಇದೇನೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಈ ಪುಟ್ಟ ಜೀರಿಗೆಯಲ್ಲಿ ಆರೋಗ್ಯಕರ ಗುಣಗಳ ಗಣಿಯೇ ಇದೆ.
ಆರೋಗ್ಯಕರ ಮಾತ್ರವಲ್ಲ, ರುಚಿಕರವೂ ಆದುದರಿಂದ ಭಾರತದ ಬಹುತೇಕ ಎಲ್ಲಾ ಮಸಾಲೆಯ ಅಡುಗೆಗಳಲ್ಲಿ ಒಗ್ಗರಣೆ, ಮಸಾಲೆಗಳಲ್ಲಿ ಉಪಯೋಗಿಸಲಾಗುತ್ತದೆ. ಜೀರಿಗೆಯ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಹೆಸರಿಸುವುದಾದರೆ ಮಧುಮೇಹವನ್ನು ತಡೆಗಟ್ಟುವುದು, ದುರ್ಮಾಂಸ, ಶಿಲೀಂಧ್ರದ ಸೋಂಕು ಮೊದಲಾದವನ್ನು ಪರಿಗಣಿಸಬಹುದು. ಇದರ ಆರೋಗ್ಯಕರ ಪರಿಣಾಮಗಳನ್ನು ಕಂಡುಕೊಂಡ ನಮ್ಮ ಹಿರಿಯರು ಪ್ರತಿದಿನ ಒಂದು ಔಷಧಿಯಂತೆ ಉಪಯೋಗಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಕುಡಿಯಲು ಜೀರಿಗೆ ಕುದಿಸಿ ಸೋಸಿದ ನೀರನ್ನೇ ಕುಡಿಯಲು ನೀಡುತ್ತಾರೆ.

ಹೌದು, ಸಂಬಾರ ಪದಾರ್ಥಗಳಲ್ಲಿ ಜೀರಿಗೆಗೆ ಪ್ರಮುಖ ಸ್ಥಾನವಿದೆ. ಇದು ಅಡುಗೆ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಕೂಡ ಇದೆ. ಅದರಲ್ಲೂ ಊಟಕ್ಕೆ ಮೊದಲು ಒಂದು ಲೋಟ ಜೀರಿಗೆ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದು. ಅದೇ ರೀತಿಯ ಮಲಗುವ ಎರಡು ಗಂಟೆಗೆ ಮೊದಲು ಈ ನೀರು ಕುಡಿದರೆ ಸುಖ ನಿದ್ರೆ ನಿಮ್ಮದಾಗುವುದು. ಇಷ್ಟು ಮಾತ್ರವಲ್ಲದೆ ಈ ಅತಿ ಚಿಕ್ಕ ಕಾಳಿನಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಂತಹ ಗುಣ ಕೂಡ ಇದೆ...
ಜೀರಿಗೆ ಹೇಗೆ ನೆರವಾಗುವುದು?
ಜೀರಿಗೆ ಬೀಜಗಳಲ್ಲಿ ಇರುವಂತಹ ಥೈಮೋಕ್ವಿನೋನ್ ಎನ್ನುವ ರೋಗನಿರೋಧಕ ಒಂದು ಕ್ರಿಯಾತ್ಮಕ ರಾಸಾಯನಿಕ ಅಂಶವಾಗಿದ್ದು, ಇದು ಮೇದೋಜೀರಕದ ಬಿ ಕೋಶಗಳನ್ನು ರಕ್ಷಿಸುತ್ತದೆ. ಇದು ದೇಹದಲ್ಲಿ ಇನ್ಸುಲಿನ ಉತ್ಪತ್ತಿಯನ್ನು ಹೆಚ್ಚಿಸಲು ನೆರವಾಗುವುದು. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇರುವುದು.
ಹೆಚ್ಚಿನ ಸಂದರ್ಭಗಳಲ್ಲಿ ಎರಡನೇ ಹಂತದ ಮಧುಮೇಹ ಇರುವವರಿಗೆ ಔಷಧಿಯೊಂದಿಗೆ ಜೀರಿಗೆ ಬೀಜಗಳನ್ನು ನೀಡಿದರೆ ಚಿಕಿತ್ಸೆಗೆ ಸಹಕಾರಿಯಾಗಿರುವುದು. 2010ರಲ್ಲಿ ನಡೆಸಿರುವ ಅಧ್ಯಯನ ಪ್ರಕಾರ ದಿನದಲ್ಲಿ 2 ಮಿ.ಗ್ರಾಂ.ನಷ್ಟು ಜೀರಿಗೆ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಉಪವಾಸವಿದ್ದ ವೇಳೆ ತಿಳಿದುಬಂದಿದೆ. ಆಹಾರ ಸೇವನೆ ಮಾಡಿದ ಎರಡು ಗಂಟೆ ಬಳಿಕ ದೇಹದ ತೂಕದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗದೆ ಎಚ್ ಬಿಎ1ಸಿ ಇತ್ತು.
