For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಿಸಲು ಅದ್ಭುತ ನೈಸರ್ಗಿಕ ಜ್ಯೂಸ್

ಮಧುಮೇಹಕ್ಕೆ ನಿಸರ್ಗ ಕೆಲವು ಪರಿಕರಗಳನ್ನು ನೀಡಿದ್ದು ಇವುಗಳ ಸರಿಯಾದ ಬಳಕೆಯಿಂದಲೂ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು ಹಾಗೂ ಬಹುತೇಕವಾಗಿ ಮೊದಲಿನ ಆರೋಗ್ಯವನ್ನು ಪಡೆಯಲೂ ಸಾಧ್ಯವಾಗುತ್ತದೆ.

By Manu
|

ಇಂದು ಮಧುಮೇಹವೆಂದರೆ ಸಾಮಾನ್ಯವಾದ ಕಾಯಿಲೆ ಎಂಬಂತೆ ಆಗಿಬಿಟ್ಟಿದೆ. ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದರೆ ಅಥವಾ ಉತ್ಪಾದಿಸಿದ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಆಹಾರದ ಮೂಲಕ ಲಭ್ಯವಾದ ಸಕ್ಕರೆ ಬಳಕೆಯಾಗದೇ ಮೂತ್ರದ ಮೂಲಕ ಹಾಗೇ ಹೊರಹೋಗುತ್ತದೆ, ಇದೇ ಕಾರಣಕ್ಕೆ ಇದಕ್ಕೆ 'ಸಕ್ಕರೆ ಕಾಯಿಲೆ' ಎಂದೂ ಹೇಳುತ್ತಾರೆ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'

(ಮಧುಮೇಹಿಗಳು ವಿಸರ್ಜಿಸಿದ ಮೂತ್ರಕ್ಕೆ ಇರುವೆಗಳು ಮುತ್ತುವುದನ್ನು ಕಂಡ ಬಳಿಕ ಮೂತ್ರದಲ್ಲಿ ಸಕ್ಕರೆ ಇದೆ ಎಂದು ಕಂಡುಕೊಂಡು ಈ ಹೆಸರನ್ನು ಹಿರಿಯರು ಬಳಸಿದ್ದಾರೆ). ಮಧುಮೇಹನ್ನು ನಿಯಂತ್ರಿಸಬಹುದೇ ಹೊರತು ಇದಕ್ಕೆ ಶಾಶ್ವತವಾದ ಚಿಕಿತ್ಸೆ ಲಭ್ಯವಿಲ್ಲ. ಕೃತಕವಾಗಿ ಇನ್ಸುಲಿನ್ ಅನ್ನು ದೇಹಕ್ಕೆ ಇಂಜೆಕ್ಷನ್ ಮೂಲಕ ತೆಗೆದುಕೊಳ್ಳುವುದು ಇದರ ನಿಯಂತ್ರಣದಲ್ಲಿ ಪ್ರಮುಖವಾಗಿದೆ. ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

ಮಧುಮೇಹದಲ್ಲಿ ಎರಡು ವಿಧಗಳಿವೆ. ಟೈಪ್ 1 ಮತ್ತು ಟೈಪ್ 2. ಟೈಪ್ 1 ಮಧುಮೇಹದಲ್ಲಿ ದೇಹ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ವಿಫಲವಾಗುತ್ತದೆ. ಹಾಗೂ ಟೈಪ್ 2 ಮಧುಮೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ವಿಫಲವಾಗುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಲವಾರು ಔಷಧಿಗಳು ಈಗ ಲಭ್ಯವಿವೆ.

ಆದರೆ ನಿಸರ್ಗ ಕೆಲವು ಪರಿಕರಗಳನ್ನು ನೀಡಿದ್ದು ಇವುಗಳ ಸರಿಯಾದ ಬಳಕೆಯಿಂದಲೂ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು ಹಾಗೂ ಬಹುತೇಕವಾಗಿ ಮೊದಲಿನ ಆರೋಗ್ಯವನ್ನು ಪಡೆಯಲೂ ಸಾಧ್ಯವಾಗುತ್ತದೆ. ಬನ್ನಿ, ಈ ಅದ್ಭುತ ಗುಣವಿರುವ ನೈಸರ್ಗಿಕ ಪೇಯ ಯಾವುದು ಎಂಬುದನ್ನು ನೋಡೋಣ......

