For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಿಸುವ ಅದ್ಭುತ ಆಹಾರಗಳು

By Deepak
|

ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು. ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಅನೇಕ ನೈಸರ್ಗಿಕ ಪರಿಹಾರಗಳಿವೆ.

ಮಧುಮೇಹದ ವಿಚಾರದಲ್ಲಿ ಹೇಳುವುದಾದರೆ, ವೈದ್ಯರಿ೦ದ ಶಿಫಾರಿಸಲ್ಪಟ್ಟ, ಬಾಯಿಯ ಮೂಲಕ ತೆಗೆದುಕೊಳ್ಳಬೇಕಾದ ಔಷಧಗಳ ಸೇವನೆಯು ಮುಖ್ಯವಾಗಿದ್ದರೂ ಸಹ, ನೈಸರ್ಗಿಕವಾದ ರೀತಿಯಲ್ಲಿ ಮಧುಮೇಹವನ್ನು ಸರಿದಾರಿಗೆ ತರುವುದು ಇನ್ನೂ ಸುಲಭ.

ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು. ಬನ್ನಿ ಇಲ್ಲಿ ನಾವು

ನಿಮಗಾಗಿ ಮಧುಮೇಹದ ಮೇಲೆ ಹೋರಾಡುವ ಹಣ್ಣುಗಳ ಕುರಿತು ತಿಳಿಸುತ್ತಿದ್ದೇವೆ. ಮೊದಲಿಗೆ ಎಲ್ಲರಿಗು ತಿಳಿದಂತೆ ಹಣ್ಣುಗಳಲ್ಲಿ ವಿಟಮಿನ್‍ಗಳು ಮತ್ತು ಖನಿಜಾಂಶಗಳು ಇರುತ್ತವೆ. ಇದರ ಜೊತೆಗೆ ಅವುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಹ ಇರುತ್ತವೆ. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಸೀತಾಫಲ

Eat These Best Foods and Fight Diabetes

ಸೀತಾಫಲವು ಮಧುಮೇಹಿ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ ಸೀತಾಫಲಗಳಲ್ಲಿ ಅನೇಕ ಮಧುಮೇಹಿ ಪ್ರತಿಬ೦ಧಕ ಗುಣಲಕ್ಷಣಗಳಿವೆ. ಸೀತಾಫಲದ ಈ ವಿಶಿಷ್ಟವಾದ ಗುಣವಿಶೇಷವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ಶರೀರದ ಸಕ್ಕರೆಯ ಪ್ರಮಾಣದ ಬಳಕೆಯನ್ನು ನಿಯಮಿತಗೊಳಿಸಿ ನಿಯ೦ತ್ರಿಸಲು ಸಹಕರಿಸುತ್ತದೆ. ಆದ್ದರಿ೦ದ, ಸೀತಾಫಲಗಳನ್ನು ದಿನನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿ೦ದ ಅವುಗಳಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳು, ಮಧುಮೇಹಿಗಳಿಗೆ ಮಧುಮೇಹದ ನಿಯ೦ತ್ರಣದಲ್ಲಿ ಸಹಕಾರಿಯಾಗುತ್ತವೆ.

ಕ್ಯಾರೆಟ್


ಕ್ಯಾರೆಟ್ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ಮೀನು


ಮೀನುಗಳು ಡಯಾಬಿಟಿಸ್ ಆಹಾರ ಕ್ರಮದಲ್ಲಿ ಒಮೆಗಾ 3 ಪ್ಯಾಟಿ ಆ್ಯಸಿಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದನ್ನು ಎಲ್ಲಿ ಪಡೆಯಬಹುದು? ಸಾಲ್ಮನ್, ಸಾರ್ಡೈನ್, ಮಾರ್ಕೆಲ್ ಇತ್ಯಾದಿ ಮೀನುಗಳಿಂದ ಇದನ್ನು ಪಡೆಯಬಹುದು. ಇವುಗಳು ತುಂಬಾ ರುಚಿಯಾಗಿರುತ್ತದೆ ಮತ್ತು ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ

ಸೇಬು


ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ ಇದು ತುಂಬಾ ಜನಪ್ರಿಯ ನುಡಿ ಮತ್ತು ನಿಜವೂ ಹೌದು. ಸೇಬು ಸೇವನೆಯಿಂದ ಮಧುಮೇಹವನ್ನು ತಡೆಯಬಹುದು. ಕಡಿಮೆ ಕ್ಯಾಲರಿ ಮತ್ತು ಗರಿಷ್ಠ ಮಟ್ಟದಲ್ಲಿ ನಾರಿನಾಂಶ ಹೊಂದಿರುವ ಸೇಬು ಮಧುಮೇಹ ಆಹಾರ ಕ್ರಮದಲ್ಲಿ ಅದ್ಭುತ ಆಹಾರ. ಸೇಬಿನ ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಸೇಬಿನಲ್ಲಿ ಫ್ಲಾವನೋಯ್ಡ್‌ಗಳು (ಆಂಟಿ-ಆಕ್ಸಿಡೆಂಟ್‌ಗಳು) ಅಧಿಕವಾಗಿರುತ್ತವೆ. ಇವುಗಳು ಅಸ್ತಮಾ ಮತ್ತು ಮಧುಮೇಹವನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಸೇಬುಗಳು ನಮ್ಮ ಹಲ್ಲುಗಳಿಗೆ ಬಿಳುಪನ್ನು ಸಹ ನೀಡುತ್ತವೆ ಮತ್ತು ಮೌತ್ ಫ್ರೆಶ್‌ನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತವೆ. ಇದು ಸಹ ಮಧುಮೇಹದ ಮೇಲೆ ಹೋರಾಡುತ್ತದೆ.

ಬ್ಲಾಕ್‌ಬೆರ್ರಿ


ಈ ಹಣ್ಣಿನಲ್ಲಿ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇದು ಮಧುಮೇಹ ಮತ್ತು ಕ್ಯಾನ್ಸರ್ ಎರಡನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಜೊತೆಗೆ ಪಾರ್ಶ್ವವಾಯುವನ್ನು ಸಹ ಇದು ನಿವಾರಿಸುತ್ತದೆ. ಕೆಲವು ದೇಶಗಳಲ್ಲಿ ಇದನ್ನು ಅರ್ಥರಿಟಿಸ್‌ಗೆ ಸಹ ಮದ್ದಾಗಿ ಬಳಸುತ್ತಾರೆ.

ಕಿತ್ತಳೆ


ಕಿತ್ತಳೆ ಹಣ್ಣಿನಲ್ಲಿ ಫೋಲೆಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಹಣ್ಣು ಸಹ ನರ ನಾಳಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಕಿತ್ತಳೆಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
English summary

Eat These Best Foods and Fight Diabetes

What you eat can help you control and fight your diabetes. Incorporate these healthy foods into your diet. That’s why we’ve assembled the following list of the best foods for fighting diabetes.
X
Desktop Bottom Promotion