ನಾವು ಹೇಳುವ ಈ ಟಿಪ್ಸ್ ಅನುಸರಿಸಿದರೆ-ಮಧುಮೇಹ ನಿಯಂತ್ರಿಸಬಹುದು

Posted By: manu
Subscribe to Boldsky

ಹಿಂದೆ ಪರಂಗಿಯವರ ಕಾಯಿಲೆ ಎಂದೇ ಗುರುತಿಸಲ್ಪಡುತ್ತಿದ್ದ ಡಯಾಬಿಟೀಸ್, ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಎಂಬ ರೋಗ ಈಗ ಮಧುಮೇಹ ಎಂಬ ಹೆಸರಿನಲ್ಲಿ ದೇಶದಾದ್ಯಂತ ತಾಂಡವವಾಡುತ್ತಿದೆ. ಬಹುತೇಕ ಪ್ರತಿ ಮನೆಯಲ್ಲಿಯೂ ಮಧುಮೇಹಿಗಳಿದ್ದಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಿರುವುದು ಇದರ ಸಾಮಾನ್ಯ ಲಕ್ಷಣವಾಗಿದೆ. ಡಯಾಬಿಟಿಸ್ ಬಂದಾಗ ಕಾಣಿಸಿಕೊಳ್ಳುವ ಲಕ್ಷಣಗಳು

ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ನಮ್ಮ ದೇಹದಲ್ಲಿ ಉತ್ಪತ್ತಿಯಗುವ ಇನ್ಸುಲಿನ್ ಎಂಬ ರಾಸಾಯನಿಕದ ಪ್ರಮಾಣ ಸಾಕಷ್ಟು ಇಲ್ಲದೇ ಇರುವುದು. ಆಗ ಸಕ್ಕರೆ ಬಳಕೆಯಾಗದೇ ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 1 ಮಧುಮೇಹ ಎಂದು ಕರೆಯಲಾಗುತ್ತದೆ. ಆದರೆ ಇದಕ್ಕೆಲ್ಲಾ ಚಿಂತಿಸಬೇಕಾಗಿಲ್ಲ....  ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

ಎರಡನೆಯದಾಗಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾದರೂ ಸಕ್ಕರೆಯನ್ನು ಬಳಸಿಕೊಳ್ಳಲು ನಮ್ಮ ಜೀವಕೋಶಗಳು ವಿಫಲವಾಗುವ ಮೂಲಕ ಸಕ್ಕರೆ ಬಳಕೆಯಾಗದೇ ವ್ಯರ್ಥವಾಗಿ ಮೂತ್ರದಲ್ಲಿ ಹರಿದು ಹೋಗುತ್ತದೆ. ಇದನ್ನು ಟೈಪ್ 2 ಮಧುಮೇಹ ಎಂದು ಕರೆಯುತ್ತಾರೆ... ಆದರೆ ಇಲ್ಲಿ ಒಂದು ಸಂಗತಿ ನೀವು ಗಮನಿಸಲೇ ಬೇಕು... ಮಧುಮೇಹ ಬಂದ ಬಳಿಕ ಇದನ್ನು ಸಂಪೂರ್ಣವಾಗಿ ನಿವಾರಿಸಲಂತೂ ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಧುಮೇಹ ನಿಯಂತ್ರಿಸುವ ನೈಸರ್ಗಿಕ 'ಜ್ಯೂಸ್'-ಶೀಘ್ರ ಪರಿಹಾರ

ಮಧುಮೇಹವನ್ನು ನಿಯಂತ್ರಿಸಲು ಕೆಲವು ಆಹಾರಗಳು ಸಮರ್ಥವಾಗಿದ್ದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿರಿಸಲು ಹಾಗೂ ರಕ್ತದಲ್ಲಿ ಪೋಷಕಾಂಶಗಳನ್ನು ನಿಧಾನವಾಗಿ ಸೇರಿಸುತ್ತಾ, ಹೆಚ್ಚಿನ ಕಾಲ ಹಸಿವಿಲ್ಲದಂತೆ ಮಾಡಿ ಅನಗತ್ಯ ಆಹಾರವನ್ನು ಸೇವಿಸದಂತೆ ಮಾಡುತ್ತವೆ. ಬನ್ನಿ, ಈ ಅಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ.... 

ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ

ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಗಂಟೆ ಮೊದಲು ಕುಡಿಯಬೇಕು.

ಬೆಂಡೆಕಾಯಿ

ಬೆಂಡೆಕಾಯಿ

ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ಮೆಂತೆ ಕಾಳು

ಮೆಂತೆ ಕಾಳು

ಸುಮಾರು ಒಂದು ಚಿಕ್ಕ ಚಮಚದಷ್ಟು ಮೆಂತೆಕಾಳುಗಳನ್ನು ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ನೀರನ್ನು ಮತ್ತು ಕಾಳುಗಳನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ.

ಮಾವಿನ ಎಲೆಗಳು!

ಮಾವಿನ ಎಲೆಗಳು!

ಬೇಕಾಗುವ ಸಾಮಾಗ್ರಿಗಳು

*ಮಾವಿನ ಎಲೆ-2

*ಹಾಲು- ಅರ್ಧ ಕಪ್

ಮಾಡುವ ವಿಧಾನ

ಮಾಡುವ ವಿಧಾನ

*ಮಾವಿನ ಎಲೆಗಳನ್ನು ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.

*ತಣ್ಣಗಾದ ನೀರು ಹಾಗೂ ಎಲೆಯನ್ನು ರಾತ್ರಿಯಿಡಿ ಹಾಗೆ ಬಿಟ್ಟುಬಿಡಿ.

