Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಸೈಲೆಂಟ್ ಕಿಲ್ಲರ್ ಮಧುಮೇಹ ಮಣಿಸಲು ಇಲ್ಲಿದೆ ರಣತಂತ್ರ!
ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ ಇಂದು ಬಡವ ಬಲ್ಲಿದ, ಹಿರಿಯ ಕಿರಿಯನೆಂಬ ಭೇದ ಪರಿಗಣಿಸದೇ ಎಲ್ಲರನ್ನೂ ಆವರಿಸುತ್ತಿದೆ. ಅದರಲ್ಲೂ ದಶಕಗಳ ಹಿಂದೆ ಅಪರೂಪವಾಗಿದ್ದ ಈ ಸಕ್ಕರೆ ಕಾಯಿಲೆ ಇಂದು ಎಲ್ಲರಿಗೂ ಚಿಂತೆಗೆ ಕಾರಣವಾಗಿ ಬಿಟ್ಟಿದೆ.
ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಮಧುಮೇಹ ಕಾಯಿಲೆಯ ಬಗ್ಗೆ ಪೂರ್ವಾಗ್ರಹವಾಗಿ ಬಂದ ನಂಬಿಕೆ ಎಂದರೆ "ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ" ಎನ್ನುವುದು. ವಾಸ್ತವವಾಗಿ ಸಕ್ಕರೆ ತಿನ್ನುವುದಕ್ಕೂ ಸಕ್ಕರೆ ಕಾಯಿಲೆ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಕ್ಕರೆ ಕಾಯಿಲೆ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಮಧುಮೇಹ ಎಂದು ವರ್ಗೀಕರಿಸಲಾಗಿದೆ).

ಈ ಕಾಯಿಲೆ ಬಂದ ಮೇಲೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೇ ಹೋದರೂ ಸೂಕ್ತ ಜೀವನ ಶೈಲಿ, ಆಹಾರಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳ ಸೇವನೆಯ ಮೂಲಕ ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು, ವಿವಿಧ ವೈದ್ಯಪದ್ಧತಿಯಲ್ಲಿ ಇಂದು ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಔಷಧಿಗಳು ಲಭ್ಯವಿವೆ. ಆದರೆ ದುಬಾರಿಯಾದ ಈ ಔಷಧಿಗಳನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಈ ಔಷಧಿಗಳು ನೀಡುವಷ್ಟೇ ಪರಿಣಾಮಕಾರಿ ಫಲಿತಾಂಶವನ್ನು ನಮ್ಮ ಮನೆಯಲ್ಲಿರುವ ಸುಲಭ ಸಾಮಾಗ್ರಿಗಳೂ ನೀಡುತ್ತವೆ. ಬನ್ನಿ ಅಂತಹ ಮನೆಮದ್ದು ಯಾವುದು ಎಂಬುದನ್ನು ನೋಡೋಣ.. ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!
ನುಗ್ಗೇಕಾಯಿ ಮರದ ಎಲೆಗಳು
ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ.
ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.
ಕಹಿಬೇವಿನ ಎಲೆಗಳು
ಕಹಿಬೇವಿನ ಎಲೆಗಳು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುಖ್ಯವಾಗಿ ಇನ್ಸುಲಿನ್ ಬಳಕೆಯನ್ನು ಗರಿಷ್ಟಗೊಳಿಸಲು ನೆರವಾಗುತ್ತದೆ. ಇದರಿಂದ ನಿಧಾನವಾಗಿ ಟೈಪ್ -2 ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ನರಗಳು ಸೆಳೆದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮವಾಗಲು ಸಹಕರಿಸುತ್ತದೆ. ಇನ್ನೂ ಮುಖ್ಯವಾಗಿ ದೇಹ ಮಧುಮೇಹದ ಕಾರಣದಿಂದಾಗಿ hypoglycaemic ಔಷಧಿಗಳ ಮೇಲಿನ ಅವಲಂಬನೆಯನ್ನು ಮುಕ್ತಗೊಳಿಸುತ್ತದೆ.
ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ
ಕ್ಯಾಬೇಜು
ಮಧುಮೇಹವನ್ನು ತಡೆಗಟ್ಟುವ ಮತ್ತೊ೦ದು ಚಮತ್ಕಾರಿಕ ತರಕಾರಿಯೇ ಈ ಕ್ಯಾಬೇಜ್ ಆಗಿದೆ. ಕ್ಯಾಬೇಜ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಹಾಗೂ ಮೇದೋಜೀರಕ ಗ್ರ೦ಥಿಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಕರಿಸುತ್ತದೆ. ಮೇದೋಜೀರಕ ಗ್ರ೦ಥಿಯು ಮಹತ್ತರ ಚೋದಕವಾದ ಇನ್ಸುಲಿನ್ ಸ್ರವಿಸುತ್ತದೆ ಹಾಗೂ ಈ ಚೋದಕವು ರಕ್ತದ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುತ್ತದೆ.
ಕ್ಯಾಬೇಜ್ ಸೇವನೆ ಹೇಗೆ?
ಗ್ರೀನ್ ಟೀ (ಹಸಿರು ಚಹಾ)
ಹಾಗಲಕಾಯಿ ಜ್ಯೂಸ್
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ.
ವಾಸ್ತವಾಗಿ ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. ಇನ್ಸುಲಿನ್‍ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.
ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ
ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ. ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ. ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















