For Quick Alerts
ALLOW NOTIFICATIONS  
For Daily Alerts

ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

By Staff
|

ಒಂದು ಕಾಲದಲ್ಲಿ ಪರಂಗಿಯವರ ಕಾಯಿಲೆ ಎಂದೇ ಗುರುತಿಸಲ್ಪಡುತ್ತಿದ್ದ ಮಧುಮೇಹ ಇಂದು ಭಾರತದಲ್ಲಿ ಅತಿ ಸಾಮಾನ್ಯವಾದ ಕಾಯಿಲೆಯಾಗಿದೆ. ಇದಕ್ಕೆ ಅನುವಂಶಿಕ ಕಾರಣಗಳ ಜೊತೆಗೇ ಬದಲಾಗಿರುವ ನಮ್ಮ ಜೀವನಶೈಲಿಯೂ ಒಂದು ಕಾರಣವಾಗಿದೆ. ಕಡಿಮೆಯಾಗಿರುವ ದೈಹಿಕ ಶ್ರಮ, ಅತಿಯಾಗಿ ಬಳಸಲ್ಪಡುತ್ತಿರುವ ಸಿದ್ಧ ಆಹಾರಗಳು, ಆಹಾರ ಕೆಡದಂತಿರಲು ಸೇರಿಸಿರುವ ಸಂರಕ್ಷಕಗಳು ಮೊದಲಾದವೆಲ್ಲಾ ಮುಂದೆಂದೋ ಬರಬೇಕಿದ್ದ ಮಧುಮೇಹವನ್ನು ಚಿಕ್ಕಂದಿನಲ್ಲಿಯೇ ಬರುವಂತೆ ಮಾಡಿವೆ. ಮಕ್ಕಳಲ್ಲಿಯೂ ಕಂಡುಬರುತ್ತಿರುವುದು ಆಘಾತಕಾರಿ ಬೆಳವಣಿಗೆ. ಗರ್ಭಾವಸ್ಥೆಯಲ್ಲಿಯೂ ಕಾಣಬರುವ ತಾತ್ಕಾಲಿಕ ಮಧುಮೇಹ (gestational diabetes) ಸಹಾ ಇಂದು ಸಾಮಾನ್ಯವಾಗತೊಡಗಿದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಟೈಪ್ 2 ಮಧುಮೇಹಿಗಳನ್ನು (ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಲ್ಲಿ ದೇಹ ಸೋಲುವುದು) ಹೊಂದಿರುವಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಮಧುಮೇಹ ಒಮ್ಮೆ ಆವರಿಸಿದರೆ ಇದನ್ನು ಹಿಂದಕ್ಕೆ ಸರಿಸಲು ಸಾಧ್ಯವಿಲ್ಲ. ಆದರೆ ನಿಯಂತ್ರಣದಲ್ಲಿರಿಸಿ ಸಾಮಾನ್ಯ ಜೀವನ ನಡೆಸಬಹುದು. ಇದಕ್ಕೆ ಇನ್ಸುಲಿನ್ ಚಿಕಿತ್ಸೆ ಮತ್ತು ಒಂದು ವೇಳೆ ಮಧುಮೇಹ ಅತಿಯಾಗಿ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರಿ ವಿಫಲಗೊಂಡರೆ ಡಯಾಲಿಸಿಸ್ ಮಾಡುವ ಅಗತ್ಯತೆ ತೋರುತ್ತದೆ.