ಜೀರಿಗೆ ಬೀಜಗಳ ಸೇವನೆ ಹೇಗೆ?
ಹುರಿದಿರುವ ಜೀರಿಗೆ ಬೀಜಗಳನ್ನು ದಾಲ್, ಮೊಸರು ಅಥವಾ ಸಲಾಡ್ ಗೆ ಸೇರಿಸಿ ತಿನ್ನಬಹುದು. ಪ್ರತೀದಿನ ಊಟವಾದ 30 ನಿಮಿಷ ಬಳಿಕ ಒಂದು ಲೋಟ ಜೀರಿಗೆ ನೀರು ಸೇವನೆ ಮಾಡಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಎಂದು ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಹೋಲಿಸ್ಟಿಕ್ ನ್ಯೂಟ್ರಿಶಿಯನ್ ನ ಎಂ.ಡಿ. ಲ್ಯೂಕ್ ಕೌಟಿನ್ಹೋ ತಿಳಿಸಿದ್ದಾರೆ.
ಜೀರಿಗೆ ನೀರು ತಯಾರಿಸುವ ವಿಧಾನ
ಒಂದು ಲೀಟರ್ ನೀರಿಗೆ ಎರಡು ದೊಡ್ಡ ಚಮಚ ಜೀರಿಗೆ ಹಾಕಿ ಕುದಿಸಿ. ಕುದಿಯಲು ಪ್ರಾರಂಭಿಸ ಬಳಿಕ ಸುಮಾರು ನಾಲ್ಕೈದು ನಿಮಿಷಗಳವರೆಗೆ ನೀರನ್ನು ಗಮನಿಸಿ. ಒಂದು ಹಂತದಲ್ಲಿ ಜೀರಿಗೆಯಿಂದ ಬಣ್ಣ ಹೊರಬರಲು ಪ್ರಾರಂಭವಾಗುತ್ತದೆ. ಈಗ ಉರಿಯನ್ನು ಆರಿಸಿ ತಣಿಯಲು ಬಿಡಿ.ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಇದು ಕೊಂಚವೇ ಬಿಸಿಯಾಗಿರಬೇಕೇ ಹೊರತು ತೀರಾ ತಣ್ಣಗೂ ಇರಬಾರದು, ತೀರಾ ಬಿಸಿಯಾಗಿಯೂ ಇರಬಾರದು.
ಅಲ್ಲದೇ ಅಹಾರ ಜೀರ್ಣವಾದ ಬಳಿಕ ಉಳಿದ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ. ನಿತ್ಯವೂ ಈ ನೀರನ್ನು ಕುಡಿಯುವ ಮೂಲಕ ಅಜೀರ್ಣತೆಯಿಂದ ಎದುರಾಗುವ ಹುಳಿತೇಗು, ಎದೆಯುರಿ, ಹೊಟ್ಟೆನೋವು, ವಾಕರಿಕೆ, ಬೆಳಗ್ಗಿನ ಸುಸ್ತು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.
ರಕ್ತದೊತ್ತಡದ ತೊಂದರೆಗೂ ರಾಮಬಾಣ
ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹಾಗೂ ಹೃದಯ ಸಂಬಂಧಿ ತೊಂದರೆಗಳಿದ್ದರೆ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಕೊಂಚ ಜೀರಿಗೆ ಕುದಿಸಿದ ನೀರನ್ನು ಬೆಳಿಗ್ಗೆ ಕುಡಿಯುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಇತರ ಖನಿಜಗಳು ಹೃದಯದ ಬಡಿತವನ್ನೂ ಸೂಕ್ತಮಟ್ಟದಲ್ಲಿರಿಸಿ ಹೃದಯದ ಕ್ಷಮತೆ ಹೆಚ್ಚಿಸುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ತೂಕವಿಳಿಸಲು ಈ ನೀರು ಒಂದು ಉತ್ತಮ ಮಾಧ್ಯಮವಾಗಿದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ.ತನ್ಮೂಲಕ ದಿನದ ಅಪರಸಮಯದಲ್ಲಿ ಅನಾರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಡೆಯುತ್ತದೆ. ಅಲ್ಲದೇ ದೇಹದ ಕಲ್ಮಶಗಳನ್ನು ಹೊರಹಾಕಲು ನೆರವಾಗುವ ಮೂಲಕ ದೇಹದ ತೂಕ ಇಳಿಸುವ ಚಟುವಟಿಕೆ ವ್ಯಾಯಾಮಗಳಿಗೆ ನೆರವು ನೀಡಿ ತೂಕ ಇಳಿಸುವಲ್ಲಿ ನೆರವಾಗುತ್ತದೆ.
ನಿದ್ರಾಹೀನತೆ ಸಮಸ್ಯೆಗೆ ಬಹಳ ಒಳ್ಳೆಯದು
ನಿದ್ರಾಹೀನತೆಯನ್ನು ತೊಡೆಯುತ್ತದೆ ನಿದ್ದೆ ಬರದೇ ಹೊರಳಾಡುವ ತೊಂದರೆಯಿಂದ ಮುಕ್ತಿ ಪಡೆಯಲು ರಾತ್ರಿ ಊಟದ ಬಳಿಕ ಸಾಕಷ್ಟು ಜೀರಿಗೆ ನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮಲಗಿದರೆ ತಡೆರಹಿತ ನಿದ್ದೆ ಆವರಿಸುತ್ತದೆ.
