For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳ ಪಾದಗಳ ಆರೈಕೆಗೆ ಸೂಪರ್ ಟಿಪ್ಸ್

ಮಧುಮೇಹ ಇತ್ತೀಚೆಗೆ ಎಲ್ಲರಲ್ಲೂ ಸಾಮಾನ್ಯವೆನ್ನುವಷ್ಟರ ಮಟ್ಟಿಗೆ ವ್ಯಾಪಿಸಿಬಿಟ್ಟಿದೆ. ಮಧುಮೇಹ ಬಂದವರು ಹಲವಾರು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಊಟ-ತಿಂಡಿ, ಪಥ್ಯ, ನಿದ್ದೆ, ಇತ್ಯಾದಿ ಸಂಪೂರ್ಣ ಜೀವನ ಶೈಲಿಯನ್ನು ಮಧುಮೇಹಕ್ಕೆ ಒಪ್ಪುವ ರೀ

By Jaya Subramanya
|

ಮಧುಮೇಹವೆಂಬ ಭಯಾನಕ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಪ್ರಾಣಾಂತಿಕವಾಗಿ ಮಾರ್ಪಡುತ್ತಿದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಉಂಟಾಗುವ ಏರಿಕೆಯಿಂದಾಗಿ ಸಕ್ಕರೆ ಕಾಯಿಲೆ ಸಾಮಾನ್ಯರನ್ನು ಶೀಘ್ರದಲ್ಲೇ ತಲುಪಿ ಅವರನ್ನು ರೋಗಿಗಳನ್ನಾಗಿಸುತ್ತದೆ. ಔಷಧವೇ ಇಲ್ಲದ ರೋಗವಾಗಿ ಮಧುಮೇಹವು ಇಂದು ಕ್ಷಿಪ್ರ ಬೆಳವಣಿಗೆಯನ್ನು ಕಂಡುಕೊಂಡಿದ್ದು ಇದಕ್ಕಿರುವ ಮದ್ದೆಂದರೆ ಪಥ್ಯ ಆಹಾರ ಕ್ರಮವನ್ನು ಅನುಸರಿಸುವುದಾಗಿದೆ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'

ಇದಕ್ಕಾಗಿ ಉಪಚಾರಗಳನ್ನು ನೀವು ತೆಗೆದುಕೊಳ್ಳಬೇಕು ಎಂದಾದಲ್ಲಿ ಕೆಲವೊಂದು ಆಹಾರಗಳ ಮೇಲೆ ಕಡಿವಾಣವನ್ನು ಹಾಕಲೇಬೇಕು. ನಿಯಮಿತ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಅಂತಯೇ ದೇಹದ ಯಾವುದೇ ಭಾಗದಲ್ಲಿ ಗಾಯಗಳು ಉಂಟಾಗದಂತೆ ಆರೈಕೆಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ವೈದ್ಯರು ಸಲಹೆಯನ್ನು ನೀಡುತ್ತಾರೆ. ಇಂತಹ ತರಕಾರಿಗಳು ಮಧುಮೇಹಿಗಳಿಗೆ ಬಹಳ ಒಳ್ಳೆಯದು,,,,

ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಯಾವುದೇ ರೀತಿಯ ಹಾನಿಗೆ ಬೇಗನೇ ಒಳಗಾಗುವುದು ನಮ್ಮ ಕೈಕಾಲುಗಳಾಗಿದೆ. ಅದರಲ್ಲೂ ಕಾಲು ಸೂಕ್ತವಾದ ಪಾದರಕ್ಷೆ ಇಲ್ಲವೇ ಕಾಳಜಿಯನ್ನು ಕಂಡುಕೊಳ್ಳದೇ ಇದ್ದಲ್ಲಿ, ಬಿರುಕು, ಕಲ್ಲುಮುಳ್ಳುಗಳಿಂದ ಪಾದಕ್ಕೆ ಉಂಟಾಗುವ ಹಾನಿ ಮೊದಲಾದ ಸಮಸ್ಯೆಗಳು ಕಂಡುಬರುತ್ತದೆ. ಆದ್ದರಿಂದ ಮಧುಮೇಹಿಗಳು ಹೆಚ್ಚು ಅಸ್ಥೆಯಿಂದ ತಮ್ಮ ಪಾದದ ಆರೈಕೆಯನ್ನು ಮಾಡಬೇಕಾಗುತ್ತದೆ. ಮಧುಮೇಹವನ್ನು ಹದ್ದು ಬಸ್ತಿನಲ್ಲಿಡುವ ಅದ್ಭುತ 'ಚಹಾ'!