ಇವೆಲ್ಲವೂ ದುಬಾರಿಯಾಗಿದ್ದು ಸಾಮಾನ್ಯ ಜನರಿಗೆ ದುಗುಡ ಹೆಚ್ಚಿಸುತ್ತವೆ. ಹೆಚ್ಚಿನ ಜನರು ಸಕ್ಕರೆ ಅಥವಾ ಸಿಹಿ ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂದೇ ತಿಳಿದಿದ್ದಾರೆ. ಸಿಹಿಯನ್ನು ಸಿಹಿಯ ರೀತಿಯಲ್ಲಲ್ಲದೇ ಊಟದ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹದ ಸಹಿತ ಇತರ ಹಲವಾರು ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಇದರೊಂದಿಗೆ ಅನುವಂಶೀಯ ಕಾರಣಗಳು, ಮಾನಸಿಕ ಒತ್ತಡ, ಇತರ ಔಷಧಿಗಳ ಅಡ್ಡಪರಿಣಾಮಗಳು ಮುಂದೆ ಬರಬೇಕಾಗಿದ್ದ ಮಧುಮೇಹವನ್ನು ಬೇಗನೇ ಬರುವಂತೆ ಮಾಡುತ್ತವೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರಮಾಡಬಹುದು. ಸೈಲೆಂಟ್ ಕಿಲ್ಲರ್ ಮಧುಮೇಹ ಮಣಿಸಲು ಇಲ್ಲಿದೆ ರಣತಂತ್ರ!

ಇದಕ್ಕಾಗಿ ದುಬಾರಿ ಔಷಧಿ ಮಾತ್ರೆಗಳಿಗೆ ಹಣ ವ್ಯಯಿಸುವ ಅಗತ್ಯವಿಲ್ಲ. ಪ್ರಥಮವಾಗಿ ಮಾಡಬೇಕಾದುದು ನಮ್ಮ ಸೋಮಾರಿತನವನ್ನು ದೂರ ಮಾಡಿ ಆಹಾರದಲ್ಲಿ ನಿಯಂತ್ರಣ ಸಾಧಿಸುವುದು. ಇವೆರಡಕ್ಕೂ ಅಗತ್ಯವಿರುವುದು ಕೇವಲ ಮಾನಸಿಕ ದೃಢತೆಯೇ ಹೊರತು ಇನ್ನೇನೂ ಬೇಕಾಗಿಲ್ಲ. ಒಂದು ವೇಳೆ ನಿಮ್ಮ ವಂಶಜರಲ್ಲಿ ಮಧುಮೇಹವಿದ್ದರೆ ಅಥವಾ ಈಗಾಗಲೇ ಪ್ರಾರಂಭವಾಗಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ಸೂಚಿಸಿರುವ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದರ ಆಗಮನದ ಸಾಧ್ಯತೆಯನ್ನು ತಡವಾಗಿಸಬಹುದು ಅಥವಾ ಈಗಾಗಲೇ ಪ್ರಾರಂಭವಾಗಿದ್ದರೆ ಇದನ್ನು ಸಮರ್ಥವಾಗಿ ನಿಯಂತ್ರಿಸಿಕೊಳ್ಳಬಹುದು.

ಹಾಗಲಕಾಯಿ ಸೇವನೆ

ಹಾಗಲಕಾಯಿ ಸೇವನೆ

ಹಾಗಲಕಾಯಿಯ ಕಹಿರುಚಿ ಯಾರಿಗೂ ರುಚಿಸುವುದಿಲ್ಲ. ಆದರೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಟೈಪ್ 1 ಮತ್ತು ಟೈಪ್ 2 ಮಧುಮೇಹಗಳು ಸಮರ್ಥವಾಗಿ ನಿಯಂತ್ರಣಕ್ಕೆ ಬಂದಿರುವುದು ಹಲವು ಪ್ರಕರಣಗಳಿಂದ ದೃಢೀಕರಿಸಲಾಗಿದೆ. ಆದರೆ ಇದರ ಕಹಿರುಚಿ ಅಡ್ಡಿಯಾಗಿದ್ದರೆ ಹಾಗಲಕಾಯಿಯನ್ನು ಉದ್ದಕ್ಕೆ ಒಂದು ಕಡೆ ಮಾತ್ರ ಸೀಳಿ ಒಳಗಿನ ಬೀಜ ನಿವಾರಿಸಿ ಇದರೊಳಗೆ ನಿಮಗೆ ಇಷ್ಟದ ಹೂರಣ ಸೇರಿಸಿ ಹುರಿದು ತಿನ್ನಬಹುದು,ಅಥವಾ ಚಿಕ್ಕದಾಗಿ ಬಿಲ್ಲೆಗಳಂತೆ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಕುರುಕುತಿಂಡಿಯಂತೆ ತಿನ್ನಬಹುದು.