*ಬೆಳಿಗ್ಗೆ ಈ ನೀರನ್ನು ಮತ್ತೆ ಕುದಿಸಿ. ಎಲೆಗಳನ್ನು ತೆಗೆದು, ಹೇಳಿದಷ್ಟು ಪ್ರಮಾಣದ ಬಿಸಿ ಹಾಲನ್ನು ಹಾಕಿಕೊಳ್ಳಿ.

*ಈ ಮಿಶ್ರಣವನ್ನು ಒಂದು ಕಪ್‌ಗೆ ಹಾಕಿಕೊಳ್ಳಿ.

*ಮಧುಮೇಹದ ಔಷಧಿ ಈಗ ಕುಡಿಯಲು ಸಿದ್ಧವಾಗಿದೆ.

*ಪ್ರತೀ ದಿನ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ. ಯಾವುದಕ್ಕೂ ನಿಮ್ಮ ಫ್ಯಾಮಿಲಿ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಿ

ಖಾಲಿಹೊಟ್ಟೆಗೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್!

ಖಾಲಿಹೊಟ್ಟೆಗೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್!

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

*ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ.

*ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ.

*ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ.

*ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.

*ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ.

*ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ.

*ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

ನುಗ್ಗೆಸೊಪ್ಪು

ನುಗ್ಗೆಸೊಪ್ಪು

ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು.

ಇನ್ನೊಂದು ವಿಧಾನವೆಂದರೆ ಕೊಂಚ ಬೇಯಿಸಿದ ಎಲೆಗಳನ್ನು ಚಪಾತಿ ಹಿಟ್ಟಿನ ಜೊತೆಗೆ ಕಲಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು.

ಎಲೆಕೋಸು

ಎಲೆಕೋಸು

ದಿನದ ಮೂರೂ ಹೊತ್ತಿನ ಊಟದಲ್ಲಿ ಚಿಕ್ಕದಾಗಿ ಮತ್ತು ಅಡ್ಡಲಾಗಿ ಕತ್ತರಿಸಿದ ಕೋಸಿನ ನೂಲುಗಳನ್ನು ಊಟದೊಂದಿಗೆ ಸೇವಿಸಿದರಾಯಿತು ಅಷ್ಟೇ. ಆದರೆ ಕನಿಷ್ಠ ವಾರಕ್ಕೆ ಮೂರು ದಿನವಾದರೂ ತಿನ್ನುವುದು ಅತಿ ಅಗತ್ಯ. ಒಂದು ವೇಳೆ ಇದರ ರುಚಿ ಅಥವಾ ವಾಸನೆ ಹಿಡಿಸದೇ ಇದ್ದಲ್ಲಿ ನಿಮ್ಮ ಅಡುಗೆಯಲ್ಲಿ ಒಂದು ತರಕಾರಿಯಂತೆ ಬಳಸಿ ಸೇವಿಸಿ.

ಕೋಸಿನ ಸೇವನೆ ಹೇಗೆ?

ಕೋಸಿನ ಸೇವನೆ ಹೇಗೆ?

ದಿನದ ಮೂರೂ ಹೊತ್ತಿನ ಊಟದಲ್ಲಿ ಚಿಕ್ಕದಾಗಿ ಮತ್ತು ಅಡ್ಡಲಾಗಿ ಕತ್ತರಿಸಿದ ಕೋಸಿನ ನೂಲುಗಳನ್ನು ಊಟದೊಂದಿಗೆ ಸೇವಿಸಿದರಾಯಿತು ಅಷ್ಟೇ. ಆದರೆ ಕನಿಷ್ಠ ವಾರಕ್ಕೆ ಮೂರು ದಿನವಾದರೂ ತಿನ್ನುವುದು ಅತಿ ಅಗತ್ಯ. ಒಂದು ವೇಳೆ ಇದರ ರುಚಿ ಅಥವಾ ವಾಸನೆ ಹಿಡಿಸದೇ ಇದ್ದಲ್ಲಿ ನಿಮ್ಮ ಅಡುಗೆಯಲ್ಲಿ ಒಂದು ತರಕಾರಿಯಂತೆ ಬಳಸಿ ಸೇವಿಸಿ.

ಕಿವಿಮಾತು

ಕಿವಿಮಾತು

ಮಧುಮೇಹ ನಿಯಂತ್ರಿಸಲು ನೀವು ಸೇವಿಸಲಿರುವ ಆಹಾರದ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿ ಮುಂದುವರೆಯುವುದು ಉತ್ತಮ. ಏಕೆಂದರೆ ಮಧುಮೇಹದ ಹೊರತಾಗಿ ನಮ್ಮಲ್ಲಿ ಇನ್ನೂ ಹಲವಾರು ಆರೋಗ್ಯ ಕುರಿತಾದ ತೊಂದರೆಗಳಿದ್ದು ವೈದ್ಯರ ಪರೀಕ್ಷೆಯ ಮೂಲಕವೇ ಇವು ಕಂಡುಬರುವ ಕಾರಣ ವೈದ್ಯರ ಸಲಹೆಯಿಲ್ಲದೇ ಯಾವುದೇ ಆಹಾರ ಅಥವಾ ಔಷಧಿಗಳನ್ನು ತೆಗೆದುಕೊಳ್ಳಲು ಹೋಗದಿರಿ.

  

 

For Quick Alerts
ALLOW NOTIFICATIONS
For Daily Alerts

    English summary

    Ayurvedic home remedies for diabetes

    Diabetes is primarily considered to be a lifestyle disorder, so it is important for a person with diabetes to make certain changes in his/her lifestyle, which includes diet. So, it is important to follow certain healthy diet habits and avoid eating certain things, in order to keep the symptoms under control. Follow this ayurvedic remedy if you want to reduce diabetes symptoms in a month.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more