ಗಂಟಲ ಬೇನೆ ಕಡಿಮೆಗೊಳಿಸುತ್ತದೆ
ಗಂಟಲ ಬೇನೆ, ಗಂಟಲ ಕೆರೆತ ಮೊದಲಾದ ತೊಂದರೆಗಳಿಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಕೊಂಚ ಪರಿಹಾರ ದೊರಕುತ್ತದೆ. ಆದರೆ ಉತ್ತಮ ಪರಿಹಾರ ಬೇಕೆಂದರೆ ಕೊಂಚ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಜೀರಿಗೆಯನ್ನು ಹೆಚ್ಚು ಕಾಲ ಕುದಿಸಿ ಗಾಢವಾಗಿಸಿ ಬಳಿಕ ಸೋಸಿ ಉಗುರುಬೆಚ್ಚಗಾಗುವಷ್ಟು ತಣಿಸಿ ಗಳಗಳ ಮಾಡಿ ಉಗುಳಬೇಕು. ಇದು ಗಂಟಲಕೆರೆತವನ್ನು ತಕ್ಷಣವೇ ನಿಲ್ಲಿಸುತ್ತದೆ.
ಹಲ್ಲುನೋವು, ಕಣ್ಣಿನಲ್ಲಿ ತುರಿಕೆ, ಕರುಳಿನಲ್ಲಿಉರಿ, ಸಂಧಿವಾತಕ್ಕೆಲ್ಲಾ ರಾಮಬಾಣ
ಕೆಲವು ಚಿಕ್ಕ ಪುಟ್ಟ ತೊಂದರೆಗಳಾದ ಹಲ್ಲುನೋವು, ಕಣ್ಣಿನಲ್ಲಿ ತುರಿಕೆ, ಕರುಳಿನಲ್ಲಿಉರಿ, ಸಂಧಿವಾತ, ಉಸಿರಾಟದಲ್ಲಿ ಕಷ್ಟವಾಗುವುದು, ಊತ, ನಡುಕ ಮೊದಲಾದ ತೊಂದರೆಗಳು ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ ಕಾಡುವುದಿಲ್ಲ.
ರಕ್ತಹೀನತೆ ನಿವಾರಣೆ
ಜೀರಿಗೆಯಲ್ಲಿ ಇರುವಂತಹ ಕಬ್ಬಿನಾಂಶವು ರಕ್ತಹೀನತೆಯ ನಿವಾರಣೆ ಮಾಡುವುದು. ಕಬ್ಬಿನಾಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸಗಳನ್ನು ನಿರ್ಹಿಸುವುದು. ಇದು ಕೆಂಪು ರಕ್ತ ಕಣಗಳನ್ನು ನಿರ್ಮಿಸುವುದು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು. ದೇಹದಲ್ಲಿ ಕಬ್ಬಿನಾಂಶ ಕಡಿಮೆಯಿದ್ದರೆ ನಿವಾರಣೆ ಮಾಡಿ ರಕ್ತಹೀನತೆ ಸಮಸ್ಯೆ ಬಗೆಹರಿಸಬಹುದು.
ಗರ್ಭಿಣಿ ಮಹಿಳೆಯರ ಆರೋಗ್ಯ ವೃದ್ಧಿ
ಜೀರಿಗೆ ನೀರು ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿ ಮಹಿಳೆಯರಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಭ್ರೂಣದ ಬೆಳವಣಿಗೆಗೆ ಅಗತ್ಯವಾಗಿರುವಂತಹ ಕಬ್ಬಿನಾಂಶವನ್ನು ಇದು ಒದಗಿಸುವುದು. ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿ ಮಹಿಳೆಯರ ಆರೋಗ್ಯಕ್ಕೆ ಜೀರಿಗೆ ನೀರು ತುಂಬಾ ಆರೋಗ್ಯಕಾರಿ.
ದೇಹದ ಕಲ್ಮಶ ಹೊರಹಾಕುವುದು
ಜೀರಿಗೆ ನೀರು ಹೊಟ್ಟೆ ಹಾಗೂ ಯಕೃತ್ ಗೆ ಹಲವಾರು ರೀತಿಯ ಲಾಭ ಉಂಟು ಮಾಡಲಿದೆ. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.ದೇಹದ ವಿವಿಧ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಜೀರಿಗೆ ನೀರಿನಲ್ಲಿ ಇರುವಂತಹ ಆಹಾರದ ನಾರಿನಾಂಸವು ದೇಹದಲ್ಲಿರುವ ಹಾನಿಕಾರಕ ಕಲ್ಮಶ ಹೊರಹಾಕಿ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
