ಹಾಗಲಕಾಯಿ ಸೇವನೆ

ಹಾಗಲಕಾಯಿ ಸೇವನೆ

ಪ್ರಾರಂಭಕ್ಕೆ ಇದರ ಕಹಿಗುಣ ನಿಮಗೆ ಇಷ್ಟವಾಗದಿದ್ದರೂ ನಿಮ್ಮ ಮನಸ್ಸನ್ನು ಈ ಕಹಿಯೆಡೆಗೆ ತಿರುಗಿಸುವ ಮೂಲಕ ಇದನ್ನು ಇಷ್ಟವಾಗುವಂತೆ ಮಾಡಬಹುದು. ಮೆಣಸು ಖಾರವಲ್ಲವೇ, ಖಾರ ನಿಮಗೆ ಇಷ್ಟವಾಗಿರುವುದಕ್ಕೆ ಇದರ ಮೇಲೆ ನೀವು ಮನಸ್ಸನ್ನು ಇಷ್ಟದ ರೂಪದಲ್ಲಿ ದಾಖಲಿಸಿರುವುದೇ ಕಾರಣ. ಇದೇ ರೀತಿ ಕಹಿಯನ್ನೂ ಇಷ್ಟದ ರುಚಿಯಾಗಿಸಿದರೆ ಕೆಲವೇ ದಿನಗಳಲ್ಲಿ ಹಾಗಲಕಾಯಿಯ ಕಹಿಯೂ ಸಿಹಿಯಾಗಿ ಮಾರ್ಪಡುತ್ತದೆ.

ನೆನೆಸಿಟ್ಟ ಮೆಂತೆಯ ನೀರು

ನೆನೆಸಿಟ್ಟ ಮೆಂತೆಯ ನೀರು

ಒಂದು ಲೋಟ ತಣ್ಣೀರಿನಲ್ಲಿ ಕಾಲು ಚಮಚ ಮೆಂತೆಕಾಳುಗಳನ್ನು ಹಾಕಿ ಇಡಿಯ ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಹಲ್ಲುಜ್ಜಿದ ಬಳಿಕ ಈ ನೀರನ್ನು ಮೆಂತೆಕಾಳುಗಳ ಸಹಿತ ಪೂರ್ತಿಯಾಗಿ ಸೇವಿಸಿ. ಈ ವಿಧಾನ ಟೈಪ್ -1 ಮಧುಮೇಹಿಗಳಿಗೆ ಸೂಕ್ತವಾಗಿದೆ.

ನೇರಳೆ ಹಣ್ಣಿನ ಬೀಜ

ನೇರಳೆ ಹಣ್ಣಿನ ಬೀಜ

ಮಧುಮೇಹದ ನಿಯಂತ್ರಣಕ್ಕೆ ನೇರಳೆ ಹಣ್ಣಿನ ಬೀಜಗಳು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮೇದೋಜೀರಕ ಗ್ರಂಥಿಯ ಕ್ಷಮತೆಯನ್ನು ಹೆಚ್ಚಿಸುತ್ತವೆ. ಚೆನ್ನಾಗಿ ಹಣ್ಣಾದ ನೇರಳೆ ಹಣ್ಣಿನ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಚಮಚದಷ್ಟು ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವ ಮೂಲಕವೂ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದು ಟೈಪ್ 1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಪೇರಳೆ ಹಣ್ಣು

ಪೇರಳೆ ಹಣ್ಣು

ಸರಿಸುಮಾರು ವರ್ಷವಿಡೀ ಸಿಗುವ ಪೇರಳೆಹಣ್ಣಿನಲ್ಲಿ ಕರಗುವ ನಾರು ಮತ್ತು ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿವೆ. ಇದು ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳಲ್ಲಿ ಪೇರಳೆಯ ಸಿಪ್ಪೆಯನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಸಿಪ್ಪೆಯನ್ನು ನಿವಾರಿಸಿ ತಿರುಳನ್ನು ಮಾತ್ರ ಸೇವಿಸುವುದು ಉತ್ತಮ.

