For Quick Alerts
ALLOW NOTIFICATIONS  
For Daily Alerts

ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

|

ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ.

ಮಧುಮೇಹದ ವಿಚಾರದಲ್ಲಿ ಹೇಳುವುದಾದರೆ, ವೈದ್ಯರಿ೦ದ ಶಿಫಾರಿಸಲ್ಪಟ್ಟ, ಔಷಧಗಳ ಸೇವನೆಯು ಮುಖ್ಯವಾಗಿದ್ದರೂ ಸಹ, ನೈಸರ್ಗಿಕವಾದ ರೀತಿಯಲ್ಲಿ ಮಧುಮೇಹವನ್ನು ಸರಿದಾರಿಗೆ ತರುವುದು ಇನ್ನೂ ಸುಲಭ.

ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು. ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾಗಿದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಇಷ್ಟೇ ಅಲ್ಲದೆ ನಿಮ್ಮ ಅನೇಕ ಆರೋಗ್ಯ ಸ೦ಬ೦ಧೀ ತೊ೦ದರೆಗಳಿಗೆ ಅದು ಪರಿಹಾರವನ್ನು ಒದಗಿಸಬಲ್ಲದು. ಇದರಲ್ಲಿರುವ ಬೃಹತ್ ಪ್ರಮಾಣದ acetogenin ಗಳು ಮಧುಮೇಹ ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ಇವು ಇನ್ನೂ ಅನೇಕ ಇತರ ಆರೋಗ್ಯಕಾರಿ ಪ್ರಯೋಜನಗಳನ್ನು ಹೊ೦ದಿವೆ... ಸೂಚನೆ- ಸಿಹಿ ಗೆಣಸನ್ನು ಸೇವಿಸುವ ಮೊದಲು ಯಾವುದಕ್ಕೂ ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ....

ಮಧುಮೇಹಿಗಳಿಗೆ ಒಳ್ಳೆಯದು

ಮಧುಮೇಹಿಗಳಿಗೆ ಒಳ್ಳೆಯದು

ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಸಿಹಿ ಗೆಣಸಿನಲ್ಲಿ ಡಯಟೆರಿ ಫೈಬರ್‌ಗಳು ಅಧಿಕವಾಗಿರುತ್ತವೆ. ಇವು ಕೋಲನ್ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.

ವಾತರೋಗವನ್ನು ನಿವಾರಿಸುತ್ತದೆ

ವಾತರೋಗವನ್ನು ನಿವಾರಿಸುತ್ತದೆ

ವಾತ ರೋಗ ಅಥವಾ ಎಂಫಿಸೆಮ ಎಂಬ ಕಾಯಿಲೆಯು ಧೂಮಪಾನಿಗಳನ್ನು ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಅವರಿಗೆ ವಿಟಮಿನ್ ಎ ಸಮಸ್ಯೆಯಿಂದಾಗಿ ಅವರಿಗೆ ಇದು ಕಾಡುತ್ತದೆ (ಇದು ಶ್ವಾಸಕೋಶಗಳನ್ನು ಹಾಳು ಮಾಡುತ್ತದೆ) ಸಿಹಿ ಗೆಣಸುಗಳಲ್ಲಿ ಕೆರೊಟಿನಾಯ್ಡ್‌ಗಳು ಹೆಚ್ಚಾಗಿ ಇರುತ್ತವೆ. ಇವು ವಿಟಮಿನ್ ಎಯನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ ಮತ್ತು ಅವು ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುತ್ತವೆ.

 ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಸಿಹಿ ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್ ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ.

ಆರೋಗ್ಯಕರ ಹೃದಯ

ಆರೋಗ್ಯಕರ ಹೃದಯ

ಸಿಹಿ ಗೆಣಸುಗಳಲ್ಲಿರುವ ಪೊಟಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ. ಜೊತೆಗೆ ಇದು ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ. ಸಿಹಿಗೆಣಸುಗಳಲ್ಲಿ, ವಿಟಮಿನ್ ಬಿ6 ಹೆಚ್ಚಾಗಿರುತ್ತದೆ. ಇದು ಪಾರ್ಶ್ವವಾಯು, ಪದೇ ಪದೇ ಕಾಣಿಸಿಕೊಳ್ಳುವ ರೋಗಗಳು ಮತ್ತು ಹೃದ್ರೋಗಗಳನ್ನು ತಡೆಯುತ್ತದೆ.

