For Quick Alerts
ALLOW NOTIFICATIONS  
For Daily Alerts

  ಅಧ್ಯಯನ ವರದಿ: ವೇಗದ ನಡೆ ಮಧುಮೇಹಕ್ಕೆ ತಡೆ!

  By ಮನೋರಮಾ ಹೆಜಮಾಡಿ
  |

  ಪ್ರತಿದಿನ ಮೈಲುಗಟ್ಟಲೆ ಓಡುವ ಪರಿಶ್ರಮದ ವ್ಯಾಯಾಮಕ್ಕಿಂತಲೂ ನಿಯಮಿತವಾಗಿ ಮಾಡುವ " ವೇಗದ ನಡೆ" ಯು ಶರೀರಕ್ಕೆ ನೀಡುವ ವ್ಯಾಯಾಮವು ಭಾವೀ ಮಧುಮೇಹಿಗಳ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿರಿಸುವಲ್ಲಿ ಸಹಕಾರಿ ಎಂದೆನ್ನುತ್ತಿದೆ, ಒಂದು ಹೊಸ ಸಂಶೋಧನೆ.

  ಅಮೇರಿಕಾದ ಡ್ಯೂಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಿಲಿಯಂ ಕ್ರೂಸ್‌ರವರು ತಾವು ಇತ್ತೀಚೆಗೆ ಅಂತರ್ಜಾಲಕ್ಕೆ ಹರಿಯಬಿಟ್ಟಿರುವ ತಮ್ಮ ಹೊಸ ಲೇಖನದಲ್ಲಿ ಈ ವಿಷಯವನ್ನು ವಿಶದವಾಗಿ ವಿವರಿಸಿದ್ದಾರೆ.  "ಡಯಾಬಿಟಾಲಜಿಯಾ" ಎಂಬ ಅಂತರ್ಜಾಲ ಪತ್ರಿಕೆ ಇದನ್ನು ಪ್ರಕಟಿಸಿದೆ.

  ನಲವತ್ತು ತುಂಬುವ ವಯಸ್ಸು, ಅನುವಂಶೀಯತೆ,ರಕ್ತದೊತ್ತಡದ ಹಿನ್ನೆಲೆ, ಕುಳಿತಲ್ಲೇ ಕಾರ್ಯನಿರ್ವಹಿಸುವ ವ್ಯಾಯಾಮವಿರದ ದಿನಚರಿ, ಬೊಜ್ಜು- ಇವೆಲ್ಲವೂ ವ್ಯಕ್ತಿಯನ್ನು "ಭಾವೀ ಮಧುಮೇಹಿ" ಗುಂಪಿಗೆ ತಳ್ಳುವ ಕಾರಣಗಳು. ಕ್ರೂಸ್ ತನ್ನಸಂಶೋಧನೆಗಾಗಿ ಇಂತಹವರನ್ನೇ ಆಯ್ದುಕೊಂಡರು. ಸುಮಾರು ೧೫೦ ಜನರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿಕೊಂಡರು. ಆರು ತಿಂಗಳ ಕಾಲ ಅವರಿಗೆ ವಿವಿಧ ರೀತಿಯ ವ್ಯಾಯಾಮ, ಪಥ್ಯ ಇತ್ಯಾದಿಗಳನ್ನು ವಿಧಿಸಲಾಯ್ತು.  ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

  ಮೊದಲ ಗುಂಪಿಗೆ ಕ್ಯಾಲೊರಿ ಮತ್ತು ಕೊಬ್ಬಿನಂಶವು ಕಡಿಮೆ ಇರುವ ಸತ್ವಯುತವಾದ ಆಹಾರವನ್ನು ನೀಡಲಾಯಿತು. ಜತೆಗೆ, ನಿಯಮಿತವಾದ,ನಿರ್ಧಿಷ್ಟ ವ್ಯಾಯಾಮಗಳ ನಿರ್ಭಂದನೆಯೂ ಇತ್ತೆನ್ನಿ. ಇದು, ಒಂದು ವಾರದಲ್ಲಿ 7.5 ಮೈಲಿ ದೂರದವರೆಗೂ ವೇಗವಾಗಿ ನಡೆದರೆ ಶರೀರಕ್ಕೆ ಸಿಗಬಹುದಾದ ವ್ಯಾಯಾಮಕ್ಕೆ ಸಮನಾದುದಾಗಿತ್ತು. ಉಳಿದ ಮೂರು ಗುಂಪುಗಳಿಗೆ ವಿವಿಧ ಮಟ್ಟದ ವ್ಯಾಯಾಮದ ನಿರ್ಬಂಧ ಮಾತ್ರವೇ ನೀಡಲಾಯಿತು.