ನೆಲ್ಲಿಕಾಯಿ ರಸ

ನೆಲ್ಲಿಕಾಯಿ ರಸ

ನೆಲ್ಲಿಕಾಯಿಯನ್ನು ಹಸಿಯಾಗಿ ಸೇವಿಸುವುದು ಅಥವಾ ರಸವನ್ನು ಹಿಂಡಿ ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕವೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ಟೀ ಕಾಫಿಯಲ್ಲಿ ಜೇನಿನ ಬಳಕೆ

ಟೀ ಕಾಫಿಯಲ್ಲಿ ಜೇನಿನ ಬಳಕೆ

ಕೆಲವರಿಗೆ ಟೀ ಕಾಫಿ ನಿತ್ಯದ ಅಭ್ಯಾಸವಾಗಿದ್ದು ಇದನ್ನು ಬಿಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಗೆ ಒಳಗಾಗಿರುತ್ತಾರೆ. ಇಂತಹವರಿಗೆ ಒಂದು ವೇಳೆ ಟೈಪ್ ೨ ಮಧುಮೇಹವಿದ್ದರೆ ಟೀ ಕಾಫಿಯಲ್ಲಿ ಸಕ್ಕರೆಯ ಬದಲು ಸ್ವಲ್ಪವೇ ಸ್ವಲ್ಪ ಜೇನನ್ನು ಸೇರಿಸಿ ಕುಡಿಯಬಹುದು. ಸಂಶೋಧನೆಗಳ ಪ್ರಕಾರ ಹಾಲಿಲ್ಲದ ಜೇನು ಸೇರಿಸಿದ ಕಾಫಿ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಮಾಡುತ್ತದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀ ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಮಧುಮೇಹದ ನಿಯಂತ್ರಣವೂ ಒಂದು. ನಿತ್ಯದ ಟೀ ಕಾಫಿಯ ಬದಲಿಗೆ ಹಸಿರು ಟೀ ಯಲ್ಲಿ ಕೊಂಚ ಲಿಂಬೆರಸ, ಪುದಿನಾ ಎಲೆ ಸೇರಿಸಿ ಕುಡಿದರೆ ಭಿನ್ನವಾದ ರುಚಿಯ ಜೊತೆ ಆರೋಗ್ಯವೂ ಸುಧಾರಿಸುತ್ತದೆ. ಈ ಎಲ್ಲಾ ವಿಧಾನಗಳ ಜೊತೆಗೆ ನಿತ್ಯವೂ ನಿಯಮಿತವಾಗಿ ದೈಹಿಕ ವ್ಯಾಯಾಮ, ನಡಿಗೆ, ಸೂಕ್ತ ನಿದ್ದೆ, ಒತ್ತಡರಹಿತ ಜೀವನ ಮೊದಲಾದವು ಮಧುಮೇಹದ ನಿಯಂತ್ರಣಕ್ಕೆ ಪೂರಕವಾಗಿವೆ.

ನುಗ್ಗೇಕಾಯಿ ಮರದ ಎಲೆಗಳು

ನುಗ್ಗೇಕಾಯಿ ಮರದ ಎಲೆಗಳು

(moringa leaf) ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ. ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಕಹಿಬೇವಿನ ಎಲೆ

ಕಹಿಬೇವಿನ ಎಲೆ

ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

ಬೆಂಡೆಕಾಯಿ

ಬೆಂಡೆಕಾಯಿ

ಬೆಂಡೆಕಾಯಿಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತದೆ. ಜೊತೆಗೇ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತದ ಸಂಭವಗಳಿಂದ ಕಾಪಾಡುತ್ತದೆ. ಪ್ರತಿದಿನಕ್ಕೆ ಅರ್ಧ ಚಿಕ್ಕ ಚಮಚದಷ್ಟು ಪ್ರಮಾಣ ಅಧ್ಬುತಗಳನ್ನೇ ಸಾಧಿಸಬಲ್ಲುದು.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ. ಇದು ಟೈಪ್ 1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಹಸಿರು ತರಕಾರಿ