ಆರೋಗ್ಯಕರ ಮೂಳೆಗಳಿಗೆ

ಆರೋಗ್ಯಕರ ಮೂಳೆಗಳಿಗೆ

ಪೊಟಾಶಿಯಂ ಅಥ್ಲೆಟ್‌ಗಳಿಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಸ್ನಾಯು ಸೆಳೆತದ ಮೇಲೆ ಹೋರಾಡುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಸ್ನಾಯುಗಳು ವಿಶ್ರಾಂತಿಯನ್ನು ಪಡೆಯಲು ಸಹ ನೆರವು ನೀಡುತ್ತದೆ. ಸಿಹಿ ಗೆಣಸುಗಳು, ನರಗಳಿಂದ ಹೊರಡುವ ಸಂಕೇತಗಳನ್ನು ಮತ್ತು ಹೃದಯದ ಬಡಿತಗಳನ್ನು ಸಹ ಸರಾಗಗೊಳಿಸಬಲ್ಲವು.

ಆಂಟಿ-ಆಕ್ಸಿಡೆಂಟ್

ಆಂಟಿ-ಆಕ್ಸಿಡೆಂಟ್

ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಮ್ಮನ್ನು ಕಾಪಾಡುತ್ತವೆ. ಇದು ಅಸ್ತಮಾ, ಸಂಧಿವಾತ ಮತ್ತು ಅರ್ಥರಿಟಿಸ್ ಸಮಸ್ಯೆಗಳಿಗೆ ಉಪಶಮನ ನೀಡುತ್ತದೆ. ಜೊತೆಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.

ಭ್ರೂಣದ ಬೆಳವಣಿಗೆ

ಭ್ರೂಣದ ಬೆಳವಣಿಗೆ

ಸಿಹಿಗೆಣಸುಗಳಲ್ಲಿ ಫೊಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

ಒತ್ತಡ-ನಿವಾರಕ

ಒತ್ತಡ-ನಿವಾರಕ

ಸಿಹಿ ಗೆಣಸುಗಳಲ್ಲಿ ದೊರೆಯುವ ಮೆಗ್ನಿಶಿಯಂನಲ್ಲಿ ಒತ್ತಡ ನಿವಾರಕ ಅಂಶ ಅಡಗಿರುತ್ತದೆ. ಯಾವಾಗ ಪೊಟಾಶಿಯಂ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಒದಗಿಸುತ್ತದೋ, ಆಗ ಹೃದಯದ ಬಡಿತವು ಸಾಮಾನ್ಯವಾಗುತ್ತದೆ ಮತ್ತು ಆಮ್ಲಜನಕದ ಹರಿವು ಸರಾಗವಾಗುತ್ತದೆ.

ಯೌವನದಿಂದ ಕೂಡಿದ ತ್ವಚೆಗಾಗಿ

ಯೌವನದಿಂದ ಕೂಡಿದ ತ್ವಚೆಗಾಗಿ

ಸಿಹಿಗೆಣಸುಗಳನ್ನು ಬೇಯಿಸಿರುವ ನೀರನ್ನು ನಿಮ್ಮ ಮುಖವನ್ನು ತೊಳೆಯಲು ಬಳಸಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲೆಗಳು, ರಂಧ್ರಗಳು ಮತ್ತು ಧೂಳು ಎಲ್ಲವೂ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿಯು ಕೊಲ್ಲಾಜೆನ್ ಉತ್ಪಾದನೆಗೆ ಸಹಕರಿಸುತ್ತದೆ, ವಿಟಮಿನ್ ಡಬ್ಲ್ಯೂ ತ್ವಚೆಯ ಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಂಥೋಸಿಯಾನಿನ್‌ಗಳು ಸುಕ್ಕುಗಳನ್ನು, ಕಪ್ಪು ವೃತ್ತಗಳನ್ನು ಸಹ ನಿವಾರಿಸಿ, ಕಣ್ಣುಗಳು ಕಾಂತಿಯಿಂದ ಕಂಗೊಳಿಸಲು ನೆರವು ನೀಡುತ್ತದೆ.

ಋತು ಚಕ್ರ ಪೂರ್ವ ಸಮಸ್ಯೆಗಳು

ಋತು ಚಕ್ರ ಪೂರ್ವ ಸಮಸ್ಯೆಗಳು

ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.

English summary

Why Sweet Potatoes Are Perfect For Diabetics

Sweet potato is rich in beta-carotene which our bodies use to produce vitamin A. This vitamin is very important for eye, bone, and immune health. Sweet potato is a unique type of potato that comes in different colors and has numerous healthy benefits.
X
Desktop Bottom Promotion