ಡಯಾಬೆಟಿಕ್ ಫೂಟ್ ಅಥವಾ ಅಲ್ಸರ್ ಸಮಸ್ಯೆ ಪಾದವನ್ನು ಕಾಡುವ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದು ಪೆರಿಫೆರಲ್ ಸೆನ್ಸರಿ ನ್ಯೂರೋಪತಿ, ಸಣ್ಣ ಪುಟ್ಟ ಗಾಯಗಳು, ಸ್ವಚ್ಛತೆಯಿಲ್ಲದ ಪಾದಗಳು, ದುರ್ಬಲ ಪಾದ ರಕ್ಷಣೆ ಮುಂತಾದವುಗಳಿಂದ ಕಂಡುಬರುವ ಸಮಸ್ಯೆಯಾಗಿದೆ. ಅದಕ್ಕಾಗಿ ಪಾದಗಳನ್ನು ರಕ್ಷಿಸಿಕೊಳ್ಳಲು ನೀವು ವಿಪರೀತ ಕಾಳಜಿಯನ್ನು ತೋರಬೇಕಾಗುತ್ತದೆ. ವಿಶೇಷವಾಗಿ ನ್ಯೂರೋಪತಿ, ಪೆರಿಫೆರಲ್ ವ್ಯಾಸ್ಕುಲರ್ ಕಾಯಿಲೆ ಅಥವಾ ಸ್ಟ್ರಕ್ಚರಲ್ ಫೂಟ್ ಅಬ್‌ನಾರ್ಮಲಿಟಿ ಇರುವ ರೋಗಿಗಳು ಇದರ ಕುರಿತು ಹೆಚ್ಚಿನ ಕಾಳಜಿವಹಿಸಬೇಕಾದುದು ಅತ್ಯಗತ್ಯ. ಅದು ಹೇಗೆ ಕಾಳಜಿವಹಿಸಬೇಕು ಎಂಬುದನ್ನು ಮುಂದೆ ಓದಿ...

ಸೂಕ್ತ ಪರಿಶೀಲನೆ

ಸೂಕ್ತ ಪರಿಶೀಲನೆ

ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಪರೀಕ್ಷಿಸಿಕೊಳ್ಳಿ ಅಂತೆಯೇ ಯಾವುದೇ ರೀತಿಯ ಗಾಯ, ಕಟ್‌ಗಳು, ಸಣ್ಣ ಅಪಘಾತಗಳು ಉಂಟಾಗಿಲ್ಲ ಎಂಬುದನ್ನು ಕಂಡುಕೊಳ್ಳಿ. ಇದು ಉಲ್ಭಣಗೊಂಡಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಸ್ವಚ್ಛತಾ ಕ್ರಮ

ಸ್ವಚ್ಛತಾ ಕ್ರಮ

ನಿತ್ಯವೂ ಕಾಲುಗಳನ್ನು ಮತ್ತು ಪಾದಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮಧುಮೇಹಿಗಳು ತಮ್ಮ ಪಾದಗಳ ಆರೈಕೆಯನ್ನು ಮಾಡಬೇಕಾದುದು ಅತ್ಯಗತ್ಯವಾಗಿದೆ. ಆದ್ದರಿಂದ ನಿಯಮಿತವಾಗಿ ಪಾದಗಳ ಸ್ವಚ್ಛತೆಯನ್ನು ಮಾಡಿ.

ಪಾದರಕ್ಷೆಗಳ ಆಯ್ಕೆ

ಪಾದರಕ್ಷೆಗಳ ಆಯ್ಕೆ

ನಿಮ್ಮ ಪಾದಗಳಿಗೆ ಹೊಂದಿಕೆಯಾಗುವ ಸಾಕ್ಸ್ ಮತ್ತು ಶೂಗಳ ಆಯ್ಕೆಯನ್ನು ಮಾಡಿ. ನೀವು ಧರಿಸುವ ಪಾದರಕ್ಷೆ ಬಿಗಿಯಾಗಿದೆ ಎಂದಾದಲ್ಲಿ ಇದರಿಂದ ಪಾದಗಳಲ್ಲಿ ಊತ ಸೋರಿಕೆ ಉಂಟಾಗಬಹುದು. ಪಾದಗಳಲ್ಲಿ ನಿರಾಳತೆಯನ್ನು ಉಂಟುಮಾಡುವಂತಹ ಪಾದರಕ್ಷೆಯನ್ನು ಆರಿಸಿ.