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*2 ಸೆಲೆರಿ ಸೊಪ್ಪಿನ ದಂಟುಗಳು

*2 ಕ್ಯಾರೆಟ್

*1 ಹಸಿರು ಸೇಬು

*3 ದಂಟು ಪಾಲಕ್ ಸೊಪ್ಪು

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಮೊದಲು ಎಲ್ಲಾ ಸೊಪ್ಪು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಕ್ಯಾರೆಟ್ ಮತ್ತು ಸೇಬಿನ ಸಿಪ್ಪೆಯನ್ನು ಸುಲಿದು ಬೀಜ ನಿವಾರಿಸಿ ಚಿಕ್ಕದಾಗಿ ತುಂಡುಗಳನ್ನಾಗಿಸಿ. ಈ ತುಂಡುಗಳನ್ನು ಮಿಕ್ಸಿಯಲ್ಲಿ ಚಿಕ್ಕದಾಗಿ ಕಡೆಯಿರಿ. ಬಳಿಕ ಉಳಿದ ಸಾಮಾಗ್ರಿಗಳನ್ನು ಹಾಕಿ ಕೊಂಚವೇ ನೀರಿನೊಂದಿಗೆ ನುಣ್ಣಗೆ ಕಡೆಯಿರಿ. ಈ ಪೇಯ ಮಧುಮೇಹವನ್ನು ನಿಯಂತ್ರಿಸಲು ಅತ್ಯುತ್ತಮವಾಗಿದ್ದು ಎರಡೂ ವಿಧದ ಮಧುಮೇಹಿಗಳಿಗೆ ಸೂಕ್ತವಾಗಿದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ನಷ್ಟು ಈ ಪೇಯವನ್ನು ಕುಡಿಯಬೇಕು. ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬಳಿಕ ಸಾಕಷ್ಟು ನೀರು ಮತ್ತು ಅಲ್ಪ ಉಪಾಹಾರ ಸೇವಿಸಬೇಕು.

ಇದರ ಕಾರ್ಯವಿಧಾನ

ಇದರ ಕಾರ್ಯವಿಧಾನ

ಸಾಮಾನ್ಯವಾಗಿ ನಮ್ಮ ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿಬಿಡುತ್ತದೆ. ಆದರೆ ಈ ಪೇಯದ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶ ನಿಧಾನವಾಗಿ ಏರಿ ಸಂತುಲಿತ ಪ್ರಮಾಣದಲ್ಲಿರಲು ನೆರವಾಗುತ್ತದೆ. ಅಲ್ಲದೇ ನಿಯಮಿತವಾಗಿ ಸೇವಿಸುವ ಮೂಲಕ ಕ್ರಮೇಣ ಮಧುಮೇಹವನ್ನು ಹಂತಹಂತವಾಗಿ ಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗುತ್ತದೆ.

ಸೇವಿಸಬೇಕಾದ ಪ್ರಮಾಣ

ಸೇವಿಸಬೇಕಾದ ಪ್ರಮಾಣ

ಈ ವಿಧಾನದ ಪ್ರತಿಕ್ರಿಯೆ ಪ್ರತಿ ಮಧುಮೇಹಿಗಳಿಗೂ ಭಿನ್ನವಾಗಿರುವ ಕಾರಣ ಇಷ್ಟೇ ದಿನ ಅನುಸರಿಸಬೇಕು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಆಗಾಗ ತಪಾಸಣೆ ನಡೆಸುತ್ತಾ ಮಧುಮೇಹ ಪೂರ್ಣವಾಗಿ ಹತೋಟಿಗೆ ಬಂದಿದೆ ಎಂದು ವೈದ್ಯರು ತಿಳಿಸುವವರೆಗೂ ಇದನ್ನು ಸೇವಿಸುತ್ತಾ ಬರುವುದು ಉತ್ತಮ.

ಸೇವಿಸಬೇಕಾದ ಪ್ರಮಾಣ

ಸೇವಿಸಬೇಕಾದ ಪ್ರಮಾಣ

ಈ ಎಲ್ಲಾ ಸಾಮಾಗ್ರಿಗಳು ಅಪ್ಪಟ ನೈಸರ್ಗಿಕವಾಗಿದ್ದು ಇವುಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲವಾದ ಕಾರಣ ಇದು ಸುರಕ್ಷಿತವಾಗಿದ್ದು ದೀರ್ಘಕಾಲದವರೆಗೂ ಸೇವಿಸಬಹುದಾದ ಪೇಯವಾಗಿದೆ.

English summary

A Miracle Drink To Cure Diabetes

Use this natural remedy for diabetes and get rid of this disease once and for all. Read this article to know how to prepare this remedy.
X
Desktop Bottom Promotion