For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕೆ ಆಹ್ವಾನ ನೀಡುವ ಕೆಟ್ಟ ಅಭ್ಯಾಸಗಳಿಂದ ದೂರವಿರಿ!

By Arshad
|

ಹಿಂದೆಲ್ಲಾ ಮಧುಮೇಹವೆಂದರೆ ಬ್ರಿಟಿಷರಿಗೇ ಹೆಚ್ಚಾಗಿ ಬರುತ್ತಿದ್ದುದರಿಂದ ಬ್ರಿಟಿಷರ ಕಾಯಿಲೆ ಎಂದೇ ಕರೆಯುತ್ತಿದ್ದರು. ಆದರೆ ಇಂದು ಮಧುಮೇಹ ಭಾರತದ ಒಂದು ಸಾಮಾನ್ಯ ಕಾಯಿಲೆಯಾಗಿದೆ. ಆದರೆ ಈಗಲೂ ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆ ಎಂದರೆ ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು. ಇದು ನೂರಕ್ಕೆ ನೂರರಷ್ಟು ಸತ್ಯವಲ್ಲ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ನಮ್ಮ ಒಡಲ ಅಂಗವಾದ ಬಾಡಲಿ (pancreas) ನ ಮುಖ್ಯ ಕಾರ್ಯವೆಂದರೆ ಇನ್ಸುಲಿನ್ ಉತ್ಪಾದಿಸಿ ರಕ್ತದಲ್ಲಿನ ಸಕ್ಕರೆ ಕರಗುವಂತೆ ನೋಡಿಕೊಳ್ಳುವುದು. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾದೇ ಇದ್ದರೆ ಟೈಪ್-1 ಮಧುಮೇಹವೆಂದಲೂ, ಇನ್ಸುಲಿನ್ ಉತ್ಪತ್ತಿಯಾದರೂ ಬಳಕೆಯಾಗದೇ ಇದ್ದರೆ ಟೈಪ್-2 ಮಧುಮೇಹವೆಂದೂ ಕರೆಯುತ್ತಾರೆ (insulin resistance).

ಟೈಪ್-1 ಗಿಂತಲೂ ಟೈಪ್-2 ಹೆಚ್ಚು ಅಪಾಯಕಾರಿಯಾಗಿದೆ. ಸಕ್ಕರೆ ತಿಂದರೆ ಮಧುಮೇಹ ಬರುವುದಿಲ್ಲ ಎಂದು ಮಿತಿಯಿಲ್ಲದ ಪ್ರಮಾಣದಲ್ಲಿ ತಿಂದರೆ ಮಾತ್ರ ಸ್ಥೂಲಗೊಳ್ಳುವ ದೇಹ ಪರೋಕ್ಷವಾಗಿ ಮಧುಮೇಹಕ್ಕೆ ಒಳಗಾಗಲು ಸಹಕರಿಸುತ್ತದೆ. ಆರೋಗ್ಯಕರ ಜೀವನ ಶೈಲಿಯೇ ಮಧುಮೇಹಕ್ಕೆ ದಿವ್ಯ ಔಷಧ!

ಬನ್ನಿ ಮಧುಮೇಹಕ್ಕೆ ಆಹ್ವಾನ ನೀಡುವ ಕೆಲವು ಅಭ್ಯಾಸಗಳನ್ನು ನೀವು ಈಗಾಗಲೇ ರೂಢಿಗೊಳಿಸಿದ್ದು ಈ ಬಗ್ಗೆ ನಿಮಗೆ ಗೊತ್ತೇ ಇರದಿದ್ದರೆ ನಿಮಗೆ ಕೆಳಗಿನ ಸ್ಲೈಡ್ ಶೋ ನಿಮಗೆ ಮಹತ್ವದ ಅರಿವು ನೀಡುತ್ತದೆ..

ಸಕ್ಕರೆ ಹೆಚ್ಚಿರುವ ಪೇಯಗಳು

ಸಕ್ಕರೆ ಹೆಚ್ಚಿರುವ ಪೇಯಗಳು

ಕೋಲಾ ಮೊದಲಾದ ಬುರುಗು ಬರುವ ಪೇಯಗಳು ವಾಸ್ತವವಾಗಿ ಬಹು ಕಹಿಯಾಗಿರುತ್ತವೆ. ಈ ಕಹಿಯನ್ನು ಕಡಿಮೆಗೊಳಿಸಲು ಸುಮಾರು ಏಳು ಪಟ್ಟು ಹೆಚ್ಚು ಸಕ್ಕರೆಯನ್ನು ಸೇರಿಸಿರಲಾಗುತ್ತದೆ. ಅದರಲ್ಲೂ ಶುಗರ್ ಫ್ರೀ ಎಂದು ಬರೆದಿರುವ ಪೇಯಗಳಲ್ಲಿ ಬಳಸಲಾಗುವ aspertame ಸಾಮಾನ್ಯ ಸಕ್ಕರೆಗಿಂತಲೂ ಎರಡು ಸಾವಿರ ಪಟ್ಟು (180 to 2001 times sweeter than sucrose) ಸಿಹಿಯಾಗಿರುತ್ತದೆ. ಇದು ಒಮ್ಮೆಲೇ ದೇಹದಲ್ಲಿ ಎರಡು ಸಾವಿರ ಪಟ್ಟು ಹೆಚ್ಚು ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವುದರಿಂದ ದೇಹದ ಸಂತುಲನೆ ಏರುಪೇರಾಗುತ್ತದೆ. ಶೀಘ್ರವೇ ಸ್ಥೂಲಕಾಯ ಆವರಿಸಿ ಪರೋಕ್ಷವಾಗಿ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ.