ಹಸಿರು ತರಕಾರಿ

ಹಸಿರು ತರಕಾರಿ ತಿನ್ನಿ ಮಧುಮೇಹ ರೋಗ ತಡೆಯಲು ಒಳ್ಳೆಯ ದಾರಿಯೆಂದರೆ ಹಸಿರಾಗಿರುವ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಡಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಡಯಾಬಿಟಿಸ್ ನಿಂದ ಕಣ್ಣಿಗೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಅಧಿಕವಾಗಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಕ್ಯಾರೆಟ್

ಕ್ಯಾರೆಟ್

ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಮಧುಮೇಹವನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ಒಣ ಹಣ್ಣುಗಳು

ಒಣ ಹಣ್ಣುಗಳು

ಒಣ ಹಣ್ಣುಗಳು " ನಿಧಾನವಾಗಿ ಜೀರ್ಣವಾಗುವ" ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ. ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ

ಹುರುಳಿ

ಹುರುಳಿ

ಬೇಯಿಸಿದ, ನೆನೆಸಿದ ಅಥವಾ ಒಣಗಿಸಿದ ಯಾವುದಾದರು ಸರಿ, ಹುರುಳಿಯು ನಿಮ್ಮ ರಕ್ತದಲ್ಲಿರುವ ಅಧಿಕ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹುರುಳಿಯಲ್ಲಿ ಅಧಿಕ ಪ್ರೋಟಿನ್ ಇರುತ್ತದೆ. ಇವು ಮಾಂಸಾಹಾರಕ್ಕೆ ಪೂರಕವಾಗಿ ಬಳಸಲ್ಪಡುತ್ತವೆ. ಮತ್ತೊಂದು ಆಶಾದಾಯಕವಾದ ಸುದ್ದಿಯೆಂದರೆ ಹುರುಳಿಯಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್ ಹೃದಯಕ್ಕೆ ಮಾತ್ರವಲ್ಲದೆ, ಮಧುಮೇಹ ನಿಯಂತ್ರಣಕ್ಕು ಸಹ ಉಪಯೋಗಕಾರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಪ್ರಯತ್ನಿಸಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಮಧುಮೇಹವನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

 ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಕಡಿಮೆ ಕೊಬ್ಬು ,ಸಮೃದ್ಧ ನಾರಿನಂಶದಿಂದ ಕೂಡಿರುವ ಸಿಟ್ರಸ್ ಹಣ್ಣುಗಳು ತಮ್ಮಲ್ಲಿರುವ ಉತ್ತಮ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತವೆ. ಉದಾಹರಣೆಗೆ ; ಕಿತ್ತಳೆ ಹಣ್ಣಿನಲ್ಲಿ ಫ್ಲವೊನೊಯ್ಡ್ಸ್, ಕ್ಯಾರೊಟೆನೊಯ್ಡ್ಸ್, ಟರ್ಪೈನ್ಸ್, ಪೆಕ್ಟಿನ್ಸ್ ಮತ್ತು ಗ್ಲುಟತಿಯೊನ್ ಮತ್ತು ಫೋಟೊನ್ಯೂಟ್ರಿಯೆಂಟ್‍ಗಳ ಸಮೃದ್ಧ ಆಗರವಿದೆ. ಇವುಗಳೆಲ್ಲವು ಸೇರಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆದ ಅಧ್ಯಯನಗಳಲ್ಲಿ ತಿಳಿದು ಬಂದ ವಿಚಾರದ ಪ್ರಕಾರ ಮಧುಮೇಹಿಗಳಲ್ಲಿ ವಿಟಮಿನ್ ಸಿಯ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ತಿಂಡಿಯಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದನ್ನು ಮರೆಯಬೇಡಿ.

English summary

Top home remedies for diabetes that really work

Here are the few home remedies for diabetes, which should really work, have a look...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more