  Brisk Walk Better Than Jogging In Combatting Pre-diabetes: Finds Study
   

  ಎರಡನೆಯ ಗುಂಪಿಗೆ ವಾರದಲ್ಲಿ 7.5 ಮೈಲು ದೂರ ವೇಗ ನಡಿಗೆಗೆ ಸಮನಾದ ವ್ಯಾಯಾಮ , ಮೂರನೆಯ ಗುಂಪಿಗೆ ವಾರದಲ್ಲಿ 11.5 ಮೈಲು ದೂರ ವೇಗ ನಡಿಗೆಗೆ ಸಮನಾದ ನಿಯಮಿತ ವ್ಯಾಯಮವನ್ನು ನೀಡಲಾಯ್ತು. ನಾಲ್ಕನೆಯ ಗುಂಪಿಗೆ ವಾರದಲ್ಲಿ 11.5 ಮೈಲು ದೂರದ ನಿಧಾನ ಓಟಕ್ಕೆ (ಜಾಗಿಂಗ್)ಸಮನಾದ ಕಠಿಣ ವ್ಯಾಯಾಮವನ್ನು ನೀಡಲಾಯ್ತು.

  ಶರೀರದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಪಡಿಸಿ, ಮಾಂಸಖಂಡಗಳಲ್ಲಿ ಶೇಖರಗೊಳ್ಳುವ ಕೊಬ್ಬನ್ನು ಕರಗಿಸುವ ಮೂಲಕ ಮಧುಮೇಹವನ್ನು ದೂರವಿರಿಸುವಲ್ಲಿ ಸಫಲವಾದುದು ಮೊದಲ ಗುಂಪೇ. ಇವರ ಗ್ಲೂಕೋಸ್ ಸಮತೋಲನಕ್ಕೆ ವ್ಯಾಯಾಮವು ಶೇಕಡಾ 9ರಷ್ಟು ಪರಿಣಾಮ ಬೀರಿದ್ದರೆ, ಉಳಿದವರದ್ದು ಶೇ. 7, ಶೇ.5, ಮತ್ತು ಶೇ.3ರಷ್ಟು ಮಾತ್ರವಾಗಿತ್ತು.         ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ! 

  ಕೊಂಚ ನೆನಪಿಸಿಕೊಳ್ಳೋಣ. ಸುಮಾರು 25 ವರ್ಷಗಳ ಹಿಂದೆ ಇಷ್ಟೊಂದು ವಾಹನ ದಟ್ಟಣೆ ಇರಲಿಲ್ಲ. ಮನೆಗೊಂದು ವಾಹನ ಇದ್ದರೆ ಅದೇ ಹೆಚ್ಚು. ಜನ ಹೆಚ್ಚಾಗಿಯೂ ನಡೆದೇ ತಮ್ಮ ದಾರಿ ಕ್ರಮಿಸುತ್ತಿದ್ದರು. ನಮ್ಮ ಹಿರಿಯರ ಆರೋಗ್ಯದ ಹಿಂದಿರುವ ಗುಟ್ಟಿನ ಒಂದು ಸುಳಿವು ಈ ಹೊಸ (!) ಸಂಶೋಧನೆಯಲ್ಲೆ ಅಡಗಿದೆ, ಅಲ್ವೆ?

  English summary

  Brisk Walk Better Than Jogging In Combatting Pre-diabetes: Finds Study

  "When faced with the decision of trying to do weight loss, diet, and exercise versus exercise alone, the study indicates you can achieve nearly 80 per cent of the effect of doing all three with just a high amount of moderate-intensity exercise," said lead author William Kraus, Professor at the Duke University School of Medicine in the US.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more