ಊಟದಲ್ಲಿ ಏರುಪೇರು

ಊಟದಲ್ಲಿ ಏರುಪೇರು

ನಮ್ಮ ದೇಹಕ್ಕೆ ಕಾಲಕಾಲಕ್ಕೆ ಆಹಾರ, ನಿದ್ದೆ, ನೀರು, ವಿಶ್ರಾಂತಿಯ ಅಗತ್ಯವಿದೆ. ಎಲ್ಲವೂ ಒಂದು ವೇಳಾಪಟ್ಟಿಯ ಪ್ರಕಾರ ನಡೆದರೆ ನಮ್ಮ ಅಂಗಗಳೂ ಅದೇ ಪ್ರಕಾರವಾಗಿ ಕಾರ್ಯನಿರ್ವಹಿಸುತ್ತಾ ಆರೋಗ್ಯಕರವಾಗಿರುತ್ತವೆ. ಒಂದು ವೇಳೆ ನಿಮ್ಮ ಊಟದ ಸಮಯ ಪ್ರತಿದಿನವೂ ಏರುಪೇರಾಗುತ್ತಿದ್ದರೆ, ಅದರಲ್ಲೂ ಅನಿಯಮಿತವಾಗಿ ಊಟವನ್ನೇ ಮಾಡದೇ ಇದ್ದರೆ ನಿಮ್ಮ ಅಂಗಗಳೂ ಅದೇ ಪ್ರಕಾರ ತಮ್ಮ ನಿಯಮಿತ ಕಾರ್ಯಗಳನ್ನು ಅನಿಯಮಿತವಾಗಿ ಮಾಡಬೇಕಾದ ಅನಿರ್ವಾರ್ಯತೆಗೆ ಒಳಗಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಊಟದಲ್ಲಿ ಏರುಪೇರು

ಊಟದಲ್ಲಿ ಏರುಪೇರು

ಇವುಗಳಲ್ಲಿ ಸೂಕ್ಷ್ಮವಾದ ಅಂಗಗಳು ಬೇಗನೇ ಘಾಸಿಗೊಳ್ಳುತ್ತವೆ. ಇನ್ಸುಲಿನ್ ಉತ್ಪಾದಿಸುವ ಬಾಡಲಿಯೂ ಅತಿ ಸೂಕ್ಷ್ಮ ಅಂಗವಾಗಿದ್ದು ಇದರ ಕಾರ್ಯಕ್ಷಮತೆ ಕುಗ್ಗುವುದರಿಂದ ಮಧುಮೇಹ ಬೇಗನೇ ಆವರಿಸುತ್ತದೆ. ಅದರಲ್ಲೂ ಅತ್ಯಂತ ಕೆಟ್ಟ ಅಭ್ಯಾಸವಾದ ಮುಂಜಾನೆಯ ಉಪಾಹಾರವನ್ನು ಮಾಡದೇ ಇರುವುದು ಅಥವಾ ತಡವಾಗಿ ಮಾಡುವುದು ಇದರ ಮೇಲೆ ನೇರ ಪರಿಣಾಮ ಬೀರುತ್ತದೆ.

ನಡುರಾತ್ರಿಯ ಊಟ

ನಡುರಾತ್ರಿಯ ಊಟ

ಕೆಲವರಿಗೆ ರಾತ್ರಿ ನಿದ್ದೆ ಬರದೇ ಇದ್ದರೆ ಎದ್ದು ಏನಾದರೂ ತಿಂದು ಮತ್ತೆ ಮಲಗುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಅನಾರೋಗ್ಯಕರ ಅಭ್ಯಾಸವಾಗಿದ್ದು ದೇಹಕ್ಕೆ ಅನಗತ್ಯವಾದ ಕ್ಯಾಲೋರಿಗಳನ್ನು ನಡುರಾತ್ರಿ ನೀಡುವ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅಲ್ಲದೇ ನಿದ್ದೆಯಲ್ಲಿ ನಮ್ಮ ಅಂಗಗಳು ಹಲವಾರು ಅನೈಚ್ಛಿಕ ಕಾರ್ಯಗಳನ್ನು ನಡೆಸಬೇಕಾದುದರಿಂದ ಈ ಹೊತ್ತಿನಲ್ಲಿ ನೀಡುವ ಆಹಾರ ಆ ಎಲ್ಲಾ ಅಂಗಗಳ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಈ ಅಭ್ಯಾಸ ಮಧುಮೇಹಕ್ಕೆ ನೇರವಾದ ಆಹ್ವಾನ ನೀಡುವ ಸಾಮರ್ಥ್ಯ ಹೊಂದಿದೆ. ರಾತ್ರಿ ನಿದ್ದೆಗೆ ಪರ್ಯಾಯ ವ್ಯವಸ್ಥೆ ನೋಡಿಕೊಳ್ಳಿ, ಆಹಾರ ಸೇವಿಸದೇ ಇರಲು ಸಾಧ್ಯವಾಗದಿದ್ದಲ್ಲಿ ಆಹಾರದ ಬದಲಿಗೆ ನೀರು ಕುಡಿದು ಇದೇ ನಿನ್ನ ಆಹಾರ ಎಂದು ಮನಸ್ಸಿಗೆ ತಿಳಿಸಿ ಮಲಗಿ.