ವೈದ್ಯರಿಂದ ನಿಯಮಿತ ಪರಿಶೀಲನೆ

ವೈದ್ಯರಿಂದ ನಿಯಮಿತ ಪರಿಶೀಲನೆ

ಪಾದಗಳಲ್ಲಿ ಉಂಟಾದ ಗಾಯಗಳು ಹೆಚ್ಚುವರಿ ನೋವನ್ನು ಉಂಟುಮಾಡಿ ಪಾದಗಳ ಹಾನಿಗೆ ಕಾರಣವಾಗಬಹುದು. ಇದರಿಂದ ಪಾದಗಳಲ್ಲಿ ಮರಗಟ್ಟುವಿಕೆ ಸಂಭವಿಸಬಹುದು. ಅಂತೆಯೇ ಹೃದಯಾಘಾತ ಮತ್ತು ಪಕ್ಷಪಾತದಂತಹ ಅಪಾಯಗಳಿಗೂ ಮಧುಮೇಹಿಗಳು ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ತೊಂದರೆಗಳು ಸಂಭವಿಸುವ ಮುನ್ನವೇ ವೈದ್ಯರನ್ನು ಕಂಡು ಸೂಕ್ತ ಪರಿಶೀಲನೆಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಮೃದುವಾದ ಮಾಯಿಶ್ಚರೈಸರ್ ಅನ್ನು ಬಳಸಿ

ಮೃದುವಾದ ಮಾಯಿಶ್ಚರೈಸರ್ ಅನ್ನು ಬಳಸಿ

ಮಾಯಿಶ್ಚರೈಸಿಂಗ್ ಹೆಚ್ಚು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವುದರಿಂದ ಇದರಲ್ಲಿರುವ ವಿಟಮಿನ್ ಇ ಪಾದಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವಲ್ಲಿ ಸಹಕಾರಿಯಾಗಲಿದೆ. ಇದು ಪಾದಗಳ ಕೋಶಗಳಿಗೆ ಹಾನಿಯುಂಟಾಗದಂತೆ ಸಂರಕ್ಷಿಸುತ್ತದೆ.

ನಡಿಗೆಯನ್ನು ರೂಢಿಸಿಕೊಳ್ಳಿ

ನಡಿಗೆಯನ್ನು ರೂಢಿಸಿಕೊಳ್ಳಿ

ಪಾದಗಳ ಸ್ನಾಯುಗಳಿಗೆ ನೀವು ಮಿತವಾದ ವ್ಯಾಯಮಗಳನ್ನು ಒದಗಿಸಬೇಕಾಗುತ್ತದೆ. ನಿಯಮಿತವಾಗಿ ಓಡಾಡುವುದು ನಿಮ್ಮ ಕಾಲುಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ಒದಗಿಸುತ್ತವೆ ಅಂತೆಯೇ ಕಾಲುಗಳ ಸ್ನಾಯುಗಳನ್ನು ಬಲಗೊಳಿಸುತ್ತದೆ.

ವಿಟಮಿನ್ ಬಿ ಅಂಶವು ಸಹಾಯ ಮಾಡುತ್ತದೆ

ವಿಟಮಿನ್ ಬಿ ಅಂಶವು ಸಹಾಯ ಮಾಡುತ್ತದೆ

ವಿಟಮಿನ್ ಬಿ ಅಂಶವು ನರಗಳ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡಲಿದೆ. ಪಾದಗಳಲ್ಲಿ ರಕ್ತಸಂಚಾರವನ್ನು ಸುಗಮವಾಗಿಸಲು ವಿಟಮಿನ್ ಬಿ ಸಹಕಾರಿಯಾಗಲಿದೆ.

English summary

Best Foot Care Methods For Diabetic Patients

Diabetic feet problems require a lot of attention and care. This is because sore heals increase the risk of contracting any infection. Continue reading in order to know the different foot care tips for diabetic patients.
X
Desktop Bottom Promotion