ಆಹಾರದಲ್ಲಿ ನಾರಿನಾಂಶ ಇಲ್ಲದೇ ಇರುವುದು

ಆಹಾರದಲ್ಲಿ ನಾರಿನಾಂಶ ಇಲ್ಲದೇ ಇರುವುದು

ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ನಾರು ಇರಲೇ ಬೇಕು. ಮೈದಾ ಆಧಾರಿತ ಆಹಾರಗಳು ನೋಡಲು ಬಿಳಿಯಾಗಿರುತ್ತದೆಯೇ ವಿನಃ ಆರೋಗ್ಯಕರವಲ್ಲ. ನಿಮ್ಮ ಆಹಾರದಲ್ಲಿ ಹಣ್ಣು, ಹಂಪಲು, ಇಡಿಯ ಗೋಧಿಹಿಟ್ಟಿನಿಂದ ತಯಾರಿಸಿದ ಹಿಟ್ಟಿನ ಖಾದ್ಯಗಳು ಹೆಚ್ಚಿರುವಂತೆ ನೋಡಿಕೊಳ್ಳಿ.

ಹೆಚ್ಚಿನ ಒತ್ತಡ

ಹೆಚ್ಚಿನ ಒತ್ತಡ

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಮಧುಮೇಹದ ಇತಿಹಾಸವಿದ್ದರೆ ನಿಮ್ಮ ಮನಸ್ಸಿನ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಅಗತ್ಯ. ಏಕೆಂದರೆ ಒತ್ತಡದ ಸಮಯದಲ್ಲಿ ನಿಮ್ಮ ರಕ್ತಕ್ಕೆ ಬಿಡುಗಡೆಯಾದ ಕಾರ್ಟಿಸೋಲ್ (cortisol) ಎಂಬ ರಸದೂತಕ್ಕೆ ಮಧುಮೇಹವನ್ನು ಆಹ್ವಾನಿಸುವ ಗುಣವಿದೆ.

ನಿತ್ಯದ ವ್ಯಾಯಾಮದಲ್ಲಿ ಕೊರತೆ

ನಿತ್ಯದ ವ್ಯಾಯಾಮದಲ್ಲಿ ಕೊರತೆ

ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ವ್ಯಾಯಾಮ ಇರಲಿ. ನಿತ್ಯವೂ ಒಂದು ಘಂಟೆ ವ್ಯಾಯಾಮಕ್ಕಾಗಿ ಮುಡಿಪಾಗಿರಿಸುವುದರಿಂದ ಮಧುಮೇಹವನ್ನು ಸಾಕಷ್ಟು ಅಂತರದಲ್ಲಿರಿಸಿಕೊಳ್ಳಬಹುದು

ಪಿಷ್ಟ ಹೆಚ್ಚಿರುವ ಆಹಾರಗಳು

ಪಿಷ್ಟ ಹೆಚ್ಚಿರುವ ಆಹಾರಗಳು

ಬಿಳಿಯ ಬ್ರೆಡ್ ಮತ್ತು ಬಿಳಿಯ ಅಕ್ಕಿಯಲ್ಲಿ ಪಿಷ್ಟದ ಪ್ರಮಾಣ ಹೆಚ್ಚಿರುತ್ತದೆ. ಆದರೆ ಈ ಆಹಾರಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಹೆಚ್ಚಾಗಿ ಬಳಸಿದಷ್ಟೂ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಮಧುಮೇಹದ ಸಾಧ್ಯತೆ ದಟ್ಟವಾಗುತ್ತದೆ. ಆದ್ದರಿಂದ ಅಕ್ಕಿ ಮತ್ತು ಮೈದಾ ಆಹಾರಗಳನ್ನು ಕನಿಷ್ಟಗೊಳಿಸಿ ಇಡಿಯ ಗೋಧಿ, ರಾಗಿ, ನವಣೆ ಮೊದಲಾದ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Everyday Habits That Lead To Diabetes

Diabetes has gradually become a disease that has become rampant everywhere in the world. Well, does eating sugar cause diabetes? Though the risk of suffering type 2 diabetes increases if there is family history that is vulnerable, eating lots of sugary foods can indirectly be a reason. It is better to consume carbohydrates which are slowly digested by the body. Eating fibre rich diet is safer. there are some other habits that lead to diabetes. Let us talk about them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X